ETV Bharat / entertainment

'ಕಾಫಿ ವಿತ್ ಕರಣ್‌' ಶೋನ ಮುಂದಿನ ಅತಿಥಿಗಳ್ಯಾರು?: ಸಲ್ಮಾನ್​ & ಶಾರುಖ್ ಆಗಮನದ ನಿರೀಕ್ಷೆ​​​!

author img

By ETV Bharat Karnataka Team

Published : Nov 18, 2023, 5:17 PM IST

ಇಂದು ಇನ್​ಸ್ಟಾಗ್ರಾಮ್​​ ಲೈವ್ ಸೆಷನ್‌ ನಡೆಸಿದ 'ಕಾಫಿ ವಿತ್ ಕರಣ್‌' ಶೋ ಸಾರಥಿ ಕರಣ್ ಜೋಹರ್ ಮುಂಬರುವ ಅತಿಥಿಗಳ ಬಗ್ಗೆ ಸುಳಿವು ಬಿಟ್ಟುಕೊಟ್ಟಿದ್ದಾರೆ.

Koffee With Karan
ಕಾಫಿ ವಿತ್ ಕರಣ್‌

ಬಾಲಿವುಡ್​ನ ಖ್ಯಾತ ಚಲನಚಿತ್ರ ನಿರ್ಮಾಪಕ ಕರಣ್​ ಜೋಹರ್​ ನಡೆಸಿಕೊಡುವ ಜನಪ್ರಿಯ ಚಾಟ್​​ ಶೋ 'ಕಾಫಿ ವಿತ್ ಕರಣ್‌'ನ ಎಂಟನೇ ಸೀಸನ್​ನಲ್ಲಿ ಈಗಾಗಲೇ ಸ್ಟಾರ್​ ಸೆಲೆಬ್ರಿಟಿಗಳು ಭಾಗಿಯಾಗಿದ್ದಾರೆ. ಮುಂದಿನ ಸಂಚಿಕೆಗಳಲ್ಲಿ ಯಾರು ಭಾಗಿಯಾಗುತ್ತಾರೆ? ಫೈನಲ್​ ಎಪಿಸೋಡ್​ಗೆ ಯಾರಿರಲಿದ್ದಾರೆ? ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮೂಡಿದೆ. ಸೂಪರ್ ಸ್ಟಾರ್ ಸಲ್ಮಾನ್​ ಖಾನ್​​, ಕಿಂಗ್​ ಖಾನ್​ ಶಾರುಖ್​ ಆಗಮನವನ್ನು ಪ್ರೇಕ್ಷಕರು ನಿರೀಕ್ಷಿಸಿದ್ದಾರೆ.

ಕಾಫಿ ವಿತ್ ಕರಣ್‌ ಸೀಸನ್​​ 8 ದೀಪ್​ವೀರ್​ ಜೋಡಿಯೊಂದಿಗೆ ಆರಂಭವಾಯಿತು. ದೀಪಿಕಾ ಪಡುಕೋಣೆ, ರಣ್​​​ವೀರ್​ ಸಿಂಗ್ ಬಳಿಕ ಸನ್ನಿ ಡಿಯೋಲ್​, ಬಾಬಿ ಡಿಯೋಲ್, ಸಾರಾ ಅಲಿ ಖಾನ್​, ಅನನ್ಯಾ ಪಾಂಡೆ, ಕರೀನಾ ಕಪೂರ್ ಖಾನ್, ಆಲಿಯಾ ಭಟ್​ ಅವರಂತಹ ಸ್ಟಾರ್​ ಸೆಲೆಬ್ರಿಟಿಗಳು ಅತಿಥಿಗಳಾಗಿ ಆಗಮಿಸಿ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸಿದರು. ಮುಂಬರುವ ಅತಿಥಿಗಳ ಬಗ್ಗೆ ಅಭಿಮಾನಿಗಳು ಉತ್ಸಾಹ ವ್ಯಕ್ತಪಡಿಸುತ್ತಿದ್ದಾರೆ. ಇತ್ತೀಚೆಗೆ ಆಲಿಯಾ ಭಟ್‌ಗೆ ಸಂಪರ್ಕ ಹೊಂದಿರುವ ಇಬ್ಬರು ತಾರೆಯರು ತಮ್ಮ ಕಾರ್ಯಕ್ರಮಕ್ಕೆ ಆಗಮಿಸುವ ಬಗ್ಗೆ ಕರಣ್​ ಸುಳಿವು ನೀಡಿದ್ದಾರೆ.

ಇಂದು ಇನ್​ಸ್ಟಾಗ್ರಾಮ್​​ ಲೈವ್ ಸೆಷನ್‌ನಲ್ಲಿ ನಿರೂಪಕ ಕರಣ್ ಜೋಹರ್ ಅವರು ತಮ್ಮ ಜನಪ್ರಿಯ ಚಾಟ್ ಶೋನ ಮುಂದಿನ ಅತಿಥಿಗಳ ಬಗ್ಗೆ ಸುಳಿವು ನೀಡಿದರು. ಬರುವ ಗುರುವಾರ ಪ್ರಸಾರವಾಗಲಿರುವ ಸಂಚಿಕೆಯಲ್ಲಿ ನಟ ವಿಕ್ಕಿ ಕೌಶಲ್​ ಆಗಮಿಸೋದು ಬಹುತೇಕ ಖಚಿತವಾಗಿದೆ. ಉಳಿದಂತೆ ಮುಂಬರುವ ಸಂಚಿಕೆಗಳ ಅತಿಥಿಗಳ ಬಗ್ಗೆ ಸುಳಿವು ನೀಡಿದ ಕರಣ್​​, ಆಲಿಯಾ ಭಟ್ ಅವರ ವೃತ್ತಿಜೀವನದ ಪ್ರಾರಂಭವಾದಾಗ ಒಡನಾಟ ಹೊಂದಿದ್ದವರು ಕಾರ್ಯಕ್ರಮಕ್ಕೆ ಬರಲಿದ್ದಾರೆಂದು ತಿಳಿಸಿದರು. 2012ರಲ್ಲಿ ಸ್ಟೂಡೆಂಟ್ ಆಫ್ ದಿ ಇಯರ್​​ನಲ್ಲಿ ಆಲಿಯಾ ಭಟ್​ ಜೊತೆ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ವರುಣ್ ಧವನ್ ಕಾಣಿಸಿಕೊಂಡಿದ್ದು, ಈ ಇಬ್ಬರು ಬರುವ ಸುಳಿವನ್ನು ಕರಣ್​​ ಬಿಟ್ಟುಕೊಟ್ಟಿದ್ದಾರೆ.

ವರುಣ್ ಧವನ್ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಭಾಗಿಯಾಗಲಿದ್ದಾರೆ ಎಂದು ಅಭಿಮಾನಿಗಳು ಊಹಿಸುತ್ತಿದ್ದಾರೆ. ಮುಂದಿನ ಅತಿಥಿಗಳ ಬಗೆಗಿನ ಗೆಸ್ಸಿಂಗ್​ ಗೇಮ್​ಗೆ ನಿರೂಪಕ ಮತ್ತಷ್ಟು ಉತ್ಸಾಹ ತುಂಬಿದ್ದಾರೆ. ಮತ್ತೊಂದೆಡೆ ಕಿಯಾರಾ, ವಿಕ್ಕಿ ಕೌಶಲ್​ ಕಾಣಿಸಿಕೊಳ್ಳಲಿದ್ದಾರೆ ಎಂದು ಕೂಡ ಹೇಳಲಾಗಿದೆ. ಕಿಯಾರಾ ಅಡ್ವಾಣಿ ಅಥವಾ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ವಿಕ್ಕಿ ಕೌಶಲ್ ಬರಬಹುದು. ಸ್ಯಾಮ್​ ಬಹದ್ದೂರ್ ಸಿನಿಮಾಗೆ ಸಜ್ಜಾಗುತ್ತಿರುವ ವಿಕ್ಕಿ ಕೌಶಲ್​ ಆಗಮಿಸೋದು ಬಹುತೇಕ ಪಕ್ಕಾ ಆಗಿದೆ.

ಇದನ್ನೂ ಓದಿ: ಬುರ್ಜ್ ಖಲೀಫಾದಲ್ಲಿ 'ಅನಿಮಲ್​' ಸ್ಪೆಷಲ್​ ವಿಡಿಯೋ ಪ್ರದರ್ಶನ - ನೋಡಿ

ಸೂಪರ್‌ ಸ್ಟಾರ್‌ಗಳಾದ ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಅವರೊಂದಿಗೆ ಉತ್ತಮ ಬಾಂಧವ್ಯವನ್ನು ಕರಣ್​ ಜೋಹರ್​, ಟೈಗರ್ 3 ಸ್ಟಾರ್ಸ್​​​ ಶೋನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯ ಬಗ್ಗೆ ಮೌನ ವಹಿಸಿದ್ದಾರೆ. ಶಾರುಖ್ ಖಾನ್ ಭಾಗವಹಿಸುವಿಕೆಗಾಗಿ ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ 'ಕಾಫಿ ವಿತ್ ಕರಣ್‌'ನ ಎಂಟನೇ ಸೀಸನ್​ನ ಫೈನಲ್​ ಎಪಿಸೋಡ್​ಗೆ ಟೈಗರ್ ಸ್ಟಾರ್​ ಸಲ್ಮಾನ್​ ಖಾನ್​ ಅವರನ್ನು ಕರೆಸುವ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ವರದಿಗಳು ಸೂಚಿಸಿದ್ದವು. ಸಲ್ಮಾನ್​ ಖಾನ್​ ಜೊತೆ ಯಾರು ಬರಲಿದ್ದಾರೆಂಬ ಕುತೂಹಲವೂ ಮೂಡಿತ್ತು. ಸಲ್ಮಾನ್​ ಖಾನ್​ ವರ್ಚಸ್ಸಿಗೆ ಶಾರುಖ್ ಖಾನ್ ಫುಲ್​ ಫಿಟ್ ಎಂದಿರುವ ಅಭಿಮಾನಿಗಳು, ಈ ಇಬ್ಬರನ್ನೂ ಮತ್ತೆ ಒಂದೇ ವೇದಿಕೆಯಲ್ಲಿ ನೋಡಲು ಇಚ್ಛಿಸಿದ್ದಾರೆ.

ಇದನ್ನೂ ಓದಿ: ಭುವನ ಸುಂದರಿ ಸ್ಪರ್ಧೆ 2023: ಭಾರತ ಪ್ರತಿನಿಧಿಸುತ್ತಿರುವ ಶ್ವೇತಾ ಶಾರ್ದಾ ಆಕರ್ಷಕ ಫೋಟೋಗಳಿಲ್ಲಿವೆ

ಜೊತೆಗೆ, ಹಿರಿಯ ತಾರೆ ರೇಖಾ ಮತ್ತು ವಿದ್ಯಾ ಬಾಲನ್ ಕಾಣಿಸಿಕೊಳ್ಳುವ ಬಗ್ಗೆಯೂ ಜೋಹರ್ ಸುಳಿವು ನೀಡಿದ್ದಾರೆ. ಇಬ್ಬರೂ ನಟಿಯರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಕರಣ್​ ಮುಂದಿನ ಸಂಚಿಕೆಗಳಲ್ಲಿ ಅವರನ್ನು ಕರೆಸುವ ಬಯಕೆ ವ್ಯಕ್ತಪಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.