ಸಾಕಷ್ಟು ಸಂಖ್ಯೆಯ ಸಿನಿ ಪ್ರಿಯರು ಕುತೂಹಲದಿಂದ ಕಾಯುತ್ತಿದ್ದ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರ ಜಗತ್ತಿನಾದ್ಯಂತ ಇಂದು ಚಿತ್ರ ಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಆದರೆ, ಚಿತ್ರ ಸೋರಿಕೆ ಆಗಿದ್ದು, ಚಿತ್ರತಂಡಕ್ಕೆ ಶಾಕ್ ಆಗಿದೆ.
ಫರ್ಹಾದ್ ಸಾಮ್ಜಿ ನಿರ್ದೇಶನದ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರದಲ್ಲಿ ಸಲ್ಮಾನ್ ಖಾನ್ ಮತ್ತು ಪೂಜಾ ಹೆಗ್ಡೆ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಪಲಕ್ ತಿವಾರಿ, ವೆಂಕಟೇಶ್ ದಗ್ಗುಬಾಟಿ, ಶೆಹನಾಜ್ ಗಿಲ್, ರಾಘವ್ ಜುಯಲ್, ಸಿದ್ಧಾರ್ಥ್ ನಿಗಮ್, ಜಸ್ಸಿ ಗಿಲ್, ಜಗಪತಿ ಬಾಬು ಕೂಡ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಅದ್ಧೂರಿಯಾಗಿ ಬಿಡುಗಡೆ ಆದ ದಿನದಂದೇ ಸಿನಿಮಾ ಲೀಕ್ ಆಗಿ ಚಿತ್ರತಂಡಕ್ಕೆ ಶಾಕ್ ಆಗಿದೆ. ಫಿಲ್ಮಿವ್ಯಾಪ್, 123 ಮೂವೀಸ್, 123 ಮೂವೀಸ್ ರಲ್ಜ್, ಆನ್ಲೈನ್ ಮೂವಿ ವಾಚಸ್, ಫಿಲ್ಮಿಜಿಲ್ಲಾ ಸೇರಿ ಕೆಲ ಸಿನಿಮಾ ಸೈಟ್ಗಳಲ್ಲಿ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಲಭ್ಯವಿದೆ.
ಸಾಮಾಜಿಕ ಜಾಲತಾಣ ಬಳಕೆದಾರರು ಕಿಸಿ ಕಾ ಭಾಯಿ ಕಿಸಿ ಕಿ ಜಾನ್ ಫ್ರೀ ಡೌನ್‌ಲೋಡ್, ಕಿಸಿ ಕಾ ಭಾಯಿ ಕಿಸಿ ಕಿ ಜಾನ್ ಟೆಲಿಗ್ರಾಮ್ ಲಿಂಕ್, ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಎಂಪಿ4 ಹೆಚ್ಡಿ ಡೌನ್‌ಲೋಡ್, ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ತಮಿಳು ರಾಕರ್ಸ್ ಸೇರಿದಂತೆ ಮುಂತಾದ ಕೀವರ್ಡ್‌ಗಳನ್ನು ಬಳಸಿಕೊಂಡು ಚಲನಚಿತ್ರವನ್ನು ಹುಡುಕುತ್ತಿದ್ದಾರೆ. ಸಿನಿಮಾವೊಂದು ಆನ್‌ಲೈನ್‌ನಲ್ಲಿ ಸೋರಿಕೆಯಾಗುತ್ತಿರುವುದು ಇದೇ ಮೊದಲಲ್ಲ. ಸರ್, ಶೆಹಜಾದ, Ant -Man and the Wasp: Quantumania, ಮಿಸಸ್ ಚಟರ್ಜಿ ವರ್ಸಸ್ ನಾರ್ವೆ, ಸೆಲ್ಫಿ ನಂತಹ ಚಿತ್ರಗಳೂ ಕೂಡ ಸೋರಿಕೆ ಆಗಿದ್ದವು.
ಏಪ್ರಿಲ್ 17ರಂದು ಅಂದರೆ ಸೋಮವಾರದಂದು ಚಲನಚಿತ್ರದ ಮುಂಗಡ ಟಿಕೆಂಟ್ ಬುಕ್ಕಿಂಗ್ ಪ್ರಾರಂಭವಾಗಿತ್ತು. ಅಂದು ಇನ್ಸ್ಟಾಗ್ರಾಮ್ನಲ್ಲಿ ನಟ ಸಲ್ಮಾನ್ ಖಾನ್ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ''ಕೆಲಸಕ್ಕಿಂತ ಉತ್ತಮ ಏನೂ ಅಲ್ಲ, ಹಾಗಾಗಿ ಚಿಲ್ ಮಾಡಬೇಡಿ, ಕೆಲಸ ಮಾಡಿ, kkbkkjಗೆ ನಾಲ್ಕು ದಿನಗಳು ಬಾಕಿ, ಶ್ರಮ ಪಡದಿದ್ದರೆ ಕುಟುಂಬಗಳಿಗೆ ಕೌಟುಂಬಿಕ ಚಿತ್ರವನ್ನು ಹೇಗೆ ತೋರಿಸುತ್ತೀರಿ, ಅಡ್ವಾನ್ಸ್ ಟಿಕೆಟ್ ಬುಕಿಂಗ್ ತೆರೆದಿದೆ'' ಎಂದು ಬರೆದುಕೊಂಡಿದ್ದರು. ಇಂದಿನ ಪೋಸ್ಟ್‌ನಲ್ಲಿ, 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರಮಂದಿರಗಳಲ್ಲಿ, ಟಿಕೆಟ್ ಬುಕ್ಕಿಂಗ್ ಲಿಂಕ್ ಇಲ್ಲಿದೆ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಸಲ್ಮಾನ್ ಖಾನ್ 'KKBKKJ' ಈದ್ ಗಿಫ್ಟ್: 100ಕ್ಕೂ ಹೆಚ್ಚು ದೇಶಗಳಲ್ಲಿ ತೆರೆಕಂಡ ಬಾಲಿವುಡ್ ಸಿನಿಮಾ
ಸದ್ಯ ಚಿತ್ರ ಸೋರಿಕೆಯಾಗಿದ್ದರೂ, ಅಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ಚಲನಚಿತ್ರಗಳನ್ನು ನೋಡುವುದನ್ನು ತಪ್ಪಿಸಬೇಕು. ಬದಲಿಗೆ ಥಿಯೇಟರ್‌ಗಳಲ್ಲಿ ಚಲನಚಿತ್ರವನ್ನು ವೀಕ್ಷಿಸಲು ಅಥವಾ ಅಧಿಕೃತ ಒಟಿಟಿ ಸೇವೆಗಳಲ್ಲಿ ಲಭ್ಯವಾದಾಗ ವೀಕ್ಷಿಸಬೇಕು ಎಂಬುದು ಚಿತ್ರರಂಗದ ಮನವಿ. 1957 ಹಕ್ಕುಸ್ವಾಮ್ಯ ಕಾಯ್ದೆ ಪ್ರಕಾರ, ಪೈರಸಿ ಕ್ರಿಮಿನಲ್ ಅಪರಾಧವಾಗಿದೆ.
ಇದನ್ನೂ ಓದಿ: ಮತ್ತೆ ಮದುವೆ!: 'ತೆಲುಗು ಇಂಡಸ್ಟ್ರಿಯವರು ಕನ್ನಡದ ಮೇಲೆ ಕಣ್ ಹಾಕ್ತಿದಿರಲ್ವಾ'
ಸಿನಿಮಾ ವ್ಯಾಪಾರ ವಿಶ್ಲೇಷಕ ಸುಮಿತ್ ಕಡೆಲ್ ಪ್ರಕಾರ, ''ಚಿತ್ರವು ಮೊದಲ ದಿನ 18 ಕೋಟಿ ರೂಪಾಯಿಗಳವರೆಗೆ ಸಂಗ್ರಹಿಸುತ್ತದೆ. ಆದರೆ, ಸೋಮವಾರದಿಂದ ಚಿತ್ರ ಕಲೆಕ್ಷನ್ನಲ್ಲಿ ಕುಸಿತ ಕಾಣಲಿದೆ" ಎಂದು ಹೇಳಿದ್ದಾರೆ. ಉಳಿದಂತೆ ಕೆಲ ಸಿನಿ ಪಂಡಿತರ ಪ್ರಕಾರ, ಚಿತ್ರ ಮೊದಲ ದಿನ ಸರಿಸುಮಾರು 18 ಕೋಟಿ ರೂ. ಗಳಿಸಲಿದೆ.