ETV Bharat / entertainment

'ಕಿರಿಕ್​ ಪಾರ್ಟಿ'ಗೆ 7 ವರ್ಷ: ಜ.26ಕ್ಕೆ 'ಬ್ಯಾಚುಲರ್ ಪಾರ್ಟಿ'

'ಕಿರಿಕ್​ ಪಾರ್ಟಿ' ತೆರೆಕಂಡು ಏಳು ವರ್ಷಗಳಾಗಿದ್ದು, 'ಬ್ಯಾಚುಲರ್ ಪಾರ್ಟಿ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.

Kirik Party completes 7 years
'ಕಿರಿಕ್​ ಪಾರ್ಟಿ'ಗೆ ಏಳು ವರ್ಷ
author img

By ETV Bharat Karnataka Team

Published : Dec 31, 2023, 10:58 AM IST

'ಕಿರಿಕ್​ ಪಾರ್ಟಿ'. ಇದು ಕನ್ನಡ ಚಿತ್ರರಂಗದ ಯಶಸ್ವಿ ಸಿನಿಮಾಗಳಲ್ಲೊಂದು. ಒಂದೊಳ್ಳೆಯ ಕಥೆ ಇದ್ದರೆ ಪ್ರೇಕ್ಷಕ ಪ್ರಭುಗಳು ಜೈ ಅಂತಾರೆ ಅನ್ನೋದನ್ನು ಸಾಬೀತುಪಡಿಸಿದ ಸಿನಿಮಾವಿದು. ರೊಮ್ಯಾಂಟಿಕ್​-ಕಾಮಿಡಿ ಸಿನಿಮಾ 2016ರ ಡಿಸೆಂಬರ್​ 30ರಂದು ತೆರೆಕಂಡು ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸಿತ್ತು. ಇಂದಿಗೂ ಅನೇಕರ ಮೆಚ್ಚಿನ 'ಕಿರಿಕ್​ ಪಾರ್ಟಿ' ತೆರೆಕಂಡು ಏಳು ವರ್ಷಗಳಾಗಿದ್ದು, ಇದೇ ಶೈಲಿಯ ಮತ್ತೊಂದು ಚಿತ್ರ 'ಬ್ಯಾಚುಲರ್ ಪಾರ್ಟಿ' ಬಿಡುಗಡೆಗೆ ಸಿದ್ಧಗೊಳ್ಳುತ್ತಿದೆ.

'ಕಿರಿಕ್​ ಪಾರ್ಟಿ': 'ಕಿರಿಕ್​ ಪಾರ್ಟಿ' ಸಿನಿಮಾವನ್ನು ಕಾಂತಾರ ನಟ ರಿಷಬ್​​​ ಶೆಟ್ಟಿ ನಿರ್ದೇಶಿಸಿದ್ದರು. 777ಚಾರ್ಲಿ ಖ್ಯಾತಿಯ ರಕ್ಷಿತ್​ ಶೆಟ್ಟಿ ಮತ್ತು ನ್ಯಾಶನಲ್​ ಕ್ರಶ್​ ಜನಪ್ರಿಯತೆಯ ರಶ್ಮಿಕಾ ಮಂದಣ್ಣ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ಸಂಯುಕ್ತ ಹೆಗ್ಡೆ, ಪ್ರಮೋದ್​ ಶೆಟ್ಟಿ, ಅಚ್ಯುತ್​​​ ಕುಮಾರ್​​, ಅರವಿಂದ್​ ಅಯ್ಯರ್​​, ಧನಂಜಯ್​ ರಂಜನ್​, ಚಂದನ್​ ಆಚಾರ್​​ ಪ್ರಮುಖ ಪಾತ್ರ ಮಾಡಿದ್ದರು. ರಶ್ಮಿಕಾ ಮಂದಣ್ಣ ಮತ್ತು ಸಂಯುಕ್ತ ಹೆಗ್ಡೆ ಅವರಿಗಿದು ಚೊಚ್ಚಲ ಚಿತ್ರವಾಗಿತ್ತು. ರಕ್ಷಿತ್​​ ಶೆಟ್ಟಿ ನಟನೆ ಮಾತ್ರವಲ್ಲದೇ ಕಥೆ, ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದರು. ಕರ್ಮ್ ಚಾವ್ಲಾ ಕ್ಯಾಮರಾ ವರ್ಕ್ ನಿಭಾಯಿಸಿದ್ದರೆ, ಸಚಿನ್​ ಬಿ.ರವಿ ಎಡಿಟಿಂಗ್ ಮಾಡಿದ್ದರು. ಬಿ.ಅಜನೀಶ್​ ಲೋಕನಾಥ್ ಅವರ ಸುಮಧುರ ಸಂಗೀತ ಚಿತ್ರದ ಮೆರುಗು ಹೆಚ್ಚಿಸಿತ್ತು.

  • Sometimes, we come across an experience that gives us more than what we ask for! #KirikParty was that for so many of us ♥️ So many minds came together to write their destiny with this movie and the audience accepted it with so much affection. I promise we will keep striving to… https://t.co/2Gp73PN7gb

    — Rakshit Shetty (@rakshitshetty) December 30, 2023 " class="align-text-top noRightClick twitterSection" data=" ">

'ಬ್ಯಾಚುಲರ್​ ಪಾರ್ಟಿ': ಕಾಲೇಜು ದಿನಗಳ ಕಥೆಯಾದ ಹಿನ್ನೆಲೆಯಲ್ಲಿ ಈ ಸಿನಿಮಾ ಯುವಕರನ್ನು ಹೆಚ್ಚು ಆಕರ್ಷಿಸಿತ್ತು. ಹಾಡುಗಳು ಬಹದಿನಗಳ ಕಾಲ ಸದ್ದು ಮಾಡಿದ್ದವು. ನಾಲ್ಕು ಕೋಟಿ ರೂ. ಬಜೆಟ್‌ನ ಈ ಸಿನಿಮಾ ಸರಿಸುಮಾರು 50 ಕೋಟಿ ರೂ. ಸಂಪಾದಿಸುವಲ್ಲಿ ಯಶಸ್ಸು ಕಂಡಿತ್ತು. ಇದೀಗ ಇದೇ ಶೈಲಿಯಲ್ಲಿ ನಿರ್ಮಾಣಗೊಂಡಿರುವ ಬ್ಯಾಚುಲರ್​ ಪಾರ್ಟಿ 2024ರ ಜನವರಿ 16ಕ್ಕೆ ತೆರೆಕಾಣಲಿದ್ದು, ಪ್ರೇಕ್ಷಕರಿಗೆ ಸಾಕಷ್ಟು ಕುತೂಹಲವಿದೆ.

ಇದನ್ನೂ ಓದಿ: ಚಿತ್ರರಂಗದಲ್ಲಿ 7 ವರ್ಷ ಪೂರೈಸಿದ ರಶ್ಮಿಕಾ ಮಂದಣ್ಣ: 'ಕಿರಿಕ್ ಪಾರ್ಟಿ' ಚೆಲುವೆಯ ಸಿನಿಪಯಣ

ರಕ್ಷಿತ್​ ಶೆಟ್ಟಿ ಹೀಗಂದ್ರು: ರಕ್ಷಿತ್​ ಶೆಟ್ಟಿ ಅವರ ಚಲನಚಿತ್ರ ನಿರ್ಮಾಣ ಸಂಸ್ಥೆ 'ಪರಂವಃ' ಸೋಷಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್ ಎಕ್ಸ್​ನಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿದೆ. 'ಕಿರಿಕ್​ ಪಾರ್ಟಿ' ಸಿನಿಮಾದ ಹಾಸ್ಯಭರಿತ ಕ್ಷಣಗಳನ್ನು ಇದು ಒಳಗೊಂಡಿದ್ದು, ನಿಮ್ಮನ್ನು ನಕ್ಕು ನಲಿಸುತ್ತದೆ. ವಿಡಿಯೋ ಹಂಚಿಕೊಂಡ ಪ್ರೊಡಕ್ಷನ್​ ಹೌಸ್​, ಸಿನಿಮಾ ಏಳು ವರ್ಷ ಪೂರೈಸಿರುವ ಸಂತಸ ಹಂಚಿಕೊಂಡಿದೆ. ಇದೇ ವಿಡಿಯೋ ಹಂಚಿಕೊಂಡಿರುವ ರಕ್ಷಿತ್​ ಶೆಟ್ಟಿ, ''ಕೆಲವೊಮ್ಮೆ, ನಾವು ಕೇಳುವುದಕ್ಕಿಂತ ಹೆಚ್ಚಿನ ಅನುಭವ ಸಿಗುತ್ತದೆ. ತಮ್ಮ ಭವಿಷ್ಯ ರೂಪಿಸಿಕೊಳ್ಳುವ ಹಾದಿಯಲ್ಲಿ ಅನೇಕ ಮನಸ್ಸುಗಳು ಈ ಸಿನಿಮಾಗೆ ಬಂದು ಸೇರಿದವು. ಪ್ರೇಕ್ಷಕರು ಬಹಳ ಪ್ರೀತಿಯಿಂದ ಸ್ವೀಕರಿಸಿದರು. ನಿಮ್ಮೆಲ್ಲರಿಗೂ ನಾವು ಅಂಥದ್ದೇ ಅನುಭವಗಳನ್ನು ನೀಡಲು ಪ್ರಯತ್ನಿಸುತ್ತೇವೆ ಎಂದು ನಾನು ಭರವಸೆ ನೀಡುತ್ತೇನೆ'' ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ರಕ್ಷಿತ್​ ಶೆಟ್ಟಿ 'ಬ್ಯಾಚುಲರ್ ಪಾರ್ಟಿ'ಗೆ ನಿಮಗಿದೆ ಆಹ್ವಾನ; ಜ.26ರಂದು ಥಿಯೇಟರ್​ಗೆ ಬನ್ನಿ

ಬ್ಯಾಚುಲರ್​ ಪಾರ್ಟಿ ತಂಡ: 'ಕಿರಿಕ್ ಪಾರ್ಟಿ' ಸಿನಿಮಾದ ಬರಹಗಾರ ಅಭಿಜಿತ್ ಮಹೇಶ್ ಅವರು ಬ್ಯಾಚುಲರ್ ಪಾರ್ಟಿ ಚಿತ್ರವನ್ನು ನಿರ್ದೇಶಿಸಿದ್ದಾರೆ. ತಮ್ಮ ನಿರ್ದೇಶನದ ಚೊಚ್ಚಲ ಚಿತ್ರಕ್ಕೆ ಸಂಭಾಷಣೆ, ಕಥೆ-ಚಿತ್ರಕಥೆ ಬರೆದಿದ್ದಾರೆ. ಅಮಿತ್​ ಗುಪ್ತಾ ಸಾಥ್​ ನೀಡಿದ್ದಾರೆ. ದಿಗಂತ್, ಯೋಗಿ ಹಾಗೂ ಅಚ್ಯುತ್ ಕುಮಾರ್ ಪ್ರಮುಖ ಪಾತ್ರದಲ್ಲಿದ್ದಾರೆ. 2024ರ ಜನವರಿ 26ರಂದು ಸಿನಿಮಾ ತೆರೆಗೆ ಬರಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.