ಭಾರತೀಯ ಚಿತ್ರರಂಗದ ಸೂಪರ್‌ಸ್ಟಾರ್, ಹಿರಿಯ ನಟ ಅಮಿತಾಭ್ ಬಚ್ಚನ್ ಮತ್ತೊಮ್ಮೆ ನಿಮ್ಮೆಲ್ಲರ ಮನೆಗೆ ಭೇಟಿ ನೀಡಲು ರೆಡಿ ಆಗಿದ್ದಾರೆ. ಬಿಗ್ ಬಿ ನಡೆಸಿಕೊಡುವ ಜನಪ್ರಿಯ ಕೌನ್ ಬನೇಗಾ ಕರೋಡ್ಪತಿ (Kaun Banega Crorepati) ಶೋ ಸದ್ಯದಲ್ಲೇ ಪ್ರಸಾರವಾಗಲಿದೆ. ಕಾರ್ಯಕ್ರಮದ ಮೊದಲ ಪ್ರೋಮೋ ಇಂದು ಅನಾವರಣಗೊಂಡಿದೆ.
ಈ ಬಾರಿ ಕಾರ್ಯಕ್ರಮದ ನಿಯಮಗಳು ಮತ್ತು ಸ್ವರೂಪವನ್ನು ಬದಲಾಯಿಸಲಾಗಿದೆ ಎಂದು ಪ್ರೋಮೋದಿಂದ ತಿಳಿದುಬಂದಿದೆ. ಕೌನ್ ಬನೇಗಾ ಕರೋಡ್ಪತಿ 14 ಸೀಸನ್‌ಗಳು ಯಶಸ್ವಿಯಾಗಿ ನಡೆದಿದ್ದು, 15ನೇ ಸೀಸನ್ನೊಂದಿಗೆ ಬಿಗ್ ಬಿ ಮರಳುತ್ತಿದ್ದಾರೆ. ಸೀಸನ್ 15ರಲ್ಲಿ ಅಮಿತಾಭ್ ಬಚ್ಚನ್ ಪ್ರತಿ ಬಾರಿಯಂತೆ ಬಹಳ ಉಲ್ಲಾಸದಿಂದ ಕಂಡುಬಂದಿದ್ದಾರೆ.
-
T 4690 - Back on the job again .. see you soon !#KBC15 #KaunBanegaCrorepati#KBCOnSonyEntertainmentTelevision @SonyTV pic.twitter.com/y3JQr5I7Mc
— Amitabh Bachchan (@SrBachchan) June 29, 2023 " class="align-text-top noRightClick twitterSection" data="
">T 4690 - Back on the job again .. see you soon !#KBC15 #KaunBanegaCrorepati#KBCOnSonyEntertainmentTelevision @SonyTV pic.twitter.com/y3JQr5I7Mc
— Amitabh Bachchan (@SrBachchan) June 29, 2023T 4690 - Back on the job again .. see you soon !#KBC15 #KaunBanegaCrorepati#KBCOnSonyEntertainmentTelevision @SonyTV pic.twitter.com/y3JQr5I7Mc
— Amitabh Bachchan (@SrBachchan) June 29, 2023
ಕೌನ್ ಬನೇಗಾ ಕರೋಡ್ಪತಿ ಕಿರುತೆರೆ ಪ್ರಪಂಚದ ಅತ್ಯಂತ ಜನಪ್ರಿಯ ಕಾರ್ಯಕ್ರಮಗಳಲ್ಲಿ ಒಂದು. ಬಚ್ಚನ್ ನಿರೂಪಣೆಯಲ್ಲಿ ಮೂಡಿಬರುವ ಕಾರ್ಯಕ್ರಮ ವೀಕ್ಷಿಸಲು ಭಾರಿ ಸಂಖ್ಯೆಯ ಪ್ರೇಕ್ಷಕರು ಕಾಯುತ್ತಿರುತ್ತಾರೆ. KBC 15 ಅನಾವರಣಗೊಳಿಸಿರುವ ಪ್ರೋಮೋದಲ್ಲಿ, ಅಮಿತಾಭ್ ಬಚ್ಚನ್ ಕಾರ್ಯಕ್ರಮದ ನಿಯಮಗಳು ಮತ್ತು ಸ್ವರೂಪದಲ್ಲಿ ಬದಲಾವಣೆಯ ಕುರಿತು ಮಾಹಿತಿ ನೀಡಿದ್ದಾರೆ. ಇದೇ ವೇಳೆ ಶೋ ಇನ್ನಷ್ಟು ಬೆಳೆಯಲಿ ಎಂದು ಹರಸಿದ್ದಾರೆ. ತಂತ್ರಜ್ಞಾನ ಬದಲಾಗುತ್ತಿರುವುದರಿಂದ ಪ್ರದರ್ಶನದಲ್ಲಿ ಹಲವು ವಿನೂತನ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಅವರು ಹೇಳಿದರು. ತಮ್ಮ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಪ್ರೋಮೋ ಹಂಚಿಕೊಂಡು, 'ಮತ್ತೆ ಕೆಲಸಕ್ಕೆ ಬಂದೆ, ಶೀಘ್ರವೇ ಭೇಟಿಯಾಗೋಣ' ಎಂದು ಬರೆದಿದ್ದಾರೆ.
ಪ್ರೇಕ್ಷಕರ ಕುತೂಹಲ: ಕಾರ್ಯಕ್ರಮದ ಪ್ರೋಮೋ ಬಿಡುಗಡೆಯಾದ ನಂತರ ಅಭಿಮಾನಿಗಳ ಉತ್ಸಾಹ ಹೆಚ್ಚಾಗಿದೆ. ಕಾರ್ಯಕ್ರಮದ ಕುರಿತು ಅವರು ತಮ್ಮ ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ. ಕೌನ್ ಬನೇಗಾ ಕರೋಡ್ಪತಿ ಸೀಸನ್ 15 ಯಾವಾಗ, ಎಷ್ಟು ಗಂಟೆಗೆ, ಎಷ್ಟು ಸಮಯದವರೆಗೆ ಪ್ರಸಾರವಾಗಲಿದೆ ಎಂಬುದನ್ನು ತಯಾರಕರು ಬಹಿರಂಗಪಡಿಸಿಲ್ಲ. ಸೋನಿ ಟಿವಿಯಲ್ಲಿ ಪ್ರಸಾರವಾಗಲಿದೆ.
ಇದನ್ನೂ ಓದಿ: Parineeti Chopra: 'ಪರಿ'ಯ ಸೌಂದರ್ಯ ಹೆಚ್ಚಿಸಿದ ಸರಳತೆ - ಸಾಂಪ್ರದಾಯಿಕ ನೋಟಕ್ಕೆ ಅಭಿಮಾನಿಗಳ ಮೆಚ್ಚುಗೆ
ಅಮಿತಾಭ್ ಬಚ್ಚನ್ ಸಿನಿಮಾಗಳು..: ಅಮಿತಾಭ್ ಬಚ್ಚನ್ ಅವರ ಮುಂದಿನ ಸಿನಿಮಾ 'ಪ್ರಾಜೆಕ್ಟ್ ಕೆ'. ಪ್ಯಾನ್ ಇಂಡಿಯಾ ಮಟ್ಟದಲ್ಲಿ ತಯಾರಾಗುತ್ತಿರುವ ಈ ಸಿನಿಮಾಗೆ ನಿರ್ದೇಶಕ ನಾಗ್ ಅಶ್ವಿನ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಪ್ರಭಾಸ್, ದೀಪಿಕಾ ಪಡುಕೋಣೆ ಮುಖ್ಯಭೂಮಿಕೆಯ ಈ ಚಿತ್ರದಲ್ಲಿ ದಿಶಾ ಪಟಾನಿ, ಅಮಿತಾಭ್ ಬಚ್ಚನ್, ಕಮಲ್ ಹಾಸನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ದಕ್ಷಿಣ ಮತ್ತು ಉತ್ತರ ಚಿತ್ರರಂಗದ ಹಿರಿಯ ನಟರು ಸೇರಿ ಸಿನಿಮಾ ಮಾಡುತ್ತಿದ್ದಾರೆ. ಬಿಗ್ ಸ್ಟಾರ್ಸ್ ಇರುವ ಈ ಸಿನಿಮಾವನ್ನು ಬಿಗ್ ಬಜೆಟ್ನಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಹಿರಿಯ ನಟ ಅಮಿತಾಭ್ ಬಚ್ಚನ್ ತಮ್ಮ ಪಾತ್ರಕ್ಕೆ 10 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ ಎಂಬ ಮಾಹಿತಿ ಇದೆ.
ಇದನ್ನೂ ಓದಿ: Oscar Members: ರಾಮ್ ಚರಣ್, ಜೂ. ಎನ್ಟಿಆರ್ ಸೇರಿ ಹಲವು ಭಾರತೀಯರಿಗೆ ಸಿಕ್ತು ಆಸ್ಕರ್ ಸದಸ್ಯತ್ವ