ETV Bharat / entertainment

ವಿಕ್ಕಿ ಕೌಶಲ್​​ ಸಹೋದರನ ಜನ್ಮದಿನ: ಮೈದುನ ಸನ್ನಿ ಕೌಶಲ್​ಗೆ ವಿಶೇಷವಾಗಿ ಶುಭ ಕೋರಿದ ಕತ್ರಿನಾ ಕೈಫ್​​ - ಕತ್ರಿನಾ ಕೈಫ್​​

Sunny kaushal Birthday: ವಿಕ್ಕಿ ಕೌಶಲ್​​ ಸಹೋದರ ಸನ್ನಿ ಕೌಶಲ್​ ಜನ್ಮದಿನದ ಸಂಭ್ರದಲ್ಲಿದ್ದು, ನಟಿ ಕತ್ರಿನಾ ಕೈಫ್​ ವಿಶೇಷವಾಗಿ ಶುಭಾಶಯ ಕೋರಿದ್ದಾರೆ.

Sunny kaushal Birthday
ಸನ್ನಿ ಕೌಶಲ್ ಜನ್ಮದಿನ
author img

By ETV Bharat Karnataka Team

Published : Sep 28, 2023, 6:41 PM IST

ಶಿದ್ದತ್, ಚೋರ್ ನಿಕಲ್ ಕೆ ಭಾಗಾ ಸೇರಿದಂತೆ ಓಟಿಟಿ ಕಾರ್ಯಕ್ರಮಗಳಿಗೆ ಹೆಸರುವಾಸಿಯಾಗಿರುವ ನಟ ಸನ್ನಿ ಕೌಶಲ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. 34ನೇ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಸನ್ನಿ ಕೌಶಲ್, ರಾಷ್ಟ್ರಪ್ರಶಸ್ತಿ ವಿಜೇತ ನಟ, ಬಹುಬೇಡಿಕೆ ನಟಿ ಕತ್ರಿನಾ ಕೈಫ್​​ ಪತಿ ವಿಕ್ಕಿ ಕೌಶಲ್ ಅವರ ಸಹೋದರರೂ ಹೌದು. ಜನ್ಮದಿನದ ಸಂಭ್ರಮದಲ್ಲಿರುವ ನಟನಿಗೆ ಕುಟುಂಬ ಸದಸ್ಯರು, ಆಪ್ತರು, ಸಿನಿ ಸ್ನೇಹಿತರು ಸೇರಿದಂತೆ ಚಿತ್ರರಂಗದವರು ವಿಶೇಷವಾಗಿ ಶುಭಾಶಯ ಕೋರಿದ್ದಾರೆ.

Sunny kaushal Birthday
ಗೆಳತಿ ಶಾರ್ವರಿ ವಾಘ್ ಇನ್​ಸ್ಟಾ ಸ್ಟೋರಿ

ಆಪ್ತರ ಸ್ಪೆಷಲ್​ ಪೋಸ್ಟ್: ಬರ್ತ್ ಡೇ ಸೆಲೆಬ್ರೇಟ್​​ ಮಾಡಿಕೊಳ್ಳುತ್ತಿರುವ ಕಿರಿಯ ಕೌಶಲ್‌ಗೆ ಅತ್ತಿಗೆ ಕತ್ರಿನಾ ಕೈಫ್ ವಿಶೇಷವಾಗಿ ಶುಭ ಕೋರಿದ್ದಾರೆ. ಸಹೋದರ ವಿಕ್ಕಿ ಕೌಶಲ್​​, ಗೆಳತಿ ಶಾರ್ವರಿ ವಾಘ್ ಕೂಡ ಶುಭ ಕೋರುವ ಮೂಲಕ ಸನ್ನಿ ಕೌಶಲ್ ಜನ್ಮದಿನವನ್ನು ವಿಶೇಷವಾಗಿಸಿದ್ದಾರೆ.

Sunny kaushal Birthday
ಕತ್ರಿನಾ ಕೈಫ್​​ ಇನ್​ಸ್ಟಾ ಸ್ಟೋರಿ

ದಿ ಬೆಸ್ಟ್ ದೇವರ್​.. ಬಾಲಿವುಡ್​ ಬಹುಬೇಡಿಕೆ ನಟಿ ಕತ್ರಿನಾ ಕೈಫ್​​ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಸ್ಟೋರಿಸ್‌ನಲ್ಲಿ (ಐಜಿ ಸ್ಟೋರಿ) ಮೈದುನನಿಗೆ ಶುಭ ಕೋರಿದ್ದಾರೆ. ತಮ್ಮ ಮದುವೆ ಸಂದರ್ಭ ಕ್ಲಿಕ್ಕಿಸಿರುವ ವಿಕ್ಕಿ ಹಾಗೂ ಸನ್ನಿ ಅವರ ಫೋಟೋವನ್ನು ನಟಿ ಶೇರ್ ಮಾಡಿದ್ದಾರೆ. ಕೌಶಲ್ ಬ್ರದರ್ಸ್ ಬಿಳಿ ಬಟ್ಟೆ ಧರಿಸಿದ್ದು, ಬ್ಯಾಗ್ರೌಂಡ್​ ಹೂವಿನ ಅಲಂಕಾರದಿಂದ ಆಕರ್ಷಣೀಯವಾಗಿ ಕಾಣಿಸುತ್ತಿದೆ. "ಅತ್ಯುತ್ತಮ ಮೈದುನನಿಗೆ (ದೇವರ್) ಜನ್ಮದಿನದ ಶುಭಾಶಯಗಳು" ಎಂದು ನಟಿ ಬರೆದುಕೊಂಡಿದ್ದಾರೆ.

  • " class="align-text-top noRightClick twitterSection" data="">

ವಿಕ್ಕಿ ಕೌಶಲ್​​ ಸ್ಪೆಷಲ್​ ಪೋಸ್ಟ್: ಅಣ್ಣ ವಿಕ್ಕಿ ಕೌಶಲ್​​ ತಮ್ಮ ಅಧಿಕೃತ ಇನ್​​​ಸ್ಟಾಗ್ರಾಮ್​ನಲ್ಲಿ ಸನ್ನಿ ಕೌಶಲ್​​ ಅವರ ಲೇಟೆಸ್ಟ್ ಮ್ಯೂಸಿಕ್​ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಸಹೋದರನ ಬಗ್ಗೆ ಹೆಮ್ಮೆಪಡುವುದಾಗಿ ನಟ ತಿಳಿಸಿದ್ದಾರೆ. "ನಿಮ್ಮ ಆಲೋಚನೆಗಳು ನನ್ನನ್ನು ಎಷ್ಟರ ಮಟ್ಟಿಗೆ ಪ್ರೇರೇಪಿಸುತ್ತದೆ ಎಂಬುದರ ಬಗ್ಗೆ ನಿಮಗೆ ತಿಳಿದಿಲ್ಲ. ನಿಮ್ಮ ಸಾಧನೆಯನ್ನು ಮುಂದುವರಿಸಿ. ಗೆಲ್ಲುವುದನ್ನು ಮುಂದುವರಿಸಿ. ಮೇರೆ ಭಾಯ್ ಹ್ಯಾಪಿ ಬರ್ತ್ ಡೇ. ನಾನು ನಿಮ್ಮನ್ನು ಪ್ರೀತಿಸುತ್ತೇನೆ, ಆರಾಧಿಸುತ್ತೇನೆ" ಎಂದು ನಟ ಬರೆದುಕೊಂಡಿದ್ದಾರೆ. ವಿಕ್ಕಿ ಪತ್ನಿ ಕತ್ರಿನಾ ಈ ಪೋಸ್ಟ್‌ಗೆ ಹಾರ್ಟ್ ಎಮೋಜಿಗಳೊಂದಿಗೆ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ: 'ದಿ ವ್ಯಾಕ್ಸಿನ್​​ ವಾರ್' ರಿಲೀಸ್​​: ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ಸಿನಿಮಾದಲ್ಲಿ ಸಪ್ತಮಿ ಗೌಡ

ಗೆಳತಿ ಶಾರ್ವರಿ ವಾಘ್ ವಿಶ್: ಇನ್ನು, ನಟ ಸನ್ನಿ ಕೌಶಲ್​​ ಅವರ ವದಂತಿಯ ಗೆಳತಿ, ನಟಿ ಶಾರ್ವರಿ ವಾಘ್ ಅವರು ತಮ್ಮ ಇನ್​ಸ್ಟಾಗ್ರಾಮ್​​ ಸ್ಟೋರಿಸ್​​ನಲ್ಲಿ ನಟನ ಹಾಡನ್ನು ಪೋಸ್ಟ್ ಮಾಡುವ ಮೂಲಕ ಅವರಿಗೆ ವಿಶೇಷವಾಗಿ ಶುಭ ಹಾರೈಸಿದ್ದಾರೆ. ಜೊತೆಗೆ ಇಬ್ಬರು ಒಟ್ಟಿಗಿರುವ ಫೋಟೋವನ್ನು ಪೋಸ್ಟ್ ಮಾಡಿದ್ದು, "ಹುಟ್ಟುಹಬ್ಬದ ಶುಭಾಶಯಗಳು ಸನ್ನಿ" ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಜನ್ಮದಿನದ ಸಂಭ್ರಮದಲ್ಲಿ ರೂಪವತಿ ಮೌನಿ ರಾಯ್​​​: ಕೆಜಿಎಫ್​​​ ಚೆಲುವೆಯ ಹಳೇ ಫೋಟೋ ನೋಡಿದ್ದೀರಾ?!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.