ತಾರಾ ದಂಪತಿಗಳು ಒಂದಲ್ಲ ಒಂದು ವಿಚಾರವಾಗಿ ಸದ್ದು ಮಾಡುತ್ತಲೇ ಇರುತ್ತಾರೆ. ತಮ್ಮ ಮೆಚ್ಚಿನ ಸ್ಟಾರ್ ಕಪಲ್ ಬಗ್ಗೆ ತಿಳಿದುಕೊಳ್ಳಲು ಅಭಿಮಾನಿಗಳು ಸಹ ಉತ್ಸುಕರಾಗಿರುತ್ತಾರೆ. ನಟಿ ಕತ್ರಿನಾ ಕೈಫ್ ಮತ್ತು ನಟ ವಿಕ್ಕಿ ಕೌಶಲ್ ಹೆಚ್ಚಿನ ಸಂಖ್ಯೆಯ ಅಭಿಮಾನಿಗಳ ಮೆಚ್ಚಿನ ತಾರಾ ದಂಪತಿ. ಈ ಜೋಡಿಯ ಫೋಟೋ, ವಿಡಿಯೋಗಳಿಗಾಗಿ ಕಾಯುತ್ತಿದ್ದ ಫ್ಯಾನ್ಸ್ಗೆ ಇದೀಗ ಹೊಸ ಸುಂದರ ಚಿತ್ರಗಳು ಲಭ್ಯವಾಗಿದೆ.
- " class="align-text-top noRightClick twitterSection" data="
">
ವಿಕ್ಯಾಟ್ ಕಪಲ್ ಶುಕ್ರವಾರ ತಡರಾತ್ರಿ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಏರ್ಪೋರ್ಟ್ ಟರ್ಮಿನಲ್‌ನಿಂದ ದಂಪತಿಗ ಹೊರಡುವ ಹಲವಾರು ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ. ವಿಮಾನ ನಿಲ್ದಾಣದಿಂದ ಒಂದೇ ಕಾರಿನಲ್ಲಿ ಹೊರಟರೂ, ಇಬ್ಬರೂ ಪ್ರತ್ಯೇಕವಾಗಿ ವಿಮಾನ ನಿಲ್ದಾಣದಿಂದ ಹೊರ ಬರುತ್ತಿರುವುದು ಕಂಡು ಬಂದಿದೆ.
ಪಾಪರಾಜಿಯೊಬ್ಬರು ನಟಿ ಕತ್ರಿನಾ ಕೈಫ್ ಅವರು ತಮ್ಮ ಕಾರಿನ ಕಡೆಗೆ ತೆರಳುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ನಟಿ ಬೂದು ಬಣ್ಣದ ಟಿ ಶರ್ಟ್, ಕಪ್ಪು ಪ್ಯಾಂಟ್ ಮತ್ತು ಶೂ ಧರಿಸಿದ್ದರು. ಜೊತೆಗೆ ಮಾಸ್ಕ್ ಮತ್ತು ಬ್ಲ್ಯಾಕ್ ಗ್ಲಾಸ್ ಅನ್ನು ಸಹ ಧರಿಸಿದ್ದರು. ಅಭಿಮಾನಿಗಳೊಂದಿಗೆ ಸೆಲ್ಫಿಗೆ ಪೋಸ್ ಕೂಡ ಕೊಟ್ಟರು. ಮತ್ತೊಂದೆಡೆ, ವಿಕ್ಕಿ ಕೌಶಲ್ ಅವರು ಬಿಳಿ ಟಿ ಶರ್ಟ್, ಬೂದು ಬಣ್ಣದ ಜಾಕೆಟ್, ಕಪ್ಪು ಪ್ಯಾಂಟ್ ಧರಿಸಿದ್ದರು. ಬ್ಲ್ಯಾಕ್ ಗ್ಲಾಸ್ ಮತ್ತು ಕ್ಯಾಪ್ ಧರಿಸಿದ್ದರು. ವಿಕ್ಕಿ ಕೂಡ ತಮ್ಮ ಹಲವಾರು ಅಭಿಮಾನಿಗಳೊಂದಿಗೆ ಸೆಲ್ಫಿಗೆ ಪೋಸ್ ನೀಡಿದರು. ಈ ವಿಡಿಯೋ ಮತ್ತು ಚಿತ್ರಗಳೀಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ. ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.
ಫೋಟೋ, ವಿಡಿಯೋಗಳಿಗೆ ಸ್ಪಂದಿಸಿರುವ ಇನ್‌ಸ್ಟಾಗ್ರಾಮ್ ಬಳಕೆದಾರರು, "ಕತ್ರಿನಾ ಅವರನ್ನು ನಾನು ನೋಡಿಲ್ಲ ಎಂದು ನನಗೆ ಅನಿಸುತ್ತಿದೆ, ಕ್ಯಾಶುವಲ್ ಡ್ರೆಸ್ನಲ್ಲೂ ಅದ್ಭುತ, ಎವರ್ಗ್ರೀನ್'' ಎಂದು ಬರೆದಿದ್ದಾರೆ. ಮತ್ತೋರ್ವ ಬಳಕೆದಾರರು, ''ಬಹು ಸಮಯದ ನಂತರ ವಿಕ್ಯಾಟ್ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ, ಸ್ವೀಟ್ ಕಪಲ್'' ಎಂದು ಬರೆದಿದ್ದಾರೆ.
ಈ ತಾರೆಯರ ಮುಂದಿನ ಸಿನಿಮಾ ಬಗ್ಗೆ ಗಮನಿಸುವುದಾದರೆ, ನಟ ವಿಕ್ಕಿ ಕೌಶಲ್ ಅವರು ಮುಂದೆ ಮೇಘನಾ ಗುಲ್ಜಾರ್ ಅವರ ಸ್ಯಾಮ್ ಬಹದ್ದೂರ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರೋನಿ (Ronnie Screwvala) ನಿರ್ಮಿಸುತ್ತಿರುವ ಈ ಚಲನಚಿತ್ರವು ಭಾರತದ ಮೊದಲ ಫೀಲ್ಡ್ ಮಾರ್ಷಲ್ ಸ್ಯಾಮ್ ಮಾಣೆಕ್ ಷಾ ಅವರ ಜೀವನವನ್ನು ಆಧರಿಸಿದೆ. ಸಾನ್ಯಾ ಮಲ್ಹೋತ್ರಾ ಮತ್ತು ಫಾತಿಮಾ ಸನಾ ಶೇಖ್ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿರುವ ಈ ಚಿತ್ರವು ಇದೇ ಡಿಸೆಂಬರ್ 1ರಂದು ಬಿಡುಗಡೆ ಆಗಲಿದೆ.
ಇದನ್ನೂ ಓದಿ: ಬರ್ತ್ಡೇ ಸ್ಪೆಷಲ್: 'ಭುವನ ಸುಂದರಿ' ನಟಿ ಲಾರಾ ದತ್ತಾ ಬಗ್ಗೆ ನಿಮಗೆಷ್ಟು ಗೊತ್ತು?
ನಟಿ ಕತ್ರಿನಾ ಕೈಫ್ ಆ್ಯಕ್ಷನ್ ಥ್ರಿಲ್ಲರ್ ಚಲನಚಿತ್ರ ಟೈಗರ್ 3ನಲ್ಲಿ ಸಲ್ಮಾನ್ ಖಾನ್ ಜೊತೆಗೆ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಶಾರುಖ್ ಖಾನ್ ಸಹ ಕಾಣಿಸಿಕೊಳ್ಳಲಿದ್ದಾರೆ. ವಿಜಯ್ ಸೇತುಪತಿ ಅವರೊಂದಿಗೆ ಮೇರಿ ಕ್ರಿಸ್ಮಸ್ನಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವನ್ನು ಶ್ರೀರಾಮ್ ರಾಘವನ್ ನಿರ್ದೇಶಿಸುತ್ತಿದ್ದಾರೆ.
ಇದನ್ನೂ ಓದಿ: ಸಮಂತಾ ಅಭಿನಯದ ಶಾಕುಂತಲಂ ಸಿನಿಮಾ ಭರ್ಜರಿ ಓಪನಿಂಗ್; ಮೊದಲ ದಿನದ ಕಲೆಕ್ಷನ್ ಎಷ್ಟು?
ಬಹುದಿನಗಳಿಂದ ಡೇಟಿಂಗ್ನಲ್ಲಿದ್ದ ವಿಕ್ಯಾಟ್ 2021ರ ಡಿಸೆಂಬರ್ 9ರಂದು ವೈವಾಹಿಕ ಜೀವನ ಆರಂಭಿಸಿದರು. ರಾಜಸ್ಥಾನದ ಸಿಕ್ಸ್ ಸೆನ್ಸ್ ಫೋರ್ಟ್ ಬರ್ವಾರಾದಲ್ಲಿ ಡಿಸೆಂಬರ್ 7 ರಿಂದ 9ರವರೆಗೆ ಮೆಹೆಂದಿ, ಅರಿಶಿಣ ಶಾಸ್ತ್ರ, ಸಂಗೀತ ಸೇರಿಂದತೆ ಭವ್ಯ ವಿವಾಹ ಸಮಾರಂಭ ನಡೆಯಿತು. ಆಗಾಗ್ಗೆ ಒಟ್ಟಿಗೆ ಕಾಣಿಸಿಕೊಳ್ಳುವ ಮೂಲಕ ಸದ್ದು ಮಾಡುತ್ತಾರೆ.