ಹೈದರಾಬಾದ್: ಬಾಲಿವುಡ್ನ ನಟಿ ಕತ್ರಿನಾ ಕೈಫ್ 39ರ ಹರೆಯಕ್ಕೆ ಕಾಲಿಟ್ಟಿದ್ದಾರೆ. ಜನ್ಮದಿನದ ಹಿನ್ನೆಲೆ ಪತಿ ವಿಕ್ಕಿ ಕೌಶಲ್ ಜೊತೆ ಮಾಲ್ಡೀವ್ಸ್ ಪ್ರವಾಸ ಕೈಗೊಂಡಿದ್ದಾರೆ. ಈ ಮಧ್ಯೆಯೇ ಕ್ಯಾಟ್ ಗರ್ಭಿಣಿಯಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. "ಗುಡ್ ನ್ಯೂಸ್" ಘೋಷಿಸಲು ಶುಭ ದಿನಕ್ಕಾಗಿ ಕಾಯುತ್ತಿದ್ದು, ಇಂದು ಕತ್ರಿನಾ ಕೈಫ್ ಜನ್ಮದಿನದ ಕಾರಣ ಇಂದೇ ಘೋಷಿಸುವ ನಿರೀಕ್ಷೆಯಲ್ಲಿದ್ದಾರೆ ಅಭಿಮಾನಿಗಳು.
ಕತ್ರಿನಾ ಕೈಫ್ ಪ್ರೆಗ್ನೆಂಟ್ ಆಗಿದ್ದಾರೆ ಎಂಬ ಸುದ್ದಿ ಕೆಲ ದಿನಗಳಿಂದ ವೇಗ ಪಡೆದಿದೆ. ಕಾರಣ 3 ತಿಂಗಳ ಹಿಂದಷ್ಟೇ ಮದುವೆಯಾದ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ತಮ್ಮ ಮಗುವಿನ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ಘೋಷಿಸಿಕೊಂಡಿದ್ದರು. ಅದೇ ರೀತಿ ಕತ್ರಿನಾ ಕೈಫ್ ಕೂಡ ಶೀಘ್ರದಲ್ಲೇ ಶುಭ ಸುದ್ದಿ ನೀಡಲಿದ್ದಾರೆ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ.
ಬಾಲಿವುಡ್ ಜೋಡಿ ವಿಕ್ಕಿ ಕೌಶಲ್ ಮತ್ತು ಕತ್ರಿನಾ ಕೈಫ್ 2021ರ ಡಿಸೆಂಬರ್ 9 ರಂದು ರಾಜಸ್ಥಾನದಲ್ಲಿ ವಿವಾಹವಾಗಿದ್ದರು.
ಓದಿ: ಚಿತ್ರರಂಗದಲ್ಲಿ 19 ವರ್ಷ ಪೂರೈಸಿದ ಕತ್ರಿನಾ: ಅದ್ಭುತ ನೃತ್ಯ ಪ್ರದರ್ಶನಗಳ ಫೋಟೋಗಳು ಇಲ್ಲಿವೆ..