ETV Bharat / entertainment

ಭುಜದಿಂದ ಕೆಳಗೆ ಜಾಕೆಟ್ ಧರಿಸಿದ್ದಕ್ಕಾಗಿ ಸಖತ್​ ಟ್ರೋಲ್​ ಅಗುತ್ತಿರುವ ಕತ್ರಿನಾ ಕೈಫ್ - tiger 3

ಬಾಲಿವುಡ್​ ನಟಿ ಕತ್ರಿನಾ ಕೈಫ್ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ.

ಬಾಲಿವುಡ್ ನಟಿ ಕತ್ರಿನಾ ಕೈಫ್
ಬಾಲಿವುಡ್ ನಟಿ ಕತ್ರಿನಾ ಕೈಫ್
author img

By

Published : May 18, 2023, 5:17 PM IST

ಹೈದರಾಬಾದ್ : ಬಾಲಿವುಡ್ ನಟಿ ಕತ್ರಿನಾ ಕೈಫ್ ತಾನು ಹೋದಲ್ಲೆಲ್ಲಾ ವಿಭಿನ್ನವಾಗಿ ಉಡುಗೆತೊಟ್ಟು ಕಾಣಿಸಿಕೊಳ್ಳುತ್ತಿರುತ್ತಾರೆ. ನಟಿ ತನ್ನ ಉನ್ನತ ದರ್ಜೆಯ ಫ್ಯಾಷನ್​ಗಾಗಿ ಸತತವಾಗಿ ಎಲ್ಲರ ಗಮನ ಸೆಳೆಯುತ್ತಿರುತ್ತಾರೆ. ಇಂದು (ಗುರುವಾರ) ಮುಂಬೈ ವಿಮಾನ ನಿಲ್ದಾಣದಲ್ಲಿ ವೆಸ್ಟ್ ಸೂಟ್ ಮತ್ತು ಡೆನಿಮ್ ಜಾಕೆಟ್‌ನಲ್ಲಿ ಸಖತ್​ ಹಾಟ್​ಲುಕ್​ ನಲ್ಲಿ ಕಾಣಿಸಿಕೊಂಡಿದ್ದಾರೆ. ಕತ್ರಿನಾ ಕೈಫ್ ವಿಭಿನ್ನವಾಗಿ ಜಾಕೆಟ್ ಧರಿಸಿರುವುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ನೆಟ್ಟಿಗರು ನೀವು ಸರಿಯಾಗಿ ಜಾಕೆಟ್​ ಧರಿಸಿಲ್ಲ ಎಂದು ನಟಿಯನ್ನು ಟ್ರೋಲ್ ಮಾಡಿದ್ದಾರೆ.

ಇನ್ಸ್ಟಾಗ್ರಾಮ್​ನಲ್ಲಿ ಪಾಪರಾಜೋ ಖಾತೆಯಿಂದ ಹಂಚಿಕೊಂಡ ವಿಡಿಯೋದಲ್ಲಿ, ಕತ್ರಿನಾ ಬೂದು ಬಣ್ಣದ ವೆಸ್ಟ್ ಸೂಟ್ ಧರಿಸಿರುವುದನ್ನು ಕಾಣಬಹುದು. ತನ್ನ ಭುಜದಿಂದ ಕೆಳಗೆ ಭಾರೀ ಗಾತ್ರದ ಡೆನಿಮ್ ಜಾಕೆಟ್ ಧರಿಸಿದ್ದಾರೆ. ತಲೆ ಕೂದಲನ್ನು ಸುಂದರವಾಗಿ ಕಟ್ಟಿಕೊಂಡಿದ್ದು, ಕಣ್ಣಿಗೆ ಕಪ್ಪು ಬಣ್ಣದ ದಪ್ಪನಯಾ ಸನ್​ಗ್ಲಾಸ್​ ಹಾಕಿಕೊಂಡಿದ್ದಾರೆ. ಕಾಲಿಗೆ ಬಿಳಿ ಬಣ್ಣದ ಸ್ನೀಕರ್ಸ್‌ನೊಂದಿಗೆ ತನ್ನ ಫ್ಯಾಷನ್ ​​ಮುಂದುವರೆಸಿದ್ದಾರೆ. ಈ ರೀತಿ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಕತ್ರಿನಾ ತನ್ನ ಮನಮೋಹಕ ನೋಟದಿಂದ ಎಲ್ಲರನ್ನು ಸಂಪೂರ್ಣವಾಗಿ ಬೆರಗುಗೊಳಿಸಿದ್ದಾರೆ.

ಇದನ್ನೂ ಓದಿ : ಅಭಿಮಾನಿಗಳಿಗೆ ಸಮಯ ಕೊಟ್ಟ ಕತ್ರಿನಾ ಕೈಫ್​ - ವಿಕ್ಕಿ ಕೌಶಲ್ ದಂಪತಿ

ಈ ಸಂದರ್ಭದಲ್ಲಿ ಸೆರೆ ಹಿಡಿದ ವಿಡಿಯೋವನ್ನು ಹಂಚಿಕೊಂಡ ತಕ್ಷಣ, ಸಾಮಾಜಿಕ ಜಾಲತಾಣದ ಬಳಕೆದಾರರು ಕಾಮೆಂಟ್ ವಿಭಾಗದಲ್ಲಿ ನಟಿ ಧರಿಸಿರುವ ವಿಭಿನ್ನ ಉಡುಗೆಯಂತೆ ವಿಭಿನ್ನವಾಗಿ ಕಾಮೆಂಟ್​ ಮಾಡುವ ಮೂಲಕ ಕಾಲೆಳೆದಿದ್ದಾರೆ. ಅಭಿಮಾನಿಯೊಬ್ಬರು ಹೀಗೆ ಬರೆದಿದ್ದಾರೆ, "ಕತ್ರಿನಾ ಅವರನ್ನು ಯಾರೂ ಸೋಲಿಸಲು ಸಾಧ್ಯವಿಲ್ಲ, ಅವರು ಅದ್ಭುತವಾಗಿದ್ದಾರೆ!" ಇನ್ನೊಬ್ಬರು ಹೀಗೆ ಬರೆದಿದ್ದಾರೆ, "ಬಿಯಾಂಡ್ ಬ್ಯೂಟಿಫುಲ್! ಮತ್ತೊಬ್ಬ ಅಭಿಮಾನಿ "ಈಗ ಇದು ಪರಿಪೂರ್ಣ ವಿಮಾನ ನಿಲ್ದಾಣದ ನೋಟ!" ಎಂದು ಬರೆದಿದ್ದಾರೆ.

ಇದನ್ನೂ ಓದಿ : ಸೊಸೆಯ​​ ಮನೆ ನಿರ್ಮಾಣ ಹಂತದಲ್ಲಿರುವಾಗಲೇ ಹೊಸ ಅಪಾರ್ಟ್ಮೆಂಟ್ ಖರೀದಿಸಿದ ನೀತು ಕಪೂರ್​!

ಮತ್ತೊಂದೆಡೆ ಈ ವಿಡಿಯೋಗೆ ನೆಗೆಟಿವ್​ ಕಾಮೆಂಟ್ಸ್​ ಕೂಡ ಬಂದಿವೆ. ಡೆನಿಮ್ ಜಾಕೆಟ್ ​ಅನ್ನು ಸರಿಯಾಗಿ ಧರಿಸಿಲ್ಲ ಎಂದು ಕೆಲವರು ನಟಿಯನ್ನು ಟ್ರೋಲ್ ಮಾಡಿದ್ದಾರೆ. ಇದರಲ್ಲಿ ಒಬ್ಬ ಅಭಿಮಾನಿ "ಜಾಕೆಟ್ ಧರಿಸುವುದರಿಂದ ಏನು ಪ್ರಯೋಜನ?" ಎಂದು ಪ್ರಶ್ನೆ ಮಾಡಿದ್ದಾರೆ. ಇನ್ನೊಬ್ಬರು, "ಜಾಕೆಟ್ ನಿ ಫನ್ನಿ ತೋಉತಾರ್ ದೋ ನಾ ಬೆಹನ್ ( ಸಹೋದರಿ ನೀವು ಜಾಕೆಟ್ ಧರಿಸಲು ಬಯಸದಿದ್ದರೆ ಅದನ್ನು ತೆಗೆಯಿರಿ) ಎಂದು ಬರೆದಿದ್ದಾರೆ.

ಮುಂಬರುವ ಆ್ಯಕ್ಷನ್ ಥ್ರಿಲ್ಲರ್ ಚಲನಚಿತ್ರ ಟೈಗರ್ 3ನಲ್ಲಿ ಸಲ್ಮಾನ್ ಖಾನ್ ಜೊತೆಗೆ ನಟಿ ಕತ್ರಿನಾ ಕೈಫ್​​ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಶಾರುಖ್​ ಖಾನ್​ ಸಹ ಕಾಣಿಸಿಕೊಳ್ಳಲಿದ್ದಾರೆ. ತಮಿಳು ನಟ ವಿಜಯ್ ಸೇತುಪತಿ ಅವರೊಂದಿಗೆ ಮೇರಿ ಕ್ರಿಸ್ಮಸ್​ನಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಚಿತ್ರವನ್ನು ಶ್ರೀರಾಮ್ ರಾಘವನ್ ನಿರ್ದೇಶಿಸುತ್ತಿದ್ದಾರೆ.

ಇದನ್ನೂ ಓದಿ : ಭಾರತದಲ್ಲಿ ಬಿರು ಬಿಸಿಲು: ವಿದೇಶದ ಬೀಚ್​​ ಬಳಿ ಕುಳಿತ 'ಪಂಜಾಬ್‌ನ ಕತ್ರಿನಾ ಕೈಫ್'

ETV Bharat Logo

Copyright © 2024 Ushodaya Enterprises Pvt. Ltd., All Rights Reserved.