ETV Bharat / entertainment

ಸಲ್ಮಾನ್ ಖಾನ್​​ ನಡೆಸಿಕೊಡುವ ಬಿಗ್​ ಬಾಸ್​ಗೆ ಕತ್ರಿನಾ ಕೈಫ್ ಎಂಟ್ರಿ: ಟೈಗರ್​ 3 ಪ್ರಮೋಶನ್ - Tiger 3

ಟೈಗರ್​ 3 ಪ್ರಮೋಶನ್ ಭಾಗವಾಗಿ ಸಲ್ಮಾನ್​ ಖಾನ್​​ ನಿರೂಪಣೆಯ ಬಿಗ್​ ಬಾಸ್​ ಶೋಗೆ ಕತ್ರಿನಾ ಕೈಫ್ ಎಂಟ್ರಿ ಕೊಡಲಿದ್ದಾರೆ. ಶನಿವಾರ, ಭಾನುವಾರ ಪ್ರಸಾರವಾಗುವ ವೀಕೆಂಡ್​ ಎಪಿಸೋಡ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Katrina Kaif entry to Bigg boss for Tiger 3 promotions
ಬಿಗ್​ ಬಾಸ್​ಗೆ ಕತ್ರಿನಾ ಕೈಫ್ ಎಂಟ್ರಿ: ಟೈಗರ್​ 3 ಪ್ರಮೋಶನ್
author img

By ETV Bharat Karnataka Team

Published : Nov 9, 2023, 4:50 PM IST

Updated : Nov 9, 2023, 5:15 PM IST

ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ನಟನೆಯ ಮುಂಬರುವ ಬಹುನಿರೀಕ್ಷಿತ ಚಿತ್ರ ಟೈಗರ್ 3. ಈ ಸಿನಿಮಾ ಬಿಡುಗಡೆಗೆ ಇನ್ನೆರಡು ದಿನ ಬಾಕಿ ಇದೆ. ನವೆಂಬರ್ 12 ರಂದು ಸಿನಿಪ್ರಿಯರಿಗೆ ದೀಪಾವಳಿ ಉಡುಗೊರೆಯಾಗಿ ಟೈಗರ್ 3 ತೆರೆಗಪ್ಪಳಿಸಲಿದ್ದು, ಆಭಿಮಾನಿಗಳು ಸಾಕಷ್ಟು ಕುತೂಹಲದಿಂದ ಕಾಯುತ್ತಿದ್ದಾರೆ.

ಬಿಗ್ ಬಾಸ್ 17ರಲ್ಲಿ ಕತ್ರಿನಾ ಕೈಫ್ ಭಾಗಿ: ಸಲ್ಲು ಆ್ಯಂಡ್​ ಕ್ಯಾಟ್​​ ಅಭಿಮಾನಿಗಳಿಗಾಗಿ ದೀಪಾವಳಿಗೆ ಸಿನಿಮಾದ ಜೊತೆಗೆ ಹೆಚ್ಚಿನ ಮನರಂಜನೆ ನೀಡಲು ಮನಸ್ಸು ಮಾಡಿದ್ದಾರೆ. ಟೈಗರ್ 3 ಪ್ರಮೋಶನ್​ ಭಾಗವಾಗಿ ಬಹುಬೇಡಿಕೆ ನಟಿ ಕತ್ರಿನಾ ಕೈಫ್​​ ಅವರು ಸೂಪರ್​ ಸ್ಟಾರ್​ ಸಲ್ಮಾನ್​ ಖಾನ್​ ನಡೆಸಿಕೊಡುವ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ 17ರಲ್ಲಿ ಭಾಗಿಯಾಗಲಿದ್ದಾರೆ. ಒಂದೇ ವೇದಿಕೆಯಲ್ಲಿ ತಮ್ಮ ಮುಂದಿನ ಬಹುನಿರೀಕ್ಷಿತ ಚಿತ್ರ ಟೈಗರ್ 3ರ ಪ್ರಚಾರ ಮಾಡಲಿದ್ದಾರೆ.​​

ಹಿಂದಿ ಬಿಗ್ ಬಾಸ್ ಪ್ರೋಮೋ: ಕಲರ್ಸ್ ಟಿವಿ ಸೋಷಿಯಲ್​ ಮೀಡಿಯಾ ಪ್ಲಾಟ್​ಫಾರ್ಮ್​​​ಗಳಲ್ಲಿ ಬಿಗ್ ಬಾಸ್ 17ರ ಪ್ರೋಮೋ ಹಂಚಿಕೊಂಡಿದೆ. ದಿವಾಲಿ ಥೀಮ್​ನಲ್ಲಿ ಈ ವಾರದ ವೀಕೆಂಡ್​ ಎಪಿಸೋಡ್​ಗಳು ಪ್ರಸಾರವಾಗಲಿವೆ. ಪ್ರೋಮೋ ಹಂಚಿಕೊಂಡಿರುವ ಚಾನಲ್​, ''ತಾರೆಯರಿಂದ ಜಗಮಗಿಸಲಿರುವ ಬಿಗ್ ಬಾಸ್ ದಿವಾಲಿ ಪಾರ್ಟಿಗೆ ಸಿದ್ಧರಾಗಿ'' ಎಂದು ಬರೆದುಕೊಂಡಿದೆ. ಪ್ರೋಮೋ ಪ್ರಕಾರ ನಟಿ ಕತ್ರಿನಾ ಕೈಫ್ ಅವರು, ಖ್ಯಾತ ನಿರೂಪಕಿ ಭಾರತಿ ಸಿಂಗ್ ಮತ್ತು ಅವರ ಪತಿ ಹರ್ಷ್ ಲಿಂಬಾಚಿಯಾ ಜೊತೆ ಕಾಣಿಸಿಕೊಳ್ಳಲಿದ್ದು, ಬಿಗ್​ ಬಾಸ್​ನಲ್ಲಿ ನಡೆಯಲಿರುವ ದಿವಾಲಿ ಪಾರ್ಟಿಯ ಮೆರುಗು ಹೆಚ್ಚಿಸಲಿದ್ದಾರೆ. ಪ್ರೋಮೋದಲ್ಲಿ ಬಿಗ್ ಬಾಸ್, "ದಿವಾಲಿ ಸಂಜೆಯನ್ನು ಬೆಳಗಿಸಲು ಕತ್ರಿನಾ ಕೈಫ್​ ಬರಲಿದ್ದಾರೆ" ಎಂದು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ಕಾರ್ತಿಕ್ ಆರ್ಯನ್ ಜೊತೆ ಬ್ರೇಕ್ಅಪ್ ವದಂತಿ​: ಸಾರಾ ಅಲಿ ಖಾನ್ ಹೇಳಿದ್ದಿಷ್ಟು!

ಟೈಗರ್​ 3: ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಅವರ ಟೈಗರ್ 3 ಈಗಾಗಲೇ ಸಾಕಷ್ಟು ಕ್ರೇಜ್​ ಕ್ರಿಯೇಟ್​ ಮಾಡಿದೆ. ಬಿಡುಗಡೆಗೂ ಮುನ್ನವೇ ಸಖತ್​ ಸದ್ದು ಮಾಡುತ್ತಿದ್ದು, ಪ್ರೇಕ್ಷಕರು ಬಹಳ ಕುತೂಹಲ ವ್ಯಕ್ತಪಡಿಸಿದ್ದಾರೆ. ದಿ ಮೋಸ್ಟ್ ಎಕ್ಸ್​ಪೆಕ್ಟೆಡ್​​ ಆ್ಯಕ್ಷನ್ ಪ್ಯಾಕ್ಡ್ ಸಿನಿಮಾದಲ್ಲಿ ಇಮ್ರಾನ್ ಹಶ್ಮಿ ಖಳನಾಯಕನ ಪಾತ್ರ ನಿರ್ವಹಿಸಿದ್ದಾರೆ. ತಮ್ಮ ಮೆಚ್ಚಿನ ನಟರನ್ನು ಆ್ಯಕ್ಷನ್​ ಅವತಾರದಲ್ಲಿ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಯಶ್ ರಾಜ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿರುವ ಈ ಸಿನಿಮಾವನ್ನು ಮನೀಶ್ ಶರ್ಮಾ ನಿರ್ದೇಶಿಸಿದ್ದಾರೆ. ಸ್ಪೈ ಥ್ರಿಲ್ಲರ್ ಸಿನಿಮಾದ ಅಡ್ವಾನ್ಸ್​ ಟಿಕೆಟ್​ ಬುಕಿಂಗ್​ ಸಹ ಜೋರಾಗೇ ನಡೆಯುತ್ತಿದೆ. ನವೆಂಬರ್ 5, ಭಾನುವಾರದಿಂದ ಮುಂಗಡ ಟಿಕೆಟ್​ ಬುಕಿಂಗ್​ ಪ್ರೊಸೆಸ್ ಆರಂಭಗೊಂಡಿದೆ.

ಇದನ್ನೂ ಓದಿ: ರಾಮೋಜಿ ಫಿಲ್ಮ್ ಸಿಟಿಯಲ್ಲಿ ಪುಷ್ಪ 2, ಸಲಾರ್​ ಶೂಟಿಂಗ್​​: ರಶ್ಮಿಕಾ ಸಿನಿಮಾ ಸಾಂಗ್​ನಲ್ಲಿ ಸಾವಿರ ಡ್ಯಾನ್ಸರ್ಸ್!!

Last Updated : Nov 9, 2023, 5:15 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.