ETV Bharat / entertainment

ಕಾರ್ತಿಕ್ ಆರ್ಯನ್: ಎಕಾನಮಿ ಕ್ಲಾಸ್‌ನಲ್ಲಿ ಪ್ರಯಾಣಿಸಿ ಗಮನ ಸೆಳೆದ ಸೆಲೆಬ್ರಿಟಿ - ಬಾಲಿವುಡ್​ನ ಇತ್ತೀಚಿನ ಪಾಟ್​ ಸಿನಿಮಾ

ಐಷಾರಾಮಿ ಜೀವನಕ್ಕೆ ಹೆಸರುವಾಸಿಯಾಗಿರುವ ಸೆಲೆಬ್ರಿಟಿಗಳು ಜನಸಾಮಾನ್ಯರೊಂದಿಗೆ ಕಾಣಿಸಿಕೊಳ್ಳುವುದು ತೀರಾ ವಿರಳ. ಇದರ ನಡುವೆ ನಟ ಕಾರ್ತಿಕ್ ಆರ್ಯನ್ ಎಕಾನಮಿ ಕ್ಲಾಸ್​ನಲ್ಲಿ ವಿಮಾನಯಾನ ಮಾಡಿರುವ ವಿಡಿಯೋ ದೊರೆತಿದೆ.

Kartik Aaryan travels in economy class, video goes viral
ನಟ ಕಾರ್ತಿಕ್ ಆರ್ಯನ್
author img

By

Published : Sep 20, 2022, 11:12 AM IST

ಹೈದರಾಬಾದ್ (ತೆಲಂಗಾಣ): ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಜನಸಾಮಾನ್ಯರಂತೆ ವಿಮಾನದ ಎಕಾನಮಿ ಕ್ಲಾಸ್‌ನಲ್ಲಿ ಕಾಣಿಸಿಕೊಂಡು ಹುಬ್ಬೇರಿಸಿದ್ದಾರೆ. ನಟ ವಿಮಾನದ ಪ್ರವೇಶ ದ್ವಾರದಿಂದ ಆಗಮಿಸುತ್ತಿದ್ದಂತೆ ಸಹ ಪ್ರಯಾಣಿಕರು ಚಪ್ಪಾಳೆಯ ಮೂಲಕ ಬರಮಾಡಿಕೊಂಡರು. ಐಷಾರಾಮಿ ಜೀವನದಲ್ಲಿ ತೇಲಾಡುತ್ತಿರುವ ನೂರಾರು ಸೆಲೆಬ್ರಿಟಿಗಳ ಮಧ್ಯೆ ಕಾರ್ತಿಕ್ ಆರ್ಯನ್ ಎಕಾನಮಿ ಕ್ಲಾಸ್​ನಲ್ಲಿ ತಮ್ಮೊಂದಿಗೆ ಪ್ರಯಾಣ ಮಾಡುತ್ತಿರುವುದನ್ನು ಕಂಡು ಸಹ ಪ್ರಯಾಣಿಕರು ಅಚ್ಚರಿ ವ್ಯಕ್ತಪಡಿಸಿದರು. ನಟನ ವಿಮಾನಯಾನದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಇತ್ತೀಚೆಗೆ ಕಾರ್ತಿಕ್ ಆರ್ಯನ್ ಜೋಧ್‌ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಅಲ್ಲಿಂದ ಮರಳಿ ಮುಂಬೈನತ್ತ ಆಗಮಿಸಬೇಕಾದರೆ ಎಕಾನಮಿ ಕ್ಲಾಸ್​​ನಲ್ಲಿ ಪ್ರಯಾಣಿಸಿದ್ದಾರೆ. ನಟನೊಂದಿಗೆ ಹಲವರು ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿಪಟ್ಟರು. ವಿಡಿಯೋ ನೋಡಿ ನೆಟಿಜನ್‌ಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಕಾರ್ತಿಕ್ ಅವರನ್ನು "ಅತ್ಯಂತ ವಿನಮ್ರ ಮತ್ತು ಡೌನ್ ಟು ಅರ್ಥ್" ನಟ ಎಂದು ಬಣ್ಣಿಸಿ ಹಲವರು ಕಾಮೆಂಟ್​ ಮಾಡಿದ್ದಾರೆ. ಇವರು ಎಕಾನಮಿ ಕ್ಲಾಸ್​ನಲ್ಲಿ ಪ್ರಯಾಣಿಸುತ್ತಿರುವುದು ಇದೇ ಮೊದಲಲ್ಲ. ಭೂಲ್ ಭುಲೈಯಾ 2 ಚಿತ್ರದ ಪ್ರಚಾರದ ವೇಳೆಯೂ ಇದೇ ರೀತಿ ಪ್ರಯಾಣಿಸಿದ್ದರು. ಈ ಬಗ್ಗೆ ಅವರನ್ನು ಕೆಲವರು ಪ್ರಶ್ನಿಸಿದಾಗ, ‘ಟಿಕೆಟ್ ತುಂಬಾ ದುಬಾರಿಯಾಗಿತ್ತು' ಎಂದು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.

ಇತ್ತೀಚೆಗೆ ತೆರೆಕಂಡ ಕಾರ್ತಿಕ್ ನಟನೆಯ ಹಾರರ್ ಮತ್ತು ಕಾಮಿಡಿ ಚಿತ್ರ ಭೂಲ್ ಭುಲೈಯಾ 2 ಹಣ ಗಳಿಕೆಯ ವಿಚಾರದಲ್ಲಿ ಸಖತ್​ ಸದ್ದು ಮಾಡಿತ್ತು. ಪ್ರಪಂಚದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ 200 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿ ದಾಖಲೆ ಬರೆದಿತ್ತು.

ಫೆಬ್ರವರಿ 10, 2023 ರಂದು ಬಿಡುಗಡೆಯಾಗಲಿರುವ ರೋಹಿತ್ ಧವನ್ ನಿರ್ದೇಶನದ ಶೆಹಜಾದಾ ಸಿನಿಮಾದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಕೃತಿ ಸನೋನ್ ನಾಯಕಿಯಾಗಿ ಬಣ್ಣ ಹಚ್ಚಲಿದ್ದಾರೆ. ಇದರ ಹೊರತಾಗಿ ಫ್ರೆಡ್ಡಿ, ಕ್ಯಾಪ್ಟನ್ ಇಂಡಿಯಾ, ಸತ್ಯಪ್ರೇಮ್ ಕಿ ಕಥಾ ಮತ್ತು ನಿರ್ದೇಶಕ ಕಬೀರ್ ಖಾನ್ ಅವರ ಹೆಸರಿಡದ ಚಿತ್ರದಲ್ಲಿಯೂ ಕಾಣಿಸಿಕೊಳ್ತಿದ್ದಾರೆ.

ಇದನ್ನೂ ಓದಿ: ಪರಿಣಿತಿ ಚೋಪ್ರಾ-ಹಾರ್ಡಿ ಸಂಧು ಅಭಿನಯದ ಆ್ಯಕ್ಷನ್ ಥ್ರಿಲ್ಲರ್ ಚಿತ್ರ 'ಕೋಡ್ ನೇಮ್ ತಿರಂಗಾ' ಶೀಘ್ರದಲ್ಲೇ ಬಿಡುಗಡೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.