ETV Bharat / entertainment

ಭೂಲ್​ ಭುಲೈಯಾ 3ನಲ್ಲಿ ಮಾಜಿ ಲವರ್ಸ್ ಕಾರ್ತಿಕ್ ಆರ್ಯನ್ ​- ಸಾರಾ ಅಲಿ ಖಾನ್​? - ಸಾರಾ ಕಾರ್ತಿಕ್ ಡೇಟಿಂಗ್​

ಭೂಲ್ ಭುಲೈಯಾ 3 ಸಿನಿಮಾದಲ್ಲಿ ಕಾರ್ತಿಕ್ ಆರ್ಯನ್ ಮತ್ತು ಸಾರಾ ಅಲಿ ಖಾನ್​ ತೆರೆ ಹಂಚಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ.

Kartik Aaryan Sara Ali Khan
ಕಾರ್ತಿಕ್ ಆರ್ಯನ್​ - ಸಾರಾ ಅಲಿ ಖಾನ್
author img

By ETV Bharat Karnataka Team

Published : Dec 10, 2023, 4:05 PM IST

Updated : Dec 10, 2023, 4:11 PM IST

ಬಾಲಿವುಡ್​ನ ಕಾರ್ತಿಕ್ ಆರ್ಯನ್​ ಮತ್ತು​ ಕಿಯಾರಾ ಅಡ್ವಾಣಿ ತೆರೆ ಹಂಚಿಕೊಂಡ ಭೂಲ್​ ಭುಲೈಯಾ 2 ಸಿನಿಮಾ 2022ರಲ್ಲಿ ತೆರೆಕಂಡು ಯಶಸ್ಸು ಕಂಡಿತ್ತು. ನಿರ್ದೇಶಕ ಅನೀಸ್ ಬಾಜ್ಮಿ ಮತ್ತು ನಿರ್ಮಾಪಕ ಭೂಷಣ್ ಕುಮಾರ್ ನೇತೃತ್ವದ ತಂಡ ಭೂಲ್ ಭುಲೈಯಾ 3 ಅನ್ನು ತರಲು ಸಜ್ಜಾಗಿದೆ.

ಮುಂಬರುವ ಈ ಹಾರರ್ ಕಾಮಿಡಿ ಸಿನಿಮಾದಲ್ಲಿ ಮಾಜಿ ಪ್ರೇಮಪಕ್ಷಿಗಳಾದ ಕಾರ್ತಿಕ್ ಆರ್ಯನ್ ಮತ್ತು ಸಾರಾ ಅಲಿ ಖಾನ್ ತೆರೆ ಹಂಚಿಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಭೂಲ್ ಭುಲೈಯಾ 3 ಮುಂದಿನ ಫೆಬ್ರವರಿ 2024ರಲ್ಲಿ ಸೆಟ್ಟೇರುವ ಸಾಧ್ಯತೆಯಿದೆ. 2020ರ ಲವ್ ಆಜ್ ಕಲ್ ಸಿನಿಮಾದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಕಾರ್ತಿಕ್ ಆರ್ಯನ್ ಮತ್ತು ಸಾರಾ ಅಲಿ ಖಾನ್ ಕಾಂಬಿನೇಶನ್​ನ ಎರಡನೇ ಚಿತ್ರವಾಗಲಿದೆ.

ವರದಿಗಳ ಪ್ರಕಾರ, ಚಿತ್ರ ತಯಾರಕರು ಸ್ಕ್ರಿಪ್ಟ್ ಅನ್ನು ಫೈನಲ್​​ ಮಾಡಿದ್ದಾರೆ. 2024ರ ಆರಂಭದಲ್ಲಿ ಶೂಟಿಂಗ್​​ ಪ್ರಾರಂಭಿಸಲು ಉತ್ಸುಕರಾಗಿದ್ದಾರೆ. ಕಾರ್ತಿಕ್ ಆರ್ಯನ್ ಮತ್ತು ಸಾರಾ ಅಲಿ ಖಾನ್ ಸಹ ಈ ಯೋಜನೆಗಾಗಿ ಮತ್ತೆ ತೆರೆ ಹಂಚಿಕೊಳ್ಳಲು ಉತ್ಸುಕರಾಗಿದ್ದಾರೆ ಎಂದು ವರದಿಯಾಗಿದೆ. ಈ ಜೋಡಿ ಒಟ್ಟಿಗೆ ನಟಿಸುವ ವಿಚಾರ ಅಧಿಕೃತಗೊಂಡರೆ, ಅವರ ಫಾಸ್ಟ್ ಲವ್​ ಸ್ಟೋರಿ ನೆಟ್ಟಿಗರ ಕೇಂದ್ರಬಿಂದುವಾಗೋದಂತು ನಿಜ.

ಭೂಲ್ ಭುಲೈಯಾ 3 ಅನ್ನು ಕೇವಲ ಮೂರೇ ತಿಂಗಳೊಳಗೆ ಚಿತ್ರೀಕರಿಸಿ, 2024ರ ದೀಪಾವಳಿ ಸಂದರ್ಭ ಬಿಡುಗಡೆಗೊಳಿಸುವ ಯೋಜನೆ ಚಿತ್ರತಂಡದ್ದು ಎಂದು ವೆಬ್ಲಾಯ್ಡ್ ವರದಿ ಸೂಚಿಸಿದೆ. ಸಾರಾ ಮತ್ತು ಕಾರ್ತಿಕ್ ಈ ಹಿಂದೆ ಇಮ್ತಿಯಾಜ್ ಅಲಿ ನಿರ್ದೇಶನದ ಲವ್ ಆಜ್ ಕಲ್‌ ಸಿನಿಮಾದಲ್ಲಿ ತೆರೆ ಹಂಚಿಕೊಂಡಿದ್ದರು. ರಣ್​​ದೀಪ್ ಹೂಡಾ ಕೂಡ ಚಿತ್ರದ ಭಾಗವಾಗಿದ್ದರು.

ಇದನ್ನೂ ಓದಿ: ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ₹400 ಕೋಟಿ ಸಮೀಪಿಸಿದ 'ಅನಿಮಲ್'​

ಚಿತ್ರೀಕರಣ ಸಂದರ್ಭ ಪ್ರೀತಿಗೆ ಬಿದ್ದಿದ್ದ ಈ ಜೋಡಿ ಕೆಲವೇ ದಿನಗಳಲ್ಲಿ ಬೇರ್ಪಟ್ಟರು ಎಂಬ ವದಂತಿಗಳಿವೆ. ಸಾರಾ ಕೂಡ ಕೆಲ ಕಾರ್ಯಕ್ರಮಗಳಲ್ಲಿ ಈ ಬಗ್ಗೆ ಪರೋಕ್ಷ ಹೇಳಿಕೆಗಳನ್ನು ನೀಡಿದ್ದಾರೆ. ಅದಾಗ್ಯೂ ಸದ್ಯ ಸಿನಿಮಾ ಈವೆಂಟ್​ಗಳಲ್ಲಿ ಸಾರಾ ಮತ್ತು ಕಾರ್ತಿಕ್ ಉತ್ತಮ ಸ್ನೇಹಿತರಂತೆ ಗುರುತಿಸಿಕೊಳ್ಳುತ್ತಾರೆ.

ಇದನ್ನೂ ಓದಿ: ರಜನಿಕಾಂತ್​ರನ್ನು ಬಿಳಿ ಕೂದಲಿನಲ್ಲಿ ತೋರಿಸಬೇಡಿ ಎಂದಿದ್ದರಂತೆ ಫ್ಯಾನ್ಸ್!

ಸಾರಾ ಮತ್ತು ಕಾರ್ತಿಕ್ ಇಬ್ಬರೂ ಈಗಾಗಲೇ ಕೆಲ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಸಾರಾ ಅವರು ಏ ವತನ್ ಮೇರೆ ವತನ್, ಮರ್ಡರ್ ಮುಬಾರಕ್, ಮೆಟ್ರೋ ಇನ್ ದಿನೋ ಮತ್ತು ಸ್ಕೈ ಫೋರ್ಸ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಾರ್ತಿಕ್ ಅವರು ಕಬೀರ್ ಖಾನ್ ಅವರ ಚಂದು ಚಾಂಪಿಯನ್, ಹನ್ಸಲ್ ಮೆಹ್ತಾ ಅವರ ಕ್ಯಾಪ್ಟನ್ ಇಂಡಿಯಾ ಮತ್ತು ಆಶಿಕಿ ಸಿನಿಮಾದ ಮುಂದುವರಿದ ಭಾಗದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Last Updated : Dec 10, 2023, 4:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.