ETV Bharat / entertainment

'ಸತ್ಯಪ್ರೇಮ್ ಕಿ ಕಥಾ'.. ನಾಳೆ ಬಿಡುಗಡೆಯಾಗಲಿದೆ 2023ರ ಬಹುನಿರೀಕ್ಷಿತ ಸಿನಿಮಾದ ಟ್ರೇಲರ್ - ಕಿಯಾರಾ ಅಡ್ವಾಣಿ

ಸತ್ಯಪ್ರೇಮ್ ಕಿ ಕಥಾ ಚಿತ್ರದ ಟ್ರೇಲರ್ ನಾಳೆ ಅನಾವರಣಗೊಳ್ಳಲಿದೆ.

Satya Prem Ki Katha
ಸತ್ಯಪ್ರೇಮ್ ಕಿ ಕಥಾ
author img

By

Published : Jun 4, 2023, 3:58 PM IST

'ಭೂಲ್ ಭುಲೈಯಾ 2'ರ ದೊಡ್ಡ ಯಶಸ್ಸಿನ ನಂತರ ಕಾರ್ತಿಕ್ ಆರ್ಯನ್ ಮತ್ತು ಕಿಯಾರಾ ಅಡ್ವಾಣಿ 'ಸತ್ಯಪ್ರೇಮ್ ಕಿ ಕಥಾ' ಚಿತ್ರಕ್ಕಾಗಿ ಮತ್ತೆ ಒಂದಾಗಿರೋದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ. ಮ್ಯೂಸಿಕಲ್ ರೊಮ್ಯಾನ್ಸ್ ಸ್ಟೋರಿ 2023ರ ಬಹು ನಿರೀಕ್ಷಿತ ಚಲನಚಿತ್ರಗಳಲ್ಲಿ ಒಂದಾಗಿದೆ. ಇಂದು ಬೆಳಗ್ಗೆ ಈ ಇಬ್ಬರೂ ಕಲಾವಿದರು ತಮ್ಮ ಚಿತ್ರದ ಹೊಸ ಪೋಸ್ಟರ್ ಅನ್ನು ಬಿಡುಗಡೆ ಮಾಡಿದರು ಮತ್ತು ಟ್ರೇಲರ್‌ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿದರು. ಹಾಗಾಗಿ ಅಭಿಮಾನಿಗಳ ಕುತೂಹಲ ಹೆಚ್ಚಾಗಿದೆ.

ತಮ್ಮ ಅಭಿಮಾನಿಗಳಿಗಾಗಿ ಕಾರ್ತಿಕ್ ಮತ್ತು ಕಿಯಾರಾ ತಮ್ಮ ಮುಂಬರುವ ಚಿತ್ರದ ಹೊಸ ಪೋಸ್ಟರ್ ಅನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಪೋಸ್ಟರ್‌ ಸಖತ್​ ರೊಮ್ಯಾಂಟಿಕ್​ ಆಗಿದ್ದು, ಪರಸ್ಪರರ ಕಣ್ಣುಗಳನ್ನು ಪ್ರೀತಿಯಿಂದ ನೋಡುತ್ತಿರುವಂತೆ ಚಿತ್ರಿಸಲಾಗಿದೆ. ಸದ್ಯ ಬಿಡುಗಡೆಯಾಗಿರುವ ಹೊಸ ಪೋಸ್ಟರ್‌ ಅವರು ಅತ್ಯುತ್ತಮ ಆನ್ ಸ್ಕ್ರೀನ್ ಜೋಡಿ ಎಂಬುದನ್ನು ಸಾಬೀತು ಪಡಿಸಿದೆ. ಪೋಸ್ಟರ್​ ಹಂಚಿಕೊಂಡ ನಟ ಕಾರ್ತಿಕ್, "ಆಜ್ ಕೆ ಬಾದ್ ತು ಮೇರಿ ರೆಹನಾ # ಸತ್ಯಪ್ರೇಮ್‌ ಕಿ ಕಥಾ ಟ್ರೈಲರ್ ನಾಳೆ ಬೆಳಗ್ಗೆ 11:11ಕ್ಕೆ # ಸಾಜಿದ್ ನಾಡಿಯಾಡ್ವಾಲಾ # ಸತ್ಯಪ್ರೇಮ್‌ಕಿಕಥಾ # ಜೂನ್​ 29ರಂದು ಚಿತ್ರಮಂದಿರಗಳಲ್ಲಿ" ಎಂದು ಬರೆದಿದ್ದಾರೆ.

ನಟ ನಟಿ ಪೋಸ್ಟರ್ ಅನ್ನು ಶೇರ್ ಮಾಡಿದ ಕೂಡಲೇ ಅಭಿಮಾನಿಗಳು ಪ್ರತಿಕ್ರಿಯಿಸಲು ಪ್ರಾರಂಭಿಸಿದ್ದಾರೆ. ಸಾಮಾಜಿಕ ಮಾಧ್ಯಮ ಬಳಕೆದಾರರೋರ್ವರು, "ನಿಮ್ಮನ್ನು ಭೇಟಿಯಾಗಲು ಹೆಚ್ಚು ಕಾಯಲು ಸಾಧ್ಯವಿಲ್ಲ" ಎಂದು ಬರೆದಿದ್ದಾರೆ. ಅಭಿಮಾನಿಯೋರ್ವರು ಕಾಮೆಂಟ್​ ಮಾಡಿ, "2023ರ ಬಹು ನಿರೀಕ್ಷಿತ ಪ್ರೇಮ ಪ್ರಣಯ ಚಿತ್ರ ಬರುತ್ತಿದೆ" ಎಂದು ಬರೆದಿದ್ದಾರೆ. ಹಲವರು ರೆಡ್​ ಹಾರ್ಟ್ ಮೂಲಕ ತಮ್ಮ ಪ್ರೀತಿ ವ್ಯಕ್ತಪಡಿಸಿದ್ದಾರೆ.

ಸಮೀರ್ ವಿದ್ವಾನ್ಸ್ ನಿರ್ದೇಶನದ ಈ 'ಸತ್ಯಪ್ರೇಮ್ ಕಿ ಕಥಾ' ಚಿತ್ರದಲ್ಲಿ ಕಾರ್ತಿಕ್​, ಕಿಯಾರಾ ಅಲ್ಲದೇ ಸುಪ್ರಿಯಾ ಪಾಠಕ್ ಕಪೂರ್, ಗಜ್​ರಾಜ್ ರಾವ್, ರಾಜ್‌ಪಾಲ್ ಯಾದವ್, ಶಿಖಾ ತಲ್ಸಾನಿಯಾ ಮತ್ತು ಸಿದ್ಧಾರ್ಥ್ ರಂಧೇರಿಯಾ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ತೆರೆಕಂಡು ತಿಂಗಳಾದರೂ ಪ್ರದರ್ಶನ ಮುಂದುವರಿಸಿದ 'ದಿ ಕೇರಳ ಸ್ಟೋರಿ': ಒಟ್ಟು ಕಲೆಕ್ಷನ್​ ಇಷ್ಟು!

ಚಿತ್ರದ ಮೊದಲ ಹಾಡು ಇತ್ತೀಚೆಗಷ್ಟೇ ರಿಲೀಸ್​ ಆಗಿತ್ತು. ನಸೀಬ್ ಸೇ ಸಾಂಗ್​ ಕೇಳುಗರ ಮನ ಗೆದ್ದಿದೆ. ಹಾಡಿನಲ್ಲಿ ಅದ್ಭುತ ಕೆಮಿಸ್ಟ್ರಿಯೊಂದಿಗೆ ಕಿಯಾರಾ ಮತ್ತು ಕಾರ್ತಿಕ್ ಅಭಿಮಾನಿಗಳ ಮನ ಕದ್ದಿದ್ದಾರೆ. ಇದೊಂದು ಕಂಪ್ಲೀಟ್​ ಲವ್​ ಸ್ಟೋರಿ ಸಿನಿಮಾ ಎಂಬುದು ಈ ಹಾಡು, ಇಂದು ಬಿಡುಗಡೆ ಆಗಿರುವ ಪೋಸ್ಟರ್​ನಲ್ಲಿ ತಿಳಿಯುತ್ತದೆ. ಪಾಯಲ್ ದೇವ್ ಮತ್ತು ವಿಶಾಲ್ ಮಿಶ್ರಾ ಹಾಡಿರುವ ಈ ನಸೀಬ್​ ಸೇ ಹಾಡನ್ನು ಕಾಶ್ಮೀರ ಪ್ರದೇಶದಲ್ಲಿ ಚಿತ್ರೀಕರಿಸಲಾಗಿದ್ದು, ಅದ್ಭುತವಾಗಿ ಮೂಡಿ ಬಂದಿದೆ.

ಇದನ್ನೂ ಓದಿ: ಪರ್ವೀನ್ ಬಾಬಿ ಜೀವನಾಧಾರಿತ ಕಥೆಗೆ ಜೀವ ತುಂಬಲಿರುವ ಊರ್ವಶಿ ರೌಟೇಲಾ

ಕಾರ್ತಿಕ್ ಮತ್ತು ಕಿಯಾರಾ ಮದುವೆಯ ದೃಶ್ಯವು ಕೆಲ ಸಮಯದ ಹಿಂದೆ ಸಾಮಾಜಿಕ ಮಾಧ್ಯಮದಲ್ಲಿ ಸೋರಿಕೆಯಾಗಿತ್ತು. ವೈರಲ್​ ಆದ ಆ ದೃಶ್ಯಗಳಲ್ಲಿ, ಅವರು ಮದುವೆ ಮಂಟಪದಲ್ಲಿ ಕಾಣಿಸಿಕೊಂಡಿದ್ದರು. ಸತ್ಯಪ್ರೇಮ್ ಕಿ ಕಥಾ ಜೂನ್ 29 ರಂದು ಥಿಯೇಟರ್‌ಗಳಲ್ಲಿ ಪ್ರಥಮ ಪ್ರದರ್ಶನಕ್ಕೆ ಸಿದ್ಧವಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.