ETV Bharat / entertainment

'ಚಂದು ಚಾಂಪಿಯನ್‌' ಫಸ್ಟ್​ ಲುಕ್​ ಔಟ್​.. ರಿಯಲ್​ ಹೀರೋ ಮುರಳಿಕಾಂತ್​ ಪೇಟ್ಕರ್​ ಪಾತ್ರದಲ್ಲಿ ಕಾರ್ತಿಕ್​ ಆರ್ಯನ್​ - etv bharat kannada

Chandu Champion: ಕಾರ್ತಿಕ್​ ಆರ್ಯನ್​ ನಟನೆಯ 'ಚಂದು ಚಾಂಪಿಯನ್‌' ಸಿನಿಮಾದ ಫಸ್ಟ್​ ಲುಕ್​ ಬಿಡುಗಡೆಯಾಗಿದೆ.

Chandu Champion
ಚಂದು ಚಾಂಪಿಯನ್‌
author img

By

Published : Aug 1, 2023, 5:43 PM IST

ಬಾಲಿವುಡ್​ ನಟ ಕಾರ್ತಿಕ್​ ಆರ್ಯನ್​ ಅವರ ಮುಂಬರುವ ಬಹುನಿರೀಕ್ಷಿತ ಚಿತ್ರ 'ಚಂದು ಚಾಂಪಿಯನ್‌'. ಇದೀಗ ಸಿನಿಮಾದ ಫಸ್ಟ್​ ಲುಕ್​ ಬಿಡುಗಡೆಯಾಗಿದೆ. ಇದು ರಿಯಲ್​ ಹೀರೋ ಮುರಳಿಕಾಂತ್​ ಪೇಟ್ಕರ್​ ಅವರ ಜೀವನಾಧಾರಿತ ಕಥೆಯಾಗಿದೆ. ಚಿತ್ರವನ್ನು ಕಬೀರ್​ ಖಾನ್​ ನಿರ್ದೇಶಿಸಿದ್ದಾರೆ. ಜುಲೈ 2024 ರಲ್ಲಿ 'ಚಂದು ಚಾಂಪಿಯನ್‌' ಬಿಡುಗಡೆಯಾಗಲಿದೆ. ಚಿತ್ರದ ಫಸ್ಟ್​ ಲುಕ್ ಅನ್ನು ಕಾರ್ತಿಕ್​ ಆರ್ಯನ್​ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.​

ಕಾರ್ತಿಕ್​ ಆರ್ಯನ್​ ಅವರು 'ಸತ್ಯಪ್ರೇಮ್ ಕಿ ಕಥಾ' ಸಿನಿಮಾ ಯಶಸ್ಸಿನ ನಂತರ ಮತ್ತೊಂದು ಯೋಜನೆಯೊಂದಿಗೆ ಮರಳಿದ್ದಾರೆ. 'ಚಂದು ಚಾಂಪಿಯನ್‌' ಚಿತ್ರವು ಪ್ಯಾರಾಲಿಂಪಿಕ್ ವಿಜೇತ ಮುರಳಿಕಾಂತ್​ ಪೇಟ್ಕರ್​ ಅವರ ಜೀವನವನ್ನು ಆಧರಿಸಿದೆ. ಸಿನಿಮಾದ ಸಿದ್ಧತೆಗಳು ಕಳೆದ ತಿಂಗಳಿನಲ್ಲೇ ಪ್ರಾರಂಭಗೊಂಡಿದೆ. ಒಬ್ಬ ರಿಯಲ್​ ಹೀರೋನ ಕಥೆಯನ್ನು ಇಟ್ಟುಕೊಂಡು ಕಬೀರ್​ ಖಾನ್​ ಅವರು ಸಿನಿಮಾ ಮಾಡುತ್ತಿದ್ದಾರೆ. ಕಾರ್ತಿಕ್​ ಆರ್ಯನ್​ ಅವರನ್ನು ಹೊಸ ಅವತಾರದಲ್ಲಿ ಕಾಣಲು ಸಿನಿ ಪ್ರೇಮಿಗಳು ಕಾತರರಾಗಿದ್ದಾರೆ.

ಕಾರ್ತಿಕ್​ ಆರ್ಯನ್​ ಸೋಷಿಯಲ್​ ಮೀಡಿಯಾದಲ್ಲಿ 'ಚಂದು ಚಾಂಪಿಯನ್‌' ಫಸ್ಟ್​ ಲುಕ್​ ಅನ್ನು ಹಂಚಿಕೊಂಡಿದ್ದು, "ನಿಮ್ಮ ಎದೆಯ ಮೇಲೆ ಭಾರತ ಎಂದು ಬರೆದಾಗ ಅದು ವಿಶೇಷ ಭಾವನೆ" ಎಂದು ಕ್ಯಾಪ್ಶನ್​ ನೀಡಿದ್ದಾರೆ. ಪೋಸ್ಟರ್​ನಲ್ಲಿ ಯುವ ಸೂಪರ್​ ಸ್ಟಾರ್ ಸಂಪೂರ್ಣ ವಿಭಿನ್ನ ನೋಟದಲ್ಲಿ ಕಾಣಿಸಿಕೊಂಡಿದ್ದಾರೆ. "ನಿಜವಾದ ಹೀರೋ ಆಗಿ ನಟಿಸುತ್ತಿರುವುದಕ್ಕೆ ಹೆಮ್ಮೆ ಪಡುತ್ತೇನೆ. #ಚಂದು ಚಾಂಪಿಯನ್​ #ಫಸ್ಟ್​ ಲುಕ್​ ಆಗಸ್ಟ್​ 1" ಎಂದು ಕ್ಯಾಪ್ಶನ್​ಗೆ ಮತ್ತಷ್ಟು ಸೇರಿಸಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್​​ನಲ್ಲಿ ಭಟ್ ಫ್ಯಾಮಿಲಿ: ಪುತ್ರಿ ಭೇಟಿಯಾದ ಮಹೇಶ್ ಭಟ್, ಇಂದು ಸೆಲೆಬ್ರಿಟಿ ಹೌಸ್​​ಗೆ ಆಲಿಯಾ ಭಟ್ ಎಂಟ್ರಿ

ಹಿಂದೆಂದೂ ನೋಡಿರದ ಡಿಫರೆಂಟ್​ ಸ್ಟೈಲ್​ನಲ್ಲಿ ಕಾರ್ತಿಕ್​ ಆರ್ಯನ್​ ಕಾಣಿಸಿಕೊಂಡಿದ್ದಾರೆ. ಒಬ್ಬ ರಿಯಲ್​ ಹೀರೋನ ಕಥೆಯನ್ನು ಬೆಳ್ಳಿ ತೆರೆ ಮೇಲೆ ತರಲು ಬಾಲಿವುಡ್​ ಚಿತ್ರತಂಡವೊಂದು ಪ್ರಯತ್ನಕ್ಕಿಳಿದಿದೆ. ಈ ಸಿನಿಮಾ ರಾಷ್ಟ್ರವನ್ನು ಹೆಮ್ಮೆ ಪಡುವಂತೆ ಮಾಡುವುದರಲ್ಲಿ ಸಂಶಯವಿಲ್ಲ. ಯುವ ಸೂಪರ್​ ಸ್ಟಾರ್​ ಫಸ್ಟ್​ ಲುಕ್​ನಿಂದ ಸಿನಿಮಾ ಮೇಲೆ ಜನರ ನಿರೀಕ್ಷೆ ಹೆಚ್ಚಾಗಿದೆ.

ಲಂಡನ್​ನಲ್ಲಿ ಚಿತ್ರೀಕರಣ: ಚಂದು ಚಾಂಪಿಯನ್​ ಚಿತ್ರೀಕರಣವು ಲಂಡನ್​ನಲ್ಲಿ ಪ್ರಾರಂಭವಾಯಿತು. ಸಾಜಿದ್ ಮತ್ತು ವಾರ್ದಾ ನಾಡಿಯಾಡ್‌ವಾಲಾ, ಕಬೀರ್ ಖಾನ್ ಮತ್ತು ಕಾರ್ತಿಕ್ ಆರ್ಯನ್ ಅವರ ಉಪಸ್ಥಿತಿಯಲ್ಲಿ ಸಿನಿಮಾ ಮುಹೂರ್ತ ಸಮಾರಂಭ ಕಳೆದ ತಿಂಗಳು ಅದ್ಧೂರಿಯಾಗಿ ನೆರವೇರಿತ್ತು. ಫಸ್ಟ್​ ಲುಕ್​ ಹಂಚಿಕೊಂಡ ಕಾರ್ತಿಕ್​ ಚಿತ್ರದ ಮೊದಲ ಶೆಡ್ಯೂಲ್​ ಅನ್ನು ಪೂರ್ಣಗೊಳಿಸಿರುವುದಾಗಿ ತಿಳಿಸಿದ್ದಾರೆ. 'ಚಂದು ಚಾಂಪಿಯನ್​' ಸಿನಿಮಾ 2024 ರಲ್ಲಿ ತೆರೆಗೆ ತರಲು ನಿರ್ಧರಿಸಲಾಗಿದೆ. ಮುರಳಿಕಾಂತ್​ ಪೇಟ್ಕರ್ ಭಾರತದ ಮೊದಲ ಪ್ಯಾರಾಲಿಂಪಿಕ್​ ಚಿನ್ನದ ಪದಕ ವಿಜೇತರಾಗಿದ್ದಾರೆ.

ಇದನ್ನೂ ಓದಿ:'ಕಾಲ್​ಕೂಟ್​' ಸ್ಕ್ರೀನಿಂಗ್​: ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡ ಲವ್ ಬರ್ಡ್ಸ್​ ತಮನ್ನಾ- ವಿಜಯ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.