ETV Bharat / entertainment

ಕಾರ್ತಿಕ್ ಆರ್ಯನ್-ಕಿಯಾರಾ ಅಡ್ವಾಣಿ ಅಭಿನಯದ ಸತ್ಯನಾರಾಯಣ್ ಕಿ ಕಥಾ ಸಿನಿಮಾಗೆ ಹೊಸ ಶೀರ್ಷಿಕೆ - ಸತ್ಯನಾರಾಯಣ್ ಕಿ ಕಥಾ ಸಿನೆಮಾಗೆ ಹೊಸ ಶೀರ್ಷಿಕೆ

ಕಾರ್ತಿಕ್ ಆರ್ಯನ್ ಮತ್ತು ಕಿಯಾರಾ ಅಡ್ವಾಣಿ ಅವರ ಸತ್ಯನಾರಾಯಣ್ ಕಿ ಕಥಾ ಸಿನಿಮಾದ ಶೀರ್ಷಿಕೆ ಬದಲು- ಕಿಯಾರಾ ಹುಟ್ಟುಹಬ್ಬದಂದು ಚಿತ್ರದ ಬದಲಾಗಿರುವ ಶೀರ್ಷಿಕೆ ಬಹಿರಂಗ-ಇನ್ಸಟಾದಲ್ಲಿ ಮಾಹಿತಿ ನೀಡಿದ ನಟ

kartik-aaryan-announces-new-title-for-satyanarayan-ki-katha-with-kiara-advani
ಕಾರ್ತಿಕ್ ಆರ್ಯನ್-ಕಿಯಾರಾ ಅಡ್ವಾಣಿ ಅಭಿನಯದ ಸತ್ಯನಾರಾಯಣ್ ಕಿ ಕಥಾ ಸಿನೆಮಾಗೆ ಹೊಸ ಶೀರ್ಷಿಕೆ
author img

By

Published : Aug 1, 2022, 1:13 PM IST

ಕಾರ್ತಿಕ್ ಆರ್ಯನ್ ಮತ್ತು ಕಿಯಾರಾ ಅಡ್ವಾಣಿ ಅವರು ಮುಖ್ಯಭೂಮಿಕೆಯಲ್ಲಿ ನಟಿಸಲಿರುವ ಚಿತ್ರ ಸತ್ಯನಾರಾಯಣ್ ಕಿ ಕಥಾ ಸಿನೆಮಾದ ಶೀರ್ಷಿಕೆಯನ್ನು ಬದಲಾಯಿಸಲಾಗಿದೆ. ಈ ಬಗ್ಗೆ ತಮ್ಮ ಇನ್​ಸ್ಟಾಗ್ರಾಂ ನಲ್ಲಿ ಹಂಚಿಕೊಂಡಿರುವ ನಟ ಕಾರ್ತಿಕ್ ಆರ್ಯನ್, ಸತ್ಯನಾರಾಯಣ್ ಕಿ ಕಥಾ ಸಿನಿಮಾದ ಹೆಸರನ್ನು ಸತ್ಯಪ್ರೇಮ್​ ಕಿ ಕಥಾ ಎಂದು ಬದಲಾಯಿಸಲಾಗಿದೆ ಎಂದು ಹೇಳಿದ್ದಾರೆ. ಇದೇ ವೇಳೆ ಚಿತ್ರದ ನಾಯಕಿ ಕಿಯಾರಾ ಗೆ 30ನೇ ಹುಟ್ಟುಹಬ್ಬದ ಶುಭಾಶಯವನ್ನು ತಿಳಿಸಿದ್ದಾರೆ.

ಈ ಚಲನಚಿತ್ರವನ್ನು ಮರಾಠಿ ನಾಟಕ ಆನಂದಿ ಗೋಪಾಲ್‌ದಿಂದ ಖ್ಯಾತಿ ಪಡೆದ, ರಾಷ್ಟ್ರೀಯ ಪ್ರಶಸ್ತಿ ವಿಜೇತ ನಿರ್ದೇಶಕ ಸಮೀರ್ ವಿದ್ವಾನ್ಸ್ ಅವರು ನಿರ್ದೇಶಿಸಿದ್ದಾರೆ. ಈ ಚಿತ್ರವನ್ನು ನಮಹ್ ಪಿಕ್ಚರ್ಸ್ ಮತ್ತು ನಡಿಯಾದ್ವಾಲಾಸ್ ಗ್ರ್ಯಾಂಡ್‌ಸನ್ ಎಂಟರ್‌ಟೈನ್‌ಮೆಂಟ್‌ನ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಇದೇ ಮೊದಲ ಬಾರಿಗೆ ನಟ ಕಾರ್ತಿಕ್ ಆರ್ಯನ್ ಮತ್ತು ಸಾಜಿದ್ ನಡಿಯಾದ್ವಾಲ ಒಟ್ಟಾಗಿ ಸಿನಿಮಾ ಮಾಡುತ್ತಿದ್ದಾರೆ.

ಇತ್ತೀಚಿಗೆ ಬಿಡುಗಡೆಯಾದ ಭೂಲ್ ಭುಲಯ್ಯಾ ಚಿತ್ರದಲ್ಲಿ ನಟ ಕಾರ್ತಿಕ್ ಆರ್ಯನ್ ಮತ್ತು ಕಿಯಾರಾ ಅಡ್ವಾನಿ ತೆರೆಮೇಲೆ ಮೋಡಿ ಮಾಡಿದ್ದರು. ಇದು ವಿಶ್ವದಾದ್ಯಂತ ಒಟ್ಟು 230 ಕೋಟಿ ರೂ. ಗಳಿಸಿತ್ತು.

ಓದಿ : ನಟ ಸಲ್ಮಾನ್​ ಖಾನ್​ ಬಂದೂಕು ಹೊಂದಲು ಪರವಾನಗಿ ನೀಡಿದ ಮುಂಬೈ ಪೊಲೀಸ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.