ETV Bharat / entertainment

ಕಾರ್ತಿಕ್​- ಕಿಯಾರಾ ಅಭಿನಯದ 'ಸತ್ಯಪ್ರೇಮ್​ ಕಿ ಕಥಾ' ಸಿನಿಮಾದ ಟೀಸರ್​ ಔಟ್​​! - ಈಟಿವಿ ಭಾರತ್​ ಕನ್ನಡ

ಈಗಾಗಲೇ ಈ ಜೋಡಿಯ ಕೆಮಿಸ್ಟ್ರಿ ಹಿಟ್​ ಆಗಿದ್ದು, ಇದೀಗ ಈ ಸಿನಿಮಾವೂ ಯಶಸ್ಸು ಕಾಣುವ ನಿರೀಕ್ಷೆ ಇದೆ.

Satyaprem Ki Katha
ಸತ್ಯಪ್ರೇಮ್​ ಕಿ ಕಥಾ
author img

By

Published : May 18, 2023, 5:12 PM IST

ಹೈದರಾಬಾದ್​: ನಟ ಕಾರ್ತಿಕ್​ ಆರ್ಯನ್​ ಅವರ ಮುಂಬರುವ ಚಿತ್ರದ ಕುರಿತು ಹೊಸ ಪ್ರಕಟಣೆಯನ್ನು ತಮ್ಮ ಸಾಮಾಜಿಕ ಜಾಲತಾಣ ಇನ್ಸ್​ಟಾಗ್ರಾಂನಲ್ಲಿ ಪ್ರಕಟಿಸಿದ್ದಾರೆ. ಕಾರ್ತಿಕ್​ ಆರ್ಯನ್​ ಮತ್ತು ಕಿಯಾರಾ ಅದ್ವಾನಿ ಅವರ ನಟನೆಯ ಬಹು ನೀರಿಕ್ಷಿತ ಚಿತ್ರ 'ಸತ್ಯ ಪ್ರೇಮ್​ ಕಿ ಕಥಾ' ಸಿನಿಮಾದ ಟೀಸರ್​ ಅನ್ನು ಹಂಚಿಕೊಂಡಿದ್ದಾರೆ. ಸಿನಿಮಾದಲ್ಲಿ ಇಬ್ಬರ ಪಾತ್ರ ಪರಿಚಯದ ಟೀಸರ್​ ಇದಾಗಿದ್ದು, ಇಬ್ಬರ ಮುದ್ದಾದ ಜೋಡಿಗೆ ಜನರು ಮತ್ತೊಮ್ಮೆ ಅಭಿನಂದನೆ ತಿಳಿಸಿದ್ದಾರೆ. ಈಗಾಗಲೇ ಈ ಜೋಡಿಯ ಕೆಮಿಸ್ಟ್ರಿ ಹಿಟ್​ ಆಗಿದ್ದು, ಈ ಚಿತ್ರದಲ್ಲಿ ಲವರ್​ಗಳಾಗದೇ ದಂಪತಿಗಳಾಗಿ ಮಿಂಚಲಿದ್ದಾರೆ. ಟೀಸರ್​ನಲ್ಲಿ ಇಬ್ಬರ ಅದ್ಧೂರಿ ಮದುವೆ ಮತ್ತು ಚುಂಬನ ದೃಶ್ಯಗಳು ಕೂಡ ಕಂಡು ಬಂದಿವೆ.

ಇನ್ನು ಚಿತ್ರದ ಟೀಸರ್​ ವಿಡಿಯೋ ಹಂಚಿಕೊಂಡ ಅವರು, 'ಆಕೆಯದು ಕಣ್ಣೀರು ಇರಬಹುದು.. ಆದರೆ... ಕಣ್ಣು ನನ್ನದು'' ಎಂದು ಬರೆದಿದ್ದಾರೆ. ಕಾರ್ತಿಕ್​ ಅವರ ಧ್ವನಿ ಮೂಲಕ ಚಿತ್ರದ ಟೀಸರ್​ ಆರಂಭವಾಗಲಿದೆ. ಬ್ಯಾಕ್​ಗ್ರೌಂಡ್​ನ ರೋಮ್ಯಾಟಿಂಕ್​ ಟ್ಯೂನ್​​ ಮತ್ತಷ್ಟು ಹಿತ ನೀಡುತ್ತದೆ. ಪ್ರೀತಿಸಿದ ಹೃದಯಗಳು ಮದುವೆ ಕಥಾನಕವನ್ನು ಈ ಚಿತ್ರವನ್ನು ಹೊಂದಿದೆ.

ಪ್ರೀತಿ, ಮದುವೆ ಕುರಿತಾದ ಈ ಮುದ್ದಾದ ರೋಮ್ಯಾಂಟಿಕ್​ ಚಿತ್ರ ಇದೆ ಜೂನ್​ 29ರಂದು ತೆರೆಗೆ ಬರಲು ಸಜ್ಜಾಗಿದೆ. ಈ ಚಿತ್ರವನ್ನು ಸಮೀರ್​ ವಿಧ್ವಾನ್​ ನಿರ್ದೇಶಿಸುತ್ತಿದ್ದು, ಸಜೀದ್​ ನಡಿಯದ್ವಾಲ್​ ಅವರು ನಿರ್ಮಿಸಿದ್ದಾರೆ. ಈ ಚಿತ್ರದ ಟೀಸರ್​ ಅನ್ನು ಕಾರ್ತಿಕ್​ ಮತ್ತು ಕಿಯಾರಾ ಅದ್ವಾನಿ ಇಬ್ಬರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿ ಸುಪ್ರಿಯ ಪಾಠಕ್​ ಕಪೂರ್​​, ಗಜರಜ್​ ರಾವ್​, ಸಿದ್ಧಾರ್ಥ್​ ರಂಧೇರಿಯಾ, ಅನೂರಾದ ಪಟೇಲ್​, ರಾಜ್ಪಾಲ್​ ಯಾದವ್​, ಶೇಖ್​ ತಲ್ಸನಿಯಾ ಕೂಡ ಇದ್ದಾರೆ.

ಈ ಹಿಂದೆ ಚಿತ್ರದ ಹೆಸರನ್ನು 'ಸತ್ಯನಾರಾಯಣ್​ ಕಿ ಕಥಾ' ಎಂದು ಹೆಸರಿಡಲಾಗಿತ್ತು. ವಿಷ್ಣುವಿನ ಹೆಸರಾದ ಸತ್ಯನಾರಾಯಣ ಹೆಸರು ಇಟ್ಟ ಹಿನ್ನೆಲೆ ಆಕ್ಷೇಪವನ್ನು ಚಿತ್ರತಂಡ ಎದುರಿಸಿದ ಬೆನ್ನಲ್ಲೇ ನಿರ್ದೇಶಕ ಸಮೀರ್​ ವಿದ್ವಾನ್​ ಹೆಸರನ್ನು ಮರು ನಾಮಕರಣಗೊಳಿಸಿದರು.

ಇಬ್ಬರ ಜೋಡಿಯ ಎರಡನೆ ಚಿತ್ರ: 'ಸತ್ಯಪ್ರೇಮ್​ ಕಿ ಕಥಾ' ಚಿತ್ರ ಈ ಜೋಡಿಗಳಿಗೆ ಎರಡನೇ ಚಿತ್ರವಾಗಿದೆ. ಈ ಮೊದಲು 2022ರಲ್ಲಿ ತೆರೆಕಂಡ 'ಭೂಲ್​ ಬುಲಯ್ಯ-2' ಚಿತ್ರದಲ್ಲಿ ಈ ಜೋಡಿ ಮೊದಲ ಬಾರಿಗೆ ಒಟ್ಟಿಗೆ ನಟಿಸಿದ್ದರು. ಈ ಚಿತ್ರ ದೊಡ್ಡ ಸಕ್ಸಸ್​ ಕಾಣುವ ಜೊತೆಗೆ ಇಬ್ಬರ ಜೋಡಿಗೆ ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು. ಇವರ ಇಬ್ಬರ ನಡುವಿನ ಕೆಮಿಸ್ಟ್ರಿ ಜನರಿಗೆ ಇಷ್ಟವಾದ ಹಿನ್ನೆಲೆ ಇದೀಗ ಮತ್ತೊಂದು ಚಿತ್ರದಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ.

ಕಿಯಾರಾ ಅದ್ವಾನಿ ಸಿದ್ದಾರ್ಥ್​ ಮಲ್ಹೋತ್ರಾ ಜೊತೆಗೆ ಮದುವೆಯಾದ ಬಳಿಕ ಬಿಡುಗಡೆಯಾಗುತ್ತಿರುವ ಮೊದಲ ಚಿತ್ರ ಇದಾಗಿದೆ. ಸಿನಿಮಾ ಆಯ್ಕೆಯಲ್ಲಿ ಕಿಯಾರಾ ವಿಭಿನ್ನತೆ ಕಾಯ್ದುಕೊಳ್ಳುತ್ತಿದ್ದಾರೆ. ಸತ್ಯ ಪ್ರೇಮ್​ ಕಿ ಕಥಾ, ಶೆಹಜಾದ್​ ಚಿತ್ರಗಳಲ್ಲೂ ಅವರು ಬ್ಯುಸಿಯಾಗಿದ್ದಾರೆ. ಇನ್ನು ಕಾರ್ತಿಕ್​ ಕೂಡ ಹನ್ಸಲ್​ ಮೆಹ್ತಾ ಅವರ ಕ್ಯಾಪ್ಟನ್​ ಇಂಡಿಯಾ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ಕಬೀರ್​ ಖಾನ್​ ಅವರ ಹೆಸರಿಡದ ಚಿತ್ರಕ್ಕೆ ಸಹಿ ಹಾಕಿದ್ದಾರೆ.

ಇದನ್ನೂ ಓದಿ: ಸೊಸೆಯ​​ ಮನೆ ನಿರ್ಮಾಣ ಹಂತದಲ್ಲಿರುವಾಗಲೇ ಹೊಸ ಅಪಾರ್ಟ್ಮೆಂಟ್ ಖರೀದಿಸಿದ ನೀತು ಕಪೂರ್​!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.