ETV Bharat / entertainment

ಅನಿಸ್ಸಾ ಮಲ್ಹೋತ್ರಾ ಸೀಮಂತ ಸಂಭ್ರಮದಲ್ಲಿ ಕರೀನಾ ಕಪೂರ್​, ನೀತು ಕಪೂರ್​​ - ನಾದಿನಿ ಅನಿಸ್ಸಾ ಫೋಟೋವನ್ನು ಇನ್ಸ್​ಟಾಗ್ರಾಂ ಸ್ಟೋರಿಯಲ್ಲಿ

ಕಪೂರ್​ ಕುಟುಂಬದ ಸೀಮಂತ ಕಾರ್ಯಕ್ರಮ ನಿನ್ನೆ ಮುಂಬೈನಲ್ಲಿ ಅದ್ದೂರಿಯಾಗಿ ನಡೆದಿದ್ದು, ಕೇವಲ ಕುಟುಂಬಸ್ಥರಿಗೆ ಮಾತ್ರ ಆಹ್ವಾನ ನೀಡಲಾಗಿದೆ.

ಅನಿಸ್ಸಾ ಮಲ್ಹೋತ್ರಾ ಸೀಮಂತ ಸಂಭ್ರಮದಲ್ಲಿ ಕರೀನಾ ಕಪೂರ್​, ನೀತು ಕಪೂರ್​​
Kareena Kapoor, Neetu Kapoor at Anissa Malhotra's baby Shower
author img

By

Published : Feb 20, 2023, 1:16 PM IST

ಮುಂಬೈ: ಮೊದಲ ಬಾರಿಗೆ ಪೋಷಕರು ಆಗುತ್ತಿರುವ ಅರ್ಮನ್​ ಜೈನ್​ ಮತ್ತು ಅನೀಸ್ಸಾ ಮಲ್ಹೋತ್ರಾ ಅವರ ಬೇಬಿ ಶವರ್​ ಫೋಟೋವನ್ನು ನಟಿ ಕರೀನಾ ಕಪೂರ್​ ಮತ್ತು ನೀತು ಕಪೂರ್​ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ. ತಮ್ಮ ನಾದಿನಿ ಅನಿಸ್ಸಾ ಫೋಟೋವನ್ನು ಇನ್ಸ್​ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿರುವ ನಟಿ ಕರೀನಾ ಕಪೂರ್​, ತಾಯಿಯಾಗುತ್ತಿರುವ ಸುಂದರಿ ಜೊತೆ ಎಂದು ಬರೆದುಕೊಂಡಿದ್ದಾರೆ. ಇನ್ನು ಈ ಗೋದ್​ ಭಾರಯಿ (ಸೀಮಂತ ಶಾಸ್ತ್ರ)ದ ವೇಳೆ ಕರೀನಾ ಕಂದು- ನೇರಳೆ ಬಣ್ಣದ ಸೂಟ್​ನಲ್ಲಿ ಕಂಗೊಳಿಸಿದ್ದರು. ಇನ್ನು ತಾಯಿಯಾಗುತ್ತಿರುವ ಅನಿಸ್ಸಾ ಎಂಬ್ರೋಯಡರಿಯ ನೀಲಿ ಬಣ್ಣದ ಸೀರೆಯಲ್ಲಿ ಮಿಂಚಿದ್ದು, ಕೊರಳಲ್ಲಿ ಹೂಮಾಲೆ ಹಾಕಿರುವುದನ್ನು ಕಾಣಬಹುದಾಗಿದೆ.

ಅನಿಸ್ಸಾ ಮಲ್ಹೋತ್ರಾ ಸೀಮಂತ ಸಂಭ್ರಮದಲ್ಲಿ ಕರೀನಾ ಕಪೂರ್​, ನೀತು ಕಪೂರ್​​
ಅನಿಸ್ಸಾ ಮಲ್ಹೋತ್ರಾ ಸೀಮಂತ ಸಂಭ್ರಮದಲ್ಲಿ ಕರೀನಾ ಕಪೂರ್​, ನೀತು ಕಪೂರ್​​

ಇನ್ನು, ನಟಿ ನೀತು ಕಪೂರ್​​ ಕೂಡ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಸೀಮಂತ ಕಾರ್ಯಕ್ರಮದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಕರೀನಾ ಕಪೂರ್​, ಮೊಮ್ಮಗಳು ನಿತಾಶಾ ನಂತ, ಅರ್ಮನ್​ ಜೈನ್​ ತಾಯಿ ರಿಮಾ ಕಪೂರ್​ ಅವರನ್ನು ಕಾಣಬಹುದಾಗಿದೆ. ಇದೇ ವೇಳೆ ಕ್ಯಾಪಶನ್​ನಲ್ಲಿ ದೇವರು ಅನಿಸ್ಸಾಗೆ ಒಳಿತು ಮಾಡಲಿ ಎಂದು ಕೂಡ ಬರೆದಿದ್ದಾರೆ. ಅರ್ಮನ್​ ಜೈನ್​ ಮತ್ತು ಅನಿಸ್ಸಾ ಮಲ್ಹೋತ್ರಾ ಕಳೆದ ಫೆಬ್ರವರಿ 2020ಯಲ್ಲಿ ಮದುವೆಯಾಗಿದ್ದರು. ಈ ಮದುವೆಗೆ ಅನೇಕ ಬಾಲಿವುಡ್​ ಮಂದಿ ಕೂಡ ಆಗಮಿಸಿ ನವ ಜೋಡಿಗೆ ಶುಭ ಕೋರಿದ್ದರು. ಇದೀಗ ಈ ಜೋಡಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಸೀಮಂತ ಶಾಸ್ತ್ರ ಕಾರ್ಯಕ್ರಮದಲ್ಲಿ ಕೇವಲ ಆಪ್ತರು ಮತ್ತು ಕುಟುಂಬ ವರ್ಗದವರನ್ನು ಮಾತ್ರ ಆಹ್ವಾನಿಸಲಾಗಿತ್ತು.

ಯಾರಿದು ಅರ್ಮನ್​​: ಅರ್ಮನ್​ ಬಾಲಿವುಡ್​ನ ಕಪೂರ್​ ಕುಟುಂಬದ ಕುಡಿಯಾಗಿದ್ದು, ರೀಮಾ ಜೈನ್​ ಅವರ ಮಗ. ಈ ರೀಮಾ ಜೈನ್​ ರಂದೀರ್​, ರಿಶಿ ಮತ್ತು ರಜೀವ್​ ಕಪೂರ್​ ಸಹೋದರಿಯಾಗಿದ್ದಾರೆ. ಪಂಜಾಬಿ ಮೂಲದ ಅನಿಸ್ಸಾ ಜೊತೆ ಅರ್ಮಾನ್​ 2014ರಿಂದ ಡೇಟಿಂಗ್​ ನಡೆಸುತ್ತಿದ್ದು, 2020ರಲ್ಲಿ ಮದುವೆಯಾಗಿದ್ದರು. ಈ ಮದುವೆಯಲ್ಲಿ ಬಾಲಿವುಡ್​ನ ಕಪೂರ್​ ಕುಟುಂಬ ಸಂಪೂರ್ಣವಾಗಿ ತೊಡಗಿಕೊಂಡಿತು. ಇದರ ಜೊತೆ ರಣಬೀರ್​ ಕಪೂರ್​ನನ್ನು ಮದುವೆಯಾಗುವ ಮೊದಲೇ ಆಲಿಯಾ ಭಟ್​ ಕೂಡ ಈ ಮದುವೆಗೆ ಹಾಜರಾಗಿ, ಸಂಗೀತ್​​ನಲ್ಲಿ ಮಿಂಚಿದ್ದರು.

ಸದ್ಯ ಎರಡು ಗಂಡು ಮಕ್ಕಳ ತಾಯಿಯಾಗಿರುವ ಕರೀನಾ ಕಪೂರ್​ ದಿ ಕ್ರೂ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಈ ಚಿತ್ರದಲ್ಲಿ ನಟಿ ಟಬು, ಕೃತಿ ಸನೋನ್​​ಮ ದಿಲ್ಜಿತ್​ ದೊಸಂಜ್​ ಸೇರಿದಂತೆ ಅನೇಕ ತಾರಾ ಬಳಗವಿದೆ. ಈ ಚಿತ್ರವನ್ನು ವೀರೆ ದಿ ವೆಡ್ಡಿಂಗ್​ ಚಿತ್ರ ನಿರ್ಮಾಣ ಮಾಡಿದ್ದ ಏಕ್ತಾ ಕಪೂರ್​ ಮತ್ತು ರಿಯಾ ಕಪೂರ್​ ನಿರ್ಮಾಣ ಮಾಡುತ್ತಿದ್ದಾರೆ. ದಿ ಕ್ರೂ ಹೊರತಾಗಿ ನಟಿ ಕರೀನಾ, ಸಂಜಯ್​ ಘೋಷ್​ ನಿರ್ದೇಶನದ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ದಿ ಡಿವೋಷನಲ್​ ಆಫ್​ ಸಸ್ಪೆಕ್ಟ್​ ಎಕ್ಸ್​ ಪುಸ್ತಕದ ಆಧಾರದ ಮೇಲೆ ನಿರ್ಮಾಣವಾಗುತ್ತಿದೆ. ನೀತು ಕಪೂರ್​ ಕೂಡ ಇತ್ತೀಚೆಗಷ್ಟೆ ಎ ಲೆಟರ್​ ಟು ಮಿ. ಖನ್ನಾ ಚಿತ್ರದ ಶೂಟಿಂಗ್​ ಮುಗಿಸಿದ್ದಾರೆ.

ಇದನ್ನೂ ಓದಿ: 'ಹೆವಿ ವರ್ಕೌಟ್​ ಬೇಡ...': ಸಮಂತಾಗೆ 'ದಿ ಫ್ಯಾಮಿಲಿಮ್ಯಾನ್‌' ಮನೋಜ್​ ಬಾಜಪೇಯಿ ಸಲಹೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.