ಚಂಡೀಗಢ: ಕಾಮಿಡಿಯನ್ ಕಪಿಲ್ ಶರ್ಮಾ ಮತ್ತು ಅರ್ಚನಾ ಪುರಾನ್ ಸಿಂಗ್ ಪಂಜಾಬ್ ಮುಖ್ಯಮಂತ್ರಿ ಭಗವತ್ ಮನ್ ಅವರನ್ನು ಮುಂಬೈನಲ್ಲಿ ಭೇಟಿಯಾಗಿದ್ದಾರೆ. ಭಾನುವಾರ ಅಂದರೆ ಜನವರಿ 22ರಂದು ಕಪಿಲ್ ಶರ್ಮಾ ಪಂಜಾಬ್ ಮುಖ್ಯಮಂತ್ರಿಗಳನ್ನು ಭೇಟಿಯಾಗಿದ್ದು, ಈ ಸಂಬಂಧ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಫೋಟೋ ಹಂಚಿಕೊಳ್ಳುವ ಮೂಲಕ ಮಾಹಿತಿ ನೀಡಿದ್ದಾರೆ. ಇನ್ನು ಈ ಫೋಟೋದಲ್ಲಿ ದಿ ಕಪಿಲ್ ಶರ್ಮಾ ಶೋ ನ ತೀರ್ಪುಗಾರರಾಗಿರುವ ಅರ್ಚನಾ ಪುರನ್ ಸಿಂಗ್ ಕೂಡಾ ಕಂಡು ಬಂದಿದ್ದಾರೆ.
'ಹಿಂದಿನ ದಿನದ ಸಂಜೆ ಮುಂಬೈನಲ್ಲಿ ಬಳಹಣ ದಿನಗಳ ಬಳಿಕ ಸಿಎಂ ಭಗವಂತ್ ಮನ್ ಅವರನ್ನು ಭೇಟಿಯಾದೆ ಎಂದು ಮಾಹಿತಿ ನೀಡಿರುವ ಕಪಿಲ್, ಪಂಜಾಬ್ ಸಿಎಂ ಅನ್ನು ದೊಡ್ಡ ಅಣ್ಣ ಎಂದು ಉಲ್ಲೇಖಿಸಿರುವುದು ಪೋಸ್ಟ್ನಲ್ಲಿ ಕಾಣಬಹುದಾಗಿದೆ. ಹೀರೋ ಮತ್ತು ಗೌರವಯುತ ಪಂಜಾಬ್ ಸಿಎಂ ಸರ್ದರ್ ಭಗವಂತ್ ಸಿಂಗ್ ಮಾನ್ ಅವರನ್ನು ಬಹು ದಿನಗಳ ಬಳಿಕ ಭೇಟಿಯಾದೆ. ಇದೊಂದು ಪ್ರೀತಿ ಪೂರ್ವಕ ಭೇಟಿ. ನಿಮ್ಮ ಪ್ರೀತಿಗೆ ಗೌರವಕ್ಕೆ ಧನ್ಯವಾದಗಳು' ಎಂದಿದ್ದಾರೆ.
ಪಂಜಾಬ್ನಲ್ಲಿ ಫಿಲ್ಮ್ ಸಿಟಿ: ತಮ್ಮ ರಾಜ್ಯಕ್ಕೆ ಬಂಡವಾಳ ಆಕರ್ಷಣೆಗಾಗಿ ಅವರು ಮುಂಬೈಗೆ ಎರಡು ದಿನದ ಪ್ರವಾಸವನ್ನು ನಡೆಸಿದ್ದಾರೆ. ಮುಂಬೈನಲ್ಲಿ ಅವರು ಫಿಲ್ಮ್ ಸಿಟಿ ತೆರೆಯುವ ಯೋಜನೆ ಹೊಂದಿರುವ ಕುರಿತು ಹಂಚಿಕೊಂಡಿದ್ದಾರೆ. ಈ ಕುರಿತು ಮಾಧ್ಯಮದ ಜೊತೆ ಮಾತನಾಡಿರುವ ಭಗವಂತ್ ಸಿಂಗ್ ಮಾನ್ ಅವರು, ಮುಂಬೈನಲ್ಲಿ ನೆಲೆಸಿರುವ ಚಿತ್ರೋದ್ಯಮದಲ್ಲಿ ನನಗೆ ಅನೇಕ ಸ್ನೇಹಿತರಿದ್ದಾರೆ. ಈ ಹಿನ್ಲೆ ಪಂಜಾಬ್ನಲ್ಲಿ ತಮ್ಮ ಉದ್ಯಮ ಆರಂಭಕ್ಕೆ ನಾನು ಅವರಿಗೆ ಮನವಿ ಮಾಡುತ್ತೇನೆ ಎಂದಿದ್ದಾರೆ. ಪಂಜಾಬ್ ಸಿನಿಮೋದ್ಯಮದ ಬಗ್ಗೆ ಮಾತನಾಡಿರುವ ಅವರು, ಪಂಜಾಬಿ ಸಿನಿಮೋದ್ಯಮ ಈಗಾಗಲೇ ದೊಡ್ಡದಿದೆ. ಫಿಲ್ಮ್ ಸಿಟಿ ಅವರಿಗೆ ದೊಡ್ಡ ವಿಸ್ತರಣೆಗೆ ಅವಕಾಶ ನೀಡಲಿದೆ ಎಂದರು.
ಕಪಿಲ್ ಶರ್ಮ ತಮ್ಮ ಪ್ರಖ್ಯಾತ ಕಾರ್ಯಕ್ರಮ ದಿ ಕಪಿಲ್ ಶರ್ಮಾ ಶೋನಿಂದ ದೇಶದೆಲ್ಲೆಡೆ ಚಿರಪರಿಚಿತರಾಗಿದ್ದಾರೆ. ಪಂಜಾಬ್ ಅಮೃತ್ಸರ್ ಮೂಲದ ಶರ್ಮ ತಮ್ಮ ಸ್ವ ಪ್ರಯತ್ನದಿಂದ ಟಿವಿ ರಿಯಾಲಿಟಿ ಶೋನಲ್ಲಿ ಹೆಸರು ಸಂಪಾದಿಸಿದ್ದಾರೆ. ದಿ ಗ್ರೇಟ್ ಇಂಡಿಯನ್ ಲಾಫ್ಟರ್ ಟಿವಿ ರಿಯಾಲಿಟಿ ಶೋನಲ್ಲಿ 10 ಲಕ್ಷ ಬಹುಮಾನ ಗೆಲ್ಲುವ ಮೂಲಕ ಇವರು ತಮ್ಮ ಹಾದಿ ಪ್ರಾರಂಭಿಸಿದರು. ಈ ಹಿಂದೆ ಕಪಿಲ್ ಶರ್ಮಾ, ಫ್ಯಾಮಿಲಿ ಟೈಮ್ ವಿಥ್ ಕಪಿಲ್, ಕಾಮಿಡಿ ನೈಟ್ ವಿಥ್ ಕಪಿಲ್ ನಂತಹ ಕಾರ್ಯಕ್ರಮ ನಡೆಸಿದ್ದಾರೆ.
ಕಾಮಿಡಿ ಶೋನೊಂದಿಗೆ ಪಂಜಾಬ್ ಸಿಎಂ ಸಂಬಂಧ: ಪಂಜಾಬ್ ಸಿಎಂ ಭಗವಂತ್ ಮಾನ್ ಕೂಡ ಕಾಮಿಡಿ ಶೋಗಳೊಂದಿಗೆ ಸಂಬಂಧ ಹೊಂದಿದ್ದಾರೆ. ಈ ಹಿಂದೆ ಪ್ರಸಾರವಾಗುತ್ತಿದ್ದ ಗ್ರೇಟ್ ಇಂಡಿಯನ್ ಲಾಫ್ಟರ್ ಚಾಲೆಂಜ್ನಲ್ಲಿ ಕೂಡ ಪಂಜಾಬ್ ಮುಖ್ಯಮಂತ್ರಿಗಳು ಸ್ಪರ್ಧಿಸಿ, ಇದರಿಂದ ಹೆಸರು ಪಡೆದಿದ್ದರು. ಆ ದಿನಗಳಿಂದ ಕಪಿಲ್ ಶರ್ಮಾ ಮತ್ತು ಭಗವಂತ್ ಮಾನ್ ಬಹಳ ವಿಶೇಷ ಹಾಗೂ ನಿಕಟ ಸಂಬಂಧವನ್ನು ಹೊಂದಿದ್ದಾರೆ. ಭಗವಂತ್ ಮಾನ್ ಸಿಎಂ ಆದಾಗ ಅವರ ಯಶಸ್ಸಿಗೆ ಕಪಿಲ್ ಶರ್ಮಾ ಅಭಿನಂದಿಸಿದ್ದರು.
ಇದನ್ನೂ ಓದಿ: 5 ವರ್ಷಗಳ ನಂತರ 'ರಾಧಾಕೃಷ್ಣ' ಧಾರಾವಾಹಿ ಮುಕ್ತಾಯ: ಅನುಭವ ಹಂಚಿಕೊಂಡ ಸುಮೇಧ್, ಮಲ್ಲಿಕಾ