ರಿಷಬ್ ಶೆಟ್ಟಿ ಅಭಿನಯಿಸಿ, ನಿರ್ದೇಶಿಸಿರುವ ಕಾಂತಾರ ಸಿನಿಮಾ ದಾಖಲೆ ಮಾಡುತ್ತಲೇ ಇದೆ. ಈ ಚಿತ್ರ ವೀಕ್ಷಿಸಿದ ಬಹುತೇಕರು ಮಂತ್ರಮುಗ್ಧರಾಗಿದ್ದಾರೆ. ಒಟಿಟಿಗೆ ಎಂಟ್ರಿ ಕೊಟ್ಟಿರುವ ಈ ಚಿತ್ರವನ್ನು ಪ್ರೇಕ್ಷಕರು ಹಲವು ಬಾರಿ ವೀಕ್ಷಿಸಿದ್ದಾರೆ. ಈಗ ಆಸ್ಕರ್ ರೇಸ್ಗೆ ಸ್ಪರ್ಧಿಸಲು ಪ್ರಯತ್ನ ಮಾಡಿದೆ.
ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್ನ ವಿಜಯ್ ಕಿರಗಂದೂರು ಅವರು ಮಾಹಿತಿ ನೀಡಿದ್ದಾರೆ. ಆರ್ಆರ್ಆರ್ ಮಾದರಿಯಲ್ಲೇ ಕಾಂತಾರ ಕೂಡ ಆಸ್ಕರ್ ರೇಸ್ಗೆ ತೆರಳಲು ಪ್ರಯತ್ನಿಸಿದೆ. ಕನ್ನಡದ ಸಿನಿಮಾವೊಂದು ಆಸ್ಕರ್ ರೇಸ್ಗೆ ಇಳಿಯುತ್ತಿರುವುದು ಇದೇ ಮೊದಲು ಅನ್ನೋದು ವಿಶೇಷ.
- " class="align-text-top noRightClick twitterSection" data="
">
ದಕ್ಷಿಣ ಚಿತ್ರರಂಗದಲ್ಲಿ 16 ಕೋಟಿ ಬಜೆಟ್‌ನಲ್ಲಿ ತಯಾರಾಗಿ ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿರುವ 'ಕಾಂತಾರ' ಇನ್ನೂ ಅದೇ ಕ್ಷೇಜ್ ಉಳಿಸಿಕೊಂಡಿದೆ. ಚಿತ್ರದ ನಿರ್ದೇಶಕ ಮತ್ತು ನಾಯಕ ನಟ ರಿಷಬ್ ಶೆಟ್ಟಿ ಈ ಚಿತ್ರದಿಂದ ರಾತ್ರೋರಾತ್ರಿ ಬಹುದೊಡ್ಡ ಸ್ಟಾರ್ ಆಗಿದ್ದು ಸುಳ್ಳಲ್ಲ. ಅಂತಹ ಪರಿಸ್ಥಿತಿಯಲ್ಲಿ ಪ್ರೇಕ್ಷಕರು ಚಿತ್ರವನ್ನು ಆಸ್ಕರ್ ಪ್ರಶಸ್ತಿಗೆ ಕಳುಹಿಸುವ ಅಭಿಯಾನವನ್ನು ಸಹ ಪ್ರಾರಂಭಿಸಿದರು. ಈಗ ಆಸ್ಕರ್‌ಗಾಗಿ ಚಿತ್ರ ನಿರ್ಮಾಪಕರು 'ಕಾಂತಾರ'ವನ್ನು ಕಳುಹಿಸಿದ್ದಾರೆ ಎಂಬ ಸಂತಸದ ಸುದ್ದಿ ಬಂದಿದೆ.
ಮಾಧ್ಯಮ ವರದಿಗಳ ಪ್ರಕಾರ ಸಂದರ್ಶನವೊಂದರಲ್ಲಿ, 'ನಾವು ಕೊನೆಯ ಕ್ಷಣದಲ್ಲಿ ಚಿತ್ರದ ಅರ್ಜಿಯನ್ನು ಆಸ್ಕರ್‌ಗೆ ಕಳುಹಿಸಿದ್ದೇವೆ. ಅಂತಿಮ ಪಟ್ಟಿ ಇನ್ನೂ ಬರಬೇಕಿದೆ. ಇದಕ್ಕಾಗಿ ಕಾಯುತ್ತಿದ್ದೇವೆ. ಕಾಂತಾರ ಕಥೆಗೆ ವಿಶ್ವಾದ್ಯಂತ ಪ್ರೇಕ್ಷಕರನ್ನು ಸೆಳೆಯುವ ಶಕ್ತಿ ಇದೆ' ಎಂದು ವಿಜಯ್ ಕಿರಗಂದೂರು ತಿಳಿಸಿದ್ದಾರೆ.
-
Overwhelmed with joy to receive this from @IMDb_in for #Kantara ❤️
— Rishab Shetty (@shetty_rishab) December 15, 2022 " class="align-text-top noRightClick twitterSection" data="
ನಮ್ಮ ಕಾಂತಾರ amongst India’s Top 10 most popular movies!
ಧನ್ಯವಾದಗಳು @IMDb 🙏🏼#IMDbBestof2022 pic.twitter.com/Ov2EgqH5lh
">Overwhelmed with joy to receive this from @IMDb_in for #Kantara ❤️
— Rishab Shetty (@shetty_rishab) December 15, 2022
ನಮ್ಮ ಕಾಂತಾರ amongst India’s Top 10 most popular movies!
ಧನ್ಯವಾದಗಳು @IMDb 🙏🏼#IMDbBestof2022 pic.twitter.com/Ov2EgqH5lhOverwhelmed with joy to receive this from @IMDb_in for #Kantara ❤️
— Rishab Shetty (@shetty_rishab) December 15, 2022
ನಮ್ಮ ಕಾಂತಾರ amongst India’s Top 10 most popular movies!
ಧನ್ಯವಾದಗಳು @IMDb 🙏🏼#IMDbBestof2022 pic.twitter.com/Ov2EgqH5lh
ಕೇವಲ 16 ಕೋಟಿಯ ಬಜೆಟ್‌ನಲ್ಲಿ ತಯಾರಾದ 'ಕಾಂತಾರ' ಚಿತ್ರ 400 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಸೆಪ್ಟೆಂಬರ್ 30ರಂದು ಕನ್ನಡದಲ್ಲಿ ಚಿತ್ರ ಬಿಡುಗಡೆಯಾಗಿತ್ತು. ನಂತರ ಹಿಂದಿ, ತೆಲುಗು, ತಮಿಳು, ಮಲೆಯಾಳಂ ಭಾಷೆಗಳಿಗೆ ಡಬ್ ಆಯಿತು. ಚಿತ್ರಮಂದಿರಗಳಲ್ಲಿ ಅಬ್ಬರಿಸಿದ ಕಾಂತಾರ ಈಗ ಒಟಿಟಿ ಅಲ್ಲೂ ಉತ್ತಮ ಪ್ರದರ್ಶನ ಕಾಣುತ್ತಿದೆ.
ಇದನ್ನೂ ಓದಿ: 2022ರಲ್ಲಿ ಬಿಡುಗಡೆಯಾದ ಸ್ಯಾಂಡಲ್ವುಡ್ ಪ್ಯಾನ್ ಇಂಡಿಯಾ ಚಿತ್ರಗಳ ಡೀಟೆಲ್ಸ್ ನಿಮಗಾಗಿ..
IMDb (ಇಂಟರ್ನೆಟ್ ಮೂವಿ ಡೇಟಾಬೇಸ್) ನಲ್ಲಿ ಚಿತ್ರವು 10ರಲ್ಲಿ 9.5 ರೇಟಿಂಗ್ ಅನ್ನು ಪಡೆದುಕೊಂಡಿದೆ. ಚಿತ್ರವು ಈ ವರ್ಷದ IMDb ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಭಾರತದಲ್ಲಿ ಅತಿ ಹೆಚ್ಚು ವೀಕ್ಷಿಸಲ್ಪಟ್ಟ 10 ಸಿನಿಮಾಗಳಲ್ಲಿ ಕಾಂತಾರ ಇದೆ.