ETV Bharat / entertainment

ಒಟಿಟಿಗೆ ಕಾಂತಾರ ಎಂಟ್ರಿ.. ಮನೆಮಂದಿಯೆಲ್ಲಾ ಕುಳಿತು ಸಿನಿಮಾ ನೋಡಿ ಆನಂದಿಸಿ - ಅಮೆಜಾನ್ ಪ್ರೈಂನಲ್ಲಿ ಕಾಂತಾರ

ಕಾಂತಾರ ಸಿನಿಮಾವನ್ನು ಭಾರತ ಸೇರಿದಂತೆ 240 ದೇಶಗಳಲ್ಲಿ ನಾಳೆಯಿಂದ ಅಮೆಜಾನ್ ಪ್ರೈಂನಲ್ಲಿ ವೀಕ್ಷಿಸಬಹುದು.

kantara movie available in Amazon Prime
ಒಟಿಟಿಗೆ ಕಾಂತಾರ ಎಂಟ್ರಿ
author img

By

Published : Nov 23, 2022, 6:14 PM IST

ಕನ್ನಡ ಚಿತ್ರರಂಗ ಅಲ್ಲದೇ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆ ಆಗಿ ಪ್ರೇಕ್ಷಕರ ಮನಗೆದ್ದ ಸಿನಿಮಾ ಕಾಂತಾರ. ಕ್ವಾಲಿಟಿ ಕಂಟೆಂಟ್​ ಉಳ್ಳ ಈ ಚಿತ್ರವನ್ನು ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರ್ ನಿರ್ಮಾಣ ಮಾಡಿದ್ದಾರೆ. 16 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡು, ಬಾಕ್ಸ್ ಆಫೀಸ್‌ನಲ್ಲಿ ಬರೋಬ್ಬರಿ 400 ಕೋಟಿ ರೂಪಾಯಿ ಕಲೆಕ್ಷನ್ ಮಾಡಿರೋ ಕಾಂತಾರ ಸಿನಿಮಾವನ್ನು ಇನ್ನು ನಿಮ್ಮ ಮನೆಯಲ್ಲೇ ನೋಡುವ ಅವಕಾಶ ಒದಗಿ ಬಂದಿದೆ.

ಹೌದು, ರಿಷಬ್ ಶೆಟ್ಟಿ ನಟಿಸಿ, ನಿರ್ದೇಶನ ಮಾಡಿರೋ ಕಾಂತಾರ ಸಿನಿಮಾವನ್ನು ಭಾರತ ಸೇರಿದಂತೆ 240 ದೇಶಗಳಲ್ಲಿ ನಾಳೆಯಿಂದ ಅಮೆಜಾನ್ ಪ್ರೈಂನಲ್ಲಿ ವೀಕ್ಷಿಸಬಹುದು. ಕನ್ನಡ, ತೆಲುಗು, ಮಲಯಾಳಂ ಹಾಗೂ ತಮಿಳು ಭಾಷೆಗಳಲ್ಲಿ ಚಿತ್ರವನ್ನು ವೀಕ್ಷಿಸಬಹುದು.

ಕರ್ನಾಟಕದ ದಕ್ಷಿಣ ಕರಾವಳಿ ಭಾಗದಲ್ಲಿರುವ ಕಾಡುಬೆಟ್ಟು ಕಾಡಿನಲ್ಲಿ ವಾಸಿಸುವ ಸಮುದಾಯವೊಂದರ ಸುತ್ತ ಚಿತ್ರಕಥೆಯನ್ನು ಹೆಣೆಯಲಾಗಿದೆ. ಸಮುದಾಯದಲ್ಲಿ ನಡೆಯುವ ಒಂದು ಸಾವಿನಿಂದಾಗಿ ಹಳ್ಳಿ ಜನರು ಹಾಗೂ ದುಷ್ಟ ಶಕ್ತಿಯ ನಡುವೆ ಸಂಘರ್ಷ ಏರ್ಪಡುತ್ತದೆ. ಶಿವ ಎನ್ನುವ ಪಾತ್ರ ಇಲ್ಲಿ ಪ್ರಮುಖವಾಗಿದ್ದು, ದುಷ್ಟ ಶಕ್ತಿಯ ವಿರುದ್ಧ ಬಂಡಾಯವೆದ್ದು ಹಳ್ಳಿಯನ್ನು ಹಾಗೂ ಪ್ರಕೃತಿಯನ್ನು ರಕ್ಷಿಸುತ್ತಾನೆ.

ಈ ಬಗ್ಗೆ ಮಾತನಾಡಿರುವ ನಟ ಹಾಗು ನಿರ್ದೇಶಕ ರಿಷಬ್ ಶೆಟ್ಟಿ, ದೇಶದ ಮೂಲೆಮೂಲೆಗಳಲ್ಲಿನ ಸಿನಿಪ್ರಿಯರು ಕಾಂತಾರ ಚಿತ್ರಕ್ಕೆ ಮೆಚ್ಚುಗೆಯ ಸುರಿಮಳೆ ಸುರಿಸಿದ್ದಾರೆ. ಹೀಗಾಗಿ ನನಗೆ ತುಂಬಾ ಖುಷಿ ಇದೆ. ಈ ಚಿತ್ರ ಅಮೆಜಾನ್ ಪ್ರೈಂ ವಿಡಿಯೋ ಮೂಲಕ ಜಾಗತಿಕವಾಗಿ ಡಿಜಿಟಲ್ ಪ್ರೀಮಿಯರ್​​ನಲ್ಲಿ ಬಿಡುಗಡೆಗೊಳ್ಳುತ್ತಿದೆ. ಚಿತ್ರದೆಡೆಗಿನ ನಮ್ಮ ಒಲವು ಹಾಗೂ ಪರಿಶ್ರಮದ ಕಥೆಯನ್ನು ವಿಶ್ವಮಟ್ಟದಲ್ಲಿ ಇನ್ನಷ್ಟು ಜನರಿಗೆ ತಲುಪುವುದಕ್ಕೆ ವೇದಿಕೆ ಸಿಕ್ಕಿರುವುದು ಸಂತೋಷ ತಂದಿದೆ. ಇದು ಸಾರ್ವತ್ರಿಕವಾಗಿ ಆಕರ್ಷಣೆ ಹೊಂದಿದ ಕಥೆಯಾಗಿದ್ದು, ಕಥಾವಸ್ತುವಿನಲ್ಲಿ ಸ್ಥಳೀಯ ಕಂಪಿದೆ. ಚಿತ್ರದ ಕೊನೆಯ ಕ್ಷಣದವರೆಗೂ ಪ್ರೇಕ್ಷಕರಲ್ಲಿ ಕುತೂಹಲವನ್ನು ಹೆಚ್ಚಿಸುತ್ತಲೇ ಇರುತ್ತದೆ ಎಂದರು.

ಚಿತ್ರದ ನಿರ್ಮಾಪಕರಾದ ವಿಜಯ್ ಕಿರಗಂದೂರ್ ಮಾತನಾಡಿ, ಹೊಂಬಾಳೆ ಫಿಲಂಸ್ ಮೂಲಕ ನಾವು ಯಾವಾಗಲೂ ಆಕರ್ಷಕವಾದ ಕಥೆಗಳನ್ನು ಅಸಾಮಾನ್ಯ ರೀತಿಯಲ್ಲಿ ಪ್ರಸ್ತುತ ಪಡಿಸುವುದಕ್ಕೆ ಇಷ್ಟಪಡುತ್ತೇವೆ. ಕಾಂತಾರ ಸಿನಿಮಾ ನಮ್ಮ ಅಂತಹ ಪ್ರಯತ್ನಗಳಲ್ಲೊಂದು. ಚಿತ್ರವು ವಿವಿಧ ಹಿನ್ನೆಲೆ ಹಾಗೂ ಪ್ರದೇಶಗಳಿಂದ ಬಂದ ಪ್ರೇಕ್ಷಕರನ್ನೂ ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ. ರಿಷಬ್ ಹಾಗೂ ಇಡೀ ಚಿತ್ರತಂಡ ಇಂಥದ್ದೊಂದು ಅತ್ಯದ್ಭುತ ಚಿತ್ರವನ್ನು ನಿರ್ಮಿಸಲು ಸಾಕಷ್ಟು ಪರಿಶ್ರಮ ಪಟ್ಟಿದೆ. ಈಗ ಇಂಥ ಅದ್ಭುತವಾದ ಚಿತ್ರವನ್ನು ಪ್ರೈಂ ವಿಡಿಯೋ ಮುಖಾಂತರ ಜಗತ್ತಿನಾದ್ಯಂತ ಇರುವ ಪ್ರೇಕ್ಷಕರನ್ನು ತಲುಪಿಸಲು ಉತ್ಸುಕರಾಗಿದ್ದೇವೆ ಎಂದಿದ್ದಾರೆ.

ಇದನ್ನೂ ಓದಿ: ವಿಶ್ವದಾದ್ಯಂತ ಕಾಂತಾರ ಅಬ್ಬರ.. 400 ರೂ.​ ದಾಟಿದ ರಿಷಬ್​ ಶೆಟ್ಟಿ ಸಿನಿಮಾ!

ರಿಷಬ್ ಶೆಟ್ಟಿ ಹಾಗೂ ಸಪ್ತಮಿ ಗೌಡ, ರಘು ಪಾಂಡೇಶ್ವರ, ಅಚ್ಯುತ್ ಕುಮಾರ್ ಸೇರಿದಂತೆ ಅನೇಕ ಜನಪ್ರಿಯ ಕಲಾವಿದರು ಚಿತ್ರದಲ್ಲಿ ನಟಿಸಿದ್ದು, ಸ್ವತಃ ರಿಷಬ್ ಶೆಟ್ಟಿ ಚಿತ್ರದಲ್ಲಿ ನಾಯಕನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಒಟ್ಟಾರೆ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಹೃದಯವನ್ನು ಗೆದ್ದಿರುವ ಕಾಂತಾರ ಚಿತ್ರವನ್ನು ಇದೀಗ ನವೆಂಬರ್ 24ರಿಂದ ಮನೆಯಲ್ಲೇ ಕುಟುಂಬದ ಜೊತೆ ನೋಡಬಹುದಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.