ETV Bharat / entertainment

ಅ. 9ರಂದು ಕಾಂತಾರ ಹಿಂದಿ ಟ್ರೈಲರ್ ರಿಲೀಸ್ - Kantara hindi movie

ಕಾಂತಾರ ಹಿಂದಿ ಟ್ರೈಲರ್ ಅನ್ನು ಅಕ್ಟೋಬರ್ 9 ರಂದು ಬೆಳಗ್ಗೆ 9.10ಕ್ಕೆ ಬಿಡುಗಡೆ ಮಾಡಲಾಗುವುದು ಎಂದು ಹೊಂಬಾಳೆ ನಿರ್ಮಾಣ ಸಂಸ್ಥೆ ಗುರುವಾರ ಟ್ವೀಟ್ ಮಾಡಿದೆ.

Kantara Hindi trailer
ಕಾಂತಾರ ಹಿಂದಿ ಟ್ರೈಲರ್
author img

By

Published : Oct 7, 2022, 3:40 PM IST

ಬಹು ಬೇಡಿಕೆ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರ ಕಾಂತಾರ ಸಿನಿಮಾ ಸೆಪ್ಟೆಂಬರ್ 30ರಂದು ಅದ್ಧೂರಿಯಾಗಿ ಬಿಡುಗಡೆ ಆಗಿ ಚಿತ್ರಮಂದಿರಗಳಲ್ಲಿ ಧೂಳೆಬ್ಬಿಸುತ್ತಿದೆ. ಸಿನಿಮಾ ಬಗ್ಗೆ ವ್ಯಾಪಕ ಚರ್ಚೆ ಆಗುತ್ತಿದ್ದು, ಪರಭಾಷೆಯ ಪ್ರೇಕ್ಷಕರಿಂದ ಚಿತ್ರಕ್ಕೆ ಡಿಮ್ಯಾಂಡ್ ಬಂದಿದೆ. ಎಲ್ಲೆಡೆ ಸುದ್ದಿಯಾಗುತ್ತಿರುವ ಕಾಂತಾರ ಚಿತ್ರವೀಗ ಪ್ಯಾನ್ ಇಂಡಿಯಾದತ್ತ ಮುಖ ಮಾಡಿದೆ.

ಚಿತ್ರವನ್ನು ಡಬ್ಬಿಂಗ್ ಮಾಡಲು ಬೇಡಿಕೆ ಇಡಲಾಗಿದೆ. ಹಲವು ಖ್ಯಾತನಾಮ ನಿರ್ಮಾಪಕರು ಚಿತ್ರದ ಡಬ್ಬಿಂಗ್ ಅವತರಣಿಕೆಗೆ ಬೇಡಿಕೆ ಇಡುತ್ತಿದ್ದಾರೆ. ಇದೇ ಕಾರಣಕ್ಕೆ ಇದೀಗ ಚಿತ್ರ ತಂಡ ಚಿತ್ರವನ್ನು ವಿವಿಧ ಭಾಷೆಗಳಿಗೆ ಡಬ್ ಮಾಡಲು ಸಿದ್ಧತೆ ನಡೆಸಿದೆ. ಸದ್ಯ ಹಿಂದಿಯಲ್ಲಿ ಟ್ರೈಲರ್ ಕೌಂಟ್ ಡೌನ್ ಶುರುವಾಗಿದೆ.

ಇದನ್ನೂ ಓದಿ: ಅಪ್ಪು ಅಭಿಮಾನಿಗಳಿಗೆ ಸಿಹಿ ಸುದ್ದಿ.. ಅ. 9ಕ್ಕೆ ಗಂಧದ ಗುಡಿ ಟ್ರೈಲರ್ ಬಿಡುಗಡೆ

''ದೈವತ್ವದಿಂದ ಮಂತ್ರಮುಗ್ಧರಾಗಲು ಸಿದ್ಧರಾಗಿ. ಸಾಕ್ಷಿ ಮತ್ತು ದೈವಿಕ ಶಕ್ತಿ ಅನುಭವಿಸಿ. ಕಾಂತಾರ ಹಿಂದಿ ಟ್ರೈಲರ್ ಅನ್ನು ಅಕ್ಟೋಬರ್ 9 ರಂದು ಬೆಳಗ್ಗೆ 9.10ಕ್ಕೆ ಬಿಡುಗಡೆ ಮಾಡಲಾಗುವುದು'' ಎಂದು ಹೊಂಬಾಳೆ ನಿರ್ಮಾಣ ಸಂಸ್ಥೆ ಗುರುವಾರ ಟ್ವೀಟ್ ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.