ಸ್ಯಾಂಡಲ್ವುಡ್ ಹಿರಿಮೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದ 'ಕಾಂತಾರ' ಅಬ್ಬರ ಮುಂದುವರಿದಿದೆ. ಸಿನಿಮಾ ಬಿಡುಗಡೆ ಆಗಿ ಒಂದು ತಿಂಗಳು ಕಳೆದರೂ ಕಾಂತಾರ ಕ್ರೇಜ್ ಕಡಿಮೆ ಆಗಿಲ್ಲ. ಪ್ರತಿ ಶೋಗಳು ಹೌಸ್ಫುಲ್. ಕಲೆಕ್ಷನ್ ವಿಚಾರದಲ್ಲಿ ಎಲ್ಲಾ ದಾಖಲೆಗಳನ್ನು ಹಿಂದಕ್ಕೆ ತಳ್ಳಿ ಗೆಲುವಿನ ಓಟ ಮುಂದುವರಿಸಿದೆ.
ಸೆಪ್ಟೆಂಬರ್ 30ಕ್ಕೆ ಬಿಡುಗಡೆ ಕಂಡು 15 ದಿನಗಳಲ್ಲಿ ಹಿಂದಿ, ಮಲೆಯಾಳಂ, ತೆಲುಗು, ತಮಿಳಿಗೆ ಡಬ್ ಆಗಿ ಪರಭಾಷೆ ಚಿತ್ರರಂಗದಲ್ಲೂ ಹೆಸರು ಮಾಡಿದ ಕಾಂತಾರ ಇದೀಗ ಮತ್ತೊಂದು ದಾಖಲೆ ಮಾಡಿದೆ. ಹೌದು, ಗಳಿಕೆ ವಿಚಾರದಲ್ಲಿ ಈಗಾಗಲೇ ಹತ್ತು ಹಲವು ರೆಕಾರ್ಡ್‌ಗಳನ್ನು ತನ್ನ ತೆಕ್ಕೆಗೆ ಪಡೆದಿರುವ ಕಾಂತಾರ, ಹಿಂದಿ ಭಾಷೆಯಲ್ಲಿಯೂ ಅಲ್ಲಿನ ಸಿನಿಮಾಗಳನ್ನೂ ಮೀರಿ ನಿಂತಿದೆ. ಅಕ್ಷಯ್ ಕುಮಾರ್, ಅಜಯ್ ದೇವಗನ್ ಚಿತ್ರಗಳಿಗೂ ಟಕ್ಕರ್ ಕೊಟ್ಟಿದೆ. ತೆಲುಗಿನ ಪ್ಯಾನ್ ಇಂಡಿಯಾ ಸಿನಿಮಾ ಕಾರ್ತಿಕೇಯ 2 ರೆಕಾರ್ಡ್ ಅನ್ನು ಹಿಂದಕ್ಕೆ ತಳ್ಳಿದೆ ಕಾಂತಾರ.
-
#Kantara *#Hindi version* [Week 3] Fri 2.75 cr, Sat 4.10 cr, Sun 4.40 cr, Mon 2.30 cr, Tue 2.30 cr, Wed 2.05 cr, Thu 2.05 cr. Total: ₹ 51.65 cr. #India biz. Nett BOC.
— taran adarsh (@taran_adarsh) November 4, 2022 " class="align-text-top noRightClick twitterSection" data="
Biz at a glance…
⭐️ Week 1: ₹ 15 cr
⭐️ Week 2: ₹ 16.70 cr
⭐️ Week 3: ₹ 19.95 cr
⭐️ Total: ₹ 51.65 cr
">#Kantara *#Hindi version* [Week 3] Fri 2.75 cr, Sat 4.10 cr, Sun 4.40 cr, Mon 2.30 cr, Tue 2.30 cr, Wed 2.05 cr, Thu 2.05 cr. Total: ₹ 51.65 cr. #India biz. Nett BOC.
— taran adarsh (@taran_adarsh) November 4, 2022
Biz at a glance…
⭐️ Week 1: ₹ 15 cr
⭐️ Week 2: ₹ 16.70 cr
⭐️ Week 3: ₹ 19.95 cr
⭐️ Total: ₹ 51.65 cr#Kantara *#Hindi version* [Week 3] Fri 2.75 cr, Sat 4.10 cr, Sun 4.40 cr, Mon 2.30 cr, Tue 2.30 cr, Wed 2.05 cr, Thu 2.05 cr. Total: ₹ 51.65 cr. #India biz. Nett BOC.
— taran adarsh (@taran_adarsh) November 4, 2022
Biz at a glance…
⭐️ Week 1: ₹ 15 cr
⭐️ Week 2: ₹ 16.70 cr
⭐️ Week 3: ₹ 19.95 cr
⭐️ Total: ₹ 51.65 cr
ತೆಲುಗಿನ ಕಾರ್ತಿಕೇಯ 2 ಪ್ಯಾನ್ ಇಂಡಿಯಾ ಸಿನಿಮಾ ಕೂಡ ಮೆಚ್ಚುಗೆಗೆ ಪಾತ್ರವಾಗಿ ಹಿಂದಿಯಲ್ಲಿ 30 ಕೋಟಿ ಬಾಚಿಕೊಂಡಿತ್ತು. ಆದ್ರೀಗ ಕಾಂತಾರ 50 ಕೋಟಿ ಕಲೆಕ್ಷನ್ ದಾಟಿ ಆ ದಾಖಲೆಯನ್ನು ಮುರಿದಿದೆ. ಕಾಂತಾರದ ಒಟ್ಟಾರೆ ಕಲೆಕ್ಷನ್ ಬಗ್ಗೆ ಹೇಳುವುದಾದರೆ ಬಿಡುಗಡೆ ಆದಾಗಿನಿಂದ ಇಲ್ಲಿಯವರೆಗೂ ಎಲ್ಲಾ ಭಾಷೆಯೂ ಸೇರಿ ಸುಮಾರು 350 ಕೋಟಿ ರೂ. ಗಳಿಸಿದೆ ಎಂದು ಹೇಳಲಾಗುತ್ತಿದೆ.
ಕೆಜಿಎಫ್ ಚಾಪ್ಟರ್ 1 ದಾಖಲೆ ಮುರಿದ ಕಾಂತಾರ: ಹಿಂದಿಯಲ್ಲಿ ಕೆಜಿಎಫ್ 1 ಚಿತ್ರ 50 ಕೋಟಿ ಗಳಿಸಿ ದಾಖಲೆ ಬರೆದಿತ್ತು. ಸದ್ಯ ಈ ದಾಖಲೆಯನ್ನು ಕೂಡ ಕಾಂತಾಂರ ಮುರಿದು ಮುನ್ನುಗ್ಗುತ್ತಿದೆ.
ಇದನ್ನೂ ಓದಿ: ಪಂಜುರ್ಲಿ ದೈವದ ವೇಷ ಧರಿಸಿ ರೀಲ್ಸ್ - ಧರ್ಮಸ್ಥಳಕ್ಕೆ ಬಂದು ಕ್ಷಮೆ ಯಾಚಿಸಿದ ಶ್ವೇತಾ ರೆಡ್ಡಿ