ಭಾರತ ಚಿತ್ರರಂಗಕ್ಕೆ ಕೆಜಿಎಫ್ ಎಂಬ ಅತ್ಯುತ್ತಮ ಚಿತ್ರ ನೀಡಿರುವ ಹೊಂಬಾಳೆ ಫಿಲಂಸ್ನ ವಿಜಯ್ ಕಿರಗಂದೂರು ಅವರು ನಿರ್ಮಿಸಿರುವ ಹಾಗೂ ರಿಷಬ್ ಶೆಟ್ಟಿ ನಾಯಕರಾಗಿ ನಟಿಸಿ, ನಿರ್ದೇಶಿಸಿರುವ 'ಕಾಂತಾರ' ಚಿತ್ರ ಸದ್ಯ ಟಾಕ್ ಆಫ್ ದ ನ್ಯೂಸ್. ಹಾಡು, ಟ್ರೈಲರ್ನಿಂದಲೇ ಕನ್ನಡ ಚಿತ್ರರಂಗದಲ್ಲಿ ಸುದ್ದಿಯಾಗಿರುವ ಕಾಂತಾರ ಸಿನಿಮಾ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ.
ಕಥೆಯಲ್ಲಿ ಕಂಬಳ ಇರಲಿಲ್ಲ. ಕಥೆಯನ್ನು ಡೆವಲಪ್ ಮಾಡುವ ವೇಳೆ ಕಂಬಳ ಎನ್ನೋ ಪ್ರಮುಖ ಅಂಶ ಸೇರಿಕೊಂಡಿತು. ಬೈಂದೂರಿಗೆ ಭೇಟಿ ನೀಡಿದಾಗ ಕೋಣ ಓಡಿಸುತ್ತೇನೆ ಎಂದು ರಿಷಬ್ ಶೆಟ್ಟಿ ವಿಷಯ ಆರಂಭಿಸಿದರು. ಅವರಿಂದ ಈ ಕೆಲಸ ಆಗುತ್ತೋ ಇಲ್ಲವೋ ಎಂಬ ಸಂಶಯ ಸಹಜವಾಗಿ ಚಿತ್ರತಂಡ ಮತ್ತು ಸ್ಥಳೀಯರಿಗೆ ಇತ್ತು. ಕಂಬಳದ ನಿಪುಣರಲ್ಲಿ ಮಾಹಿತಿ ಪಡೆದ ರಿಷಬ್ ಕಂಬಳವನ್ನು ಒಮ್ಮೆ ನೋಡಿ ಕಣ್ತುಂಬಿಕೊಂಡರು. ಕೋಣ ಹಿಡಿಯಲು ಮೊದಲು ಹೋದ ಸ್ಥಳೀಯರು ಕೂಡ ಬಿದ್ದು ಎದ್ದರು. ಬಳಿಕ ಕೋಣಗಳ ಬಳಿ ತೆರಳಿದ ರಿಷಬ್ ಶೆಟ್ಟಿ ಅವರಿಗೆ ಸಹಜವಾಗಿ ಭಯ ಇದ್ದರೂ ತೋರಿಸಿಕೊಂಡಿರಲಿಲ್ಲ.
- " class="align-text-top noRightClick twitterSection" data="">
ಮೊದಲ ಬಾರಿ ಬಿದ್ದರೂ ಪ್ರಯತ್ನ ಕೈ ಬಿಡಲಿಲ್ಲ. ಬಳಿಕ ದಿನದಲ್ಲಿ 30-35 ಬಾರಿ ಕಂಬಳ ಓಡಿಸಿ ಯಶಸ್ವಿಯಾಗಿದ್ದಾರೆ. ಪ್ರತೀ ಆ್ಯಂಗಲ್ಗಳಲ್ಲೂ ದೃಶ್ಯ ಸೆರೆಹಿಡಿಯಲು ಸುಮಾರು 30-35 ಕಂಬಳ ಗದ್ದೆಗೆ ಇಳಿದಿದ್ದಾರೆ. ಸಾಂಪ್ರದಾಯಿಕ ಕಂಬಳ ಓಡಿಸುವವರಿಗಿಂತಲೂ ಅತ್ಯುತ್ತಮವಾಗಿ ರಿಷಬ್ ಶೆಟ್ಟಿ ಕೋಣ ಓಡಿಸಿದ್ದಾರೆಂದು ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸ್ವತಃ ನಿರ್ದೇಶಕ ಹಾಗು ನಟ ರಿಷಬ್ ಶೆಟ್ಟಿ ಮತ್ತು ಈ ಸಿನಿಮಾಕ್ಕೆ ಕ್ಯಾಮರಮ್ಯಾನ್ ಆಗಿ ಕೆಲಸ ಮಾಡಿರೋ ಅರವಿಂದ್ ಕಶ್ಯಪ್ ಕೋಣಗಳ ಜೊತೆ ಕಂಬಳ ಕ್ರೀಡೆ ಶೂಟಿಂಗ್ ಮಾಡಿದ ರೋಚಕ ಕ್ಷಣಗಳನ್ನು ಹಂಚಿಕೊಂಡರು.
ಕರಾವಳಿ ಸೊಗಡಿನ ಕಂಬಳ ಕ್ರೀಡೆ ಜೊತೆಗೆ ಊರು ಮತ್ತು ಅರಣ್ಯ ಇಲಾಖೆಯ ಬಗೆಗಿನ ಕಥೆ ಆಧರಿಸಿರೋ ಕಾಂತಾರ ಚಿತ್ರದ ಸಿನಿಮಾ ಪ್ರೇಮಿಗಳಲ್ಲಿ ಕುತೂಹಲ ಮೂಡಿಸಿದೆ. ಬಹುತೇಕ ಕರಾವಳಿ ಭಾಗದಲ್ಲಿ ಚಿತ್ರೀಕರಣಗೊಂಡಿರುವ 'ಕಾಂತಾರ' ಚಿತ್ರದಲ್ಲಿ ರಿಷಬ್ ಶೆಟ್ಟಿ, ಕಿಶೋರ್, ಸಪ್ತಮಿ ಗೌಡ, ಅಚ್ಯುತ್ ಕುಮಾರ್ ಮತ್ತು ಪ್ರಮೋದ್ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಾಂತಾರ ಚಿತ್ರಕ್ಕೆ ಅಜನೀಶ್ ಬಿ ಲೋಕನಾಥ್ ಸಂಗೀತ ಮತ್ತು ಅರವಿಂದ್ ಎಸ್ ಕಶ್ಯಪ್ ಅವರ ಛಾಯಾಗ್ರಹಣವಿದೆ. ಹೊಂಬಾಳೆ ಫಿಲಂಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಪಕ ವಿಜಯ್ ಕಿರಂಗದೂರ್ ಈ ಚಿತ್ರ ನಿರ್ಮಿಸಿದ್ದಾರೆ. ಸದ್ಯ ಟ್ರೈಲರ್ನಿಂದ ಪ್ರೇಕ್ಷಕರ ನಿರೀಕ್ಷೆ ಹೆಚ್ಚಿಸಿರುವ 'ಕಾಂತಾರ' ಸಿನಿಮಾ ಸೆಪ್ಟೆಂಬರ್ 30 ರಂದೇ ದೇಶಾದ್ಯಂತ ತೆರೆ ಕಾಣುತ್ತಿದೆ.
ಇದನ್ನೂ ಓದಿ: ಝೀ5 ಒಟಿಟಿ ಟ್ರೇಡಿಂಗ್ ಟಾಪ್ 3 ಸ್ಥಾನದಲ್ಲಿ ವಿಕ್ರಾಂತ್ ರೋಣ.. ರಾ ರಾ ರಕ್ಕಮ್ಮ ಹಾಡಿಗೆ ಹೆಜ್ಜೆ ಹಾಕಿದವ್ರಿಗೆ 25,000 ರೂ.
ಚಿತ್ರದ ಟ್ರೈಲರ್ ಕರುನಾಡ ಸಂಸ್ಕೃತಿಯ ಜೊತೆಗೆ ಮಾನವ ಮತ್ತು ಪ್ರಕೃತಿ ಸಂಘರ್ಷದ ಕುರಿತ ಕಥೆಯಾಗಿರರೋ ಕೌತುಕವನ್ನು ಒಳಗೊಂಡಿದೆ. ಮಂಗಳೂರು ಸೊಗಡಿನ ಕ್ರೀಡೆ ಕಂಬಳ, ಭೂತರಾಧನೆ ಸೇರಿದಂತೆ ಹಲವು ಇಂಟ್ರಸ್ಟಿಂಗ್ ವಿಷಯಗಳು ಟ್ರೈಲರ್ನಲ್ಲಿ ಇವೆ. ಸದ್ಯ ಈ ಸಿನಿಮಾ ಸ್ಯಾಂಡಲ್ವುಡ್ನಲ್ಲಿ ಕುತೂಹಲ ಮೂಡಿಸಿದೆ.