ಲೋನಾವಾಲಾ (ಮಹಾರಾಷ್ಟ್ರ): ಭಾರತದ ಸ್ಟಾರ್ ಕ್ರಿಕೆಟಿಗ ಕೆಎಲ್ ರಾಹುಲ್ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಅವರು ಸೋಮವಾರ ತಮ್ಮ ಗೆಳತಿ ಅತಿಯಾಶೆಟ್ಟಿ ಅವರನ್ನು ವಿವಾಹ ಆಗಲಿದ್ದಾರೆ, ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ ಪುಣೆಯ ಲೋನಾವಾಲಾದಲ್ಲಿ ಸಂಬಂಧಿಕರು, ಸ್ನೇಹಿತರ ಸಮ್ಮುಖದಲ್ಲಿ ಸಪ್ತಪದಿ ತುಳಿಯಲಿದ್ದಾರೆ. ಅಥಿಯಾ ಬಾಲಿವುಡ್ನ ಖ್ಯಾತ ನಟ ಸುನಿಲ್ ಶೆಟ್ಟಿ ಅವರ ಮಗಳು ಎಂಬುದು ಗಮನಾರ್ಹ.
ಭಾನುವಾರ ಅಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಅವರಿಗಾಗಿ ಸಂಗೀತ ಸಮಾರಂಭ ಕೂಡಾ ಆಯೋಜಿಸಲಾಗಿತ್ತು. ಅತಿಥಿಗಳಿಗೆ ಮೊಬೈಲ್ ಫೋನ್ ಅಥವಾ ಕ್ಯಾಮೆರಾಗಳನ್ನು ಕೊಂಡೊಯ್ಯಲು ಅವಕಾಶ ಇರಲಿಲ್ಲ. ಇದರ ಹೊರತಾಗಿಯೂ, ಅದರ ಕಾರ್ಯದ ಕೆಲವು ವಿವರಗಳು ಮತ್ತು ವಿಡಿಯೋಗಳು ಮುನ್ನೆಲೆಗೆ ಬಂದಿವೆ.
ಅರಿಶಿನ ಶಾಸ್ತ್ರ, ಮದುವೆ ಮತ್ತಿತರ ಕಾರ್ಯಕ್ರಮಗಳು: ವರದಿ ಪ್ರಕಾರ, ಅಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಸೋಮವಾರ ಸಂಜೆ 4 ಗಂಟೆಗೆ ತಮ್ಮ ಕುಟುಂಬಗಳು ಮತ್ತು ಕೆಲವು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಮೂರು ಗಂಟು ಹಾಕಲಿದ್ದಾರೆ ಎಂದು ತಿಳಿದು ಬಂದಿದೆ. ಮದುವೆ ಸಮಾರಂಭದಲ್ಲಿ 70 - 100 ಜನ ಸೇರಿದ್ದಾರೆ ಎಂಬ ಸುದ್ದಿ ನಿರಂತರವಾಗಿ ಬರುತ್ತಿದೆ. ಮದುವೆಯ ನಂತರ, ಅಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್, ಸೂಪರ್ ಸ್ಟಾರ್ ಸುನಿಲ್ ಶೆಟ್ಟಿ ಅವರೊಂದಿಗೆ ಸಂಜೆ 6.30 ಕ್ಕೆ ಮಾಧ್ಯಮಗಳೊಂದಿಗೆ ಮಾತನಾಡಲಿದ್ದಾರೆ.
ವಿಶೇಷ ಭದ್ರತೆ: ಇತ್ತೀಚೆಗಷ್ಟೇ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಸುನೀಲ್ ಶೆಟ್ಟಿ ಅವರ ಖಂಡಾಲ ಬಂಗಲೆಯಲ್ಲಿ ನಡೆಯುತ್ತಿರುವ ಮದುವೆ ಸಮಾರಂಭ ಸ್ಪಷ್ಟವಾಗಿ ಗೋಚರಿಸುತ್ತಿದೆ. ಬಂಗಲೆಯನ್ನು ಮಧುವಣಗಿತ್ತಿಯಂತೆ ಅಲಂಕರಿಸಲಾಗಿದೆ. ಸಂಗೀತ ಕಾರ್ಯಕ್ರಮದಲ್ಲಿ ಅತಿಥಿಗಳು ನೃತ್ಯ ಮಾಡುವುದನ್ನು ಮತ್ತು ರುಚಿಕರವಾದ ಆಹಾರವನ್ನು ಸೇವಿಸುತ್ತಿರುವುದನ್ನು ನೋಡಬಹುದಾಗಿದೆ. ಸುನೀಲ್ ಶೆಟ್ಟಿ ಸಮಾರಂಭದಲ್ಲಿ ಗೌಪ್ಯತೆಯ ಬಗ್ಗೆ ವಿಶೇಷ ಕಾಳಜಿ ವಹಿಸಿದ್ದಾರೆ. ಭದ್ರತೆಯೂ ಅಷ್ಟೇ ಅಚ್ಚುಕಟ್ಟಾಗಿ ಮಾಡಲಾಗಿದೆ.
ಅಥಿಯಾ ಸಂಗೀತ ಸಮಾರಂಭ: ಅಥಿಯಾ ಶೆಟ್ಟಿ ಮತ್ತು ಕೆಎಲ್ ರಾಹುಲ್ ಅವರ ಸಂಗೀತ ಸಮಾರಂಭದಲ್ಲಿ ಹಲವಾರು ಸೆಲೆಬ್ರಿಟಿಗಳು ಪ್ರದರ್ಶನ ನೀಡಿದ್ದಾರೆ. ಸಂಗೀತ ಸಮಾರಂಭದಲ್ಲಿ ಸುನೀಲ್ ಶೆಟ್ಟಿ ಅವರ ಪತ್ನಿ ಮತ್ತು ಅವರ ಪುತ್ರ ಅಹಾನ್ ಶೆಟ್ಟಿ ಸಖತ್ ಡ್ಯಾನ್ಸ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಅಥಿಯಾ ಶೆಟ್ಟಿ ಅವರ ಆಪ್ತ ಗೆಳತಿ ಆಕಾಂಕ್ಷಾ ರಂಜನ್ ಕಪೂರ್ ಕೂಡ ಉತ್ತಮ ಪ್ರದರ್ಶನ ನೀಡಿದ್ದಾರೆ ಎಂದು ವರದಿಯಾಗಿದೆ.
ಸಾರ್ವಜನಿಕರಿಗೆ ಈ ವಿಶೇಷ ಭರವಸೆ ನೀಡಿದ ಸುನೀಲ್ ಶೆಟ್ಟಿ: ಕೆಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ ಚಿತ್ರಗಳಿಗಾಗಿ ಕಾಯುತ್ತಿರುವ ಅಭಿಮಾನಿಗಳಿಗೆ ಸುನಿಲ್ ಶೆಟ್ಟಿ ಗುಡ್ ನ್ಯೂಸ್ ನೀಡಿದ್ದಾರೆ. ಅಥಿಯಾ ಮತ್ತು ರಾಹುಲ್ ಸೋಮವಾರವೇ ವಿವಾಹವಾಗಲಿದ್ದಾರೆ. ಮದುವೆ ಬಳಿಕ ಅಥಿಯಾ ಮತ್ತು ರಾಹುಲ್ ಮಾಧ್ಯಮದ ಮುಂದೆ ಬರಲಿದ್ದಾರೆ ಎಂದು ಸುನೀಲ್ ಶೆಟ್ಟಿ ಖಚಿತ ಪಡಿಸಿದ್ದಾರೆ.
ಓದಿ: ರಿಷಬ್ ಪಂತ್ ಬೇಗ ಗುಣಮುಖರಾಗಲೆಂದು ಮಹಾಕಾಳೇಶ್ವರನಿಗೆ ಭಾರತೀಯ ಕ್ರಿಕೆಟಿಗರ ವಿಶೇಷ ಪೂಜೆ