ETV Bharat / entertainment

ಬಿಡುಗಡೆಯಾಯ್ತು 'ಸ್ಥಬ್ಧ' ಚಿತ್ರದ ಟ್ರೈಲರ್​​; ಸಸ್ಪೆನ್ಸ್​​ ಜೊತೆಗೆ ಥ್ರಿಲ್ಲರ್​ ಅನುಭವ

author img

By

Published : May 23, 2023, 3:33 PM IST

ಈ ಚಿತ್ರದಲ್ಲಿ ನಟಿ ಹರ್ಷಿಕಾ ಪೂಣಚ್ಛ ಅವರಿಗೆ ಇದೇ ಮೊದಲ ಬಾರಿಗೆ ತಂದೆಯಾಗಿ ನಟ ರಾಘವೇಂದ್ರ ರಾಜ್​ಕುಮಾರ್​ ಈ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Kannada Movie sthabdha Movie Trailer Release

ಸ್ಯಾಂಡಲ್​​ವುಡ್ ನಲ್ಲಿ ಹಾರರ್ ಕಥೆ ಆಧಾರಿತ ಚಿತ್ರಗಳು ಸಿನಿಮಾ‌ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗುತ್ತಿವೆ. ಇದೀಗ ಯುವ ನಟ ಪ್ರತಾಪ್ ಸಿಂಹ ನಾಯಕರಾಗಿ ನಟಿಸಿರುವ 'ಸ್ಥಬ್ಧ' ಚಿತ್ರ ಸೈಲೆಂಟ್ ಆಗಿ ಚಿತ್ರೀಕರಣ ಮುಗಿಸಿದ್ದು, ಬಿಡುಗಡೆ ಸಜ್ಜಾಗಿದೆ. ಇದೀಗ 'ಸ್ಥಬ್ಧ' ಚಿತ್ರದ ಟ್ರೇಲರ್ ಹಾಗೂ ಹಾಡುಗಳ ಬಿಡುಗಡೆ ಆಗಿದ್ದು, ಪ್ರೇಕ್ಷಕರ ಮನಸೆಳೆದಿದೆ. ರಾಘವೇಂದ್ರ ರಾಜಕುಮಾರ್ ಈ ಸಿನಿಮಾದ ಟ್ರೈಲರ್ ಬಿಡುಗಡೆ ಮಾಡುವ ಮೂಲಕ ಈ ಹೊಸಬರ ಚಿತ್ರತಂಡಕ್ಕೆ ಒಳ್ಳೆಯದು ಆಗಲಿ ಅಂತಾ ಹಾರೈಯಿಸಿದರು.

ಇದೇ ವೇಳೆ ಮಾತನಾಡಿದ ರಾಘವೇಂದ್ರ ರಾಜ್‌ ಕುಮಾರ್ ಅವರು, ಪ್ರತಾಪ್ ಸಿಂಹ ನಾಯಕರಾಗಿ ನಟಿಸಿರುವ ಈ ಚಿತ್ರದ ಟ್ರೇಲರ್ ಹಾಗೂ ಹಾಡುಗಳು ಚೆನ್ನಾಗಿವೆ. ನಾನು ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದೇನೆ. ಚಿತ್ರಕ್ಕೆ ಒಳ್ಳೆಯದಾಗಲಿ ಎಂದರು. ಚಿತ್ರದಲ್ಲಿ ನಟಿ ಹರ್ಷಿಕಾ ಪೂಣಚ್ಚ ಅವರ ತಂದೆ ಪಾತ್ರದಲ್ಲಿ ರಾಘವೇಂದ್ರ ರಾಜ್​​ ಕುಮಾರ್​ ಕಾಣಿಸಿಕೊಂಡಿದ್ದಾರೆ.

ನಂತರ ಯುವ ನಟ‌ ಪ್ರತಾಪ್ ಸಿಂಹ ಮಾತನಾಡಿ‌, ಸ್ಥಬ್ಧ ಇದೊಂದು ಭ್ರಮೆಯ ಸುತ್ತ ನಡೆಯುವ ಕಥೆ. ಹಾರರ್, ಸಸ್ಪೆನ್ಸ್ ಥ್ರಿಲ್ಲರ್ ಎನ್ನಬಹುದು. 45 ‌ದಿನಗಳ ಕಾಲ ಬೆಂಗಳೂರು, ಮಂಗಳೂರು, ಉಡುಪಿಯಲ್ಲಿ ಚಿತ್ರೀಕರಣ ‌ನಡೆದಿದೆ. ಹರ್ಷಿಕಾ ಪೂಣಚ್ಛ, ರಾಘವೇಂದ್ರ ರಾಜಕುಮಾರ್, ಪ್ರಿಯಾಂಕ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ನಿರ್ದೇಶಕ ಲಾಲಿ ರಾಘವ ಸೇರಿದಂತೆ ಎಲ್ಲಾ ತಂತ್ರಜ್ಞರ ಕಾರ್ಯವೈಖರಿ ಚೆನ್ನಾಗಿದೆ ಎಂದರು.

ಯುವ ನಟ ಪ್ರತಾಪ್ ಸಿಂಹ- ಹರ್ಷಿಕಾ
ಯುವ ನಟ ಪ್ರತಾಪ್ ಸಿಂಹ- ಹರ್ಷಿಕಾ

ಯುವ ನಟ ಪ್ರತಾಪ್ ಸಿಂಹಗೆ ನಟಿ ಹರ್ಷಿಕಾ ಪೂಣಚ್ಚ ಜೋಡಿಯಾಗಿದ್ದಾರೆ‌. ಇವರೊಂದಿಗೆ ನಟ ಭಜರಂಗಿ ಪ್ರಸನ್ನ ಕೂಡ ಈ‌ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಈ ಚಿತ್ರದ ನಿರ್ದೇಶಕ ಲಾಲಿ ರಾಘವ ಮಾತನಾಡಿ, ನಿರ್ಮಾಪಕ ವಿದ್ಯಾ ಸಾಗರ್ ನಮ್ಮಣ್ಣನ ಸ್ನೇಹಿತರು. ಚಿತ್ರದ ಕಥೆ ಕೇಳಿದ ಅವರು, ನಿರ್ಮಾಣಕ್ಕೆ ಮುಂದಾದರು. ನಮ್ಮ ತಂಡದ ಸಹಕಾರದಿಂದ ಚಿತ್ರ ಈಗ ಬಿಡುಗಡೆ ಹಂತಕ್ಕೆ ಬಂದಿದೆ. ಎಲ್ಲರಿಗೂ ಧನ್ಯವಾದ ಎಂದು ಕೃತಜ್ಞತೆ ತಿಳಿಸಿದರು. ಈ ಹಿಂದೆ ತಮಿಳಿನಲ್ಲಿ ನಿರ್ದೇಶನ ಮಾಡಿದ್ದ ಲಾಲಿ ರಾಘವ ಅವರ ಮೊದಲ ಕನ್ನಡ ಸಿನಿಮಾ ಇದಾಗಿದೆ.

ಸಾಯಿಸಾಗರ್ ಫಿಲ್ಮ್ ಫ್ಯಾಕ್ಟರಿ ಲಾಂಛನದಲ್ಲಿ ಡಾ||ವಿದ್ಯಾಸಾಗರ್ ಒಂದೊಳ್ಳೆ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಚಿತ್ರಕ್ಕೆ ಆರವ್ ರಿಷಿಕ್ ಸಂಗೀತ ನೀಡಿದ್ದು, ಪಿ.ವಿ. ಆರ್ ಸ್ವಾಮಿ ಕ್ಯಾಮರಾ ವರ್ಕ್ ಮಾಡಿದ್ದಾರೆ. ಬಹುತೇಕ ಚಿತ್ರೀಕರಣ ಮುಗಿಸಿರೋ ಸ್ಥಬ್ಧ ಸಿನಿಮಾವನ್ನು ಜೂನ್ 9 ರಂದು ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ.

'ಸ್ಥಬ್ಧ' ಚಿತ್ರದ ಟ್ರೈಲರ್ ಬಿಡುಗಡೆ
'ಸ್ಥಬ್ಧ' ಚಿತ್ರದ ಟ್ರೈಲರ್ ಬಿಡುಗಡೆ

ಚಿತ್ರದ ಕುರಿತು: ಈ ಚಿತ್ರವೂ ಸಸ್ಪೆನ್​ ಥ್ರಿಲ್ಲರ್​ ಜೊತೆ ಪ್ರೇಮಕಥೆಯನ್ನು ಹೊಂದಿದೆ. ವ್ಯಕ್ತಿಯೊಬ್ಬ ತಾನೊಬ್ಬನೇ ಎಂದು ಭಾವಿಸಿ ಭ್ರಮಲೋಕದಲ್ಲಿ ಜೀವಿಸುವ ಇಲ್ಯೂಶನ್​ ಕಥಾನಕವನ್ನು ಇದು ಹೊಂದಿದೆ. ಈ ವೇಳೆ ನಕಾರಾತ್ಮಕ ಶಕ್ತಿ ಈತನೆಡೆಗೆ ಹರಿದು ಬಂದಾಗ ಏನಾಗುತ್ತದೆ ಎನ್ನುವುದನ್ನು ಈ ಚಿತ್ರದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ನಮ್ಮ ಹುಡುಗರನ್ನ ಮುಟ್ಟಿದ್ರೆ ನಾನು ಮೆಂಟಲ್ ಆಗ್ತೀನಿ : ಸದ್ದು ಮಾಡ್ತಿದೆ ಭೀಮ ಖಡಕ್​ ಡೈಲಾಗ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.