ETV Bharat / entertainment

ವಿಜಯದಶಮಿಯಂದು 'ಗರುಡ ಪುರಾಣ' ಟ್ರೇಲರ್ ಬಿಡುಗಡೆ- ನೋಡಿ - ಗರುಡ ಪುರಾಣ

ಟೀಸರ್​ನಿಂದ ಕುತೂಹಲ ಹೆಚ್ಚಿಸಿದ್ದ ಮಂಜುನಾಥ್​​ ಬಿ.ನಾಗಬಾ ನಿರ್ದೇಶನದ 'ಗರುಡ ಪುರಾಣ' ಚಿತ್ರದ ಟ್ರೇಲರ್ ಇಂದು ಬಿಡುಗಡೆಯಾಯಿತು.

"ಗರುಡ ಪುರಾಣ" ಟ್ರೇಲರ್ ಔಟ್​
"ಗರುಡ ಪುರಾಣ" ಟ್ರೇಲರ್ ಔಟ್​
author img

By ETV Bharat Karnataka Team

Published : Oct 24, 2023, 6:00 PM IST

ನಾಡಿನೆಲ್ಲೆಡೆ ದಸರಾ ಹಾಗು ವಿಜಯದಶಮಿ ಹಬ್ಬದ ಸಂಭ್ರಮ ಮನೆ ಮಾಡಿದೆ‌. ಈ ಶುಭದಿನದಂದೇ ಮಂಜುನಾಥ್ ಬಿ.ನಾಗಬಾ ಅವರು ಕಥೆ, ಚಿತ್ರಕಥೆ ಬರೆದು ಸಂಕಲನ ಮಾಡಿ ನಿರ್ದೇಶಿಸಿರುವ 'ಗರುಡ ಪುರಾಣ' ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದೆ.

  • " class="align-text-top noRightClick twitterSection" data="">

ಟ್ರೇಲರ್​​ ಸಾಕಷ್ಟು ಕುತೂಹಲ ಮೂಡಿಸಿದೆ. ಇತ್ತೀಚೆಗಷ್ಟೇ ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವರು ಈ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದರು. ಟೀಸರ್ ಕೂಡ ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗಿ ಮೆಚ್ಚುಗೆ ಪಡೆದುಕೊಂಡಿತ್ತು. ಸೂಪರ್​ ಹಿಟ್​ ಸಿನಿಮಾ 'ಕಾಂತಾರ' ಸೇರಿದಂತೆ ಅನೇಕ ಚಿತ್ರಗಳಿಗೆ ಆನ್‌ಲೈನ್​ ಎಡಿಟರ್​​ ಆಗಿ ಕಾರ್ಯನಿರ್ವಹಿಸಿರುವ ಮಂಜುನಾಥ್​​ ಬಿ.ನಾಗಬಾ ಈ ಚಿತ್ರದ ಮೂಲಕ ನಿರ್ದೇಶಕರಾಗಿ ಚಿತ್ರರಂಗ ಪ್ರವೇಶಿಸಿದ್ದಾರೆ.

'ಗರುಡ ಪುರಾಣ' ಟ್ರೇಲರ್ ಔಟ್​

ಚಿತ್ರದ ಒಂದು ಭಾಗಕ್ಕೆ ಗರುಡ ಪುರಾಣದ ಕೆಲವು ಅಂಶಗಳು ಹೊಂದಿಕೆಯಾಗುತ್ತವೆ. ಹಾಗಾಗಿ ಚಿತ್ರಕ್ಕೆ ಗರುಡ ಪುರಾಣ ಎಂದು ಶೀರ್ಷಿಕೆ ಇಡಲಾಗಿದೆ. ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರವಿರುವ ಚಿತ್ರದ ನಾಯಕನಾಗಿ ಮಂಜುನಾಥ್ ಬಿ.ನಾಗಬಾ ನಟಿಸಿದ್ದಾರೆ. ದಿಶಾ ಶೆಟ್ಟಿ ನಾಯಕಿಯಾಗಿದ್ದಾರೆ. ಭಜರಂಗಿ ಖ್ಯಾತಿಯ ಚೆಲುವರಾಜು, ಸಂತೋಷ್ ಕರ್ಕಿ, ಕೆಂಚಣ್ಣ, ರಾಜಕುಮಾರ್, ಮಹೇಂದ್ರ ಗೌಡ ಮುಂತಾದವರು ತಾರಾಬಳಗದಲ್ಲಿದ್ದಾರೆ.

'ಗರುಡ ಪುರಾಣ' ಸಿನಿಮಾ

27 ಪ್ರೇಮ್​ ಕ್ರಿಯೇಷನ್ಸ್ ಲಾಂಛನದಲ್ಲಿ ಸಿಂಧು ಕೆ.ಎಂ. ಮತ್ತು ಬಿ.ಎಲ್.ಯೋಗೇಶ್ ಕುಮಾರ್ ನಿರ್ಮಿಸಿರುವ ಚಿತ್ರಕ್ಕೆ ಪುನೀತ್ ಆರ್ಯ ಹಾಡುಗಳನ್ನು ಬರೆದಿದ್ದಾರೆ. ರಾಕೇಶ್ ಆಚಾರ್ಯ ಸಂಗೀತ ನೀಡಿದ್ದಾರೆ. ಸುನೀಲ್ ನರಸಿಂಹಮೂರ್ತಿ 'ಗರುಡ ಪುರಾಣ' ಕ್ಯಾಮರಾ ವರ್ಕ್ ಮಾಡಿದ್ದಾರೆ. ನವೆಂಬರ್ 3ರಂದು ಸಿನಿಮಾ ತೆರೆಗೆ ಬರಲಿದೆ.

ಸಿನಿಮಾ ಟೀಸರ್​ ರಿಲೀಸ್ ದಿನ ಚಿತ್ರ ಕುರಿತು ಮಾತನಾಡಿದ್ದ ಮಂಜುನಾಥ್ ಬಿ.ನಾಗಬಾ, ನಾನು ಕಾಂತಾರ ಸೇರಿದಂತೆ 18 ಚಿತ್ರಗಳಿಗೆ ಆನ್‌ಲೈನ್ ಎಡಿಟರ್ ಆಗಿ ಕಾರ್ಯ ನಿರ್ವಹಿಸಿದ್ದೇನೆ. ಕಾಂತಾರ ನನಗೆ ಹೆಸರು ತಂದುಕೊಟ್ಟ ಸಿನಿಮಾ. ಗರುಡ ಪುರಾಣ ಸಸ್ಪೆನ್ಸ್ ಥ್ರಿಲ್ಲರ್. ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲೇಬೇಕು ಎಂಬ ಅಂಶ ನಮ್ಮ ಸಿನಿಮಾದಲ್ಲಿರುವುದರಿಂದ ಗರುಡ ಪುರಾಣ ಎಂದು ಹೆಸರಿಟ್ಟಿದ್ದೇವೆ‌. ಮೂರು ಆಯಾಮಗಳಲ್ಲಿ ಕಥೆ ಸಾಗುತ್ತದೆ. ಚಿತ್ರೀಕರಣ ಮುಕ್ತಾಯವಾಗಿದೆ ಎಂದು ತಿಳಿಸಿದ್ದರು.

'ಗರುಡ ಪುರಾಣ' ಸಿನಿಮಾ

ಇದನ್ನೂ ಓದಿ: ಟಗರು ಪಲ್ಯ 'ಸಂಬಂಜ ಅನ್ನೋದು ದೊಡ್ದು ಕನಾ' ಸಾಂಗ್ ಔಟ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.