ETV Bharat / entertainment

ಗಾಳಿಪಟ 2 ಹೊಸದಾಖಲೆ.. ಬಿಡುಗಡೆಯಾದ ಮೊದಲ ದಿನವೇ ಬಾಕ್ಸ್ ಆಫೀಸ್​​ನಲ್ಲಿ ಲೂಟಿ ಮಾಡಿದ ಗೋಲ್ಡನ್​ ಜೋಡಿ - ganesh starrer gaalipata 2

ಗಣೇಶ್ ಅಭಿನಯದ ಚಿತ್ರವೊಂದು ಫಸ್ಟ್ ಟೈಮ್ ಅಮೆರಿಕ, ಯೂರೋಪ್, ಆಸ್ಟ್ರೇಲಿಯಾ ಸೇರಿದಂತೆ ವಿದೇಶಗಳಲ್ಲಿ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಸಿನಿಮಾ‌ ಪ್ರಿಯರ ಮೆಚ್ಚುಗೆ ಪಾತ್ರವಾಗಿದೆ. ಇದಲ್ಲದೇ ಅತಿ ಹೆಚ್ಚು ಶೋಗಳನ್ನು ಕಾಣುವ ಮೂಲಕ ಗಾಳಿಪಟ 2 ಹೊಸದಾಖಲೆ ಮಾಡಿದೆ.

Kannada movie Gaalipata 2 box office collection
ಗಾಳಿಪಟ 2 ಚಿತ್ರದ ಫೋಸ್ಟರ್​
author img

By

Published : Aug 13, 2022, 1:52 PM IST

ಗೋಲ್ಡನ್ ಸ್ಟಾರ್ ಗಣೇಶ್‌ ಮತ್ತು ಯೋಗರಾಜ್‌ ಭಟ್‌ ಕಾಂಬಿನೇಷನ್‌ನಲ್ಲಿ ತೆರೆಕಂಡ ಗಾಳಿಪಟ 2 ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಸಖತ್​ ಸುದ್ದು ಮಾಡುತ್ತಿದೆ. 14 ವರ್ಷಗಳ ಹಿಂದೆ ತೆರೆಕಂಡಿದ್ದ ಗಾಳಿಪಟ ಚಿತ್ರದ ಮುಂದುವರಿದ ಭಾಗವೇ ಗಾಳಿಪಟ 2 ಚಿತ್ರವಾಗಿದ್ದು ಮೊದಲ ಭಾಗಕ್ಕಿಂತಲೂ ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡಿದೆ ಎನ್ನಲಾಗುತ್ತಿದೆ. ಮುಂಗಾರು ಮಳೆ ಚಿತ್ರದ ಮ್ಯಾಜಿಕ್​ ಜೋಡಿ ಅಂತಾ ಬಿರುದಾಂಕಿತರಾಗಿರುವ ನಟ ಗಣೇಶ್ ಹಾಗೂ ನಿರ್ದೇಶಕ ಯೋಗರಾಜ್ ಭಟ್ ಈ ಚಿತ್ರದ ಮೂಲಕ ಮತ್ತೊಂದು ಮೈಲಿಗಲ್ಲು ನೆಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.

Kannada movie Gaalipata 2 box office collection
ಗಾಳಿಪಟ 2 ಚಿತ್ರದ ಫೋಸ್ಟರ್​

ಕರ್ನಾಟಕದಲ್ಲಿ 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾದ ಗಾಳಿಪಟ 2 ಸಿನಿಮಾ ತೆರೆಕಂಡ ಎಲ್ಲ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಂಡಿದೆ. ಇನ್ನು ಕರ್ನಾಟಕ ಅಲ್ಲದೇ ಮುಂಬೈ, ನವದೆಹಲಿ ಸೇರಿದಂತೆ ಹೊರ ರಾಜ್ಯಗಳಲ್ಲಿ 200 ಚಿತ್ರಮಂದಿರಗಳಲ್ಲಿ ಗಾಳಿಪಟ 2 ಹಾರಾಟ ಮಾಡಿದೆ.

ಇದರ ಜೊತೆಗೆ ಫಸ್ಟ್ ಟೈಮ್ ಗಣೇಶ್ ಅಭಿನಯದ ಚಿತ್ರವೊಂದು ಅಮೆರಿಕ, ಯೂರೋಪ್, ಆಸ್ಟ್ರೇಲಿಯಾ ಸೇರಿದಂತೆ ವಿದೇಶಗಳಲ್ಲಿ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಸಿನಿಮಾ‌ ಪ್ರಿಯರ ಮೆಚ್ಚುಗೆ ಪಾತ್ರವಾಗಿದೆ. ಕರ್ನಾಟಕದಲ್ಲಿ ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿಪ್ಲೆಕ್ಸ್​ಗಳಲ್ಲಿ ಮೊದಲ ದಿನವೇ 1000ಕ್ಕೂ ಅಧಿಕ ಶೋಗಳಲ್ಲಿ ಗಾಳಿಪಟ 2 ಪ್ರದರ್ಶನ ಕಂಡಿದೆ.

ಇನ್ನು ಸಿನಿಮಾ ಬಿಡುಗಡೆಗೂ ಮುಂಚೆ ಚಿತ್ರತಂಡ ರಾಜ್ಯಾದ್ಯಂತ ಪ್ರಿಮಿಯರ್ ಶೋ ಹಮ್ಮಿಕೊಂಡಿತ್ತು. ಇದೆನ್ನೆಲ್ಲ ಲೆಕ್ಕಾಚಾರ ಹಾಕಿದರೆ ಗಾಂಧಿನಗರದ ಸಿನಿಮಾ‌ ಪಂಡಿತರು ಪ್ರಕಾರ ಮೊದಲ ದಿನ 15ರಿಂದ 18 ಕೋಟಿ ಕಲೆಕ್ಷನ್‌ ಆಗಿದೆ ಅಂತಾ ಹೇಳಲಾಗುತ್ತಿದೆ. ಹಾಗೇ ಎರಡು ದಿನ‌ ಸರ್ಕಾರಿ ರಜೆ ಇರೋ ಕಾರಣ ಗಾಳಿಪಟ 2 ಸಿನಿಮಾಗೆ ದೊಡ್ಡ ಪ್ಲೆಸ್ ಪಾಯಿಂಟ್ ಆಗಿದೆ.

ಈ ಲೆಕ್ಕಾಚಾರದ ಮೇಲೆ ಗಾಳಿಪಟ 2 ಸಿನಿಮಾ ಈ ವಾರಕ್ಕೆ 30 ಕೋಟಿ ಕಲೆಕ್ಷನ್ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಗಣೇಶ್‌ ಸಿನಿಮಾ‌ ಕೆರಿಯರ್​ನಲ್ಲಿ ಗಾಳಿಪಟ 2 ಸಿನಿಮಾ‌ ಒಳ್ಳೆ ಗಳಿಕೆ ಎನ್ನಲಾಗುತ್ತಿದೆ. ಗೋಲ್ಡನ್‌ ಸ್ಟಾರ್ ಗಣೇಶ್, ದೂದ್ ಪೇಡ ದಿಗಂತ್ ಹಾಗೂ ನಿರ್ದೇಶಕ ಪವನ್ ಕುಮಾರ್ ನಟನೆಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಇದರ ಜೊತೆಗೆ ನಾಯಕಿಯರಾಗಿ ವೈಭವಿ ಶಾಂಡಿಲ್ಯ, ಸಂಯುಕ್ತ ಮೆನನ್, ಶರ್ಮಿಳಾ ಮಾಂಡ್ರೆ ಈ ಮೂರು ಜನ‌ ಜೋಡಿಯಾಗಿ ಮಿಂಚಿದ್ದಾರೆ. ಒಟ್ಟಾರೆ ಗಣೇಶ್ ಹಾಗೂ ಯೋಗರಾಜ್ ಭಟ್ ಕಾಂಬಿನೇಷನ್ ಬಾಕ್ಸ್ ಆಫೀಸ್‌ನಲ್ಲಿ ಮತ್ತೆ ಕಮಾಲ್ ಮಾಡಿದೆ ಅಂತಾ ಹೇಳಬಹುದು.

ಇದನ್ನೂ ಓದಿ: ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದಂದೇ ಕಾಂತಾರ ಚಿತ್ರದ ಮೊದಲ ಹಾಡು ಅನಾವರಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.