ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಪವಿ ಪೂವಪ್ಪ ಕನ್ನಡದ ಜನಪ್ರಿಯ ಕಾರ್ಯಕ್ರಮ 'ಬಿಗ್ ಬಾಸ್' ಮನೆಯೊಳಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದಾರೆ. ಕೆಲವೊಮ್ಮೆ ಕೋಪಿಷ್ಠೆ, ಉಳಿದಂತೆ ಜಾಲಿಯಾಗಿರುವ ಅವರು ಮನೆಯೊಳಗಿನ ಸ್ಪರ್ಧಿಗಳ ಲೆಕ್ಕಾಚಾರ ತಪ್ಪಿಸಲು ಸಿದ್ಧರಾಗಿಯೇ ಬಂದಿದ್ದಾರೆ. ಬಿಗ್ ಬಾಸ್ ಮನೆಯೊಳಗೆ ಹೋಗುವುದಕ್ಕೂ ಮುನ್ನ ಜಿಯೋ ಸಿನಿಮಾಗೆ ಸಂದರ್ಶನ ನೀಡಿದ್ದು, ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
''ಹಾಯ್ ನನ್ನ ಹೆಸರು ಪವಿ ಪೂವಪ್ಪ. ನಾನು ಮಾಡೆಲ್. ಹತ್ತು ವರ್ಷಗಳಿಂದ ಮಾಡೆಲಿಂಗ್ ಕ್ಷೇತ್ರದಲ್ಲಿದ್ದೇನೆ. ವೈಲ್ಡ್ ಕಾರ್ಡ್ ಮೂಲಕ ಬಿಗ್ ಬಾಸ್ ಮನೆಯೊಳಗೆ ಸ್ಪರ್ಧಿಯಾಗಿ ಹೋಗ್ತಿರೋದು ನನಗಂತೂ ಬಹಳ ಖುಷಿಯ ವಿಷಯ. ಎಕ್ಸೈಟ್‌ಮೆಂಟ್ ತುಂಬಾನೇ ಇದೆ. ಭಯ ಇಲ್ಲ. ಬಿಗ್ ಬಾಸ್ ಮನೆಯೊಳಗೆ ಹೋಗುತ್ತಿರೋದನ್ನು ಕೇಳಿ ಮನೆಯಲ್ಲಿ ಅಮ್ಮ ಅಣ್ಣನಿಗೆ ಬಹಳ ಖುಷಿಯಾಯ್ತು. ಇದುವರೆಗೆ ಜನರು ನನ್ನನ್ನು ಮಾಡೆಲಿಂಗ್ ಫೀಲ್ಡ್‌ನಲ್ಲಿ ನೋಡಿದ್ದಾರೆ. ಇಲ್ಲಿ ನನ್ನ ನಡೆ ನುಡಿಯನ್ನು ಕರ್ನಾಟಕದ ಜನರು ನೋಡಬಹುದು. ಜನರು ನನ್ನಿಂದ ಮನರಂಜನೆ ನಿರೀಕ್ಷಿಸಬಹುದು. ನಾನು ನಾನಾಗೇ ಇರ್ತೀನಿ'' - ಪವಿ ಪೂವಪ್ಪ.
''ನಾನು ಶಾರ್ಟ್ ಟೆಂಪರ್ಡ್. ಆದರೆ ಎಲ್ಲವೂ ಆಯಾ ಸಂದರ್ಭದ ಮೇಲೆ ಡಿಪೆಂಡ್. ಸುಮ್ಮನೇ ಚಿಕ್ಕ ಪುಟ್ಟ ವಿಷಯಕ್ಕೆಲ್ಲ ಕೋಪ ಬರಲ್ಲ. ಹೆಚ್ಚಾಗಿ ನಾನು ಖುಷಿ ಖುಷಿಯಾಗಿರುತ್ತೇನೆ. ಕೋಪ ಬಂದರೆ ಕಷ್ಟ ಅಷ್ಟೇ. ನಾನು ನನ್ನ ಮುದ್ದು ಶ್ವಾನಗಳನ್ನು ಮಿಸ್ ಮಾಡಿಕೊಳ್ಳುತ್ತೇನೆ. ಅವುಗಳೇ ನನ್ನ ಜಗತ್ತು. ನನ್ನ ಬಳಿ 12 ನಾಯಿಗಳಿವೆ. ಇನ್ನು ವೈಲ್ಡ್ ಕಾರ್ಡ್ ಮೂಲಕ ಹೋದಾಗ ಹಳೇ ಸ್ಪರ್ಧಿಗಳು ಡಾಮಿನೇಟ್ ಮಾಡ್ತಾರೆ ಅಂತೆಲ್ಲ ಕೇಳದ್ದೇನೆ. ಆದರೆ ನನಗೂ ಒಂದು ಅಡ್ವಾಂಟೇಜ್ ಇದೆ. ನಾನು ಅವರನ್ನೆಲ್ಲ ಮೊದಲೇ ನೋಡಿಕೊಂಡು ಮನೆಯೊಳಗೆ ಹೋಗುತ್ತಿದ್ದೇನೆ. ಅದೇನೇ ಇದ್ದರೂ ನನ್ನ ಗೇಮ್ ನಾನು ಆಡ್ತೀನಿ ಅಷ್ಟೇ. ಅಲ್ಲಿ ಹೋದ ಮೇಲೆ ಯಾರು ಯಾವ ತರಹ ಬಿಹೇವ್ ಮಾಡ್ತಾರೆ ಅನ್ನೋದರ ಮೇಲೆ ನನ್ನ ರಿಯಾಕ್ಷನ್ ಡಿಪೆಂಡ್ ಆಗುತ್ತದೆ'' - ಪವಿ ಪೂವಪ್ಪ.
ಇದನ್ನೂ ಓದಿ: ಬಿಗ್ ಬಾಸ್ ನೀರಿನಾಟದಲ್ಲಿ ಹೊತ್ತಿದ ಕಿಚ್ಚು: ನಮ್ರತಾ ಕಣ್ಣೀರಿಟ್ಟಿದ್ಯಾಕೆ?
ನಾನು ದೈಹಿಕವಾಗಿ ಸಖತ್ ಸ್ಟ್ರಾಂಗ್ ಇದ್ದೀನಿ. ಅದು ನನ್ನ ಸ್ಟ್ರೆಂಥ್. ಯಾರಾದ್ರೂ ಚಿಕ್ಕಪುಟ್ಟ ವಿಷಯಕ್ಕೆ ಗಲಾಟೆ ಮಾಡಿದ್ರೆ ನಾನು ಶಾರ್ಟ್ ಟೆಂಪರ್ಡ್ ಆಗ್ತೀನಿ. ಅದು ನನ್ನ ವೀಕ್‌ನೆಸ್. ಸದ್ಯ ನನ್ನ ಮೆಚ್ಚಿನ ಸ್ಪರ್ಧಿ ಕಾರ್ತಿಕ್. ಯಾರೂ ಇಷ್ಟ ಇಲ್ಲ ಅಂತ ಹೇಳಕ್ಕಾಗಲ್ಲ. ಆದರೆ ನನಗೆ ತನಿಷಾ ಕುಪ್ಪಂಡ ಜೊತೆ ಹೊಂದಿಕೊಳ್ಳಲು ಸಾಧ್ಯವಿಲ್ಲ ಅನಿಸುತ್ತದೆ. ಏಕಂದರೆ ನನ್ನ ಕ್ಯಾರೆಕ್ಟರ್ ಅವರ ಕ್ಯಾರೆಕ್ಟರ್ಗೆ ತದ್ವಿರುದ್ಧವಾಗಿದೆ. ಹಾಗಾಗಿ ಅವರಿಂದ ದೂರ ಇರಬೇಕಾಗುತ್ತದೆ ಎಂದು ಪವಿ ಪೂವಪ್ಪ ತಿಳಿಸಿದ್ದಾರೆ.
ಇದನ್ನೂ ಓದಿ: ಹಿರಿಯ ನಟಿ ಲೀಲಾವತಿ ನಿವಾಸಕ್ಕೆ ಡಿಸಿಎಂ ಡಿಕೆಶಿ, ಶಿವಣ್ಣ ಭೇಟಿ; ಆರೋಗ್ಯ ವಿಚಾರಣೆ
ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಬಿಗ್ ಬಾಸ್ ಮನೆಗೆ ಹೋಗುತ್ತಿದ್ದೇನೆ. ಆದಷ್ಟು ಗೆಲ್ಲಲು ಪ್ರಯತ್ನ ಪಡ್ತೇನೆ. ವೈಲ್ಡ್ ಕಾರ್ಡ್ ಮೂಲಕ ಒಳಗೆ ಹೋದವರು ಗೆಲ್ಲಲು ಸಾಧ್ಯ ಇಲ್ಲ ಎಂದು ಎಲ್ಲರೂ ಅಂದುಕೊಂಡಿರ್ತಾರೆ. ಅದನ್ನು ಈ ಸಲ ಬದಲಾಯಿಸೋಣ ಅಂದುಕೊಂಡಿದ್ದೇನೆ ಎಂದು ತಿಳಿಸಿದರು.