ETV Bharat / entertainment

'ಫೈನಲ್​ ಗೆದ್ದು ಹೋಗ್ತೀನಿ': ಬಿಗ್​ ಬಾಸ್​ ಸ್ಪರ್ಧಿ ವರ್ತೂರ್ ಸಂತೋಷ್​​ - Varthur Santhosh

Kannada Bigg Boss: ಬಿಗ್​ ಬಾಸ್​ ಸ್ಪರ್ಧಿ ವರ್ತೂರ್ ಸಂತೋಷ್​​ ಅವರು "ಫೈನಲ್​ನಲ್ಲಿ ಗೆದ್ದುಕೊಂಡೇ ಹೋಗ್ತೀನಿ" ಎಂದು ಹೇಳಿರುವುದನ್ನು ಬಿಗ್​ ಬಾಸ್​ ಅನಾವರಣಗೊಳಿಸಿರುವ ಇಂದಿನ ಪ್ರೋಮೋದಲ್ಲಿ ನೋಡಬಹುದು.

Varthur Santhosh
ವರ್ತೂರ್ ಸಂತೋಷ್​​
author img

By ETV Bharat Karnataka Team

Published : Dec 29, 2023, 4:39 PM IST

ಕನ್ನಡದ ರಿಯಾಲಿಟಿ ಶೋ 'ಬಿಗ್​ ಬಾಸ್​​ ಸೀಸನ್​ 10'ರ ಪ್ರಸ್ತುತ ವಾರ ಭರಪೂರ ಭಾವುಕ ಕ್ಷಣಗಳಿಂದ ತುಂಬಿತ್ತು. ದೊಡ್ಮನೆಯೊಳಗೆ ಪ್ರವೇಶಿಸಿದ ಎಲ್ಲಾ ಸ್ಪರ್ಧಿಗಳ ಕುಟುಂಬಸ್ಥರು, ಎಲ್ಲಾ ಸದಸ್ಯರಿಗೂ ಕಿವಿಮಾತು ಹೇಳಿ ಹೋಗಿದ್ದಾರೆ. ಬಿಗ್‌ ಬಾಸ್ ಕುಟುಂಬದ ಬಂಧವನ್ನು ಮತ್ತಷ್ಟು ಗಟ್ಟಿ ಮಾಡಿದ್ದಾರೆ. ವಾರವಿಡೀ ಹಲವು ಹೃದಯಸ್ಪರ್ಶಿ ಸನ್ನಿವೇಶಗಳಿಗೆ ಸಾಕ್ಷಿಯಾಗಿದ್ದ ಬಿಗ್‌ ಬಾಸ್‌ ಮನೆ ವಾರಾಂತ್ಯದ ಹೊತ್ತಿಗೆ ಮತ್ತದೇ ಮೊದಲಿನ ಹಳಿಗೆ ಮರಳುತ್ತಿದೆ ಎಂಬಂತೆ ತೋರುತ್ತಿದೆ.

ಬಿಗ್​ ಬಾಸ್​ ಹೊಸ ಪ್ರೋಮೋ: 'ಕ್ಯಾಪ್ಟನ್‌ ಯಾರು?' ಈ ಪ್ರಶ್ನೆ ಈಗ ಎಲ್ಲರನ್ನೂ ಕಾಡುತ್ತಿದೆ. ಇದಕ್ಕೆ ಉತ್ತರದ ಜೊತೆಗೆ ಕಿಚ್ಚನ ವಾರಾಂತ್ಯದ ಎಪಿಸೋಡ್‌ಗಳಲ್ಲಿ ಭಾಗಿಯಾಗಲು ಸದಸ್ಯರು ಕಾಯುತ್ತಿದ್ದಾರೆ. ಈ ಪ್ರಶ್ನೆಗೆ ಉತ್ತರದ ಸುಳಿವು ಇಂದು ಜಿಯೋಸಿನಿಮಾ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಕಂಡುಬಂದಿದೆ. ಅಲ್ಲದೇ ಇಂದೇ ಬಿಡುಗಡೆ ಆಗಿರುವ ಮತ್ತೊಂದು ಪ್ರೋಮೋದಲ್ಲಿ, ವರ್ತೂರ್ ಸಂತೋಷ್​​ 'ಕಳಪೆ' ಪಟ್ಟದ ಬಟ್ಟೆ ಧರಿಸಿ, ಜೈಲಿನೊಳಗೆ ಹೋಗಿದ್ದಾರೆ. 'ಮನೆಯವರ ತೀರ್ಮಾನದ ವಿರುದ್ಧ ತಿರುಗಿಬಿದ್ರಾ ವರ್ತೂರ್ ಸಂತೋಷ್! 'ಮತ್ತು 'ಪ್ರತಾಪ್ ಕೈ ತಪ್ಪಿ ಹೋಗುತ್ತಾ ಕ್ಯಾಪ್ಟನ್ ಆಗುವ ಅವಕಾಶ?' ಎಂಬೆರಡು ಶೀರ್ಷಿಕೆಯಡಿ ಬಿಗ್​ ಬಾಸ್​ ಪ್ರೋಮೋ ಅನಾವರಣಗೊಂಡಿದ್ದು, ಪ್ರೇಕ್ಷಕರು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ.

ಜೈಲಿಗೆ ಹೋದ ವರ್ತೂರ್ ಸಂತೋಷ್: 'ಯಾವ ಒಬ್ಬರ ಸದಸ್ಯರ ಪ್ರಯಾಣ ಸ್ಲೋ ಮೋಷನ್​ ಆಗಿದೆ ಎಂದು ತಿಳಿಸಿ' ಅಂತಾ ಬಿಗ್ ಬಾಸ್​ ಪತ್ರದಲ್ಲಿ ಸೂಚಿಸಿದ್ದಾರೆ. 'ಹಿಂದೆ ಉಳಿತಿದ್ದಾರೆ ಅಂತಾ ಅನಿಸಿದ್ದು ವರ್ತೂರ್ ಸಂತೋಷ್​ ಅವರು' ಎಂದು ಸಂಗೀತಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 'ಕ್ಯಾಪ್ಟನ್ಸಿ ಟಾಸ್ಕ್ ಅನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ' ಎಂದು ನಮ್ರತಾ ತಿಳಿಸಿದ್ದಾರೆ. 'ಪ್ರತಿ ಮಾತಿಗೂ ಜನಕ್ಕೆ ನಾನು ಉತ್ತರ ಕೊಟ್ರೆ ಸಾಕು' ಎಂದು ವರ್ತೂರ್ ಸಂತೋಷ್​ ತಿಳಿಸುತ್ತಾರೆ ಎಂದು ಕಾರ್ತಿಕ್ ತಿಳಿಸಿದ್ದಾರೆ. ಹೀಗೆ ಪ್ರತಿಯೊಬ್ಬರ ಮಾತಿಗೂ ತಮ್ಮದೇ ಆದ ರೀತಿಯಲ್ಲಿ ಉತ್ತರ ಕೊಟ್ಟ ವರ್ತೂರ್​ ಸಂತೋಷ್​​​ ಕಳಪೆ ಪಟ್ಟದ ಬಟ್ಟೆ ಧರಿಸಿ ಜೈಲಿಗೆ ಹೋಗ್ತಾರೆ.

'ಫೈನಲ್​ನಲ್ಲಿ ಗೆದ್ದುಕೊಂಡೇ ಹೋಗ್ತೀನಿ': ಕ್ಯಾಪ್ಟನ್ಸಿ ಅವರವರ ವೈಯಕ್ತಿಕ. ಕ್ಯಾಪ್ಟನ್ ಆಗೋದು ಬಿಡೋದು ಅವರವರಿಗೆ ಬಿಟ್ಟದ್ದು. ಜನರಿಗೆ ಇಷ್ಟ ಆದ್ರೆ ಮತಗಳ ಮೂಲಕ ನಮ್ಮನ್ನು ಮನೆಯಲ್ಲೇ ಉಳಿಸುತ್ತಾರೆ ಎಂದು ಮುನ್ನಡೆದ ವರ್ತೂರ್​ ಸಂತೋಷ್, ಇದಕ್ಕೆಲ್ಲಾ ನಾನು ಭಯ ಬೀಳಲ್ಲ. 'ಫೈನಲ್​ನಲ್ಲಿ ಗೆದ್ದುಕೊಂಡೇ ಹೋಗ್ತೀನಿ' ಎಂದು ಹೇಳಿದ್ದನ್ನು ಪ್ರೋಮೋದಲ್ಲಿ ನೋಡಬಹುದು.

ಪ್ರತಾಪ್ ಕೈತಪ್ಪಿತಾ ಕ್ಯಾಪ್ಟನ್ಸಿ ಟಾಸ್ಕ್‌?: ಮತ್ತೊಂದು ಪ್ರೋಮೋ ಪ್ರತಾಪ್ ಅವರಿಗೆ ಸಂಬಂಧಿಸಿದ್ದಾಗಿದೆ. ಈ ವಾರ ಮನೆಯೊಳಗೆ ಬಂದ ಸ್ಪರ್ಧಿಗಳ ಕುಟುಂಬದವರಿಗೆ ಒಂದು ಪ್ರಶ್ನೆ ಕೇಳಲಾಗಿತ್ತು. ಅವರ ಕುಟುಂಬದ ಸದಸ್ಯರನ್ನು ಬಿಟ್ಟು ಬೇರೆ ಯಾರು ಈ ಮನೆಯ ಕ್ಯಾಪ್ಟನ್ ಆಗಬೇಕು ಎಂದು ಬಯಸುತ್ತೀರಿ? ಎಂಬುದಕ್ಕೆ ಎಲ್ಲರೂ ತಮ್ಮ ಅಭಿಪ್ರಾಯ ಸೂಚಿಸಿದ್ದರು. ಅದರ ಅನುಸಾರ ಸಂಗೀತಾ, ತನಿಷಾ ಮತ್ತು ಪ್ರತಾಪ್ ಅವರುಗಳ ಹೆಸರು ಸೆಲೆಕ್ಟ್ ಆಗಿತ್ತು. ಹಾಗಾಗಿ ಈ ಮೂವರು ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಆಡಲು ಸಜ್ಜಾಗಿದ್ದರು. ಆದ್ರೆ ಬಿಗ್‌ ಬಾಸ್ ಒಂದು ಶಾಕ್ ಕೊಟ್ಟಿದ್ದಾರೆ. ಮನೆಯ ಸದಸ್ಯರಿಗೆ ಈ ಮೂವರಲ್ಲಿ ಯಾರು ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಆಡುವುದು ಬೇಡ ಎಂಬುದನ್ನು ಸೂಚಿಸಲು ತಿಳಿಸಿದ್ದಾರೆ. ಆಗ ಬಹುತೇಕ ಎಲ್ಲರೂ ಸೂಚಿಸಿದ್ದು ಪ್ರತಾಪ್ ಹೆಸರನ್ನು. 'ಪ್ರತಾಪ್‌ ಅಧಿಕಾರ ಸಿಕ್ಕ ಕೂಡಲೇ ಸ್ಟ್ರಿಕ್ಟ್ ಆಗಿಬಿಡ್ತಾರೆ', 'ಅವರು ಮೂಡಿ', 'ಪದೇ ಪದೇ ಮೂಡ್‌ಸ್ವಿಂಗ್ ಆಗುತ್ತಿರುತ್ತದೆ' ಎಂದೆಲ್ಲಾ ಅಭಿಪ್ರಾಯಗಳು ವ್ಯಕ್ತವಾಗಿದೆ.

ಇದನ್ನೂ ಓದಿ: ಕೆಜಿಎಫ್ 3 ಸ್ಕ್ರಿಪ್ಟ್ ರೆಡಿ: ಶೂಟಿಂಗ್​ ಯಾವಾಗ? ಅಧಿಕೃತ ಘೋಷಣೆ ನಿರೀಕ್ಷೆ

ಬಹುಶಃ ಈ ವಾರ ಮನೆಯ ಸದಸ್ಯರ ಅಭಿಪ್ರಾಯದ ಮೇರೆಗೆ ಪ್ರತಾಪ್‌ ಕ್ಯಾಪ್ಟನ್ಸಿ ಟಾಸ್ಕ್‌ನಿಂದ ಹೊರಗುಳಿಯಬಹುದು. ಸಂಗೀತಾ ಮತ್ತು ತನಿಷಾ ಕ್ಯಾಪ್ಟನ್ಸಿ ಟಾಸ್ಕ್ ಆಡಬಹುದು. ಆ ಇಬ್ಬರಲ್ಲಿ ಯಾರು ಈ ವಾರದ ಕ್ಯಾಪ್ಟನ್ ಆಗುತ್ತಾರೆ ಎಂಬುದನ್ನು ಕಾದು ನೋಡಬೇಕು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.