ETV Bharat / entertainment

ಬಿಗ್​​ ಬಾಸ್ ಕನ್ನಡ​​​: ಗಂಧರ್ವರು ರಾಕ್ಷಸರಾದಾಗ - ಪ್ರೋಮೋ ನೋಡಿ - Bigg Boss kannada

ಬಿಗ್​​ ಬಾಸ್ ಹೊಸ ಪ್ರೋಮೋಗಳನ್ನು ಅನಾವರಣಗೊಳಿಸಿದ್ದು, ಪ್ರೇಕ್ಷಕರ ಕುತೂಹಲ ಹೆಚ್ಚಿದೆ.

kannada Bigg Boss
ಕನ್ನಡ ಬಿಗ್​​ ಬಾಸ್
author img

By ETV Bharat Karnataka Team

Published : Dec 6, 2023, 5:11 PM IST

ನಿನ್ನೆ ಬಿಗ್‌ ಬಾಸ್‌ ಮನೆ ಮಂದಿಗೆ ಗಂಧರ್ವರು ಮತ್ತು ರಾಕ್ಷಸರ ಟಾಕ್ಸ್​​ ನೀಡಿತ್ತು. ಆಟ ಮುಂದುವರಿದಿದ್ದು, ಪ್ರೇಕ್ಷಕರು ತಮ್ಮ ಪ್ರತಿಕ್ರಿಯೆ ಕೊಡುತ್ತಿದ್ದಾರೆ. ರಕ್ಕಸರ ಗುಂಪಿನ ಕಾರ್ತಿಕ್, ಸಂಗೀತಾ, ತನಿಷಾ, ಅವಿನಾಶ್‌ ಸೇರಿ ಎಲ್ಲರೂ ಬಗೆಬಗೆಯ ಚೇಷ್ಟೆಗಳಿಂದ ಕೆಣಕುತ್ತಿದ್ದರೆ, ಗಂಧರ್ವರ ಗುಂಪಿನ ವಿನಯ್, ನಮ್ರತಾ, ತುಕಾಲಿ ಸಂತೋಷ್​, ಮೈಕಲ್, ಪವಿ ಸೇರಿ ಯಾರೂ ಸಿಟ್ಟಿಗೆಳದೇ ಇರಲು ಹರಸಾಹಸ ಪಡುತ್ತಿದ್ದಾರೆ.

ಬಿಗ್​​ ಬಾಸ್ ಪ್ರೋಮೋ: ಈ ಆಟದ ಮುಂದುವರಿದ ಭಾಗ ಇಂದು ಜಿಯೋ ಸಿನಿಮಾ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಬಹಿರಂಗಗೊಂಡಿದೆ. 'ಗಂಧರ್ವರು ರಾಕ್ಷಸರಾಗೋದು ಸುಲಭ; ಆದ್ರೆ ರಾಕ್ಷಸರು ಗಂಧರ್ವರಂತೆ ಆಗಬಹುದಾ?' ಮತ್ತು 'ಗಂಧರ್ವರನ್ನು ಸೋಲಿಸಿ ಮೇಲಗೈ ಸಾಧಿಸುತ್ತಾ ರಾಕ್ಷಸರ ಪಡೆ?' ಶೀರ್ಷಿಕೆಯಡಿ ಕಲರ್ಸ್ ಕನ್ನಡ ಸೋಷಿಯಲ್​ ಮೀಡಿಯಾದಲ್ಲಿ ಪ್ರೋಮೋಗಳನ್ನು ಅನಾವರಣಗೊಳಿಸಿದೆ.

ಗಂಧರ್ವರ ಗುಂಪಿನ ಇಬ್ಬರು ಸದಸ್ಯರು ಕುರ್ಚಿಯಲ್ಲಿ ಕುಳಿತಿದ್ದಾರೆ. ಅವರನ್ನು ಹೇಗಾದರೂ ಕುರ್ಚಿಯಿಂದ ಮೇಲೆಳುವಂತೆ ಮಾಡುವ ಸವಾಲನ್ನು ರಕ್ಕಸರ ಗುಂಪಿಗೆ ನೀಡಲಾಗಿತ್ತು. ರಕ್ಕಸರ ಗುಂಪಿನ ಸದಸ್ಯರು ಗಂಧರ್ವರ ಮೇಲೆ ನೀರು ಎರೆಚಲಾರಂಭಿಸಿದರು. ಈ ಹಂತದಲ್ಲಿ ತುಕಾಲಿ ಕುರ್ಚಿಯಿಂದ ಎದ್ದರು ಎಂದು ರಕ್ಕಸರ ಗುಂಪಿನ ಸದಸ್ಯರು ಕೂಗಲಾರಂಭಿಸಿದರು. ಆದರೆ ಎದ್ದಿಲ್ಲ, ಕೇವಲ ಸರಿದಿದ್ದಾರೆ ಎಂಬುದು ಗಂಧರ್ವರ ಗುಂಪಿನ ನಮ್ರತಾರ ವಾದ. ನಮ್ರತಾ ಅವರ ವಾದಕ್ಕೆ ಅನುಗುಣವಾಗಿಯೇ ಉಸ್ತುವಾರಿ ಸ್ನೇಹಿತ್‌ ತಮ್ಮ ನಿರ್ಧಾರವನ್ನು ತಿಳಿಸಿದಾಗ ರಕ್ಕಸರ ಗುಂಪಿನ ಸದಸ್ಯರು ಅಕ್ಷರಶಃ ರಕ್ಕಸರಾಗಿ ಬದಲಾಗಿದ್ದಾರೆ. ತನಿಷಾ ಅವರು, 'ನಮ್ರತಾ ಹೇಳಿದ ಮೇಲೆ ಉಸ್ತುವಾರಿಯ ನಿರ್ಧಾರ ಬದಲಾಗುತ್ತದೆ' ಎಂದು ಹೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ನಮ್ರತಾ, 'ಹೌದು, ಯಾಕಂದ್ರೆ ನಮ್ರತಾ ಇಂಪಾರ್ಟೆಂಟ್ ಇದ್ದಾಳೆ' ಎಂದು ಹೇಳಿ ಮತ್ತಷ್ಟು ಕೆಣಕಿದ್ದಾರೆ. ತನಿಷಾ ಮತ್ತು ನಮ್ರತಾ ನಡುವಿನ ಜಗಳ ಜಟಾಪಟಿಯ ಹಂತಕ್ಕೂ ಹೋಗಿದೆ.

ಇದನ್ನೂ ಓದಿ: ಹೈದರಾಬಾದ್‌ನಲ್ಲಿ 'ದಿ ಗರ್ಲ್‌ಫ್ರೆಂಡ್‌' ಶೂಟಿಂಗ್​​​ ಆರಂಭ; ರಶ್ಮಿಕಾ ಮಂದಣ್ಣ ಭಾಗಿ

ಕಾರ್ತಿಕ್, 'ನ್ಯಾಯವಾಗಿ ಉಸ್ತುವಾರಿ ಮಾಡಲಿಕ್ಕೆ ಬರದಿದ್ದರೆ ಬಿಟ್ಟು ಹೋಗ್ತಿರ್ಬೇಕು' ಎಂದು ಗುಡುಗಿದ್ದಾರೆ. ಎರಡೂ ತಂಡವನ್ನು ಸಮನಾಗಿ ಕಾಣಬೇಕಿದ್ದ ಉಸ್ತುವಾರಿ ಸ್ನೇಹಿತ್ ಒಂದು ಕಡೆ ವಾಲಿಕೊಂಡರಾ? ಅಥವಾ ಅವರು ತೆಗೆದುಕೊಂಡ ನಿರ್ಧಾರ ನ್ಯಾಯಯುತವಾಗಿಯೇ ಇತ್ತಾ? ಎಂಬುದನ್ನು ತಿಳಿದುಕೊಳ್ಳಲು ಬಿಗ್‌ ಬಾಸ್ ಕನ್ನಡ 24 ಗಂಟೆಯ ನೇರಪ್ರಸಾರವನ್ನು ಜಿಯೋ ಸಿನಿಮಾದಲ್ಲಿ ಉಚಿತವಾಗಿ ವೀಕ್ಷಿಸಿ.

ಇದನ್ನೂ ಓದಿ: 'ಲಿಡ್ಕರ್ ಉತ್ಪನ್ನಗಳ ರಾಯಭಾರಿ ಡಾಲಿ ಧನಂಜಯ್': ಸಿಎಂ ಘೋಷಣೆ; ನಟನಿಂದ ಉಚಿತ ಸೇವೆ

ಟಾಸ್ಕ್ ಮುಂದುವರಿಯುತ್ತಿದ್ದಂತೆ ಬಿಗ್ ಬಾಸ್ ಆಟದ ಮಜಲನ್ನೇ ಬದಲಾಯಿಸಿದ್ದಾರೆ. ಈವರೆಗೆ ಗಂಧರ್ವರಾಗಿದ್ದವರು ರಾಕ್ಷಸರಾಗಬೇಕು, ರಾಕ್ಷಸರಾಗಿದ್ದವರು ಗಂಧರ್ವರಾಗಬೇಕು ಎಂದು ಸೂಚಿಸಿದ್ದಾರೆ. ಬಿಗ್​ ಬಾಸ್​ ಅಪ್ಪಣೆಯಂತೆ ಆಟ ಆರಂಭಗೊಂಡಿದೆ. ರಾಕ್ಷಸರು ಗಂಧರ್ವರನ್ನು ಹೇಗೆಲ್ಲಾ ಆಡಿಸಿದ್ದರು ಎಂಬುದನ್ನು ನೀವಿಗಾಗಲೇ ವೀಕ್ಷಿಸಿದ್ದೀರಿ. ಆ ಸೇಡನ್ನು ತೀರಿಸಿಕೊಳ್ತಾರಾ?. ಪ್ರತಿದಿನದ ಎಪಿಸೋಡ್‌ಗಳು ಕಲರ್ಸ್ ಕನ್ನಡದಲ್ಲಿ ರಾತ್ರಿ 9.30ಕ್ಕೆ ಪ್ರಸಾರವಾಗಲಿದ್ದು, ನಿಮ್ಮ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.