ETV Bharat / entertainment

ಕನ್ನಡ ಬಿಗ್​ ಬಾಸ್: ನಾಮಿನೇಷನ್ ಪಾಸ್‌ಗಾಗಿ ಕಾದಾಟ - ಪ್ರೋಮೋ ನೋಡಿ! - Bigg Boss latest news

Kannada Bigg Boss: ''ಪ್ರತಾಪ್‍‍ ಕೈಗೆ ಚೀಟಿ ಸಿಕ್ಕಿದ್ದೇ ತಪ್ಪಾಯ್ತಾ?'' ಎಂಬ ಶೀರ್ಷಿಕೆಯೊಂದಿಗೆ ಬಿಗ್​​ ಬಾಸ್​ ಪ್ರೋಮೋ ಅನಾವರಣಗೊಂಡಿದೆ.

Kannada Bigg Boss
ಕನ್ನಡ ಬಿಗ್​ ಬಾಸ್
author img

By ETV Bharat Karnataka Team

Published : Oct 30, 2023, 12:06 PM IST

ಕನ್ನಡದ ಜನಪ್ರಿಯ ಕಾರ್ಯಕ್ರಮ ''ಬಿಗ್‌ ಬಾಸ್‌'' ಸೀಸನ್ 10ರ ನಾಲ್ಕನೇ ವಾರ ಭರ್ಜರಿ ಜಿದ್ದಾಜಿದ್ದಿಯೊಂದಿಗೆ ಶುರುವಾಗಿದೆ. ವೀಕೆಂಡ್‌ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್​ ಅವರಿಂದ ಸ್ಫೂರ್ತಿ ಪಡೆದ ಪ್ರತಾಪ್‌ ಸಖತ್​​ ಫಾರ್ಮ್‌ನಲ್ಲಿದ್ದಾರೆ. ಕಾರ್ತಿಕ್‌ ಅಂತೂ ಬಲಪ್ರಯೋಗಕ್ಕೂ ಮುಂದಾಗಿದ್ದಾರೆ. ವಿನಯ್‌ ಅವಾಜ್‌ಗೆ ಪ್ರತಾಪ್ ಕ್ಯಾರೇ ಅಂದಿಲ್ಲ.

ಬೆಳಗ್ಗೆಯೇ ನಾಮಿನೇಷನ್ ಟಾಸ್ಕ್: ಮೂರನೇ ವಾರವು ಈ ಹಿಂದಿನ ವಾರಗಳಷ್ಟು ಕಾಮ್ ಆಗಿರುವುದಿಲ್ಲ ಎಂಬುದರ ಸೂಚನೆಯನ್ನು ಜಿಯೋ ಸಿನಿಮಾ ಬಿಡುಗಡೆ ಮಾಡಿರುವ ಪ್ರೋಮೋದಲ್ಲಿ ಕಾಣಿಸಿದೆ. ಬೆಳಗ್ಗೆಯ ಸಿಹಿನಿದ್ದೆಯಲ್ಲಿದ್ದ ಮನೆಯ ಸದಸ್ಯರಿಗೆ ಬಿಗ್‌ ಬಾಸ್‌ ಟಾಸ್ಕ್ ನೀಡಿದ್ದಾರೆ. ಈ ವಾರ ಎಲ್ಲರಿಗೂ ನಾಮಿನೇಷನ್ ಮಾಡುವ ಅವಕಾಶ ಇರುವುದಿಲ್ಲ. ಬಲೂನ್‌ಗಳನ್ನು ಒಡೆದು ಅದರಲ್ಲಿರುವ ನಾಮಿನೇಷನ್ ಪಾಸ್‌ಗಳನ್ನು ಹುಡುಕಬೇಕು ಎಂದು ಬಿಗ್‌ ಬಾಸ್ ಆದೇಶಿಸಿದ್ದಾರೆ. ತಕ್ಷಣವೇ ಮನೆಯ ಸದಸ್ಯರೆಲ್ಲರೂ ಬಲೂನ್‌ಗಳನ್ನು ತುಂಬಿರುವ ಜಾಗಕ್ಕೆ ಹೋಗಿ ಬಲೂನ್‌ಗಳನ್ನು ಒಡೆದೊಡೆದು ನೋಡಲು ಶುರು ಮಾಡಿದ್ದಾರೆ.

ಕೊನೆಗೂ ನಾಮಿನೇಷನ್ ಪಾಸ್ ಸಿಕ್ಕಿದ್ದು ಡ್ರೋಣ್ ಪ್ರತಾಪ್‌ಗೆ: ಹೌದು, ಈ ನಾಮಿನೇಶನ್​ ಪಾಸ್​​ ಪ್ರತಾಪ್​ ಅವರಿಗೆ ಸಿಕ್ಕಿದೆ. ತನಗೆ ಸಿಕ್ಕ ಪಾಸ್‌ ಅನ್ನು ಕಿಸೆಯಲ್ಲಿಟ್ಟುಕೊಂಡು ಹೋಗುತ್ತಿದ್ದ ಪ್ರತಾಪ್ ಅವರನ್ನು ವಿನಯ್‌, ''ಹೆಂಗಿರುತ್ತೆ ನೋಡೋಣ ತೋರಿಸು'' ಎಂದು ಕೇಳಿದ್ದಾರೆ. ಆದರೆ, ಪ್ರತಾಪ್ ಅವರು ಪಾಸ್‌ ಅನ್ನು ವಿನಯ್‌ ಅವರ ಕೈಗೆ ಕೊಟ್ಟಿಲ್ಲ. ಬಳಿಕ ಮಾತಿಗೆ ಮಾತು ಬೆಳೆದಿದೆ.

ಇದನ್ನೂ ಓದಿ: 'ಕಣ್ಣಪ್ಪ' ಶೂಟಿಂಗ್​ ಸೆಟ್​ನಲ್ಲಿ ಅವಘಡ: ನಟ ವಿಷ್ಣು ಮಂಚುಗೆ ಗಾಯ!

ಮುಂದಿನ ದೃಶ್ಯದಲ್ಲಿ ಕಾರ್ತಿಕ್, ಸ್ನೇಹಿತ್ ಎಲ್ಲರೂ ಪ್ರತಾಪ್‌ ಮೈಮೇಲೆ ಮುಗಿಬಿದ್ದು ಅವರಿಂದ ಪಾಸ್ ಕಸಿಯಲು ಯತ್ನಿಸುತ್ತಿರುವ ದೃಶ್ಯವಿದೆ. ಎಲ್ಲರ ನಡುವೆ ಸಿಲುಕಿ ಒದ್ದಾಡುತ್ತಿರುವ ಪ್ರತಾಪ್‌ ಕಿರುಚಾಡುತ್ತಿದ್ದಾರೆ. ಬಿಗ್‌ ಬಾಸ್ ಮನೆ ಹೊಡೆದಾಟಕ್ಕೆ ಸಾಕ್ಷಿಯಾಗುತ್ತಿದೆಯೇ? ದೈಹಿಕವಾಗಿ ಬಲಶಾಲಿಯಾಗಿರುವ ಕಾರ್ತಿಕ್, ಪ್ರತಾಪ್‌ ಮೇಲೆ ಮುಗಿಬಿದ್ದಿದ್ದು, ಎರಡು ಮೂರು ಜನ ಸೇರಿ ಒಬ್ಬನನ್ನು ಹಿಡಿದು ಎಳೆದಾಡುತ್ತಿರುವುದು ಯಾಕೆ? ನಿಜಕ್ಕೂ ಏನಾಗುತ್ತಿದೆ ಬಿಗ್‌ಬಾಸ್ ಮನೆಯಲ್ಲಿ? ಇವೆಲ್ಲವನ್ನೂ ಬಿಗ್‌ ಬಾಸ್ ಕನ್ನಡ ನೇರಪ್ರಸಾರ - ಜಿಯೋ ಸಿನಿಮಾದಲ್ಲಿ ಉಚಿತವಾಗಿ ನೋಡಬಹುದು. ದೈನಂದಿನ ಎಪಿಸೋಡ್‌ಗಳನ್ನು ಕಲರ್ಸ್ ಕನ್ನಡದಲ್ಲಿ ಪ್ರತಿದಿನ ರಾತ್ರಿ 9.30ಕ್ಕೆ ಪ್ರಸಾರವಾಗುತ್ತಿದೆ.

ಇದನ್ನೂ ಓದಿ: ಅನನ್ಯಾ ಪಾಂಡೆ ಜನ್ಮದಿನ: ಹಿರಿಯ ನಟ ​ಚಂಕಿ ಪಾಂಡೆ ಪುತ್ರಿಯ ಸಿನಿ ಪಯಣ ಹೀಗಿದೆ!

ಪ್ರತಾಪ್‍‍ ಕೈಗೆ ಚೀಟಿ ಸಿಕ್ಕಿದ್ದೇ ತಪ್ಪಾಯ್ತಾ?: ಕಲರ್ಸ್ ಕನ್ನಡ ಸೋಷಿಯಲ್​ ಮೀಡಿಯಾಗಳಲ್ಲಿ ಅನಾವರಣಗೊಳಿಸಿರುವ ಪ್ರೋಮೋಗೆ ''ಪ್ರತಾಪ್‍‍ ಕೈಗೆ ಚೀಟಿ ಸಿಕ್ಕಿದ್ದೇ ತಪ್ಪಾಯ್ತಾ?'' ಎಂಬ ಶೀರ್ಷಿಕೆ ಕೊಡಲಾಗಿದೆ. ಪ್ರೋಮೋ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದ್ದು, ಸಂಜೆಯ ಎಪಿಸೋಡ್​ ವೀಕ್ಷಿಸಲು ಕಾತರರಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.