ಕನ್ನಡ ಬಿಗ್ ಬಾಸ್ ಪ್ರೇಕ್ಷಕರ ಸಂಖ್ಯೆ ಏರುತ್ತಲೇ ಇದೆ. ದಿನಕ್ಕೊಂದು ಹೊಸ ಟಾಸ್ಕ್, ಸ್ಪರ್ಧಿಗಳ ತಂತ್ರ ಎಲ್ಲವೂ ಪ್ರೇಕ್ಷಕರ ಕುತೂಹಲ ಹೆಚ್ಚಿಸುತ್ತಿದೆ. ಮನೆಯೊಳಗೆ ಇಬ್ಬರು ಹೊಸ ಕಂಟೆಸ್ಟೆಂಟ್‌ಗಳು ವೈಲ್ಡ್‌ಕಾರ್ಡ್ ಎಂಟ್ರಿ ಕೊಟ್ಟಿದ್ದಾರೆ. ಅವರು ಮನೆಯೊಳಗಿನ ಸದಸ್ಯರ ಮನಸ್ಥಿತಿಯನ್ನು ಅರಿವು ಮಾಡಿಕೊಳ್ಳುತ್ತಿರುವಾಗಲೇ ಬಿಗ್ ಬಾಸ್ ಟಾಸ್ಕ್ ಒಂದನ್ನು ಕೊಟ್ಟಿದ್ದಾರೆ.
-
ಆಟದಲ್ಲಿ ಹೆಚ್ಚಾಗಿದ್ದು ಹೋರಾಟವೋ ಕಾದಾಟವೋ?
— Colors Kannada (@ColorsKannada) November 28, 2023 " class="align-text-top noRightClick twitterSection" data="
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9.30 | ಶನಿ-ಭಾನು ರಾತ್ರಿ 9#BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/HIjNPUf7D3
">ಆಟದಲ್ಲಿ ಹೆಚ್ಚಾಗಿದ್ದು ಹೋರಾಟವೋ ಕಾದಾಟವೋ?
— Colors Kannada (@ColorsKannada) November 28, 2023
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9.30 | ಶನಿ-ಭಾನು ರಾತ್ರಿ 9#BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/HIjNPUf7D3ಆಟದಲ್ಲಿ ಹೆಚ್ಚಾಗಿದ್ದು ಹೋರಾಟವೋ ಕಾದಾಟವೋ?
— Colors Kannada (@ColorsKannada) November 28, 2023
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9.30 | ಶನಿ-ಭಾನು ರಾತ್ರಿ 9#BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/HIjNPUf7D3
'ಆಟದಲ್ಲಿ ಹೆಚ್ಚಾಗಿದ್ದು, ಹೋರಾಟವೋ ಕಾದಾಟವೋ?': ಸ್ವಿಮಿಂಗ್ ಫೂಲ್‌ನಲ್ಲಿರುವ ನೀರನ್ನು ಬಕೆಟ್‌ನಲ್ಲಿ ತೆಗೆದುಕೊಂಡು ಕೊಳವೆಯ ಒಳಗೆ ಎಸೆಯಬೇಕು. ಎದುರಾಳಿ ತಂಡದವರು ಸ್ಪರ್ಧಿಗಳ ಗುರಿ ತಪ್ಪುವಂತೆ ಅವರನ್ನು ತಡೆಯಬೇಕು. ಇದು ಟಾಸ್ಕ್. ಆದರೆ, ಈ ನೀರಿನಾಟದಲ್ಲಿ ಕಿಡಿ ಹೊತ್ತಿಕೊಂಡಿರುವುದು ಇಂದಿನ ಪ್ರೋಮೋದಲ್ಲಿ ಬಹಿರಂಗಗೊಂಡಿದೆ. 'ಆಟದಲ್ಲಿ ಹೆಚ್ಚಾಗಿದ್ದು ಹೋರಾಟವೋ ಕಾದಾಟವೋ?' ಎಂಬ ಶೀರ್ಷಿಕೆಯಡಿ ಸೋಷಿಯಲ್ ಮೀಡಿಯಾದಲ್ಲಿ ಇಂದಿನ ಸಂಚಿಕೆಯ ಪ್ರೋಮೋ ಅನಾವರಣಗೊಂಡಿದೆ.
ನೀರಿನ ಆಟ ಆಡುತ್ತಾ ಹೋರಾಟವನ್ನೇ ಶುರು ಮಾಡಿದ್ದಾರೆ ಮನೆಯ ಸದಸ್ಯರು. ತುಕಾಲಿ ಸಂತೋಷ್ ಅವರನ್ನು ಸ್ನೇಹಿತ್ ತಮ್ಮ ಗುರಾಣಿಯಿಂದ ನೂಕಿದ್ದಾರೆ. ವಿನಯ್ ಅವರಂತೂ ಸಂತೋಷ್ ಅವರನ್ನು ಬೀಳಿಸಿಯೇ ಬಿಟ್ಟಿದ್ದಾರೆ. ಮತ್ತೊಂದು ದೃಶ್ಯದಲ್ಲಿ ಸ್ನೇಹಿತ್ ಮತ್ತು ತುಕಾಲಿ ಪರಸ್ಪರ ಡಿಕ್ಕಿ ಹೊಡೆದು ಬಿದ್ದೇ ಬಿಟ್ಟಿದ್ದಾರೆ. ಕೊನೆಗೆ ತುಕಾಲಿ ಅವರು, ಬೇಕಂತಲೇ ಮಾಡ್ತಿದ್ದಾರೆ. ನಾನು ಆಟ ಆಡಲ್ಲ ಎಂದು ಹೊರಟುಹೋಗಿದ್ದಾರೆ. ವಿನಯ್, ಸತ್ಯವಾಗ್ಲೂ ಬೇಕಂತ ಮಾಡಿಲ್ಲ ಎಂದರೂ ತುಕಾಲಿ ಕೇಳುವ ಮನಸ್ಥಿತಿಯಲ್ಲಿರಲಿಲ್ಲ. ವಿನಯ್ ಮತ್ತು ತುಕಾಲಿ ನಡುವೆ ಹೊತ್ತಿಕೊಂಡ ಕಿಡಿ ಏರುತ್ತಲೇ ಹೋಗಿದೆ.
-
ಪ್ರತಾಪ್ ನಿರ್ಧಾರದ ಹಿಂದಿನ ಕಾರಣವೇನು ?
— Colors Kannada (@ColorsKannada) November 28, 2023 " class="align-text-top noRightClick twitterSection" data="
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9.30 | ಶನಿ-ಭಾನು ರಾತ್ರಿ 9#BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/A8J2nYFAR7
">ಪ್ರತಾಪ್ ನಿರ್ಧಾರದ ಹಿಂದಿನ ಕಾರಣವೇನು ?
— Colors Kannada (@ColorsKannada) November 28, 2023
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9.30 | ಶನಿ-ಭಾನು ರಾತ್ರಿ 9#BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/A8J2nYFAR7ಪ್ರತಾಪ್ ನಿರ್ಧಾರದ ಹಿಂದಿನ ಕಾರಣವೇನು ?
— Colors Kannada (@ColorsKannada) November 28, 2023
ಬಿಗ್ ಬಾಸ್ | ಸೋಮ-ಶುಕ್ರ ರಾತ್ರಿ 9.30 | ಶನಿ-ಭಾನು ರಾತ್ರಿ 9#BBK10 #HappyBiggBoss #KichchaSudeep #ColorsKannada #ಬಣ್ಣಹೊಸದಾಗಿದೆ #ಬಂಧಬಿಗಿಯಾಗಿದೆ pic.twitter.com/A8J2nYFAR7
ಇದನ್ನೂ ಓದಿ: ಡೀಪ್ಫೇಕ್ ವಿಡಿಯೋ: ದನಿಯೇರಿಸಲು ಹುಡುಗಿಯರಿಗೆ ರಶ್ಮಿಕಾ ಮಂದಣ್ಣ ಸಲಹೆ!
'ಪ್ರತಾಪ್ ನಿರ್ಧಾರದ ಹಿಂದಿನ ಕಾರಣವೇನು?' ಎಂಬ ಶೀರ್ಷಿಕೆಯಡಿ ಮತ್ತೊಂದು ಪ್ರೋಮೋ ಅನಾವರಣಗೊಂಡಿದೆ. ಕ್ಯಾಪ್ಟನ್ಸಿ ಟಾಸ್ಕ್ನಿಂದ ಯಾರನ್ನು ಹೊರಗಿಡಬೇಕು ಎಂದು ಪ್ರತಾಪ್ ಅವರಲ್ಲಿ ಬಿಗ್ ಬಾಸ್ ಕೇಳಿದ್ದಾರೆ. ಆಗ ಪ್ರತಾಪ್ ನಮ್ರತಾ ಅವರ ಹೆಸರು ತೆಗೆದುಕೊಂಡಿದ್ದಾರೆ. ತಮ್ಮ ಹೆಸರು ತೆಗೆದುಕೊಳ್ಳೋದಿಲ್ಲ ಎಂಬ ನಿರೀಕ್ಷೆಯಲ್ಲಿ ನಮ್ರತಾ ಇದ್ದರು. ಅನಿರೀಕ್ಷಿತವಾಗಿ ಪ್ರತಾಪ್ ಅವರು ನಮ್ರತಾರ ಹೆಸರು ತೆಗೆದುಕೊಂಡಿದ್ದು, ನಮ್ರತಾ ಕಣ್ಣೀರಿಟ್ಟಿದ್ದಾರೆ. ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಭಾಗಿಯಾಗುವ ನಿರೀಕ್ಷೆಯಲ್ಲಿ ನಮ್ರತಾ ಇದ್ದರು.
ಇದನ್ನೂ ಓದಿ: ಹಿರಿಯ ನಟಿ ಲೀಲಾವತಿ ನಿವಾಸಕ್ಕೆ ಡಿಸಿಎಂ ಡಿಕೆಶಿ, ಶಿವಣ್ಣ ಭೇಟಿ; ಆರೋಗ್ಯ ವಿಚಾರಣೆ
ನೀರಿನಾಟದ ಈ ಟಾಸ್ಕ್‌ನಲ್ಲಿ ಕೊನೆಗೂ ಗೆದ್ದವರು ಯಾರು? ಸೋತವರು ಯಾರು? ನಮ್ರತಾ ಮನಸ್ಥಿತಿ ಹೇಗಿದೆ? ಎಂಬುದನ್ನು ತಿಳಿಯಲು ಜಿಯೋ ಸಿನಿಮಾದಲ್ಲಿ ಉಚಿತವಾಗಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡವನ್ನು ವೀಕ್ಷಿಸಬಹುದಾಗಿದೆ. ಬಿಗ್ ಬಾಸ್ ಕನ್ನಡದ 24 ಗಂಟೆಯ ನೇರಪ್ರಸಾರವನ್ನು ಜಿಯೋ ಸಿನಿಮಾದಲ್ಲಿ ಉಚಿತವಾಗಿ ಲಭ್ಯವಿದೆ. ಪ್ರತಿದಿನದ ಎಪಿಸೋಡ್‌ಗಳನ್ನು ಕಲರ್ಸ್ ಕನ್ನಡದಲ್ಲಿ ರಾತ್ರಿ 9.30ಕ್ಕೆ ವೀಕ್ಷಿಸಬಹುದಾಗಿದೆ.