ETV Bharat / entertainment

ಬಿಗ್​ ಬಾಸ್ ಪ್ರೋಮೋ: ಕ್ಯಾಪ್ಟನ್ಸಿಗಾಗಿ ಮತ್ತೆ ಕಾದಾಟ ಶುರು - Bigg Boss New Promo

Kannada Bigg Boss new promo: ಕ್ಯಾಪ್ಟನ್ಸಿ ಟಾಸ್ಕ್‌ ವಿಚಾರವಾಗಿ ಬಿಗ್ ಬಾಸ್​ ಮನೆ ಮಂದಿ ದನಿ ಏರಿಸಿದ್ದಾರೆ.

Kannada Bigg Boss
ಕನ್ನಡ ಬಿಗ್​ ಬಾಸ್
author img

By ETV Bharat Karnataka Team

Published : Nov 17, 2023, 2:10 PM IST

ನಟ ಸುದೀಪ್​ ಸಾರಥ್ಯದಲ್ಲಿ ನಡೆಯುವ 'ಕನ್ನಡ ಬಿಗ್​ ಬಾಸ್​' ಕಾರ್ಯಕ್ರಮ ಪ್ರೇಕ್ಷಕರಿಗೆ ಮನರಂಜನೆಯ ರಸದೌತಣ ಉಣಬಡಿಸುವಲ್ಲಿ ಯಶಸ್ವಿಯಾಗಿದೆ. ಪ್ರೀತಿ, ಸ್ನೇಹ, ಮುನಿಸು, ರಾಜಿ, ಸ್ಪರ್ಧೆ ಎಂಬ ನಾನಾ ಭಾವನೆಗಳ ಸಮ್ಮಿಶ್ರಣವೇ 'ಬಿಗ್​​ ಬಾಸ್​'. ವಿವಿಧ ಸನ್ನಿವೇಶಗಳಲ್ಲಿ ಸ್ಪರ್ಧಿಗಳ ನಾನಾ ಭಾವನೆಗಳು ವ್ಯಕ್ತವಾಗುತ್ತವೆ. ಅಚ್ಚುಕಟ್ಟಾಗಿ ಆಟ ಆಡುವವರು, ಪ್ರೇಕ್ಷಕರ ಗಮನ ಸೆಳೆಯುವವರು ಕೊನೆ ಹಂತದವರೆಗೂ ತಲುಪುತ್ತಾರೆ. ಬಿಗ್​ ಬಾಸ್​ ಕೊಡುವ ಟಾಸ್ಕ್ ಸಹ ಸವಾಲಿನದ್ದೇ ಆಗಿರುತ್ತದೆ. ಈ ಸವಾಲುಗಳನ್ನು ಸ್ಪರ್ಧಿಗಳು ಹೇಗೆ ಸ್ವಿಕರಿಸುತ್ತಾರೆಂಬುದೇ 'ಅವರ ಪರೀಕ್ಷೆ'.

ಕ್ಯಾಪ್ಟನ್ಸಿ ಟಾಸ್ಕ್‌: ವೀಕೆಂಡ್ ಬಂತು ಅಂದ್ರೆ ಕ್ಯಾಪ್ಟನ್ಸಿ ಟಾಸ್ಕ್‌ನ ಬಿಸಿ ಏರಲು ಶುರುವಾಗುತ್ತದೆ. ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಯಾರು ಭಾಗವಹಿಸಬೇಕು? ಯಾರು ಯಾರನ್ನು ಸಪೋರ್ಟ್‌ ಮಾಡಬೇಕು? ಲೆಕ್ಕಾಚಾರ ಹೇಗಿರಬೇಕು? ಈ ರೀತಿಯ ಚರ್ಚೆಗಳಲ್ಲಿಯೇ ಸ್ಫರ್ಧಿಗಳು ತಲ್ಲೀನರಾಗುತ್ತಾರೆ. ಈ ಹೊತ್ತಿನಲ್ಲಿ ಮನಸ್ತಾಪಗಳೂ ಉದ್ಭವಿಸುತ್ತವೆ.

ಬಿಗ್​ ಬಾಸ್​ ಪ್ರೋಮೋ: ಈ ಬಾರಿ 'ಕ್ಯಾಪ್ಟನ್ಸಿ ಟಾಸ್ಕ್‌'ಗೆ ಬಿಗ್‌ ಬಾಸ್ ಒಂದು ಸಣ್ಣ ಟ್ವಿಸ್ಟ್ ಕೊಟ್ಟಿದ್ದಾರೆ. ಕ್ಯಾಪ್ಟನ್ಸಿ ಟಾಸ್ಕ್‌ ಅನ್ನು ಯಾವ ಐದು ಸ್ಪರ್ಧಿಗಳು ಆಡಬೇಕು ಎಂಬುದನ್ನು ನೀವೇ ನಿರ್ಧರಿಸಿಕೊಳ್ಳಿ ಎಂದು ಹೇಳಿದ್ದಾರೆ. ನಮ್ರತಾ, ಸಿರಿ, ಕಾರ್ತಿಕ್, ಪ್ರತಾಪ್, ವರ್ತೂರು ಸಂತೋಷ್ ಈ ಐವರು ಕ್ಯಾಪ್ಟನ್ಸಿ ಆಡಬೇಕು ಎಂದು ಮನೆಯ ಸದಸ್ಯರು ವೋಟಿಂಗ್ ಮೂಲಕ ಆರಿಸಿದ್ದಾರೆ. ಆದರೆ ತುಕಾಲಿ ಸಂತೋಷ್ ಅವರಿಗೆ ಈ ವೋಟಿಂಗ್‌ ಬಗ್ಗೆ ಆಕ್ಷೇಪವಿದೆ. 'ಕ್ಯಾಪ್ಟನ್ಸಿ ಟಾಸ್ಕ್ ಯಾರು ಆಡಬೇಕು ಅನ್ನೋ ಗೊಂದಲ!' ಎಂಬ ಶೀರ್ಷಿಕೆಯಡಿ ಕಲರ್ಸ್ ಕನ್ನಡ ಸೋಷಿಯಲ್ ಮೀಡಿಯಾದಲ್ಲಿ ಇಂದಿನ ಸಂಚಿಕೆಯ ಪ್ರೋಮೋ ಅನಾವರಣಗೊಳಿಸಿದ್ದು, ಆಕ್ಷೇಪ ವಿಚಾರಗಳು ವಿಡಿಯೋದಲ್ಲಿ ಕಂಡುಬಂದಿದೆ.

ಇದನ್ನೂ ಓದಿ: ಡೀಪ್​ಫೇಕ್ ವಿವಾದ: ಸೋಷಿಯಲ್​ ಮೀಡಿಯಾ ಸಂಸ್ಥೆಗಳೊಂದಿಗೆ ಸಭೆ ನಡೆಸಲು ನಿರ್ಧರಿಸಿದ ಕೇಂದ್ರ ಸರ್ಕಾರ

ಸರಿಯಾಗಿ ವೋಟಿಂಗ್ ಆಗಿಲ್ಲ. ನಾವೂ ಭಾಗವಹಿಸಬೇಕೆಂಬ ಇಚ್ಛೆ ನಮ್ಮಲ್ಲೂ ಇರುತ್ತದೆ ಎಂದು ಮಾತು ಶುರು ಮಾಡಿದ್ದಾರೆ. ವಿನಯ್ ಅವರ ಮಾತಿಗೆ ವಿರೋಧ ವ್ಯಕ್ತಪಡಿಸಿ, ನೀವು ಆಡಿರುವುದು ಒಂದೇ ಟಾಸ್ಕ್‌ ಎಂದು ಹೇಳುತ್ತಾರೆ. ತುಕಾಲಿ ಸಂತೋಷ್​ ಅವರು ವಿನಯ್​ ಅವರ ಮಾತಿನಿಂದ ರೊಚ್ಚಿಗೆದ್ದು, ಒಂದೇ ಟಾಸ್ಕ್‌ನಲ್ಲಿ ನನ್ನನ್ನು ನಾನು ಪ್ರೂವ್ ಮಾಡಿಕೊಂಡಿದ್ದೀನಿ ಎಂದು ಹೇಳಿದ್ದಾರೆ. ಹೀಗೆ ಮಾತಿಗೆ ಮಾತು ಬೆಳೆದಿದೆ.

ಇದನ್ನೂ ಓದಿ: ಬಾಕ್ಸ್ ಆಫೀಸ್ ಪೈಪೋಟಿ; ಕತ್ರಿನಾ, ವಿಜಯ್ ಸೇತುಪತಿ ಅಭಿನಯದ 'ಮೇರಿ ಕ್ರಿಸ್ಮಸ್' ಮುಂದೂಡಿಕೆ

ಹಾಗಾದ್ರೆ ಕ್ಯಾಪ್ಟನ್ಸಿ ಟಾಸ್ಕ್‌ಗೆ ಆಡುವ ಸ್ಪರ್ಧಿಗಳ ಲೀಸ್ಟ್ ಬದಲಾಗುತ್ತದೆಯೇ? ತುಕಾಲಿ ಸಂತೋಷ್ ಅವರು ಕ್ಯಾಪ್ಟನ್ಸಿ ಟಾಸ್ಕ್‌ನ ಕಣಕ್ಕೆ ಇಳಿಯುತ್ತಾರೆಯೇ? ಈ ಪ್ರಶ್ನೆಗಳಿಗೆ ಉತ್ತರ ಸಿಗಲು ಜಿಯೋಸಿನಿಮಾದಲ್ಲಿ ನೇರ ಪ್ರಸಾರವಾಗುತ್ತಿರುವ ಬಿಗ್‌ ಬಾಸ್ ಕನ್ನಡವನ್ನು ವೀಕ್ಷಿಸಿ. ಬಿಗ್‌ ಬಾಸ್ ಕನ್ನಡದ 24 ಗಂಟೆಯ ನೇರಪ್ರಸಾರ ಜಿಯೋ ಸಿನಿಮಾದಲ್ಲಿ ಲಭ್ಯವಿದೆ. ಪ್ರತಿದಿನದ ಎಪಿಸೋಡ್‌ಗಳನ್ನು ಕಲರ್ಸ್ ಕನ್ನಡದಲ್ಲಿ ರಾತ್ರಿ 9.30ಕ್ಕೆ ವೀಕ್ಷಿಸಿ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.