ಪುಟ್ಟಗೌರಿ ಮದುವೆ ಮತ್ತು ಕನ್ನಡತಿ ಎಂಬ ಧಾರಾವಾಹಿ ಮೂಲಕ ಕರ್ನಾಟಕದ ಮನೆಮಾತಾಗಿರುವ ಕಿರುತೆರೆ ತಾರೆ ರಂಜನಿ ರಾಘವನ್ ಇದೀಗ ಹೊಸ ಫೋಟೋಶೂಟ್ ಮೂಲಕ ಸಖತ್ ಸೌಂಡ್ ಮಾಡುತ್ತಿದ್ದಾರೆ. ಈ ವಿಭಿನ್ನ ಫೋಟೋಶೂಟ್ ಸಾಮಾಜಿಕ ಜಾಲತಾಣದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡುತ್ತಿದೆ.
- " class="align-text-top noRightClick twitterSection" data="
">
ರಂಜನಿ ರಾಘವನ್ ಕನ್ನಡತಿ ಧಾರಾವಾಹಿ ಮೂಲಕ ಭರ್ಜರಿ ಯಶಸ್ಸು ಪಡೆದಿರುವ ನಟಿ. ಸದ್ಯ ಕಿರುತೆರೆಯಿಂದ ಹಿರಿತೆರೆಗೂ ಕಾಲಿಟ್ಟಿರುವ ಅವರು ತಮ್ಮ ಲವಲವಿಕೆಯ ನಟನೆ ಮತ್ತು ಮನಮೋಹಕ ಫೋಟೋಗಳ ಮೂಲಕ ಇಲ್ಲಿಯೂ ಗಮನ ಸೆಳೆಯುತ್ತಿದ್ದಾರೆ. ಮುಗ್ಧ ನಟನೆ ಮೂಲಕ ಮೋಡಿ ಮಾಡಿರುವ ರಂಜನಿ ಅವರು ಇದೀಗ ಸೀರೆಯಲ್ಲಿ ಕಾಣಿಸಿಕೊಂಡಿದ್ದು ಅವರ ಫೋಟೋ ಜಾಲತಾಣದಲ್ಲಿ ಜಾಗ ಪಡೆದಿದೆ.
- " class="align-text-top noRightClick twitterSection" data="
">
ಇದೇ ತಿಂಗಳ 23 ಮತ್ತು 24 ರಂದು ಮೈಸೂರಿನಲ್ಲಿ ನಡೆದ 6ನೇ ಜಿಲ್ಲಾ ಸಾಹಿತ್ಯ ಸಂಭ್ರದಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡ ಅವರು ನೆಟಿಜನ್ಗಳ ಮನಗೆದ್ದಿದ್ದಾರೆ. ಸಾಹಿತಿಯೂ ಆಗಿರುವ ಅವರು ಈ ಸಮಾರಂಭದಲ್ಲಿ ಗೂಗಲ್ ಪ್ರಿಂಟೆಡ್ ಸೀರೆ ಉಟ್ಟು ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಈ ಅಂದದ ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ಅವರು, ಹೆಣ್ಮಕ್ಕಳ ಮನಸ್ಸು ಅರ್ಥ ಆಗಲ್ಲ ಅನ್ನೋರು ಗೂಗಲ್ ಮಿ ಎಂದು ಶೀರ್ಷಿಕೆ ಬರೆದುಕೊಂಡಿದ್ದಾರೆ. ಸದ್ಯ ನಟಿಯ ಈ ಫೋಟೋಗಳು ಜಾಲತಾಣದಲ್ಲಿ ಸಾಕಷ್ಟು ಗಮನ ಸೆಳೆಯುತ್ತಿದೆ.
- " class="align-text-top noRightClick twitterSection" data="
">
ಏಪ್ರಿಲ್ 29ರಂದು ಅದ್ಧೂರಿಯಾಗಿ ತೆರೆಗೆ ಬಂದ ದಿಗಂತ್ ಮತ್ತು ಐಂದ್ರಿತಾ ರೇ ಜೊತೆಗೆ 'ಕ್ಷಮಿಸಿ, ನಿಮ್ಮ ಖಾತೆಯಲ್ಲಿ ಹಣವಿಲ್ಲ' ಸಿನಿಮಾದಲ್ಲಿ ರಂಜನಿ ರಾಘವನ್ ಪರದೆ ಹಂಚಿಕೊಂಡಿದ್ದಾರೆ. ಅಲ್ಲದೇ ಇತ್ತೀಚೆಗೆ ತೆರೆಕಂಡ ಮನೋಜ್ ಕುಮಾರ್ ನಟನೆಯ ಟಕ್ಕರ್ ಚಿತ್ರದಲ್ಲಿ ಮುಖ್ಯಪಾತ್ರದಲ್ಲಿ ಕಾಣಿಸಿಕೊಂಡಿದ್ದರು.