ETV Bharat / entertainment

Chandramukhi 2: ಬಹುನಿರೀಕ್ಷಿತ 'ಚಂದ್ರಮುಖಿ 2' ಬಿಡುಗಡೆ ದಿನಾಂಕ ಮುಂದೂಡಿಕೆ.. 'ಜವಾನ್​ ಎಫೆಕ್ಟ್'​ ಎಂದ ನೆಟ್ಟಿಗರು - ಈಟಿವಿ ಭಾರತ ಕನ್ನಡ

Chandramukhi 2 release delayed: ಸೆಪ್ಟಂಬರ್​ 19ರಂದು ಬಿಡುಗಡೆಯಾಗಬೇಕಿದ್ದ 'ಚಂದ್ರಮುಖಿ 2' ಸಿನಿಮಾ ಸೆಪ್ಟಂಬರ್​ 28ಕ್ಕೆ ಮುಂದೂಡಲ್ಪಟ್ಟಿದೆ.

Chandramukhi 2
ಚಂದ್ರಮುಖಿ 2
author img

By ETV Bharat Karnataka Team

Published : Sep 9, 2023, 11:35 AM IST

ಖ್ಯಾತ ನಿರ್ದೇಶಕ, ನಟ ಹಾಗೂ ಸ್ಟಾರ್​ ಕೊರಿಯೋಗ್ರಾಫರ್​ ರಾಘವ​ ಲಾರೆನ್ಸ್​​ ಮತ್ತು ಬಾಲಿವುಡ್​ ನಟಿ ಕಂಗನಾ ರಣಾವತ್​ ನಟನೆಯ ಬಹುನಿರೀಕ್ಷಿತ ಚಿತ್ರ 'ಚಂದ್ರಮುಖಿ 2'. ಈ ಸಿನಿಮಾದ ಬಿಡುಗಡೆ ದಿನಾಂಕವನ್ನು ಸೆಪ್ಟಂಬರ್​ 28ಕ್ಕೆ ಮುಂದೂಡಲಾಗಿದೆ ಎಂದು ತಯಾರಕರು ಶುಕ್ರವಾರ ಘೋಷಿಸಿದ್ದಾರೆ. ಹಿರಿಯ ನಿರ್ದೇಶಕ ಪಿ. ವಾಸು ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಹಾರರ್​ ಕಾಮಿಡಿ ಸಿನಿಮಾವನ್ನು ಸೆಪ್ಟಂಬರ್​ 19 ರಂದು ಬಿಡುಗಡೆಗೊಳಿಸಲು ನಿರ್ಧರಿಸಲಾಗಿತ್ತು. ಆದರೆ ಇದೀಗ 'ಚಂದ್ರಮುಖಿ 2' ಈ ತಿಂಗಳ ಕೊನೆಯಲ್ಲಿ ತೆರೆ ಕಾಣಲಿದೆ.

  • " class="align-text-top noRightClick twitterSection" data="">

ನಿರ್ಮಾಪಕರು ಹೇಳುವಂತೆ, 'ಚಂದ್ರಮುಖಿ 2' ಚಿತ್ರದ ದೃಶ್ಯವನ್ನು ಜನರಿಗೆ ಹೆಚ್ಚು ಪರಿಣಾಮಕಾರಿಯಾಗಿ ತೋರಿಸಲು ನಿರ್ಮಾಣ ತಂಡಕ್ಕೆ ಇನ್ನೂ ಸಮಯದ ಅಗತ್ಯತೆ ಇದೆ. ಪ್ರೇಕ್ಷಕರಿಗೆ ಉತ್ತಮ ಗುಣಮಟ್ಟದ ಸಿನಿಮೀಯ ಅನುಭವಕ್ಕಾಗಿ ಚಿತ್ರತಂಡ ಶ್ರಮಿಸುತ್ತಿದೆ. ಈ ಕಾರಣದಿಂದ ಚಿತ್ರದ ಬಿಡುಗಡೆಯನ್ನು ವಿಳಂಬಗೊಳಿಸಲು ನಿರ್ಮಾಪಕರು ನಿರ್ಧರಿಸಿದ್ದಾರೆ. ಸಿನಿ ಪ್ರೇಮಿಗಳು ಮತ್ತೊಂದಿಷ್ಟು ಹೊಸತನವನ್ನು ಬಯಸುತ್ತಿರುವ ಕಾರಣದಿಂದಾಗಿ ಇಂತಹ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಚಂದ್ರಮುಖಿ 2 ರಿಲೀಸ್​ ಡೇಟ್​ ಮುಂದೂಡಲಿದೆ ಎಂಬ ಊಹಾಪೋಹಗಳು ಈ ಮೊದಲು ಕೇಳಿಬಂದಿದ್ದವು. ಇದೀಗ ತಯಾರಕರು ಶುಕ್ರವಾರ ಸಂಜೆ ಖಚಿತಪಡಿಸಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿರುವ ಲೈಕಾ ಪ್ರೊಡಕ್ಷನ್ಸ್, "ತಾಂತ್ರಿಕ ವಿಳಂಬದಿಂದಾಗಿ ಚಂದ್ರಮುಖಿ 2 ಬಿಡುಗಡೆ ದಿನಾಂಕವನ್ನು ಸೆಪ್ಟಂಬರ್​ 28ಕ್ಕೆ ಮುಂದೂಡಲಾಗಿದೆ. ವೆಟ್ಟೈಯನ್​ ಮತ್ತು ಚಂದ್ರಮುಖಿ ಮತ್ತಷ್ಟು ಮನರಂಜನೆಯೊಂದಿಗೆ ಹಿಂತಿರುಗಲಿದ್ದಾರೆ. ಹೆಚ್ಚುವರಿ ವಿಶೇಷತೆಯೊಂದಿಗೆ ಥಿಯೇಟರ್​ಗಳಲ್ಲಿ ನಿಮ್ಮನ್ನು ಭೇಟಿ ಮಾಡುತ್ತೇವೆ" ಎಂದು ಬರೆದುಕೊಂಡಿದ್ದಾರೆ. ​

ಇದನ್ನೂ ಓದಿ: Chandramukhi 2 trailer: ಸ್ಟೈಲಿಶ್​ ಸೀರೆಯುಟ್ಟು ಮನಮೋಹಕ ನೋಟ ಬೀರಿದ 'ಚಂದ್ರಮುಖಿ' ತಾರೆ ಕಂಗನಾ ರಣಾವತ್

'ಜವಾನ್​ ಎಫೆಕ್ಟ್'​ ಎಂದ ನೆಟ್ಟಿಗರು: ಚಂದ್ರಮುಖಿ 2 ವಿಳಂಬವಾಗಲು ಸೆಪ್ಟಂಬರ್​ 7ರಂದು ಬಿಡುಗಡೆಯಾದ ಶಾರುಖ್​ ಖಾನ್​ ಅವರ ಜವಾನ್​ ಸಿನಿಮಾ ಕಾರಣ ಎಂದು ನೆಟ್ಟಿಗರು ಭಾವಿಸಿದ್ದಾರೆ. ಅದಲ್ಲದೇ ಇತ್ತೀಚೆಗೆ ಕಂಗನಾ ರಣಾವತ್​ ಅವರು ಜವಾನ್​ ಸಿನಿಮಾದಲ್ಲಿನ ಶಾರುಖ್​ ನಟನೆಯನ್ನು ಶ್ಲಾಘಿಸಿದ್ದರು. ಇನ್​ಸ್ಟಾ ಸ್ಟೋರಿನಲ್ಲಿ ಹೃದಯಸ್ಪರ್ಶಿ ಬರಹದೊಂದಿಗೆ ನಟ ಶಾರುಖ್​ ಬಗ್ಗೆ ಅಭಿಪ್ರಾಯ ಹಂಚಿಕೊಂಡಿದ್ದರು. ಬಾಲಿವುಡ್​ಗೆ ಕಿಂಗ್​ ಖಾನ್​ ಪುನರಾಗಮನವನ್ನು ಸುದೀರ್ಘ ಹೋರಾಟದ ನಂತರದ ಅದ್ಭುತ ಪ್ರಯಾಣ ಎಂದು ವರ್ಣಿಸಿದ್ದರು.

18 ವರ್ಷಗಳ ಬಳಿಕ ಚಂದ್ರಮುಖಿ ಸೀಕ್ವೆಲ್​: 2005 ರಲ್ಲಿ ಬಿಡುಗಡೆಯಾಗಿದ್ದ ಕ್ಲಾಸಿಕ್​ ಸಿನಿಮಾ ಚಂದ್ರಮುಖಿ ಬಾಕ್ಸ್​ ಆಫೀಸ್​ನಲ್ಲಿ ಹೊಸ ದಾಖಲೆ ಸೃಷ್ಟಿಸಿತ್ತು. ಸೂಪರ್​ಸ್ಟಾರ್​ ರಜನಿಕಾಂತ್​ ನಾಯಕನಾಗಿ ನಟಿಸಿದ್ದ ಈ ಚಿತ್ರ ಹಿಟ್​ ಲೀಸ್ಟ್​ ಸೇರಿತ್ತು. 18 ವರ್ಷದ ಬಳಿಕ ಚಂದ್ರಮುಖಿ ಪಾರ್ಟ್​ 2 ಬರುತ್ತಿದ್ದು, ಅಭಿಮಾನಿಗಳಲ್ಲಿ ನಿರೀಕ್ಷೆಯನ್ನು ಹೆಚ್ಚಿಸಿದೆ. ಚಿತ್ರವು ತೆಲುಗು, ತಮಿಳು, ಹಿಂದಿ, ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಚಿತ್ರತಂಡ ಹೀಗಿದೆ.. ರಾಘವ​ ಲಾರೆನ್ಸ್​​, ಕಂಗನಾ ರಣಾವತ್​ ಅಲ್ಲದೇ ಹಾಸ್ಯ ವಡಿವೇಲು, ಲಕ್ಷ್ಮೀ ಮೆನನ್​, ಮಹಿಮಾ ನಂಬಿಯಾರ್​, ರಾಧಿಕಾ ಶರತ್​ ಕುಮಾರ್​, ಸುರೇಶ್​ ಮೆನನ್​ ಸೇರಿದಂತೆ ದೊಡ್ಡ ತಾರಾಬಳಗವಿದೆ. ಲೈಕಾ ಪ್ರೊಡಕ್ಷನ್ಸ್​ ಸಂಸ್ಥೆಯ ಒಡೆಯ ಸುಭಾಷ್​ ಕರಣ್​ ಬಹಳ ಅದ್ಧೂರಿಯಾಗಿ ಚಿತ್ರ ನಿರ್ಮಿಸಿದ್ದಾರೆ. ಆಸ್ಕರ್​ ಪ್ರಶಸ್ತಿ ವಿಜೇತ ಎಂಎಂ ಕೀರವಾಣಿ ಸಂಗೀತ ನಿರ್ದೇಶನ, ಆರ್​.ಡಿ ರಾಜಶೇಖರ್​ ಛಾಯಾಗ್ರಹಣ, ಅಂಥೋನಿ ಸಂಕಲನ ಚಿತ್ರಕ್ಕಿದೆ. ಹಲವು ಸೂಪರ್​ ಹಿಟ್​ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಪಿ. ವಾಸು ಅವರ 65ನೇ ಚಿತ್ರವಿದು.

ಇದನ್ನೂ ಓದಿ: 'ಎಸ್‌ಆರ್‌ಕೆ ಸಿನಿಮಾ ಗಾಡ್, ನಿಮ್ಮ ಪರಿಶ್ರಮ, ನಮ್ರತೆಗೆ ನನ್ನ ನಮಸ್ಕಾರ': ಕಂಗನಾ ಗುಣಗಾನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.