ETV Bharat / entertainment

ಕಾಶಿಯಲ್ಲಿರುವ ಪ್ರತಿಯೊಂದು ಕಣದಲ್ಲೂ ಶಿವ ಇದ್ದಾನೆ; ಕಂಗನಾ ರಣಾವತ್

ಮಥುರಾದ ಎಲ್ಲೆಡೆ ಶ್ರೀಕೃಷ್ಣ ಇದ್ದರೆ, ಅಯೋಧ್ಯೆಯ ಎಲ್ಲಕಡೆ ಶ್ರೀರಾಮ ನೆಲೆಸಿದ್ದಾನೆ. ಅದರಂತೆಯೇ ಶಿವ ಸಹ ಎಲ್ಲಕಡೆ ಇದ್ದಾನೆ ಎಂದು ಬಾಲಿವುಡ್​ ನಟಿ ಕಂಗನಾ ರಣಾವತ್ ಹೇಳಿದ್ದಾರೆ.

Kangana Ranaut Visits Varanasi
Kangana Ranaut Visits Varanasi
author img

By

Published : May 19, 2022, 6:20 PM IST

ವಾರಣಾಸಿ (ಉತ್ತರ ಪ್ರದೇಶ): 'ಶಿವನಿಗೆ ದೇವಸ್ಥಾನದ ರಚನೆಯ ಅಗತ್ಯವಿಲ್ಲ, ಅವನು ಕಾಶಿಯಲ್ಲಿರುವ ಪ್ರತಿಯೊಂದು ಕಣದಲ್ಲೂ ಇದ್ದಾನೆ' ಎಂದು ಬಾಲಿವುಡ್​ ನಟಿ ಕಂಗನಾ ರಣಾವತ್ ಹೇಳಿದ್ದಾರೆ. ಧಾಕಡ್ ಚಿತ್ರದ ಪ್ರಚಾರದಲ್ಲಿ ತೊಡಗಿರುವ ಅವರು ಜ್ಞಾನವಾಪಿ ಮಸೀದಿ ವಿವಾದದ ಮಧ್ಯೆ ವಾರಣಾಸಿಗೆ ಭೇಟಿ ಕೊಟ್ಟ ವೇಳೆ ಈ ಹೇಳಿಕೆ ನೀಡಿದ್ದಾರೆ.

  • "There's Lord Krishna in every particle of Mathura & Lord Ram in every particle of Ayodhya. Similarly, there's Lord Shiva in every particle of Kashi. He doesn't need a structure, he resides in every particle," Kangana Ranaut when asked about Shivling claim site at Gyanvapi mosque pic.twitter.com/xFzdaT9lAb

    — ANI UP/Uttarakhand (@ANINewsUP) May 19, 2022 " class="align-text-top noRightClick twitterSection" data=" ">

ಮೇ 20ರಂದು ಅವರ ನಟನೆಯ ಬಹುನಿರೀಕ್ಷಿತ 'ಧಾಕಡ್' ಚಿತ್ರ ತೆರೆ ಕಾಣಲಿದ್ದು, ಅದಕ್ಕೂ ಮುನ್ನ ಆಶೀರ್ವಾದ ಪಡೆಯಲೆಂದು ಅವರು ಬುಧವಾರ ಕಾಶಿ ವಿಶ್ವನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಈ ವೇಳೆ ವಿಶೇಷ ಗಂಗಾ ಆರತಿಯನ್ನು ಮಾಡಿ ಪ್ರಾರ್ಥನೆ ಸಲ್ಲಿಸಿದರು.

  • Uttar Pradesh | Actor Kangana Ranaut, along with the team & cast of the film 'Dhaakad', visited and offered prayers at Shri Kashi Vishwanath Temple in Varanasi yesterday. pic.twitter.com/jxrj2EvsUB

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಥುರಾದ ಎಲ್ಲೆಡೆ ಶ್ರೀಕೃಷ್ಣ ಇದ್ದರೆ, ಅಯೋಧ್ಯೆಯ ಎಲ್ಲಕಡೆ ಶ್ರೀರಾಮ ನೆಲೆಸಿದ್ದಾನೆ. ಅದೇ ರೀತಿ ಶಿವ ಎಲ್ಲೆಡೆ ನೆಲೆಸಿದ್ದಾನೆ. ಹಾಗಾಗಿ ಶಿವನಿಗೆ ದೇವಸ್ಥಾನ ರಚನೆಯ ಅಗತ್ಯವಿಲ್ಲ, ಅವನು ಕಾಶಿಯ ಪ್ರತಿಯೊಂದು ಕಣದಲ್ಲೂ ಇದ್ದಾನೆ ಎಂದು 'ಹರ್ ಹರ್ ಮಹಾದೇವ್' ಘೋಷಣೆ ಕೂಗಿ ಗಮನ ಸೆಳೆದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.