ETV Bharat / entertainment

ಅಮೀರ್​ ಖಾನ್​ ವಿರುದ್ಧ ರಣಾವತ್​ ರೌದ್ರಾವತಾರ!

ಕಾರ್ಯಕ್ರಮವೊಂದರಲ್ಲಿ ತಮ್ಮ ಹೆಸರು ಪ್ರಸ್ತಾಪಿಸದ್ದಕ್ಕಾಗಿ ನಟಿ ಕಂಗನಾ ರಣಾವತ್ ಅವರು ನಟ ಅಮೀರ್​ ಖಾನ್​ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

author img

By

Published : Feb 11, 2023, 8:20 PM IST

Kangana Ranaut tweet against Aamir Khan
ಅಮೀರ್ ವಿರುದ್ಧ ಕಂಗನಾ ಆಕ್ರೋಶ

ಕಂಗನಾ ರಣಾವತ್ ಸದಾ ಒಂದಿಲ್ಲೊಂದು ವಿಚಾರದಲ್ಲಿ ಸುದ್ದಿ ಮಾಡುವ ಬಾಲಿವುಡ್​ ನಟಿ. ಚಿತ್ರರಂಗದ ಹಲವರ ಮೇಲೆ ಈಗಾಗಲೇ ಆರೋಪ, ಆಕ್ರೋಶದ ಮಳೆ ಸುರಿಸಿದ್ದಾರೆ. ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಈವರೆಗೂ ಅಂಜದ, ಹೆದರದ ಬಾಲಿವುಡ್​ ಕ್ವೀನ್​ ಖ್ಯಾತಿಯ ಕಂಗನಾ ರಣಾವತ್ ಇದೀಗ ಮಿಸ್ಟರ್​ ಪರ್ಫೆಕ್ಷನಿಷ್ಟ್ ಖ್ಯಾತಿಯ ಅಮೀರ್​ ಖಾನ್​ ಅವರನ್ನು ಗುರಿಯಾಗಿಸಿಕೊಂಡಿದ್ದಾರೆ.

ಖ್ಯಾತ ಲೇಖಕಿ ಶೋಭಾ ಡೆ (Shobhaa De) ಅವರ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ನಟ ಅಮೀರ್​ ಖಾನ್​ ಆಗಮಿಸಿದ್ದರು. ಲೇಖಕಿ ಶೋಭಾ ಡೆ ಅವರೊಂದಿಗೆ ಕೆಲ ವಿಚಾರಗಳ ಬಗ್ಗೆ ಅಮೀರ್​ ಖಾನ್ ಚರ್ಚೆ ನಡೆಸಿದ್ದಾರೆ. ಲೇಖಕಿ ಶೋಭಾ ಅವರೊಂದಿಗಿನ ಅಮೀರ್ ಖಾನ್​​ ಸಂವಾದದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಗಮನಿಸಿದ ನಟಿ ಕಂಗನಾ ರಣಾವತ್ ಅವರು ಸೂಪರ್‌ಸ್ಟಾರ್ ಅಮೀರ್ ಖಾನ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

  • Shobaa ji and I have opposing political views but that doesn’t stop her from acknowledging my art, hard work and dedication to my craft that is the reflection of one’s integrity and value system…. Wish you the best for your new book maam 🙏

    — Kangana Ranaut (@KanganaTeam) February 11, 2023 " class="align-text-top noRightClick twitterSection" data=" ">

ಇತ್ತೀಚೆಗೆ ಬಾಲಿವುಡ್​ ತಾರಾ ದಂಪತಿ (ರಣಬೀರ್ ಕಪೂರ್ ಎಂದು ನೆಟ್ಟಿಗರು ಊಹಿಸಿದ್ದಾರೆ) ಮೇಲೆ ಮುಸುಕಿನ ಗುದ್ದಾಟ ನಡೆಸಿದ ನಂತರ, ಈಗ ಅಮೀರ್ ಖಾನ್​ ಅವರು ನಟಿಯ ಗುರಿಯಾಗಿದ್ದಾರೆ. ಕಂಗನಾ ತಮ್ಮ ಇತ್ತೀಚಿನ ಟ್ವೀಟ್‌ನಲ್ಲಿ ಸೂಪರ್‌ಸ್ಟಾರ್ ಅಮೀರ್​ ಅವರನ್ನು "ಬೇಚಾರ" ಎಂದು ಕರೆದಿದ್ದಾರೆ. ಇಂದು ಬೆಳಗ್ಗೆ ನಟಿಯ ಅಭಿಮಾನಿಗಳ ಕ್ಲಬ್‌ ಒಂದು ಪೋಸ್ಟ್ ಮಾಡಿದ್ದ ವಿಡಿಯೋವನ್ನು ಕಂಗನಾ ರಣವತ್ ಹಂಚಿಕೊಂಡು ಅಮೀರ್​ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ವಿಡಿಯೋ ಲೇಖಕಿ ಶೋಭಾ ಡೆ ಅವರ ಕೃತಿ (Insatiable) ಸಮಾರಂಭದ್ದು. ಮುಂಬೈನಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ನಟ ಅಮೀರ್ ಖಾನ್​ ಈ ಪುಸ್ತಕವನ್ನು ಅನಾವರಣಗೊಳಿಸಿದರು.

  • Sorry I have four national awards already and a PadmaShri my fans reminded I don’t even remember how many I have 🫢

ಸಮಾರಂಭದಲ್ಲಿ ಲೇಖಕಿ ಶೋಭಾ ಡೆ ಬಯೋಪಿಕ್​ಗೆ ಬಾಲಿವುಡ್‌ನ ಯಾವ ನಟಿ ಸೂಕ್ತ ಎಂಬ ಪ್ರಶ್ನೆ ಕೇಳಲಾಯಿತು. ಬಹು ಬೇಡಿಕೆ ನಟಿಯರಾದ ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ ಮತ್ತು ಆಲಿಯಾ ಭಟ್ ಹೆಸರನ್ನು ಉಲ್ಲೇಖಿಸಿದರು. ಅವರು ನಿಜ ಜೀವನದಲ್ಲಿಯೂ ಬಹಳ ಸ್ಟ್ರಾಂಗ್​ ಇದ್ದಾರೆ ಎಂದು ಅಮೀರ್​ ಖಾನ್​ ತಿಳಿಸಿದರು. ಆದರೆ ಶೋಭಾ ಅವರ ಮನಸ್ಸಿನಲ್ಲಿ ಬೇರೆಯೇ ಹೆಸರಿತ್ತು. ನಟಿ ಕಂಗನಾ ರಣಾವತ್ ಬಗ್ಗೆ ಅಭಿಪ್ರಾಯವೇನು ಎಂದು ಅಮೀರ್​ ಅವರಲ್ಲಿ ಪ್ರಶ್ನಿಸಿದರು. ಶೋಭಾ ಅವರೇ ಕಂಗನಾರ ಹೆಸರನ್ನು ತೆಗೆದುಕೊಂಡ ನಂತರ, ಅಮೀರ್ ಖಾನ್​ ಕಂಗನಾ ಅವರು ಕೂಡ ಚೆನ್ನಾಗಿ ನಟಿಸುತ್ತಾರೆ ಎಂಬುದನ್ನು ಒಪ್ಪಿಕೊಂಡರು. ಕಂಗನಾ ನಟನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಮೆಚ್ಚುಗೆ ವ್ಯಕ್ತಪಡಿಸಿದ ಮೇಲೂ ನಟಿ ಕಂಗನಾ ರಣಾವತ್, ಅಮೀರ್​ ಖಾನ್​ ವಿರುದ್ಧ ಅಸಮಾಧಾನಗೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಟ್ವಿಟರ್​ನಲ್ಲಿ ಶೋಭಾ ಡೆ ಅವರ ಕೃತಿ ಬಿಡುಗಡೆ ಸಮಾರಂಭದ ವಿಡಿಯೋ ಹಂಚಿಕೊಂಡು, "ಬೇಚಾರ ಅಮೀರ್ ಖಾನ್, ಹ್ಹ ಹಹ್ಹಾ, ನಾನು ಮೂರು ಬಾರಿ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ಎಂದು ಅವರಿಗೆ ಗೊತ್ತಿಲ್ಲದಂತೆ ನಟಿಸಲು ಅವರು ತಮ್ಮ ಕೈಲಾದಷ್ಟು ಪ್ರಯತ್ನಿಸಿದ್ದಾರೆ. ಅವರು ಪ್ರಸ್ತಾಪಿಸಿದವರಲ್ಲಿ ಒಬ್ಬರೂ ಈ ಸಾಧನೆ ಮಾಡಿಲ್ಲ. ಶೋಭಾ ಜಿ ಧನ್ಯವಾದಗಳು. ನಾನು ನಿಮ್ಮ ಪಾತ್ರ ನಿರ್ವಹಿಸಲು ಇಷ್ಟ ಪಡುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಇನ್​ಸ್ಟಾಗ್ರಾಮ್​ನಲ್ಲಿ ನಟನ ಮೇಲೆ ಆರೋಪಗಳ ಮಳೆ: ಕಂಗನಾ ರಣಾವತ್ ರಹಸ್ಯ ಪೋಸ್ಟ್​​ನಲ್ಲೇನಿದೆ?

2016ರಲ್ಲಿ ಕಂಗನಾ ರಣಾವತ್ ಅವರು ರಿಯೊ ಒಲಿಂಪಿಕ್ಸ್‌ನಲ್ಲಿ ಭಾರತೀಯ ಕ್ರೀಡಾಪಟುಗಳನ್ನು ಲೇವಡಿ ಮಾಡಿದ್ದಕ್ಕಾಗಿ ಲೇಖಕಿ ಶೋಭಾ ಡೆ ಅವರನ್ನು ಟೀಕಿಸಿದ್ದರು. ಆದಾಗ್ಯೂ ಒಂದು ವರ್ಷದ ನಂತರ, ಶೋಭಾ ಅವರ 'ಸೆವೆಂಟಿ & ಟು ಹೆಲ್ ವಿತ್ ಇಟ್‌' ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕಂಗನಾ ಭಾಗವಹಿಸಿದ್ದಾಗ, ಇಬ್ಬರೂ ಒಬ್ಬರನ್ನೊಬ್ಬರು ಹೊಗಳಿಕೊಂಡಿದ್ದರು. ಇದೀಗ ಅಮೀರ್​ ಅವರಲ್ಲಿ ಶೋಭಾ ಅವರು ಕಂಗನಾ ಹೆಸರನ್ನು ಪ್ರಸ್ತಾಪಿಸಿದ್ದು, ರಣಾವತ್​​ ಖಾನ್​ ವಿರುದ್ಧ ಗರಂ ಆಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.