ಬಾಲಿವುಡ್ ನಟಿ ಕಂಗನಾ ರಣಾವತ್ ಸಿನಿ ಲೋಕದಲ್ಲಿ ಸಾಕಷ್ಟು ಸಾಧನೆ ಮಾಡಿ ಫೇಮಸ್ ಆಗಿದ್ದಾರೆ. ವೈಯಕ್ತಿಕ ಹಾಗೂ ವೃತ್ತಿ ಜೀವನ ಎರಡು ವಿಚಾರವಾಗಿಯೂ ಅವರು ಸುದ್ದಿಯಲ್ಲಿರುತ್ತಾರೆ. ಇದೀಗ ಐತಿಹಾಸಿಕ ಕ್ಷಣವೊಂದಕ್ಕೆ ಮುನ್ನುಡಿ ಬರೆಯಲು ಸಜ್ಜಾಗಿದ್ದಾರೆ. ದೆಹಲಿಯ ಕೆಂಪು ಕೋಟೆಯಲ್ಲಿ ನಡೆಯುವ ಲವಕುಶ ರಾಮ್ಲೀಲಾ ಸಮಾರಂಭದಲ್ಲಿ ನಟಿ ರಾವಣ ದಹನ ಮಾಡಲಿದ್ದಾರೆ. 50 ವರ್ಷದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಓರ್ವ ಮಹಿಳೆ ರಾವಣ ದಹನ ಮಾಡಲಿದ್ದಾರೆ. ಈ ವಿಚಾರವನ್ನು ಲವಕುಶ ರಾಮ್ಲೀಲಾ ಸಮಿತಿಯ ಅಧ್ಯಕ್ಷ ಅರ್ಜುನ್ ಸಿಂಗ್ ತಿಳಿಸಿದ್ದಾರೆ.
ಸೆಪ್ಟೆಂಬರ್ನಲ್ಲಿ ಸಂಸತ್ತು ಅಂಗೀಕರಿಸಿದ ಮಹಿಳಾ ಮೀಸಲಾತಿ ಮಸೂದೆಯಿಂದ ಸಮಿತಿಯು ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದು ಅರ್ಜುನ್ ಸಿಂಗ್ ಬಹಿರಂಗಪಡಿಸಿದ್ದಾರೆ. "ಇಷ್ಟು ವರ್ಷ ನಮ್ಮ ಸಮಾರಂಭದಲ್ಲಿ ಚಲನಚಿತ್ರ ತಾರೆಯರು ಅಥವಾ ರಾಜಕಾರಣಿಗಳು ರಾವಣ ದಹನವನ್ನು ಮಾಡುತ್ತಿದ್ದರು. ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ, ನಟ ಅಜಯ್ ದೇವಗನ್, ಜಾನ್ ಅಬ್ರಾಹಂ ಅವರಂತಹ ಗಣ್ಯರು ಈ ಕೆಲಸ ಮಾಡಿದ್ದಾರೆ. ಕಳೆದ ವರ್ಷ ನಟ ಪ್ರಭಾಸ್ ರಾವಣ ದಹನವನ್ನು ಮಾಡಿದ್ದರು. ಆದರೆ ಇದೇ ಮೊದಲ ಬಾರಿಗೆ 50 ವರ್ಷಗಳ ಇತಿಹಾಸದಲ್ಲಿ ಮಹಿಳೆಯೊಬ್ಬರು ರಾವಣನ ಪ್ರತಿಕೃತಿಗೆ ಬೆಂಕಿ ಹಚ್ಚುತ್ತಿದ್ದಾರೆ" ಎಂದು ಮಾಹಿತಿ ಸಿಕ್ಕಿದೆ.
ಇದನ್ನೂ ಓದಿ: ಸಲ್ಮಾನ್ ಖಾನ್ಗೆ 'ಫ್ಲರ್ಟಿಂಗ್ ಸ್ಕಿಲ್' ಪ್ರದರ್ಶಿಸಲು ಹೇಳಿದ ಕಂಗನಾ ರಣಾವತ್- ವಿಡಿಯೋ ನೋಡಿ!
ಕಳೆದ 50 ವರ್ಷಗಳಿಂದ ಪುರುಷರಿಂದಲೇ ರಾವಣ ದಹನ ಮಾಡಲಾಗುತ್ತಿತ್ತು. ಆದರೆ ಈ ವರ್ಷ ಕಂಗನಾ ರಣಾವತ್ ಅವರು ಈ ಕೆಲಸ ಮಾಡಲಿದ್ದಾರೆ. ಕೆಂಪು ಕೋಟೆಯಲ್ಲಿ ನಡೆಯುವ ಲವಕುಶ ರಾಮ್ಲೀಲಾದಲ್ಲಿ ರಾವಣ ದಹನ ಮಾಡಿದ ಮೊದಲ ಮಹಿಳೆ ಎಂಬ ಖ್ಯಾತಿಗೆ ಕಂಗನಾ ರಣಾವತ್ ಪಾತ್ರರಾಗುತ್ತಿದ್ದಾರೆ. ಕಳೆದ ವರ್ಷ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಅವರು ರಾವಣ ದಹನ ಮಾಡಿದ್ದರು. ಅದಕ್ಕೂ ಹಿಂದಿನ ವರ್ಷಗಳಲ್ಲಿ ನರೇಂದ್ರ ಮೋದಿ, ರಾಮನಾಥ್ ಕೋವಿಂದ್, ಅಜಯ್ ದೇವಗನ್, ಜಾನ್ ಅಬ್ರಾಹಂ ಮುಂತಾದವರು ಭಾಗಿ ಆಗಿದ್ದರು.
'ತೇಜಸ್' ಪ್ರಚಾರದಲ್ಲಿ ಕಂಗನಾ ಬ್ಯುಸಿ: ಕಂಗನಾ ರಣಾವತ್ ಅಭಿನಯದ ಮುಂಬರುವ ಬಹುನಿರೀಕ್ಷಿತ ಸಿನಿಮಾ 'ತೇಜಸ್'. ಇತ್ತೀಚೆಗಷ್ಟೇ ಅವರ ನಟನೆಯ 'ಚಂದ್ರಮುಖಿ 2' ಸಿನಿಮಾ ತೆರೆಕಂಡಿದ್ದು, ದೊಡ್ಡ ಮಟ್ಟದಲ್ಲಿ ಸದ್ದು ಮಾಡಿಲ್ಲ. ಈ ಹಿನ್ನೆಲೆ ನಟಿಯ ಮುಂದಿನ ಸಿನಿಮಾಗಳ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಸದ್ಯ 'ತೇಜಸ್' ಚಿತ್ರದ ಪ್ರಚಾರ ಕಾರ್ಯದಲ್ಲಿ ಕಂಗನಾ ಬ್ಯುಸಿಯಾಗಿದ್ದಾರೆ. ತೇಜಸ್ ಗಿಲ್ ಪಾತ್ರಕ್ಕೆ ಕಂಗನಾ ರಣಾವತ್ ಜೀವ ತುಂಬಿದ್ದಾರೆ. ರೋನಿ ಅವರ ಆರ್‌ಎಸ್‌ವಿಪಿ ಬ್ಯಾನರ್ ನಿರ್ಮಾಣದ ಈ ಚಿತ್ರವನ್ನು ಸರ್ವೇಶ್ ಮೇವಾರಾ ಬರೆದು ನಿರ್ದೇಶಿಸಿದ್ದಾರೆ. ಚಿತ್ರ ಇದೇ ಅಕ್ಟೋಬರ್ 27 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.
ಇದನ್ನೂ ಓದಿ: ಭಾರತದಲ್ಲಿ ₹250 ಕೋಟಿಯತ್ತ ಮುನ್ನುಗ್ಗುತ್ತಿರುವ 'ಲಿಯೋ'; ಆರನೇ ದಿನ ಕಲೆಕ್ಷನ್ ___ಸಾಧ್ಯತೆ?