ETV Bharat / entertainment

'ದಿ ಕೇರಳ ಸ್ಟೋರಿ ತಮ್ಮ ಮೇಲಿನ ದಾಳಿಯೆಂದು ಭಾವಿಸಿದವರು ಭಯೋತ್ಪಾದಕರು'

author img

By

Published : May 6, 2023, 6:35 PM IST

'ದಿ ಕೇರಳ ಸ್ಟೋರಿ' ವಿವಾದ ವಿಚಾರವಾಗಿ ಬಾಲಿವುಡ್ ನಟಿ ಕಂಗನಾ ರಣಾವತ್ ಮಾತನಾಡಿದ್ದಾರೆ.

Kangana Ranaut on The Kerala Story
ಕಂಗನಾ ರಣಾವತ್ ದಿ ಕೇರಳ ಸ್ಟೋರಿ ಹೇಳಿಕೆ

ಬಾಲಿವುಡ್ ನಟಿ ಕಂಗನಾ ರಣಾವತ್ ಸಿನಿಮಾ, ಸೌಂದರ್ಯ, ಹೇಳಿಕೆಗಳಿಗೆ ಹೆಸರುವಾಸಿಯಾಗಿದ್ದಾರೆ. ಯಾರಿಗೂ ಅಂಜದೇ, ಬೋಲ್ಡ್​ ಹೇಳಿಕೆಗಳ ಮೂಲಕ ಧೈರ್ಯವಂತೆಯಾಗಿ ಗುರುತಿಸಿಕೊಂಡಿದ್ದಾರೆ. ಇದೀಗ 'ದಿ ಕೇರಳ ಸ್ಟೋರಿ' ಸಿನಿಮಾ ಕುರಿತು ಹೇಳಿಕೆ ನೀಡಿದ್ದು, ಸಂಚಲನ ಸೃಷ್ಟಿಸಿದ್ದಾರೆ.

ಭಾರೀ ವಿವಾದಗಳ ನಡುವೆಯೇ 'ದಿ ಕೇರಳ ಸ್ಟೋರಿ' ಸಿನಿಮಾ ಶುಕ್ರವಾರ ತೆರೆಕಂಡಿದೆ. 40 ಕೋಟಿ ರೂ. ಬಜೆಟ್​ನಲ್ಲಿ ನಿರ್ಮಾಣವಾದ ಈ ಸಿನಿಮಾ ಮೊದಲ ದಿನವೇ 8.03 ಕೋಟಿ ರೂ. ಕಲೆಕ್ಷನ್​ ಮಾಡಿದೆ. ಇಂದು ಮತ್ತು ನಾಳೆ ವಾರಾಂತ್ಯವಾಗಿರುವ ಹಿನ್ನೆಲೆಯಲ್ಲಿ ಸಿನಿಮಾ ಹೆಚ್ಚು ಕಲೆಕ್ಷನ್​ ಮಾಡುವ ನಿರೀಕ್ಷೆ ಇದೆ. ಈ ಸಿನಿಮಾ ಬಗ್ಗೆ ನಿನ್ನೆ ಸಾರ್ವಜನಿಕ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮಾತನಾಡಿದ್ದರು. ಇದೀಗ ಕಂಗನಾ ರಣಾವತ್​​ ಕೂಡ ಈ ಚಿತ್ರದ ಪ್ರತಿಕ್ರಿಯೆ ವಿಭಾಗಗಕ್ಕೆ ಧುಮುಕಿದ್ದಾರೆ.

ಸುದಿಪ್ತೋ ಸೇನ್ ನಿರ್ದೇಶನದ, ವಿಪುಲ್ ಅಮೃತಲಾಲ್ ಶಾ ನಿರ್ಮಾಣದ ಈ ಚಿತ್ರದಲ್ಲಿ ಅದಾ ಶರ್ಮಾ ನಟಿಸಿದ್ದಾರೆ. ಯೋಗಿತಾ ಬಿಹಾನಿ, ಸೋನಿಯಾ ಬಲಾನಿ ಮತ್ತು ಸಿದ್ಧಿ ಇದ್ನಾನಿ ಸೇರಿದಂತೆ ಹಲವರು ಪ್ರಮುಖ ಪಾತ್ರ ವಹಿಸಿದ್ದಾರೆ. ಸಿನಿಮಾ ಬಿಡುಗಡೆಗೂ ಮುನ್ನ ವಿವಾದಕ್ಕೊಳಗಾಗಿದ್ದ ಈ ಚಿತ್ರ, ಟ್ರೇಲರ್​ ಮೂಲಕ ಭಾರಿ ಆಕ್ರೋಶಕ್ಕೆ ಎಡೆ ಮಾಡಿಕೊಟ್ಟಿತು. ನಿನ್ನೆ ತೆರೆಕಂಡಿರುವ ಈ ಚಿತ್ರ ವಿವಾದಗಳ ಕೇಂದ್ರವಾಗಿದೆ. ಪರ ವಿರೋಧ ಚರ್ಚೆಗೆ ವೇದಿಕೆ ಸೃಷ್ಟಿಸಿದೆ.

ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಬಾಲಿವುಡ್ ನಟಿ ಕಂಗನಾ ರಣಾವತ್, 'ದಿ ಕೇರಳ ಸ್ಟೋರಿ ಚಿತ್ರದಿಂದ ಯಾರಾದರು ತಮ್ಮ ಮೇಲೆ ದಾಳಿ ಆಗಿದೆ ಎಂದು ಭಾವಿಸಿದರೆ ಅವರು ಭಯೋತ್ಪಾದಕರು' ಎಂದು ಹೇಳಿದ್ದಾರೆ. ನಾನು ಚಿತ್ರವನ್ನು ನೋಡಿಲ್ಲ, ಆದರೆ ಅದನ್ನು ನಿಷೇಧಿಸಲು ಸಾಕಷ್ಟು ಪ್ರಯತ್ನಗಳು ನಡೆದಿವೆ ಎಂಬ ಸುದ್ದಿಯನ್ನು ಇಂದು ಓದಿ ತಿಳಿದುಕೊಂಡೆ. ತಪ್ಪಾಗಿದ್ದರೆ ನನ್ನ ಹೇಳಿಕೆ ಸರಿಪಡಿಸಿ ಎಂದು ನಟಿ ತಿಳಿಸಿದ್ದಾರೆ.

ಇದನ್ನೂ ಓದಿ: 40 ಕೋಟಿ ಬಜೆಟ್‌ನಲ್ಲಿ ತಯಾರಾದ 'ದಿ ಕೇರಳ ಸ್ಟೋರಿ' ಮೊದಲ ದಿನದ ಕಲೆಕ್ಷನ್​ ಎಷ್ಟು ಗೊತ್ತಾ?

ಈ ಬಗ್ಗೆ ಮಾತು ಮುಂದುವರಿಸಿದ ಕಂಗನಾ ರಣಾವತ್, 'ಚಿತ್ರವನ್ನು ನಿಷೇಧಿಸಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ. ಸಿನಿಮಾ ISIS ಹೊರತುಪಡಿಸಿ ಯಾರನ್ನೂ ಕೆಟ್ಟದಾಗಿ ತೋರಿಸುತ್ತಿಲ್ಲ ಎಂದು ನಾನು ಭಾವಿಸುತ್ತೇನೆ. ಅಲ್ಲವೇ?. ದೇಶದ ಅತ್ಯಂತ ಜವಾಬ್ದಾರಿಯುತ ಸಂಸ್ಥೆಯಾದ ಹೈಕೋರ್ಟ್ ಈ ಮಾತನ್ನು ಹೇಳುತ್ತಿದೆ. ಹಾಗಾದರೆ ಸಿನಿಮಾ ಸರಿಯಾಗಿಯೇ ಇದೆ. ISIS ಒಂದು ಭಯೋತ್ಪಾದಕ ಸಂಘಟನೆ. ನಾನು ಭಯೋತ್ಪಾದಕ ಸಂಘಟನೆ ಎಂದು ಹೆಸರಿಸುತ್ತಿಲ್ಲ. ನಮ್ಮ ದೇಶ, ಗೃಹ ಸಚಿವಾಲಯ (ಗೃಹ ಸಚಿವಾಲಯ) ಮತ್ತು ಇತರೆ ದೇಶಗಳು ಹಾಗೆ ಹೇಳಿವೆ ಎಂದು ತಿಳಿಸಿದರು.

ಇದನ್ನೂ ಓದಿ: ಮಧ್ಯಪ್ರದೇಶದಲ್ಲಿ 'ದಿ ಕೇರಳ ಸ್ಟೋರಿ' ತೆರಿಗೆ ಮುಕ್ತ: ಭಯಾನಕ ಸತ್ಯ ಬಹಿರಂಗಪಡಿಸುವ ಚಿತ್ರ ಎಂದ ಸಿಎಂ

ಇದು (ISIS) ಭಯೋತ್ಪಾದಕ ಸಂಘಟನೆಯಲ್ಲ ಎಂದು ನೀವು ಭಾವಿಸಿದರೆ, ನೀವು ಸಹ ಭಯೋತ್ಪಾದಕರು ಎಂಬುದು ಸ್ಪಷ್ಟ. ದಾಳಿ ಆಗುತ್ತಿದೆ (ಸಿನಿಮಾ ನಿಮ್ಮನ್ನು ಗುರಿಯಾಗಿಸಿದೆ ಎಂದುಕೊಂಡವರು) ಎಂದು ಭಾವಿತ್ತಿರುವ ಜನರ ಬಗ್ಗೆ ನಾನು ಮಾತನಾಡುತ್ತಿದ್ದೇನೆ. ಚಿತ್ರ ನಿಮ್ಮ ಮೇಲೆ ದಾಳಿ ನಡೆಸುತ್ತಿದೆ ಎಂದು ನೀವು ಭಾವಿಸಿದರೆ, ನೀವು ಭಯೋತ್ಪಾದಕರು ಎಂದು ತಿಳಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.