ETV Bharat / entertainment

ಬಾಲಿವುಡ್​ ಕ್ವೀನ್​ ಕಂಗನಾ ರಣಾವತ್ ಅಭಿನಯದ 'ತೇಜಸ್' ಟ್ರೇಲರ್​ ಅನಾವರಣ - Kangana Ranaut Tejas

Tejas Trailer Release: ಕಂಗನಾ ರಣಾವತ್ ಮುಖ್ಯಭೂಮಿಕೆಯ 'ತೇಜಸ್' ಟ್ರೇಲರ್​ ಬಿಡುಗಡೆ ಆಗಿದೆ.

Tejas trailer release
ತೇಜಸ್ ಟ್ರೇಲರ್​ ಅನಾವರಣ
author img

By ETV Bharat Karnataka Team

Published : Oct 8, 2023, 2:46 PM IST

ಬಾಲಿವುಡ್​​ ನಟಿ ಕಂಗನಾ ರಣಾವತ್ ಅಭಿನಯದ ಮುಂಬರುವ ಬಹುನಿರೀಕ್ಷಿತ ಸಿನಿಮಾ 'ತೇಜಸ್'. ಇತ್ತೀಚೆಗಷ್ಟೇ ಚಂದ್ರಮುಖಿ 2 ಸಿನಿಮಾ ತೆರೆಕಂಡಿದ್ದು, ದೊಡ್ಡ ಮಟ್ಟದಲ್ಲಿ ಸದ್ದು ಮಾಡಿಲ್ಲ. ಈ ಹಿನ್ನೆಲೆ ನಟಿಯ ಮುಂದಿನ ಸಿನಿಮಾಗಳ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ.

ತೇಜಸ್ ಟ್ರೇಲರ್​ ಅನಾವರಣ: ಇಂದು ಏರ್ ಫೋರ್ಸ್ ದಿನವಾದ ಹಿನ್ನೆಲೆ 'ತೇಜಸ್' ಅಧಿಕೃತ ಟ್ರೇಲರ್​ ಅನಾವರಣಗೊಂಡಿದೆ. ಟ್ರೇಲರ್ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಪ್ರತಿಕ್ರಿಯೆ ಸ್ವೀಕರಿಸಿದೆ. ಕಂಗನಾ ರಣಾವತ್​ ಅಭಿಮಾನಿಗಳಿಗೆ ಈ ಟ್ರೇಲರ್​​ ಅತ್ಯಂತ ರೋಮಾಂಚಕವಾಗಿದ್ದರೆ, ಕೆಲವರಿಗೆ ತೀರಾ ಸಾಧಾರಣ ದೃಶ್ಯ ಎನಿಸಿದೆ. ಒಂದಿಷ್ಟು ಮಂದಿಗೆ 2022 ರಲ್ಲಿ ಬಿಡುಗಡೆಯಾದ ಟಾಮ್ ಕ್ರೂಸ್ ಅವರ ಟಾಪ್ ಗನ್: ಮಾವೆರಿಕ್ ಅನ್ನು ನೆನಪಿಗೆ ತಂದಿದೆ. ಒಟ್ಟಾರೆ ಮಿಶ್ರ ಪ್ರತಿಕ್ರಿಯೆ ಸ್ವೀಕರಿಸಿದ್ದು, ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ.

  • " class="align-text-top noRightClick twitterSection" data="">

ಖಡಕ್​ ಡೈಲಾಗ್ಸ್: 2 ನಿಮಿಷ, 33 ಸೆಕೆಂಡ್​ಗಳುಳ್ಳ ಟ್ರೇಲರ್ ಭಾರತೀಯ ಯುದ್ಧ ವಿಮಾನಗಳ ಅದ್ಭುತ ವೈಮಾನಿಕ ದೃಶ್ಯಗಳನ್ನು ಒಳಗೊಂಡಿದೆ. ಜೊತೆಗೆ ಕಂಗನಾ ರಣಾವತ್​​​ ಅವರ ಡೈಲಾಗ್​ನಿಂದ ಟ್ರೇಲರ್​ ಪ್ರಾರಂಭವಾಗುತ್ತದೆ. ನೀವು ಭಾರತವನ್ನು ಪ್ರಚೋದಿಸಿದರೆ, ನಾವು ನಿಮ್ಮನ್ನು ಬಿಡುವುದಿಲ್ಲ ಎಂಬ ಖಡಕ್​ ಡೈಲಾಗ್​ ಸಿನಿಪ್ರಿಯರ ಮನಮುಟ್ಟಿದೆ.

ತೇಜಸ್ ಟ್ರೇಲರ್ ರೋಮಾಂಚಕ ವೈಮಾನಿಕ ಕಾದಾಟವನ್ನು ಪ್ರದರ್ಶಿಸುವುದರ ಜೊತೆಗೆ ಕಂಗನಾರ ಪಾತ್ರವನ್ನು ಪರಿಚಯಿಸಿದೆ. ತೇಜಸ್ ಗಿಲ್ ಪಾತ್ರಕ್ಕೆ ಕಂಗನಾ ರಣಾವತ್​ ಜೀವ ತುಂಬಿದ್ದಾರೆ. ತಮ್ಮ ಕೋಚ್ ಮಾರ್ಗದರ್ಶನದಲ್ಲಿ ಹೊರಹೊಮ್ಮಿದ ಅತ್ಯಂತ ಧೈರ್ಯಶಾಲಿ, ಫೈಟರ್ ಪೈಲಟ್ ಎಂದು ಕಂಗನಾರನ್ನು ಪರಿಚಯಿಸಲಾಗಿದೆ. ತೇಜಸ್‌ ಜೊತೆ ಆತ್ಮೀಯ ಸಂಬಂಧ ಹೊಂದಿದ್ದ ಗೂಢಾಚಾರನನ್ನು ಪಾಕಿಸ್ತಾನದಲ್ಲಿ ಭಯೋತ್ಪಾದಕರು ಸೆರೆಹಿಡಿದು ಹಿಂಸಿಸಿದ ಹಿನ್ನೆಲೆ, ಘಟನೆ ತೀವ್ರ ಸ್ವರೂಪ ಪಡೆಯುತ್ತದೆ. ಗೂಢಾಚಾರಿಯನ್ನು ರಕ್ಷಿಸಲು ತನಗೆ ಅವಕಾಶ ನೀಡುವಂತೆ ತೇಜಸ್ ತಮ್ಮ ಹಿರಿಯರಲ್ಲಿ ವಿನಂತಿಸುತ್ತಾರೆ. ಹೀಗೆ ಟ್ರೇಲರ್ ರೋಮಾಂಚಕ ಆ್ಯಕ್ಷನ್ ಸೀಕ್ವೆನ್ಸ್‌, ಡೈಲಾಗ್ಸ್​ ಮೂಲಕ ಗಮನ ಸೆಳೆದಿದೆ..

ಟ್ರೇಲರ್​ಗೆ ಮಿಶ್ರ ಪ್ರತಿಕ್ರಿಯೆ: ಸೋಷಿಯಲ್ ಮೀಡಿಯಾದಲ್ಲಿ ತೇಜಸ್ ಟ್ರೇಲರ್​ಗೆ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕೆಲ ಸಾಮಾಜಿಕ ಜಾಲತಾಣ ಬಳಕೆದಾರರು ಕಂಗನಾ ಅವರ ಅಭಿನಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಜೊತೆಗೆ ಸಿನಿಮಾ ಬ್ಲಾಕ್​ಬಸ್ಟರ್ ಹಿಟ್ ಎಂದು ಭವಿಷ್ಯ ನುಡಿದಿದ್ದಾರೆ. ಕೆಲವರು ಟಾಪ್ ಗನ್: ಮಾವೆರಿಕ್‌ ಸಿನಿಮಾಗೆ ಹೋಲಿಸಿದ್ದಾರೆ. ಹಾಲಿವುಡ್ ಚಲನಚಿತ್ರದ ಕಾಪಿ ಎಂದೂ ಕೂಡ ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಟ್ರೇಲರ್​ ಕುರಿತ ಮಿಶ್ರ ಪ್ರತಿಕ್ರಿಯೆ ಮುಂದುವರಿದಿದೆ.

ಇದನ್ನೂ ಓದಿ: ಇಸ್ರೇಲ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿದ ನಟಿ ನುಶ್ರತ್ ಭರುಚಾ ಸುರಕ್ಷಿತವಾಗಿ ಭಾರತಕ್ಕೆ ವಾಪಸ್

ರೋನಿ ಅವರ ಆರ್‌ಎಸ್‌ವಿಪಿ ಬ್ಯಾನರ್ ನಿರ್ಮಾಣದ ಈ ಚಿತ್ರವನ್ನು ಸರ್ವೇಶ್ ಮೇವಾರಾ ಬರೆದು ನಿರ್ದೇಶಿಸಿದ್ದಾರೆ. ಚಿತ್ರ ಇದೇ ಅಕ್ಟೋಬರ್ 27 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ. ಚಂದ್ರಮುಖಿ 2 ಮೂಲಕ ಕೊಂಚ ಹಿನ್ನೆಡೆ ಅನುಭವಿಸಿರುವ ಕಂಗನಾ ಅವರಿಗೆ ತೇಜಸ್ ಎಷ್ಟರಮಟ್ಟಿಗೆ ಗೆಲುವು ತಂದುಕೊಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಸಿಕ್ಕಿಂ ಪ್ರವಾಹದಲ್ಲಿ ತೆಲುಗು ಹಿರಿಯ ನಟಿ ಸರಳ ಕುಮಾರಿ ನಾಪತ್ತೆ: ತಾಯಿಯನ್ನು ಪತ್ತೆ ಹಚ್ಚುವಂತೆ ಮಗಳ ಮನವಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.