ETV Bharat / entertainment

'ಯಾರೂ ಮಿತಿ ಮೀರಬಾರದು': ಬಿಜೆಪಿ ಸಂಸದರಿಗೆ ಕಂಗನಾ ಕ್ಲಾಸ್ - Ramesh Bidhuri

ಬಿಜೆಪಿ ಸಂಸದ ರಮೇಶ್ ಬಿಧುರಿ ಅವರು ಬಿಎಸ್ಪಿ ಸಂಸದ ಡ್ಯಾನಿಶ್ ಅಲಿ ಅವರ ವಿರುದ್ಧ ನೀಡಿರುವ ಆಕ್ಷೇಪಾರ್ಹ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ್ದಾರೆ.

Kangana Ranaut reacts on Ramesh Bidhuri statements
ಬಿಜೆಪಿ ಸಂಸದ ರಮೇಶ್ ಬಿಧುರಿ ಹೇಳಿಕೆಗೆ ಕಂಗನಾ ಪ್ರತಿಕ್ರಿಯೆ
author img

By ETV Bharat Karnataka Team

Published : Sep 23, 2023, 1:32 PM IST

ಬಾಲಿವುಡ್ ಕ್ವೀನ್​ ಖ್ಯಾತಿಯ ಕಂಗನಾ ರಣಾವತ್​ ಅವರು ವಿಭಿನ್ನ ಸಿನಿಮಾ, ಅದ್ಭುತ ಪಾತ್ರ, ಅತ್ಯುತ್ತಮ ನಟನೆ ಮಾತ್ರವಲ್ಲದೇ ಸ್ಟೇಟ್​ಮೆಂಟ್ಸ್​ ಸಲುವಾಗಿಯೂ ಸಖತ್​ ಸುದ್ದಿಯಲ್ಲಿದ್ದಾರೆ. ತಮ್ಮ ಅಭಿಪ್ರಾಯಗಳನ್ನು ನೇರವಾಗಿ ವ್ಯಕ್ತಪಡಿಸುವ ನಟಿಮಣಿಯರ ಪೈಕಿ ಇವರು ಮೊದಲಿಗರು. ಇದೀಗ ಬಿಜೆಪಿ ಸಂಸದ ರಮೇಶ್ ಬಿಧುರಿ ಕುರಿತು ಮಾತನಾಡಿದ್ದಾರೆ ಎನ್ನಲಾದ ಹೇಳಿಕೆಗಳು ಸದ್ದು ಮಾಡುತ್ತಿವೆ.

ಕೆನಡಾ ಮೂಲದ ಪಂಜಾಬಿ ಗಾಯಕ ಶುಭ್​​ನೀತ್ ಸಿಂಗ್ (Shubhneet Singh) ಅವರ ಪೋಸ್ಟ್‌ಗೆ ನಟಿ ಖಾರವಾಗಿ ಪ್ರತ್ಯುತ್ತರ ನೀಡಿದ್ದರು. ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನೂ ಸಹ ಕಂಗನಾ ಟೀಕಿಸಿದ್ದರು. ಇದೆಲ್ಲದರ ನಡುವೆ ಇದೀಗ ಬಿಜೆಪಿ ಸಂಸದ ರಮೇಶ್ ಬಿಧುರಿ ಅವರು ಬಿಎಸ್ಪಿ ಸಂಸದ ಡ್ಯಾನಿಶ್ ಅಲಿ ಅವರ ವಿರುದ್ಧ ನೀಡಿದ್ದಾರೆ ಎನ್ನಲಾದ ಆಕ್ಷೇಪಾರ್ಹ ಹೇಳಿಕೆಗೂ ಕಂಗನಾ ಪ್ರತಿಕ್ರಿಯಿಸಿದ್ದಾರೆ.

Kangana Ranaut reacts on Ramesh Bidhuri statements
ಕಂಗನಾ ರಣಾವತ್​ ಇನ್​ಸ್ಟಾಗ್ರಾಮ್​ ಪೋಸ್ಟ್

ಕ್ವೀನ್​ ನಟಿ ಕಂಗನಾ ರಣಾವತ್​ ಸೋಷಿಯಲ್​ ಮಿಡಿಯಾದಲ್ಲಿ ಸಖತ್​ ಸದ್ದು ಮಾಡುತ್ತಿದ್ದ ಪೋಸ್ಟ್​ ಒಂದನ್ನು ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿನಲ್ಲಿ ರೀ ಶೇರ್ ಮಾಡಿಕೊಂಡಿದ್ದು, ''ಯಾರೂ ಕೂಡ ಮಿತಿ ಮೀರಬಾರದು, ಒಂದು ವೇಳೆ ಯಾರೇ ಆದರೂ ಆ ಗೆರೆ ದಾಟಿದರೆ ಅದರ ಪರಿಣಾಮ ಶೀಘ್ರ ಶಮನವಾಗುವುದಿಲ್ಲ. ಅದರಲ್ಲಿ, ಎಷ್ಟು ದೂರ ನಾವು ಮುನ್ನಡೆಯಬಹುದು?. ಮರ್ಯಾದಾ ಪುರುಷೋತ್ತಮ​​ ಶ್ರೀರಾಮನ ಮಾತುಗಳನ್ನು ಅನುಸರಿಸಿ ಎಂದು ಎಲ್ಲರಲ್ಲಿ ವಿನಂತಿಸಿಕೊಳ್ಳುತ್ತಿದ್ದೇನೆ. ಘನತೆ ಕಾಪಾಡಿಕೊಳ್ಳಿ, ಜೈ ಶ್ರೀರಾಮ್​'' ಎಂದು ಬರೆದುಕೊಂಡಿದ್ದಾರೆ.

​ನಟಿ ಕಂಗನಾ ರಣಾವತ್ ಸಿನಿಮಾ ವಿಚಾರ ಗಮನಿಸುವುದಾದರೆ, ಪಿ. ವಾಸು ಅವರ ಚಂದ್ರಮುಖಿ 2 ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಘವ್​ ಲಾರೆನ್ಸ್ ಅವರೊಂದಿಗೆ ಕಂಗನಾ ಸ್ಕ್ರೀನ್​ ಶೇರ್ ಮಾಡಿದ್ದು, ಇದೇ ಸೆಪ್ಟೆಂಬರ್​ 28ರಂದು ಸಿನಿಮಾ ತೆರೆಕಾಣಲಿದೆ. ಸೂಪರ್​ ಸ್ಟಾರ್​ಗಳಾದ ರಜನಿಕಾಂತ್​ ಮತ್ತು ಜ್ಯೋತಿಕಾ ಮುಖ್ಯಭೂಮಿಕೆಯ ಬ್ಲಾಕ್​ಬಸ್ಟರ್ ಸಿನಿಮಾ ಚಂದ್ರಮುಖಿಯ ಮುಂದುವರಿದ ಭಾಗ.

ಇದನ್ನೂ ಓದಿ: ಮಮ್ಮಿಯಾದರೂ ಮಾಸದ ಸೌಂದರ್ಯ: ಫೋಟೋಗಳಲ್ಲಿ ಕಂಗೊಳಿಸಿದ ಪ್ರಣಿತಾ ಸುಭಾಷ್​​

ಇದಲ್ಲದೇ, ಸರ್ವೇಶ್ ಮೇವಾರ ಅವರ ತೇಜಸ್‌ ಸಿನಿಮಾದಲ್ಲಿಯೂ ಕಂಗನಾ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರ ಅಕ್ಟೋಬರ್ 20 ರಂದು ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಲಿದೆ. ಅಲ್ಲದೇ, ತಾವೇ ನಿರ್ದೇಶಿಸಿ, ನಟಿಸಿ, ನಿರ್ಮಾಣ ಮಾಡಿರುವ ಎಮರ್ಜೆನ್ಸಿ ಸಿನಿಮಾ ಕೂಡ ಬಿಡುಗಡೆಗೆ ಸಿದ್ಧತೆ ನಡೆಸುತ್ತಿದೆ. ಹಿರಿಯ ನಟರಾದ ಅನುಪಮ್ ಖೇರ್, ಸತೀಶ್ ಕೌಶಿಕ್ ಮತ್ತು ಮಿಲಿಂದ್ ಸೋಮನ್ ಕೂಡ ಪ್ರಮುಖ ಪಾತ್ರ ವಹಿಸಿರುವ ಈ ಎಮರ್ಜೆನ್ಸಿ ಸಿನಿಮಾ ನವೆಂಬರ್ 24 ರಂದು ತೆರೆಗಪ್ಪಳಿಸಲಿದೆ.

ಇದನ್ನೂ ಓದಿ: ಹೊಳೆಯುವ ಉಡುಗೆ, ಕಂಗೊಳಿಸುವ ಕಣ್ಣು; ಸೌಂದರ್ಯದ ನಿಧಿ ಶ್ರೀನಿಧಿ ಶೆಟ್ಟಿ ಚೆಲುವಿಗೆ ಮನಸೋಲದವರಾರು?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.