ETV Bharat / entertainment

ಚಂದ್ರಮುಖಿ 2 ಶೂಟಿಂಗ್​​ನಲ್ಲಿ ಕಂಗನಾ ರಣಾವತ್: ಪ್ರಸಿದ್ಧ ನೃತ್ಯಗಾರ್ತಿ ಪಾತ್ರಕ್ಕೆ ಜೀವ ತುಂಬಲಿರುವ ನಟಿ - ಚಂದ್ರಮುಖಿ

ದಕ್ಷಿಣದ ಚಂದ್ರಮುಖಿ 2 ಶೂಟಿಂಗ್​ನಲ್ಲಿ ನಟಿ ಕಂಗನಾ ರಣಾವತ್ ಬ್ಯುಸಿಯಾಗಿದ್ದಾರೆ.

Kangana Ranaut in Chandramukhi 2 shooting
ಚಂದ್ರಮುಖಿ 2 ಶೂಟಿಂಗ್​​ನಲ್ಲಿ ಕಂಗನಾ ರಣಾವತ್
author img

By

Published : Mar 1, 2023, 3:41 PM IST

ಬಾಲಿವುಡ್​​ ನಟಿ ಕಂಗನಾ ರಣಾವತ್ ಸಿನಿಮಾ, ಶೂಟಿಂಗ್​ನಿಂದ ಬಿಡುವು ತೆಗೆದುಕೊಳ್ಳುವ ಮನಸ್ಥಿತಿಯಲ್ಲಿಲ್ಲ. ಬಹು ನಿರೀಕ್ಷಿತ ಎಮರ್ಜೆನ್ಸಿ ಸಿನಿಮಾ ಚಿತ್ರೀಕರಣ ಮುಗಿಸಿರುವ ಕಂಗನಾ ರಣಾವತ್ ತಮ್ಮ ಮುಂದಿನ ಚಂದ್ರಮುಖಿ 2ಗೆ ಶೂಟಿಂಗ್​ ಆರಂಭಿಸಿದ್ದಾರೆ.

ಚಂದ್ರಮುಖಿ 2 ಶೂಟಿಂಗ್​​ನಲ್ಲಿ ಕಂಗನಾ: ಚಂದ್ರಮುಖಿ 2 ಶೂಟಿಂಗ್​ ಪ್ರಾರಂಭವಾಗಿದೆ. ಈವರೆಗೆ ಎಮರ್ಜೆನ್ಸಿ ಸಿನಿಮಾದಲ್ಲಿ ಬ್ಯುಸಿ ಇದ್ದರು. ಎಮರ್ಜೆನ್ಸಿ ಚಿತ್ರದ ಶೂಟಿಂಗ್​​ ಕಂಪ್ಲೀಟ್​ ಆಗಿದ್ದು, ಪೋಸ್ಟ್ ಪ್ರೊಡಕ್ಷನ್​ ಕೆಲಸದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಜನವರಿಯಲ್ಲಿ ಚಂದ್ರಮುಖಿ 2 ಚಿತ್ರದ ಮೊದಲ ಶೆಡ್ಯೂಲ್​ನ ಶೂಟಿಂಗ್​​ ಪೂರ್ಣಗೊಂಡಿದ್ದು, ಮುಂದಿನ ಹಂತದ ಶೂಟಿಂಗ್​​ ಹೈದರಾಬಾದ್‌ನಲ್ಲಿ ಆರಂಭವಾಗಿದೆ. ಚಂದ್ರಮುಖಿ 2ರ ಮಹತ್ವದ ದೃಶ್ಯವನ್ನು ಇಂದು ಚಿತ್ರೀಕರಿಸುವುದಾಗಿ ನಟಿ ಕಂಗನಾ ರಣಾವತ್​​ ತಮ್ಮ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

  • Back on the sets of my upcoming movie Chandramukhi 2… with me team … it’s a very dramatic look and situation… we are all very excited about it 🎭 pic.twitter.com/W6AIa5p2Ml

    — Kangana Ranaut (@KanganaTeam) March 1, 2023 " class="align-text-top noRightClick twitterSection" data=" ">

ಕಂಗನಾ ರಣಾವತ್ ಟ್ವೀಟ್: ಟ್ವಿಟರ್‌ನಲ್ಲಿ ಚಂದ್ರಮುಖಿ 2ರ ಚಿತ್ರಗಳನ್ನು ಶೇರ್ ಮಾಡಿದ್ದಾರೆ. ಮಹತ್ವದ ದೃಶ್ಯಕ್ಕಾಗಿ ತಯಾರಾಗುತ್ತಿರುವುದನ್ನು ಈ ಚಿತ್ರದಲ್ಲಿ ಕಾಣಬಹುದು. ಕಂಗನಾ ರಣಾವತ್​​ ಹಂಚಿಕೊಂಡಿರುವ ಚಿತ್ರಗಳಲ್ಲಿ, ಕಾಸ್ಟ್ಯೂಮ್ ಡಿಸೈನರ್ ನೀತಾ ಲುಲ್ಲಾ ಕೂಡ ಕಾಣಿಸಿಕೊಂಡಿದ್ದಾರೆ. ಈ ಚಿತ್ರಗಳನ್ನು ಹಂಚಿಕೊಂಡ ಕಂಗನಾ, ತಾನು ಉತ್ಸುಕರಾಗಿರುವ ಅತ್ಯಂತ ಮಹತ್ವದ ದೃಶ್ಯಗಳ ಚಿತ್ರೀಕರಣವನ್ನು ಮಾಡುವುದಾಗಿ ಬಹಿರಂಗಪಡಿಸಿದ್ದಾರೆ.

ಪ್ರಸಿದ್ಧ ನೃತ್ಯಗಾರ್ತಿ ಪಾತ್ರ: ಪಿ ವಾಸು ಆ್ಯಕ್ಷನ್​ ಕಟ್​ ಹೇಳುತ್ತಿರುವ ಈ ಚಂದ್ರಮುಖಿ 2 ಸಿನಿಮಾ ಕಳೆದ ಡಿಸೆಂಬರ್‌ನಲ್ಲಿ ಚಿತ್ರೀಕರಣ ಆರಂಭಿಸಿದೆ. ರಜನಿಕಾಂತ್ ಮತ್ತು ಜ್ಯೋತಿಕಾ ಅವರ ತಮಿಳಿನ ಬ್ಲಾಕ್​ಬಸ್ಟರ್ ಚಿತ್ರ ಚಂದ್ರಮುಖಿಯ ಸೀಕ್ವೆಲ್ ಇದು. ಸೌಂದರ್ಯ, ನಟನೆ ಮತ್ತು ನೃತ್ಯಕ್ಕೆ ಹೆಸರಾಗಿರುವ ನೃತ್ಯಗಾರ್ತಿಯ ಪಾತ್ರವನ್ನು ಕಂಗನಾ ನಿರ್ವಹಿಸಲಿದ್ದಾರೆ. ಚಿತ್ರದಲ್ಲಿ ತಮಿಳು ನಟ, ನಿರ್ದೇಶಕ ರಾಘವ ಲಾರೆನ್ಸ್ ಪ್ರಮುಖ ಪಾತ್ರದಲ್ಲಿ ನಿರ್ವಹಿಸುತ್ತಿದ್ದಾರೆ. ಚಂದ್ರಮುಖಿ 2 ಬಿಡುಗಡೆಯ ದಿನಾಂಕವನ್ನು ನಿರ್ಮಾಪಕರು ಇನ್ನೂ ಬಹಿರಂಗಪಡಿಸಿಲ್ಲ.

ಇದನ್ನೂ ಓದಿ: 'ಅನುಷ್ಕಾ ನನ್ನ ಸ್ಫೂರ್ತಿ, ಶಕ್ತಿ': ಪತ್ನಿ ಬಗ್ಗೆ ವಿರಾಟ್​ ಕೊಹ್ಲಿ ಹೃದಯಸ್ಪರ್ಶಿ ಮಾತು

ದಕ್ಷಿಣದ ಸಿನಿಮಾ ತಲೈವಿ ಬಳಿಕ ನಟಿ ಕಂಗನಾ ರಣಾವತ್ ಅವರ ಮತ್ತೊಂದು ತಮಿಳು ಚಿತ್ರ ಚಂದ್ರಮುಖಿ 2. ಪಿ ವಾಸು ನಿರ್ದೇಶನದ ಚಂದ್ರಮುಖಿ 2ರಲ್ಲಿ ಕಂಗನಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಿದ್ದಾರೆ. ಚಂದ್ರಮುಖಿ 1 ಅನ್ನೂ ಸಹ 2005ರಲ್ಲಿ ಪಿ.ವಾಸು ಅವರೇ ನಿರ್ದೇಶಿಸಿದ್ದರು. ಅದರಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಹಾಗೂ ಜ್ಯೋತಿಕಾ ಅವರು ನಟಿಸಿದ್ದರು. ಈ ಚಿತ್ರದಲ್ಲಿ ಕಂಗನಾ ರಾಜನ ಆಸ್ಥಾನದಲ್ಲಿ ಪ್ರಸಿದ್ಧ ನೃತ್ಯಗಾರ್ತಿ ಪಾತ್ರ ನಿರ್ವಹಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಚಂದ್ರಮುಖಿ 2 ಮುಖ್ಯಪಾತ್ರದಲ್ಲಿ ಕಂಗನಾ ಮಿಂಚು: ದಕ್ಷಿಣದತ್ತ ಬಾಲಿವುಡ್ ಬೆಡಗಿ

ಮಣಿಕರ್ಣಿಕಾ ರಿಟರ್ನ್ಸ್: ದಿ ಲೆಜೆಂಡ್ ಆಫ್ ದಿಡ್ಡಾ, ದಿ ಇನ್ಕಾರ್ನೇಶನ್: ಸೀತಾ ಚಿತ್ರದಲ್ಲಿಯೂ ಕಂಗನಾ ಕಾಣಿಸಿಕೊಳ್ಳಲಿದ್ದಾರೆ. ನಿರ್ಮಾಣದ ಕೆಲಸ ಗಮನಿಸುವುದಾದರೆ, ನವಾಜುದ್ದೀನ್ ಸಿದ್ದಿಕಿ ಮತ್ತು ಅವನೀತ್ ಕೌರ್ ನಟಿಸಿರುವ ಟಿಕು ವೆಡ್ಸ್ ಶೇರು ಅಮೆಜಾನ್ ಪ್ರೈಮ್ ವೀಡಿಯೊದಲ್ಲಿ ಸ್ಟ್ರೀಮ್ ಆಗಲಿದ್ದು, ಎಮರ್ಜೆನ್ಸಿ ಅಕ್ಟೋಬರ್ 20ರಂದು ಬಿಡುಗಡೆ ಆಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.