ETV Bharat / entertainment

ರಕ್ಷಣಾ ಸಚಿವರು, ವಾಯುಪಡೆ ಅಧಿಕಾರಿಗಳಿಗೆ 'ತೇಜಸ್'​ ವಿಶೇಷ ಪ್ರದರ್ಶನ ಆಯೋಜಿಸಿದ್ದ ಕಂಗನಾ ರಣಾವತ್​ - ಈಟಿವಿ ಭಾರತ ಕನ್ನಡ

ನಟಿ ಕಂಗನಾ ರಣಾವತ್ ಅವರು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ವಾಯುಪಡೆ ಅಧಿಕಾರಿಗಳಿಗೆ 'ತೇಜಸ್' ಸಿನಿಮಾದ ವಿಶೇಷ ಪ್ರದರ್ಶನವನ್ನು ಆಯೋಜಿಸಿದ್ದರು.

Kangana Ranaut hosts special screening of Tejas in delhi for Defence Minister Rajnath Singh and Air Force Officers
ರಕ್ಷಣಾ ಸಚಿವ ಹಾಗೂ ವಾಯುಪಡೆ ಅಧಿಕಾರಿಗಳಿಗೆ 'ತೇಜಸ್'​ ವಿಶೇಷ ಪ್ರದರ್ಶನ ಆಯೋಜಿಸಿದ್ದ ಕಂಗನಾ ರಣಾವತ್​
author img

By ETV Bharat Karnataka Team

Published : Oct 22, 2023, 11:21 AM IST

ಬಾಲಿವುಡ್​​ ನಟಿ ಕಂಗನಾ ರಣಾವತ್ ಅಭಿನಯದ ಮುಂಬರುವ ಬಹುನಿರೀಕ್ಷಿತ ಸಿನಿಮಾ 'ತೇಜಸ್'. ಇತ್ತೀಚೆಗಷ್ಟೇ ಅವರ ನಟನೆಯ 'ಚಂದ್ರಮುಖಿ 2' ಸಿನಿಮಾ ತೆರೆಕಂಡಿದ್ದು, ದೊಡ್ಡ ಮಟ್ಟದಲ್ಲಿ ಸದ್ದು ಮಾಡಿಲ್ಲ. ಈ ಹಿನ್ನೆಲೆ ನಟಿಯ ಮುಂದಿನ ಸಿನಿಮಾಗಳ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಸದ್ಯ 'ತೇಜಸ್​' ಚಿತ್ರದ ಪ್ರಚಾರ ಕಾರ್ಯದಲ್ಲಿ ಕಂಗನಾ ಬ್ಯುಸಿಯಾಗಿದ್ದಾರೆ.

ಈ ಹಿನ್ನೆಲೆ ಶನಿವಾರ ಅವರು ದೆಹಲಿಯ ಇಂಡಿಯನ್​ ಏರ್​ಫೋರ್ಸ್​ ಅಡಿಟೋರಿಯಂನಲ್ಲಿ ಆಕ್ಷನ್​ ಥ್ರಿಲ್ಲರ್​ 'ತೇಜಸ್' ಚಿತ್ರದ ವಿಶೇಷ ಪ್ರದರ್ಶನವನ್ನು ಆಯೋಜಿಸಿದ್ದರು. ಇದರಲ್ಲಿ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಹಾಗೂ ಹಲವು ಭಾರತೀಯ ವಾಯುಪಡೆಯ ಅಧಿಕಾರಿಗಳು ಭಾಗವಹಿಸಿದ್ದರು. ಈ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ವಿಶೇಷ ಪೋಸ್ಟ್​ವೊಂದನ್ನು ಕಂಗನಾ ರಣಾವತ್​ ಹಂಚಿಕೊಂಡಿದ್ದಾರೆ.

ರಕ್ಷಣಾ ಸಚಿವರೊಂದಿಗಿನ ಫೋಟೋವನ್ನು ಶೇರ್​ ಮಾಡಿರುವ ಅವರು, "ಗೌರವಾನ್ವಿತ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಹಾಗೂ ಭಾರತೀಯ ವಾಯುಪಡೆಯ ಅನೇಕ ಗಣ್ಯರಿಗೆ ಇಂದು ಸಂಜೆ (ಶನಿವಾರ) ಭಾರತೀಯ ವಾಯುಪಡೆಯ ಸಭಾಂಗಣದಲ್ಲಿ ತೇಜಸ್ ತಂಡ ವಿಶೇಷ ಸ್ಕ್ರೀನಿಂಗ್​ ನಡೆಸಿತು. ನಮ್ಮ ದೇಶದ ಸೈನಿಕರಿಗಾಗಿ ಮೀಸಲಾದ ಈ ಸಿನಿಮಾವನ್ನು ನೋಡುವುದು ಅವರಿಗೆ ರೋಮಾಂಚನಕಾರಿ ಅನುಭವ ನೀಡಿತು. ಚೀಫ್​ ಆಫ್​ ಡಿಫೆನ್ಸ್​ ಸ್ಟಾಫ್​ ಜನರಲ್​ ಅನಿಲ್​ ಚೌಹಾಣ್​ PVSM, UYSM, AVSM, SM, VSM ಚಲನಚಿತ್ರಗಳನ್ನು ವೀಕ್ಷಿಸಿದ ನಂತರ ಅವರು ತಮ್ಮ ಜಾಕೆಟ್​ನಿಂದ ಫೈಟರ್​ ಜೆಟ್​ ಆಕಾರದ ಬ್ರೂಚ್​​ ಅನ್ನು ತೆಗೆದು ನನ್ನ ನಿರ್ದೇಶಕ ಸರ್ವೇಶ್ ಮೇವಾರಾ ಅವರಿಗೆ ಉಡುಗೊರೆಯಾಗಿ ನೀಡಿದರು. ಈ ಆತಿಥ್ಯ ನಮ್ಮನ್ನು ಆಳವಾಗಿ ತಲುಪಿತು. ನಮ್ಮ ಪ್ರಯತ್ನದಲ್ಲಿ ಗೆದ್ದಿದ್ದೇವೆ ಎಂದು ತೋರುತ್ತದೆ. ಅಕ್ಟೋಬರ್​ 27ರಂದು ನಿಮ್ಮೆಲ್ಲರ ಮುಂದೆ 'ತೇಜಸ್' ಚಿತ್ರವನ್ನು ತರಲು ನಾವು ಥ್ರಿಲ್ಲ್​ ಆಗಿದ್ದೇವೆ" ಎಂದು ಬರೆದುಕೊಂಡಿದ್ದಾರೆ.

'ತೇಜಸ್' ಟ್ರೇಲರ್: ಕೆಲವು ದಿನಗಳ ಹಿಂದೆ 'ತೇಜಸ್' ಟ್ರೇಲರ್ ಬಿಡುಗಡೆಯಾಗಿತ್ತು. ಕಂಗನಾ ರಣಾವತ್​ ಅಭಿಮಾನಿಗಳಿಗೆ ಈ ಟ್ರೇಲರ್​​ ಅತ್ಯಂತ ರೋಮಾಂಚಕವಾಗಿದ್ದರೆ, ಕೆಲವರಿಗೆ ತೀರಾ ಸಾಧಾರಣ ದೃಶ್ಯ ಎನಿಸಿದೆ. ಒಂದಿಷ್ಟು ಮಂದಿಗೆ 2022 ರಲ್ಲಿ ಬಿಡುಗಡೆಯಾದ ಟಾಮ್ ಕ್ರೂಸ್ ಅವರ ಟಾಪ್ ಗನ್: ಮಾವೆರಿಕ್ ಅನ್ನು ನೆನಪಿಗೆ ತಂದಿದೆ. ತೇಜಸ್ ಟ್ರೇಲರ್ ರೋಮಾಂಚಕ ವೈಮಾನಿಕ ಕಾದಾಟವನ್ನು ಪ್ರದರ್ಶಿಸುವುದರ ಜೊತೆಗೆ ಕಂಗನಾರ ಪಾತ್ರವನ್ನು ಪರಿಚಯಿಸಿದೆ.

ತೇಜಸ್ ಗಿಲ್ ಪಾತ್ರಕ್ಕೆ ಕಂಗನಾ ರಣಾವತ್​ ಜೀವ ತುಂಬಿದ್ದಾರೆ. ತಮ್ಮ ಕೋಚ್ ಮಾರ್ಗದರ್ಶನದಲ್ಲಿ ಹೊರಹೊಮ್ಮಿದ ಅತ್ಯಂತ ಧೈರ್ಯಶಾಲಿ, ಫೈಟರ್ ಪೈಲಟ್ ಎಂದು ಕಂಗನಾರನ್ನು ಪರಿಚಯಿಸಲಾಗಿದೆ. ತೇಜಸ್‌ ಜೊತೆ ಆತ್ಮೀಯ ಸಂಬಂಧ ಹೊಂದಿದ್ದ ಗೂಢಾಚಾರನನ್ನು ಪಾಕಿಸ್ತಾನದಲ್ಲಿ ಭಯೋತ್ಪಾದಕರು ಸೆರೆಹಿಡಿದು ಹಿಂಸಿಸಿದ ಹಿನ್ನೆಲೆ, ಘಟನೆ ತೀವ್ರ ಸ್ವರೂಪ ಪಡೆಯುತ್ತದೆ. ಗೂಢಾಚಾರಿಯನ್ನು ರಕ್ಷಿಸಲು ತನಗೆ ಅವಕಾಶ ನೀಡುವಂತೆ ತೇಜಸ್ ತಮ್ಮ ಹಿರಿಯರಲ್ಲಿ ವಿನಂತಿಸುತ್ತಾರೆ. ಹೀಗೆ ಟ್ರೇಲರ್ ರೋಮಾಂಚಕ ಆ್ಯಕ್ಷನ್ ಸೀಕ್ವೆನ್ಸ್‌, ಡೈಲಾಗ್ಸ್​ ಮೂಲಕ ಗಮನ ಸೆಳೆದಿದೆ. ರೋನಿ ಅವರ ಆರ್‌ಎಸ್‌ವಿಪಿ ಬ್ಯಾನರ್ ನಿರ್ಮಾಣದ ಈ ಚಿತ್ರವನ್ನು ಸರ್ವೇಶ್ ಮೇವಾರಾ ಬರೆದು ನಿರ್ದೇಶಿಸಿದ್ದಾರೆ. ಚಿತ್ರ ಇದೇ ಅಕ್ಟೋಬರ್ 27 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದೆ.

ಇದನ್ನೂ ಓದಿ: ತೇಜಸ್​ ಟೀಸರ್​ ರಿಲೀಸ್​: 'ಭಾರತದ ತಂಟೆಗೆ ಬಂದರೆ ಬಿಡುವ ಮಾತೇ ಇಲ್ಲ' ಅಂತಿದ್ದಾರೆ ಕಂಗನಾ ರಣಾವತ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.