ETV Bharat / entertainment

ಇಂಡಿಯನ್​ 2 ಪೋಸ್ಟರ್: ಗುರುತು ಸಿಗಲಾರದಷ್ಟು ವಿಭಿನ್ನ ನೋಟದಲ್ಲಿ ಕಮಲ್​ ಹಾಸನ್​

author img

By

Published : Aug 15, 2023, 7:40 PM IST

Indian 2 poster: ಕಮಲ್​ ಹಾಸನ್ ನಟನೆಯ ಇಂಡಿಯನ್​ 2 ಪೋಸ್ಟರ್ ಅನಾವರಣಗೊಂಡಿದೆ.

Indian 2 poster
ಇಂಡಿಯನ್​ 2 ಪೋಸ್ಟರ್

ಸೌತ್​ ಸೂಪರ್​ ಸ್ಟಾರ್ ಕಮಲ್​ ಹಾಸನ್ ಅವರ ಮುಂದಿನ ಬಹುನಿರೀಕ್ಷಿತ ಸಿನಿಮಾ ''ಇಂಡಿಯನ್​ 2''. ಸ್ವಾತಂತ್ರ್ಯ ದಿನದ ಹಿನ್ನೆಲೆ ತಮಿಳು ಚಿತ್ರ ನಿರ್ಮಾಪಕರು ಸಿನಿಮಾದ ಪೋಸ್ಟರ್ ಅನ್ನು ಅನಾವರಣಗೊಳಿಸಿದ್ದಾರೆ. ಪೋಸ್ಟರ್​ನಲ್ಲಿ ಕಾಲಿವುಡ್​ ಬಹುಬೇಡಿಕೆಯ ನಟ ಕಮಲ್​ ಹಾಸನ್​ ಗುರುತು ಸಿಗಲಾರದಷ್ಟು ವಿಭಿನ್ನ ನೋಟದಲ್ಲಿ ಕಾಣಿಸಿಕೊಂಡಿದ್ದಾರೆ. ಇದು ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ.

ಇಂಡಿಯನ್​ 2 ಪೋಸ್ಟರ್: ಬಹುನಿರೀಕ್ಷಿತ ಸಿನಿಮಾ ಇಂಡಿಯನ್​ 2 ಅನ್ನು ಸ್ಟಾರ್ ಡೈರೆಕ್ಟರ್​ ಎಸ್​ ಶಂಕರ್​ ನಿರ್ದೇಶಿಸುತ್ತಿದ್ದಾರೆ. ಲೈಕಾ ಮತ್ತು ರೆಡ್​ ಜೈಂಟ್​ ಮೂವೀಸ್​ (Red Giant Movies) ಸಂಸ್ಥೆಗಳು ಸಿನಿಮಾ ನಿರ್ಮಾಣ ಮಾಡುತ್ತಿವೆ. ಇಂಡಿಯನ್​ 2 ರಿಂದ ಕಮಲ್​ ಹಾಸನ್​ ಪೋಸ್ಟರ್ ಶೇರ್ ಮಾಡಿರುವ ಚಿತ್ರ ತಯಾಕರು, ಅಭಿಮಾನಿಗಳಿಗೆ ಸ್ವಾತಂತ್ರ್ಯ ದಿನದ ಶುಭಾಶಯ ಕೋರಿದ್ದಾರೆ.

ಪೋಸ್ಟರ್ ಶೇರ್ ಮಾಡಿರುವ ಚಿತ್ರ ತಯಾರಕರು 'ಇಂಡಿಯನ್​ 2' ಎಂಬ ಕ್ಯಾಪ್ಷನ್​ ಕೊಟ್ಟಿದೆ. ಸಿನಿಮಾದ ಹೆಚ್ಚಿನ ಮಾಹಿತಿಯನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಆದ್ರೆ ಸದ್ಯ ಅನಾವರಣಗೊಂಡಿರುವ ಹೊಸ ಪೋಸ್ಟರ್​ನಲ್ಲಿ ಕಮಲ್​ ಹಾಸನ್​ ಗುರುತು ಸಿಗಲಾರದಷ್ಟು ವಿಭಿನ್ನ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಕಮಲ್​ ಹಾಸನ್​ ಖಾಕಿ ಸಮಸವಸ್ತ್ರ ಹಾಗೂ ಕ್ಯಾಪ್​​ ತೊಟ್ಟಿದ್ದಾರೆ. ಸೂಪರ್​ ಸ್ಟಾರ್ ದೊಡ್ಡ ರೂಪಾಂತರಕ್ಕೆ ಒಳಗಾಗಿದ್ದು, ಬಿಳಿ ಕೂದಲು, ಜೋತು ಬೀಳುವ ಚರ್ಮದಲ್ಲಿ ವಯಸ್ಸಾದಂತೆ ಕಾಣಿಸಿಕೊಂಡಿದ್ದಾರೆ. ಬಹುಬೇಡಿಕೆ ನಟನ ಭಿನ್ನ ನೋಟ ಕೋಟ್ಯಂತರ ಅಭಿಮಾನಿಗಳಲ್ಲಿ ಆಸಕ್ತಿ ಮೂಡಿಸಿದೆ. ಸಿನಿಮಾ ವೀಕ್ಷಣೆಗೆ ಹೆಚ್ಚು ಕಾಯಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Akshay Kumar: 'ಮನಸ್ಸು, ಪೌರತ್ವ ಎರಡೂ ಹಿಂದೂಸ್ತಾನಿ'.. ಅಧಿಕೃತವಾಗಿ ಭಾರತೀಯ ಪ್ರಜೆಯಾದ ನಟ ಅಕ್ಷಯ್​ ಕುಮಾರ್

ವಿಕ್ರಮ್​ ಅಂತಹ ಬ್ಲಾಕ್​ ಬಸ್ಟರ್ ಹಿಟ್​ ನಂತರ ಕಮಲ್​ ಹಾಸನ್ ಕಾಣಿಸಿಕೊಳ್ಳುತ್ತಿರುವ ಬಹುನಿರಿಕ್ಷಿತ ಚಿತ್ರವಿದು. ಇಂಡಿಯನ್​ 2 ಶೀಘ್ರದಲ್ಲೇ ತೆರೆ ಕಾಣಲು ಸಿದ್ಧತೆ ನಡೆಸುತ್ತಿದ್ದಾರೆ. ಸ್ಟಾರ್​ ಡೈರೆಕಕ್ಟರ್ ಶಂಕರ್​ ನಿರ್ದೇಶನದ ಇಂಡಿಯನ್​ 2 ಸಿನಿಮಾದಲ್ಲಿ ರಾಕುಲ್​ ಪ್ರೀತ್​ ಸಿಂಗ್​​, ಕಾಜಲ್​ ಅಗರ್​ವಾಲ್, ಪ್ರಿಯಾ ಭವಾನಿ ಶಂಕರ್​, ಸಿದ್ಧಾರ್ಥ್ ಕೂಡ ಪ್ರಮುಖ ಪಾತ್ರ ವಹಿಸಿದ್ದಾರೆ. ವಿದೇಶಗಳಲ್ಲಿ ಶೂಟಿಂಗ್​ ನಡೆಯುತ್ತಿದೆ. ಅನಿರುಧ್ ಸಂಗೀತವಿದ್ದು, ಇದೇ ಮೊದಲ ಬಾರಿಗೆ ನಿರ್ದೇಶಕ ಶಂಕರ್​ ಅವರ ಪ್ರೊಜೆಕ್ಟ್​ಗೆ ಸಹಕರಿಸುತ್ತಿದ್ದಾರೆ.​​

ಇದನ್ನೂ ಓದಿ: Fighter: ವಾಯುಪಡೆ ಅಧಿಕಾರಿಗಳ ಪಾತ್ರದಲ್ಲಿ ಹೃತಿಕ್​, ದೀಪಿಕಾ, ಅನಿಲ್​ ಕಪೂರ್: ಫೈಟರ್ ಮೋಷನ್​ ಪೋಸ್ಟರ್ ರಿಲೀಸ್

'ಇಂಡಿಯನ್​ 2' 1996 ರಲ್ಲಿ ತೆರೆಕಂಡ ಇಂಡಿಯನ್​ ಸಿನಿಮಾದ ಸೀಕ್ವೆಲ್​. ಇಂಡಿಯನ್​ ಚಿತ್ರದಲ್ಲಿ ನಟ ಕಮಲ್​ ಹಾಸನ್​​ ಸೇನಾಪತಿ/ಇಂಡಿಯನ್​ ಅಗಿ ನಟಿಸಿದ್ದರು. ವಯಸ್ಸಾದ ಸ್ವಾತಂತ್ರ್ಯ ಹೋರಾಟಗಾರ ಭ್ರಷ್ಟಾಚಾರ ಮತ್ತು ಅಪರಾಧ ಪ್ರಕರಣಗಳ ವಿರುದ್ಧ ಹೋರಾಡುವ ದೃಶ್ಯಗಳನ್ನು ಸಿನಿಮಾ ಒಳಗೊಂಡಿತ್ತು. ಇಂಡಿಯನ್​ 2 ಗೆ ಕಾಳಿದಾಸ್​ ಜಯರಾಮ್​​, ಗುಲ್ಶನ್​ ಗ್ರೋವರ್​​, ನೆಡುಮುಡಿ ವೇಣು, ಬಾಬಿ ಸಿಂಹ ಸೇರಿದಂತೆ ಹಲವರು ಸೇರಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.