ETV Bharat / entertainment

ಒಂದೇ ಫ್ರೇಮ್​ನಲ್ಲಿ ಸೌತ್​ ಸೂಪರ್​​ಸ್ಟಾರ್ಸ್.. ಅಮೆರಿಕದಲ್ಲಿ ಕಮಲ್​ ಹಾಸನ್​​, ಪ್ರಭಾಸ್ ಮಿಂಚಿಂಗ್​​ - ಪ್ರಾಜೆಕ್ಟ್ ಕೆ

ಸಾಮಾಜಿಕ ಜಾಲತಾಣದಲ್ಲಿ ಸೌತ್​ ಸೂಪರ್​ ಸ್ಟಾರ್​ಗಳಾದ ಕಮಲ್​ ಹಾಸನ್​​ ಮತ್ತು ಪ್ರಭಾಸ್ ಫೋಟೋಗಳು ಸದ್ದು ಮಾಡುತ್ತಿವೆ.

kamal haasan with prabhas
ಅಮೆರಿಕದಲ್ಲಿ ಕಮಲ್​ ಹಾಸನ್​​ ಮತ್ತು ಪ್ರಭಾಸ್
author img

By

Published : Jul 20, 2023, 7:56 PM IST

'ಪ್ರಾಜೆಕ್ಟ್ ಕೆ' ತಂಡ ಸ್ಯಾನ್ ಡಿಯಾಗೋದಲ್ಲಿ ನಡೆಯುತ್ತಿರುವ ಕಾಮಿಕ್ ಕಾನ್‌ ಈವೆಂಟ್​ನಲ್ಲಿ ಭಾಗಿಯಾಗಲಿದೆ. ಅಮೆರಿಕದ ಸ್ಯಾನ್ ಡಿಯಾಗೋ ಪ್ರದೇಶದಲ್ಲಿ ಜುಲೈ 20 ರಿಂದ 23ರ ವರೆಗೆ (ಭಾರತದ ಸಮಯಾನುಸಾರ ಜುಲೈ 21 ರಿಂದ 24) ಈ ಪ್ರತಿಷ್ಠಿತ ಕಾರ್ಯಕ್ರಮ ನಡೆಯಲಿದೆ. ಪ್ಯಾನ್​​ ಇಂಡಿಯಾ ಸ್ಟಾರ್ ಪ್ರಭಾಸ್, ಕಾಲಿವುಡ್​ ಸೂಪರ್​ ಸ್ಟಾರ್ ಕಮಲ್ ಹಾಸನ್ ಮತ್ತು ನಿರ್ದೇಶಕ ನಾಗ್ ಅಶ್ವಿನ್ ಅವರು ಕಾಮಿಕ್ ಕಾನ್‌ ಕಾರ್ಯಕ್ರಮಕ್ಕೂ ಮುನ್ನ ಯುಎಸ್‌ನಲ್ಲಿ ನಡೆದ ಪ್ರೀ ಲಾಂಚ್ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಸೋಷಿಯಲ್ ಮೀಡಿಯಾದಲ್ಲೀಗ ಪ್ರಾಜೆಕ್ಟ್​​ ಕೆ ಚಿತ್ರತಂಡದ್ದೇ ಸದ್ದು. ಪ್ರಭಾಸ್ ಮತ್ತು ಕಮಲ್ ಹಾಸನ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಜಾಗ ಗಿಟ್ಟಿಸಿಕೊಂಡಿವೆ.

ಚಿತ್ರ ನಿರ್ಮಾಪಕರು ಟ್ವಿಟರ್‌ನಲ್ಲಿ ಅಮೆರಿಕನ್ ಕಾಮಿಕ್-ಕಾನ್ ಈವೆಂಟ್​ನ ಪ್ರಭಾಸ್ ಮತ್ತು ಕಮಲ್ ಹಾಸನ್ ಅವರ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಇಬ್ಬರು ಸೂಪರ್​​ಸ್ಟಾರ್​ಗಳು ಒಂದೇ ಫ್ರೇಮ್​ನೊಳಗೆ ಕಾಣಿಸಿಕೊಂಡಿದ್ದಾರೆ. ಬಹುನಿರೀಕ್ಷಿತ ಚಿತ್ರದ ವಿಡಿಯೋ ಇನ್ನೇನು ಕೆಲ ಗಂಟೆಗಳಲ್ಲಿ ಹೊರಬೀಳಲಿದ್ದು, ಈ ಫೋಟೋ ಅಭಿಮಾನಿಗಳ ಕುತೂಹಲ, ಉತ್ಸಾಹವನ್ನು ದ್ವಿಗುಣಗೊಳಿಸಿದೆ.

ಪ್ರಾಜೆಕ್ಟ್ ಕೆ ಫಸ್ಟ್ ಗ್ಲಿಂಪ್ಸ್ ಜುಲೈ 20ರಂದು ಅಮೆರಿಕದಲ್ಲಿ ಮಧ್ಯಾಹ್ನ 1 ರಿಂದ 2ರ ನಡುವೆ ಅನಾವರಣಗೊಳ್ಳಲಿದೆ. ಭಾರತದ ಸಮಯಾನುಸರ, ಜುಲೈ 21 (ಜೂನ್​ 20ರ ಮಧ್ಯರಾತ್ರಿ 1:30 ರಿಂದ 2:30ರ ವೇಳೆ) ರಂದು ಬಿಡುಗಡೆ ಆಗಲಿದೆ.

ಕಮಲ್ ಹಾಸನ್ ಅವರೊಂದಿಗೆ ಪ್ರಭಾಸ್ ಕೆಲಸ ಮಾಡುತ್ತಿದ್ದು, ಈ ಫೋಟೋ ಚಿತ್ರದ ಬಗೆಗಿನ ನಿರೀಕ್ಷೆ ಹೆಚ್ಚಿಸಿದೆ. ಆದ್ರೆ ಅಮಿತಾಭ್​ ಬಚ್ಚನ್, ದೀಪಿಕಾ ಪಡುಕೋಣೆ, ದಿಶಾ ಪಟಾನಿ ಸಮಾರಂಭದಲ್ಲಿ ಭಾಗವಹಿಸುತ್ತಿಲ್ಲ. ಈ ಬಗ್ಗೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ವಿಡಿಯೋ: ಅಮರನಾಥ್ ಯಾತ್ರೆ ಕೈಗೊಂಡ ಪಟೌಡಿ ವಂಶದ ಕುಡಿ ಸಾರಾ ಅಲಿ ಖಾನ್

ಕಾಮಿಕ್ ಕಾನ್‌ ಈವೆಂಟ್​​​ನಲ್ಲಿ 'ಪ್ರಾಜೆಕ್ಟ್ ಕೆ'ನ ಟೈಟಲ್​ ಮತ್ತು ಫಸ್ಟ್ ಗ್ಲಿಂಪ್ಸ್ ಅನ್ನು ಅನಾವರಣಗೊಳಿಸಲಾಗುತ್ತದೆ. ವಿಶ್ವ ಪ್ರತಿಷ್ಠಿತ ಸ್ಯಾನ್ ಡಿಯಾಗೋ ಕಾಮಿಕ್ ಕಾನ್‌ನಲ್ಲಿ ಸದ್ದು ಮಾಡುತ್ತಿರುವ ಮೊದಲ ಭಾರತೀಯ ಚಲನಚಿತ್ರವಿದು. ನಾಗ್ ಅಶ್ವಿನ್ ನಿರ್ದೇಶನದ ಈ ಸಿನಿಮಾವನ್ನು ಸದ್ಯಕ್ಕೆ ಪ್ರಾಜೆಕ್ಟ್ ಕೆ ಎಂದು ಸಂಬೋಧಿಸಲಾಗುತ್ತಿದ್ದು, ಶೀರ್ಷಿಕೆಯ ಅರ್ಥ ಅಥವಾ ಫೈನಲ್​ ಟೈಟಲ್​ ಈ ಈವೆಂಟ್​ನಲ್ಲಿ ಅನಾವರಣಗೊಳ್ಳಲಿದೆ. ಇದಕ್ಕೆ ಕೆಲವೇ ಕೆಲ ಗಂಟೆಗಳು ಬಾಕಿಯಿದೆ.

ಇದನ್ನೂ ಓದಿ: ಅಮೆರಿಕದಲ್ಲಿ ಪ್ರಾಜೆಕ್ಟ್ ಕೆ ಚಿತ್ರತಂಡ.. ಸ್ಟೈಲಿಶ್ ಲುಕ್​ನಲ್ಲಿ ಗಮನ ಸೆಳೆದ ಪ್ಯಾನ್​ ಇಂಡಿಯಾ ಸ್ಟಾರ್ ಪ್ರಭಾಸ್

'ಪ್ರಾಜೆಕ್ಟ್ ಕೆ' ಚಿತ್ರದಲ್ಲಿ ಪ್ಯಾನ್​ ಇಂಡಿಯಾ ಸ್ಟಾರ್ ಪ್ರಭಾಸ್ ಮತ್ತು ಬಾಲಿವುಡ್​ ಬಹುಬೇಡಿಕೆ ನಟಿ ದೀಪಿಕಾ ಪಡುಕೋಣೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಕಮಲ್​ ಹಾಸನ್​​, ದಿಶಾ ಪಟಾನಿ ಮತ್ತು ಅಮಿತಾಭ್​ ಬಚ್ಚನ್ ಕೂಡ ಚಿತ್ರದಲ್ಲಿ ಮಹತ್ವದ ಪಾತ್ರ ನಿರ್ವಹಿಸಲಿದ್ದಾರೆ. ವೈಜಯಂತಿ ಮೂವೀಸ್‌ ಬ್ಯಾನರ್‌ನಡಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಸೈನ್ಸ್ ಫಿಕ್ಷನ್​​ ಥ್ರಿಲ್ಲರ್ ಸಿನಿಮಾ ಭಾರತದ ಬಿಗ್​​ ಬಜೆಟ್‌ ಸಿನಿಮಾಗಳಲ್ಲಿ ಒಂದಾಗಿದೆ ಎಂದು ನಂಬಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.