ಟಾಲಿವುಡ್ ಎವರ್ಗ್ರೀನ್ ಬ್ಯೂಟಿಫುಲ್, ಮಗಧೀರ ಸಿನಿಮಾದ ಅಭಿನೇತ್ರಿ ಕಾಜಲ್ ಅಗರ್ವಾಲ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನಟಿ 38ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಕುಟುಂಬಸ್ಥರು, ಸ್ನೇಹಿತರು, ಸೆಲೆಬ್ರಿಟಿಗಳು, ಅಭಿಮಾನಿಗಳು ಬರ್ತ್ಡೇ ವಿಶ್ ಮಾಡುತ್ತಿದ್ದಾರೆ. 'ಭಗವಂತ ಕೇಸರಿ' ಚಿತ್ರತಂಡ ಕಾಜಲ್ ಅವರ ಫಸ್ಟ್ ಲುಕ್ ಬಿಡುಗಡೆ ಮಾಡಿ ಜನ್ಮದಿನದ ಶುಭಾಶಯ ಕೋರಿದ್ದಾರೆ.
ನಿರ್ದೇಶಕ ಅನಿಲ್ ರವಿಪುಡಿ ಮತ್ತು ನಟ ನಂದಮೂರಿ ಬಾಲಕೃಷ್ಣ ಕಾಂಬಿನೇಷನ್ನಲ್ಲಿ ಮೂಡಿಬರುತ್ತಿರುವ 'ಭಗವಂತ ಕೇಸರಿ' ಸಿನಿಮಾಗೆ ಕಾಜಲ್ ಅಗರ್ವಾಲ್ ನಾಯಕಿ. ಇತ್ತೀಚೆಗಷ್ಟೇ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಇದೀಗ ನಿರ್ಮಾಪಕರು ಕಾಜಲ್ ಹುಟ್ಟುಹಬ್ಬದ ಸಲುವಾಗಿ ಅವರ ಫಸ್ಟ್ ಲುಕ್ ರಿವೀಲ್ ಮಾಡಿದ್ದಾರೆ. ಪೋಸ್ಟರ್ನಲ್ಲಿ ನಟಿ ಫೋನ್ನಲ್ಲಿ ಮಾತನಾಡುತ್ತಾ, ಮುದ್ದಾಗಿ ಪುಸ್ತಕ ಓದುತ್ತಿರುವುದನ್ನು ಕಾಣಬಹುದು. ಬಾಲಯ್ಯ ಮತ್ತು ಕಾಜಲ್ ಜೊತೆಯಾಗಿ ನಟಿಸುತ್ತಿರುವ ಮೊದಲ ಚಿತ್ರವಿದು.
-
Team #BhagavanthKesari wishes the ever-charming @MsKajalAggarwal a very Happy Birthday❤️
— 𝐕𝐚𝐦𝐬𝐢𝐒𝐡𝐞𝐤𝐚𝐫 (@UrsVamsiShekar) June 19, 2023 " class="align-text-top noRightClick twitterSection" data="
May your magnetic presence captivate the audience on the big screen💥#HappyBirthdayKajal 💫#NandamuriBalakrishna @AnilRavipudi @sreeleela14 @rampalarjun @MusicThaman @Shine_Screens pic.twitter.com/yHbqFQOboN
">Team #BhagavanthKesari wishes the ever-charming @MsKajalAggarwal a very Happy Birthday❤️
— 𝐕𝐚𝐦𝐬𝐢𝐒𝐡𝐞𝐤𝐚𝐫 (@UrsVamsiShekar) June 19, 2023
May your magnetic presence captivate the audience on the big screen💥#HappyBirthdayKajal 💫#NandamuriBalakrishna @AnilRavipudi @sreeleela14 @rampalarjun @MusicThaman @Shine_Screens pic.twitter.com/yHbqFQOboNTeam #BhagavanthKesari wishes the ever-charming @MsKajalAggarwal a very Happy Birthday❤️
— 𝐕𝐚𝐦𝐬𝐢𝐒𝐡𝐞𝐤𝐚𝐫 (@UrsVamsiShekar) June 19, 2023
May your magnetic presence captivate the audience on the big screen💥#HappyBirthdayKajal 💫#NandamuriBalakrishna @AnilRavipudi @sreeleela14 @rampalarjun @MusicThaman @Shine_Screens pic.twitter.com/yHbqFQOboN
ಬಹುನಿರೀಕ್ಷಿತ ಚಿತ್ರ 'ಭಗವಂತ ಕೇಸರಿ': ಅನಿಲ್ ರವಿಪುಡಿ ನಿರ್ದೇಶನದಲ್ಲಿ 'ಭಗವಂತ ಕೇಸರಿ' ಚಿತ್ರೀಕರಣ ಶರವೇಗದಲ್ಲಿ ನಡೆಯುತ್ತಿದೆ. ವಿಜಯ ದಶಮಿಯ ಉಡುಗೊರೆಯಾಗಿ ಚಿತ್ರ ಥಿಯೇಟರ್‌ಗಳಲ್ಲಿ ಬಿಡುಗಡೆ ಆಗಲಿದೆ. ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ಆಕರ್ಷಕವಾಗಿದ್ದು, ಫುಲ್ ರಗಡ್ ಅವತಾರದಲ್ಲಿ ಬಾಲಯ್ಯ ಕಾಣಿಸಿಕೊಂಡಿದ್ದಾರೆ. ತೆಲಂಗಾಣ ಆಡುಭಾಷೆಯಲ್ಲಿರುವ ಬಾಲಯ್ಯ ಅವರ ಡೈಲಾಗ್‌ಗಳು ಪ್ರೇಕ್ಷಕರನ್ನು ಸೆಳೆದಿವೆ. ಮಾಸ್ ಅವತಾರದಲ್ಲಿರುವ ಬಾಲಯ್ಯ ಚಿತ್ರದಲ್ಲಿ ಕಾಮಿಡಿ ಮಾಡುವ ಮೂಲಕ ಮನರಂಜನೆ ಕೂಡ ಕೊಡಲಿದ್ದಾರೆ.
ಇದನ್ನೂ ಓದಿ: ’90 ಬಿಡಿ ಮನೀಗ್ ನಡಿ’.. ನಟ ವೈಜನಾಥ್ ಬಿರಾದರ್ರ 500ನೇ ಚಿತ್ರದ ಟ್ರೈಲರ್ ರಿಲೀಸ್.. ಸಿನಿಮಾ ಬಿಡುಗಡೆ ದಿನಾಂಕವೂ ಘೋಷಣೆ
ಅದ್ಧೂರಿ ಆ್ಯಕ್ಷನ್ ಎಂಟರ್‌ಟೈನ್‌ಮೆಂಟ್ ಆಗಿ ತಯಾರಾಗುತ್ತಿರುವ ಸಿನಿಮಾದಲ್ಲಿ ಬಾಲಯ್ಯ ಹಿರಿ ವ್ಯಕ್ತಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ನಿರ್ದೇಶಕ ಅನಿಲ್ ರವಿಪುಡಿ ಅವರು ಬಾಲಯ್ಯ ಅವರಿಗೆ ತಕ್ಕಂತೆ ಮಾಸ್ ಎಲಿಮೆಂಟ್ಸ್ ಸೇರಿಸಿ, ಮನರಂಜನೆಯನ್ನು ಮಿಸ್ ಮಾಡದೇ ಚಿತ್ರವನ್ನು ರೂಪಿಸುತ್ತಿದ್ದಾರೆ. ಶ್ರೀಲೀಲಾ ಮತ್ತು ತಮಿಳಿನ ಸ್ಟಾರ್ ನಟ ಶರತ್ ಕುಮಾರ್ ತಂದೆ ಮಗಳಾಗಿ ಕಾಣಿಸಿಕೊಳ್ಳಲಿದ್ದಾರೆ. ಖ್ಯಾತ ಬಾಲಿವುಡ್ ನಟ ಅರ್ಜುನ್ ರಾಂಪಾಲ್ ಬಾಲಯ್ಯ ಎದುರು ವಿಲನ್ ಆಗಿ ನಟಿಸಲಿದ್ದಾರೆ. ಶೈನ್ ಸ್ಕ್ರೀನ್ ಬ್ಯಾನರ್ ಅಡಿ ಹರೀಶ್ ಪೆದ್ದಿ ಮತ್ತು ಸಾಹು ಗರಪಾಟಿ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ.
ಸರಣಿ ಸಿನಿಮಾಗಳಲ್ಲಿ ಕಾಜಲ್ ಬ್ಯುಸಿ: ಕಾಜಲ್ ಕೂಡ ಸರಣಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಬಾರಿ ಪವರ್‌ಫುಲ್ ಪೊಲೀಸ್ ಅಧಿಕಾರಿಯಾಗಿ ರಂಜಿಸಲು ರೆಡಿಯಾಗಿದ್ದಾರೆ. ಕ್ರೈಮ್ ಥ್ರಿಲ್ಲರ್ ಸಿನಿಮಾ 'ಸತ್ಯಭಾಮ'ದಲ್ಲಿ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರವನ್ನು ಅಖಿಲ್ ದೇಗಲ ನಿರ್ದೇಶಿಸಿದ್ದಾರೆ. ಬಾಬಿ ತಿಕ್ಕ ಮತ್ತು ಶ್ರೀನಿವಾಸರಾವ್ ಟಕ್ಕಲಪಲ್ಲಿ ನಿರ್ಮಿಸಿದ್ದಾರೆ. ಕಾಜಲ್ ಹುಟ್ಟುಹಬ್ಬದ ಸಂದರ್ಭದಲ್ಲಿ, ಚಿತ್ರದ ಶೀರ್ಷಿಕೆಯನ್ನು ಬಹಿರಂಗಪಡಿಸಿದ ಚಿತ್ರತಂಡ, ಒಂದು ಗ್ಲಿಂಪ್ಸ್ ಅನ್ನು ಕೂಡ ಬಿಡುಗಡೆ ಮಾಡಿದೆ.
ಇದನ್ನೂ ಓದಿ: Rashmika Mandanna: 80 ಲಕ್ಷ ರೂಪಾಯಿ ಮೋಸ ಮಾಡಿದ ಮ್ಯಾನೇಜರ್‌ಗೆ ಗೇಟ್‌ಪಾಸ್ ಕೊಟ್ಟ ರಶ್ಮಿಕಾ ಮಂದಣ್ಣ