ಅದ್ಧೂರಿ ಮೇಕಿಂಗ್, ವಿಭಿನ್ನ ಕಥೆಯಿಂದ ಇಡೀ ಭಾರತೀಯ ಚಿತ್ರರಂಗದಲ್ಲಿ ಆರ್ಭಟಿಸಿದ ಸ್ಯಾಂಡಲ್ವುಡ್ ಚಿತ್ರ 'ಕಬ್ಜ'. ರಿಯಲ್ ಸ್ಟಾರ್ ಉಪೇಂದ್ರ, ಅಭಿನಯ ಚಕ್ರವರ್ತಿ ಸುದೀಪ್, ಹ್ಯಾಟ್ರಿಕ್ ಹೀರೋ ಶಿವ ರಾಜ್ಕುಮಾರ್ ಅಭಿನಯದ, ಆರ್.ಚಂದ್ರು ನಿರ್ದೇಶನದ ಕಬ್ಜ ಸಿನಿಮಾ ಮಾರ್ಚ್ 17ರಂದು ಬಿಡುಗಡೆ ಆಗಿ ಪ್ರೇಕ್ಷಕರ ಮೆಚ್ಚುಗೆ ಪಾತ್ರವಾಗಿದೆ. ಬಾಕ್ಸ್ ಆಫೀಸ್ನಲ್ಲಿ 200 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿರುವ ಕಬ್ಜ ಸಿನಿಮಾವನ್ನು ಶೀಘ್ರದಲ್ಲೇ ಕುಟುಂಬ ಸಮೇತ ಮನೆಯಲ್ಲೇ ಕುಳಿತು ನೋಡಬಹುದು.
ಭಾರತದ ಸ್ವಾತಂತ್ರ್ಯಕ್ಕೂ ಮೊದಲು ಅಂದರೆ 1942ರ ಕಥೆ. ಓರ್ವ ಸಾಮಾನ್ಯ ವ್ಯಕ್ತಿಯು ಪರಿಸ್ಥಿತಿಗಳಿಂದಾಗಿ ಗ್ಯಾಂಗ್‌ಸ್ಟರ್ ಆಗಿ ಬೆಳೆಯುವ ಕಥೆಯನ್ನು ಈ ಚಿತ್ರ ಹೇಳುತ್ತದೆ. ಸ್ವಾತಂತ್ರ್ಯ ಹೋರಾಟಗಾರನ ಪುತ್ರ ಅರ್ಕೇಶ್ವರ ಅಂದ್ರೆ ಉಪೇಂದ್ರ ಹಿಂಸಾಚಾರದಲ್ಲಿ ತಮ್ಮ ಸಹೋದರನನ್ನು ಕಲೆದುಕೊಂಡಿರುತ್ತಾನೆ. ಪ್ರಸ್ತುತ ಹಾಗೂ ಹಿಂದಿನ ಘಟನೆಗಳಿಂದಾಗಿ ತೀವ್ರ ಪ್ರಕ್ಷುಬ್ಧಗೊಂಡಿರುತ್ತಾನೆ. ಕುಟುಂಬದಲ್ಲಿ ಆದ ಆಘಾತವು ಅವನೊಳಗೆ ಒಂದು ಕಿಚ್ಚನ್ನು ಹುಟ್ಟಿಸುತ್ತದೆ. ಸೇಡಿಗಾಗಿ ಹಾತೊರೆಯುತ್ತಾನೆ. ಇದರಿಂದಾಗಿ ಆತ ಅಂಡರ್‌ವರ್ಲ್ಡ್ ಡಾನ್ ಆಗಿ ಬೆಳೆಯುತ್ತಾನೆ. ಈ ಕಥಾಹಂದರವನ್ನು ಒಳಗೊಂಡಿದೆ ಕಬ್ಜ.
-
a tale of unforeseen circumstances transforming an innocent young man into the most dreaded gangster ever! 🔥#KabzaaOnPrime, Apr 14 pic.twitter.com/wCRRyIDeAI
— prime video IN (@PrimeVideoIN) April 11, 2023 " class="align-text-top noRightClick twitterSection" data="
">a tale of unforeseen circumstances transforming an innocent young man into the most dreaded gangster ever! 🔥#KabzaaOnPrime, Apr 14 pic.twitter.com/wCRRyIDeAI
— prime video IN (@PrimeVideoIN) April 11, 2023a tale of unforeseen circumstances transforming an innocent young man into the most dreaded gangster ever! 🔥#KabzaaOnPrime, Apr 14 pic.twitter.com/wCRRyIDeAI
— prime video IN (@PrimeVideoIN) April 11, 2023
ಚಿತ್ರರಂಗದಲ್ಲಿ ಸದ್ದು ಮಾಡಿರುವ ಕಬ್ಜ ಸಿನಿಮಾ ಏಪ್ರಿಲ್ 14ರಂದು ಅಮೆಜಾನ್ ಪ್ರೈಮ್ನಲ್ಲಿ ಪ್ರಸಾರ ಆಗಲಿದೆ. ಆರ್.ಚಂದ್ರು ನಿರ್ದೇಶಿಸಿ, ನಿರ್ಮಾಣ ಮಾಡಿರುವ (ಆನಂದ ಪಂಡಿತ್ ಸಹ ನಿರ್ಮಾಣ) ಕಬ್ಜ ಸಿನಿಮಾವನ್ನು ಏಪ್ರಿಲ್ 14 ರಿಂದ ಮನೆಯಲ್ಲೇ ವೀಕ್ಷಿಸಬಹುದು. ಕನ್ನಡ ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿಯಲ್ಲಿ ಕಬ್ಜ ಲಭ್ಯವಾಗಲಿದೆ. 140 ಕೋಟಿ ರೂ.ಗೆ ಮಾರಾಟವಾಗಿದೆ ಎಂದು ವರದಿಗಳು ತಿಳಿಸಿವೆಯಾದರೂ, ನಿರ್ಮಾಪಕರಾಗಲಿ ಅಥವಾ ಚಿತ್ರತಂಡವಾಗಲಿ ಇದುವರೆಗೂ ಅಧಿಕೃತ ಮಾಹಿತಿ ನೀಡಿಲ್ಲ. ಸದ್ಯ ಒಟಿಟಿ ಬಿಡುಗಡೆ ದಿನಾಂಕ ಘೋಷಣೆಯಾಗಿದ್ದು, ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಿಸದವರು ಇನ್ಮುಂದೆ ತಾವಿದ್ದ ಜಾಗದಿಂದಲೇ ನೋಡಬಹುದು.
ಕನ್ನಡದ ಮೂವರು ದಿಗ್ಗಜರಲ್ಲದೇ, ಶ್ರೀಯಾ ಶರಣ್, ಕಬೀರ್ ಸಿಂಗ್ ದುಹಾನ್, ಪ್ರಮೋದ್ ಶೆಟ್ಟಿ, ಮುರಳಿ ಶರ್ಮಾ, ನವಾಬ್ ಷಾ, ಪೊಸನಿ ಕೃಷ್ಣ ಮುರಳಿ ಹೀಗೆ ಬಿಗ್ ಸ್ಟಾರ್ ಕಾಸ್ಟ್ ಈ ಚಿತ್ರದಲ್ಲಿದೆ. ಎಂ.ಟಿ.ಬಿ ನಾಗರಾಜ್ ಅರ್ಪಿಸಿರುವ ಈ ಚಿತ್ರಕ್ಕೆ ಎ.ಜೆ ಶೆಟ್ಟಿ ಛಾಯಾಗ್ರಹಣ, ಮಹೇಶ್ ಸಂಕಲನ, ರಾಜು ಸುಂದರಂ, ಗಣೇಶ್, ಶೇಖರ್ ನೃತ್ಯ ನಿರ್ದೇಶನ, ರವಿವರ್ಮ, ವಿಕ್ರಂಮೋರ್, ವಿಜಯ್ ಅವರ ಸಾಹಸ ನಿರ್ದೇಶನವಿದೆ.
ಇದನ್ನೂ ಓದಿ: 'ಕಾಂಗ್ರೆಸ್ ಗೆಲ್ಲಬೇಕು, ಧ್ರುವನಾರಾಯಣ್ ಆತ್ಮಕ್ಕೆ ಶಾಂತಿ ಸಿಗಬೇಕು': ದರ್ಶನ್ಗೆ ಎಸ್. ನಾರಾಯಣ್ ಬೆಂಬಲ
ಜಗತ್ತಿನ ಅನೇಕ ಕಡೆಗಳಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಬಿಡುಗಡೆಯಾದ ಈ ಚಿತ್ರ ಅಭಿಮಾನಿಗಳ ನಿರೀಕ್ಷೆ ತಲುಪುವಲ್ಲಿ ಯಶಸ್ವಿಯಾಗಿದೆ. ಆರ್ ಚಂದ್ರು ಜನಪ್ರಿಯತೆ ದೇಶದೆಲ್ಲೆಡೆ ಹಬ್ಬಿದೆ. ಕಬ್ಜ ಸೀಕ್ವೆಲ್ ಕೆಲಸ ಈಗಾಗಲೇ ಚುರುಕುಗೊಂಡಿದೆ. ಕಬ್ಜ 2 ಚಿತ್ರವನ್ನು ಮೊದಲ ಭಾಗಕ್ಕಿಂತ ಮತ್ತಷ್ಟು ದೊಡ್ಡ ಮಟ್ಟದಲ್ಲಿ, ಅದ್ಧೂರಿ, ಸುಂದರವಾಗಿ ಚಿತ್ರೀಕರಿಸಲಾಗುವುದು ಎಂದು ನಿರ್ದೇಶಕ ಆರ್.ಚಂದ್ರು ತಿಳಿಸಿದ್ದಾರೆ.
ಇದನ್ನೂ ಓದಿ: ಕಾಲೇಜ್ ಟೈಮ್ನಲ್ಲಿ ತುಪ್ಪದ ಬೆಡಗಿ ರಾಗಿಣಿ ಮೇಲೆ ಕ್ರಶ್ ಆಗಿತ್ತು: ಚಂದನ್ ಶೆಟ್ಟಿ