ETV Bharat / entertainment

ಕಬ್ಜ ರಿಯಲ್​​ ಹೀರೋ ಆರ್ ಚಂದ್ರು: ನಿರ್ದೇಶಕರ ಬಗ್ಗೆ ಉಪ್ಪಿ ಗುಣಗಾನ

author img

By

Published : Mar 11, 2023, 5:21 PM IST

ಹೈದರಾಬಾದ್​ನಲ್ಲಿ ನಡೆದ ಕಬ್ಜ ಸಿನಿಮಾ ಪ್ರಚಾರದಲ್ಲಿ ನಿರ್ದೇಶಕ ಆರ್ ಚಂದ್ರು ಬಗ್ಗೆ ಉಪೇಂದ್ರ ಗುಣಗಾನ ಮಾಡಿದ್ದಾರೆ.

Kabzaa actor upendra
ಆರ್ ಚಂದ್ರು ಜೊತೆ ಉಪೇಂದ್ರ

ಭರ್ಜರಿ ಕಬ್ಜ ಪ್ರಚಾರ...ರಿಯಲ್​ ಸ್ಟಾರ್​ ಉಪೇಂದ್ರ ಮಾತನಾಡಿರುವುದು

ಸ್ಯಾಂಡಲ್​ವುಡ್​ನ ಮತ್ತೊಂದು ಬಹುನಿರೀಕ್ಷಿತ ಸಿನಿಮಾ 'ಕಬ್ಜ' ರಿಲೀಸ್​ಗೆ ದಿನಗಣನೆ ಆರಂಭವಾಗಿದೆ. ಕೇವಲ ಭಾರತದಲ್ಲಿ ಮಾತ್ರವಲ್ಲ, ಸಪ್ತಸಾಗರದಾಚೆ ಕೂಡಾ ಅಪ್ಪು ಜನ್ಮದಿನದಂದು ಬಿಡುಗಡೆ ಆಗಲಿದೆ ಈ ಪ್ಯಾನ್​ ಇಂಡಿಯಾ ಚಿತ್ರ. ಅದ್ಧೂರಿ ಮೇಕಿಂಗ್, ಬಿಗ್​ ಸ್ಟಾರ್ ಕಾಸ್ಟ್, ಟ್ರೇಲರ್,​ ಟೀಸರ್​​ನಿಂದ ಸದ್ದು ಮಾಡುತ್ತಿರುವ ಈ ಚಿತ್ರದ ಮೇಲೆ ಭಾರತದ ಕಣ್ಣಿದೆ.

ಭರ್ಜರಿ ಕಬ್ಜ ಪ್ರಚಾರ: 'ಕಬ್ಜ' ನಿರ್ದೇಶಕ ಆರ್ ಚಂದ್ರು ಕನಸಿನ ಕೂಸು. ಈ ಕಾರಣಕ್ಕೆ ರಿಲೀಸ್ ವಿಚಾರದಲ್ಲಿ ಕಾಂಪ್ರೋಮೈಸ್ ಆಗದೇ ದೊಡ್ಡ ಮಟ್ಟದಲ್ಲಿಯೇ ಬಿಡುಗಡೆ ಮಾಡಬೇಕೆಂಬ ಉತ್ಸಾಹದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಬೆಂಗಳೂರು, ಹೈದರಾಬಾದ್, ಚೆನ್ನೈ, ಮುಂಬೈನಲ್ಲಿ ಭರ್ಜರಿ ಪ್ರಮೋಷನ್ ಮಾಡುತ್ತಿದ್ದಾರೆ. ‌ಈ ಹಿನ್ನೆಲೆ ಜಗತ್ತಿನಾದ್ಯಂತ ಕಬ್ಜ ಕ್ರೇಜ್​​ ಇದೆ.

Kabzaa actor upendra
ಆರ್ ಚಂದ್ರು ಜೊತೆ ಉಪೇಂದ್ರ

ಕಬ್ಜ ರಿಯಲ್​​ ಹೀರೋ ಆರ್ ಚಂದ್ರು: ರಿಯಲ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್ ಹಾಗೂ ಹ್ಯಾಟ್ರಿಕ್ ಹೀರೋ ಶಿವ ರಾಜ್​ಕುಮಾರ್ ನಟನೆಯಲ್ಲಿ ಕಬ್ಜ ರೆಡಿಯಾಗಿದೆ. ಚಿತ್ರದ ಹೀರೋ ರಿಯಲ್ ಸ್ಟಾರ್ ಉಪೇಂದ್ರ ಆದ್ರೂ ತೆರೆಯ ಹಿಂದಿನ ದೊರೆ, ತೆರೆಯ ಹಿಂದಿನ ಹೀರೋ ಅಂದ್ರೆ ಅದು ಆರ್.ಚಂದ್ರು. ಈ ಮಾತನ್ನು ಸ್ವತಃ ರಿಯಲ್ ಸ್ಟಾರ್ ಉಪೇಂದ್ರ ಒಪ್ಪಿಕೊಂಡಿದ್ದಾರೆ.

ಆರ್ ಚಂದ್ರು ಬಗ್ಗೆ ಗುಣಗಾನ: ಹೌದು, ಹೈದರಾಬಾದ್​ನಲ್ಲಿ ಮಾತನಾಡಿದ ರಿಯಲ್ ಸ್ಟಾರ್ ಉಪ್ಪಿ‌ ಇಡೀ ಸಿನಿಮಾ ಕ್ರೆಡಿಟ್ ಅನ್ನು ನಿರ್ದೇಶಕ ಆರ್.ಚಂದ್ರು ಅವರಿಗೆ ಕೊಟ್ಟರು. ಈ ಸಿನಿಮಾ ಆಗೋಕೆ ಕಾರಣ ಆರ್.ಚಂದ್ರು. 2018ರಲ್ಲಿ ‌ಸಿನಿಮಾ ಶುರುವಾಯ್ತು. 19ರ ಕೊನೆಯಲ್ಲಿ ಕೋವಿಡ್​​ ಬಂತು. 20, 21, 22 ಆಯ್ತು. 2023ರಲ್ಲಿ ಕಬ್ಜ ನಿಮ್ಮ ಮುಂದೆ ಬರಲು ಸಜ್ಜಾಗಿದೆಯೆಂದ್ರೆ ಅದಕ್ಕೆ ಕಾರಣೀಭೂತರು ಒನ್ ಅಂಡ್ ಓನ್ಲಿ ಆರ್ ಚಂದ್ರು ಎಂದು ನಿರ್ದೇಶಕರ ಬಗ್ಗೆ ಮನಸಾರೆ ಕೊಂಡಾಡಿದ್ರು ರಿಯಲ್ ಸ್ಟಾರ್ ಉಪೇಂದ್ರ.

ಸಾಧಿಸೋ ಹಸಿವು... ಆರ್.ಚಂದ್ರು ಪುಟ್ಟ ಹಳ್ಳಿಯಿಂದ ಬಂದ‌ ಸಾಮಾನ್ಯ ವ್ಯಕ್ತಿ. ಕೇಶಾವರ ಎಂಬ ಗ್ರಾಮೀಣ ಭಾಗದಿಂದ ಬಂದ ಪ್ರತಿಭೆ. ಅಂದು ಕೈಯಲ್ಲಿ ಕಾಸಿಲ್ಲದೇ, ಖಾಲಿ ಜೇಬಿನಲ್ಲಿ ಬಂದ್ರೂ ಸಹ ಕಣ್ಣುಗಳ ತುಂಬಾ ಕನಸಿತ್ತು. ಸಾಧಿಸೋ ಹಠವಿತ್ತು. ಗುಂಡಿಗೆಯಲ್ಲಿ ಛಲವಿತ್ತು. ಇಂದು ಇದೇ ಕೇಶಾವರದ ಚಂದ್ರು ಭಾರತ ಮಾತ್ರವಲ್ಲ ಜಗತ್ತಿನ 40ದೇಶಗಳಲ್ಲಿ ತಮ್ಮ ಸಿನಿಮಾವನ್ನು ರಿಲೀಸ್ ಮಾಡ್ತಿದ್ದಾರೆ. ಪ್ರಪಂಚದಾದ್ಯಂತ ಸದ್ದು ಮಾಡಲು ಹೆಜ್ಜೆ ಇಟ್ಟಿದ್ದಾರೆ.

ಇದನ್ನೂ ಓದಿ: ಕಬ್ಜ ಹವಾ: 30ಕ್ಕೂ ಹೆಚ್ಚು ಅದ್ಧೂರಿ ಸೆಟ್​​​​ಗಳಿಗಾಗಿ ಕೋಟಿ ಕೋಟಿ ಖರ್ಚು!

ಕಬ್ಜ ಸಿನಿಮಾದಲ್ಲಿ ಉಪೇಂದ್ರ, ಸುದೀಪ್ ಅಲ್ಲದೇ ಶಿವ ರಾಜ್​ಕುಮಾರ್​ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರೀಯಾ ಶರಣ್​, ಕಬೀರ್​ ಸಿಂಗ್​ ದುಹಾನ್​, ಪ್ರಮೋದ್​ ಶೆಟ್ಟಿ, ಮುರಳಿ ಶರ್ಮ, ನವಾಬ್ ಷಾ, ಪೊಸನಿ ಕೃಷ್ಣ ಮುರಳಿ ಹೀಗೆ ಬಿಗ್ ಸ್ಟಾರ್ ಕಾಸ್ಟ್ ಈ ಚಿತ್ರದಲ್ಲಿದೆ. ಎಂ.ಟಿ.ಬಿ ನಾಗರಾಜ್ ಅರ್ಪಿಸುವ, ಶ್ರೀ ಸಿದ್ದೇಶ್ವರ ಎಂಟರ್​ಪ್ರೈಸಸ್ ಲಾಂಛನದಲ್ಲಿ ಆರ್.ಚಂದ್ರು ಅವರೇ ನಿರ್ಮಿಸುತ್ತಿರುವ ಕಬ್ಜ ಚಿತ್ರಕ್ಕೆ ಎ.ಜೆ.ಶೆಟ್ಟಿ ಛಾಯಾಗ್ರಹಣ, ಮಹೇಶ್ ಸಂಕಲನ, ರಾಜು ಸುಂದರಂ, ಗಣೇಶ್, ಶೇಖರ್ ನೃತ್ಯ ನಿರ್ದೇಶನ, ರವಿವರ್ಮ, ವಿಕ್ರಂಮೋರ್, ವಿಜಯ್​ ಅವರ ಸಾಹಸ ನಿರ್ದೇಶನ ಇದೆ. ಒಂದಲ್ಲ ಒಂದು ವಿಚಾರಕ್ಕೆ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಟಾಕ್ ಆಗುತ್ತಿರುವ ಕಬ್ಜ ಸಿನಿಮಾ ಪವರ್‌ ಸ್ಟಾರ್ ಪುನೀತ್ ರಾಜ್‍ಕುಮಾರ್ ಹುಟ್ಟು ಹಬ್ಬದಂದು ಬಿಡುಗಡೆ ಆಗುತ್ತಿದೆ.

ಇದನ್ನೂ ಓದಿ: ಬಿಡುಗಡೆಗೂ ಮುನ್ನ ದಾಖಲೆ ಬರೆಯುತ್ತಿರುವ ಕಬ್ಜ: ಮತ್ತೊಂದು ಗೆಲುವು ಪಕ್ಕಾ ಅಂತಿದ್ದಾರೆ ಅಭಿಮಾನಿಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.