ETV Bharat / entertainment

ಡಿಬಾಸ್ ಅಭಿನಯದ 'ಕಾಟೇರ' ನಾಯಕಿ 'ಪದ್ಮಾವತಿ': ಫಸ್ಟ್​ ಲುಕ್​ ನೋಡಿ - ಈಟಿವಿ ಭಾರತ ಕನ್ನಡ

ದರ್ಶನ್​ ಅಭಿನಯದ 'ಕಾಟೇರ' ಸಿನಿಮಾ ನಾಯಕಿಯ ಫಸ್ಟ್ ಲುಕ್​ ರಿವೀಲ್ ಆಗಿದೆ.

kaatera
'ಕಾಟೇರ'
author img

By

Published : Mar 22, 2023, 12:39 PM IST

ಯುಗಾದಿ ಹಬ್ಬದ ಪ್ರಯುಕ್ತ 'ಕಾಟೇರ' ಚಿತ್ರತಂಡ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದೆ. ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅಭಿನಯದ ಸಿನಿಮಾ ಈಗಾಗಲೇ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ನಾಯಕಿಯಾಗಿ ರಾಧನಾ ರಾಮ್ ನಟಿಸಲಿದ್ದಾರೆ. ಕಳೆದ ವರ್ಷವೇ ಈ ವಿಚಾರವನ್ನು ನಿರ್ದೇಶಕ ತರುಣ್​ ಸುಧೀರ್​ ಖಚಿತಪಡಿಸಿದ್ದರು. ಅದಾದ ಬಳಿಕ ಹೀರೋಯಿನ್​ ವಿಚಾರವಾಗಿ ಚಿತ್ರತಂಡ ಎಲ್ಲೂ ಹೇಳಿಕೊಂಡಿರಲಿಲ್ಲ.

ಇದೀಗ ರಾಧನಾ ರಾಮ್ ಫಸ್ಟ್​ ಲುಕ್​ ರಿವೀಲ್​ ಆಗಿದೆ.​ ದಚ್ಚು ಅವರ ಕ್ರಾಂತಿ ಸಿನಿಮಾದ ನಂತರ ಬರುತ್ತಿರುವ ಚಿತ್ರವನ್ನು ರಾಕ್​ಲೈನ್​ ವೆಂಕಟೇಶ್​ ನಿರ್ಮಿಸುತ್ತಿದ್ದು, ತರುಣ್​ ಸುಧೀರ್​ ನಿರ್ದೇಶಿಸುತ್ತಿದ್ದಾರೆ.​ ದರ್ಶನ್​ ಮತ್ತು ಸುಧೀರ್​ ಕಾಂಬಿನೇಷನ್​ನಲ್ಲಿ ಮೂಡಿಬರುತ್ತಿರುವ ಮೂರನೇ ಸಿನಿಮಾ ಇದಾಗಿದೆ.

ಕಾಟೇರ ಸಿನಿಮಾ ಶೀರ್ಷಿಕೆಯಿಂದಲೇ ಭಾರಿ ಸುದ್ದಿ ಮಾಡಿತ್ತು. ದರ್ಶನ್​ ಫಸ್ಟ್​ ಲುಕ್​ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿತ್ತು. ಎಂದಿಗಿಂತ ವಿಭಿನ್ನ ಲುಕ್​ನಲ್ಲಿ ಚಾಲೆಂಜಿಂಗ್​ ಸ್ಟಾರ್​​ ಕಾಣಿಸಿಕೊಂಡಿದ್ದರು. ಹೀಗಾಗಿ ಕಾಟೇರನ ನಾಯಕಿ ಹೇಗಿರಲಿದ್ದಾಳೆ ಎಂಬ ಕೌತುಕ ಸಿನಿ ಪ್ರೇಕ್ಷಕರಲ್ಲಿತ್ತು. ಇದೀಗ ಈ ಎಲ್ಲಾ ಅನುಮಾನಗಳಿಗೆ ತೆರೆ ಬಿದ್ದಿದೆ. ಅಲ್ಲದೇ ನಿನ್ನೆಯಷ್ಟೇ ಈ ಕುರಿತು ನಿರ್ದೇಶಕ ತರುಣ್​ ಸುಧೀರ್​, "ಚಿತ್ರದ ನಾಯಕಿ ನಿಮ್ಮನೆಲ್ಲ ನಾಳೆ ಬೆಳಗ್ಗೆ ಭೇಟಿಯಾಗಲು ಸಜ್ಜಾಗಿದ್ದಾಳೆ" ಎಂದು ತಿಳಿಸಿದ್ದರು.

ಇದನ್ನೂ ಓದಿ: RRR ನಾಟು ನಾಟು ಕ್ರೇಜ್​​: ಮಸ್ಕ್ ಮೆಚ್ಚುಗೆ, ನೂರಾರು ಟೆಸ್ಲಾ ಕಾರುಗಳಲ್ಲಿ ಲೈಟ್​ ಶೋ

ಅದರಂತೆ, ಇದೀಗ ಕಾಟೇರ ಸಿನಿಮಾ ನಾಯಕಿಯ ಫಸ್ಟ್ ಲುಕ್​ ರಿವೀಲ್ ಆಗಿದೆ. ಕನಸಿನ ರಾಣಿ ಮಾಲಾಶ್ರೀ ಮಗಳು ರಾಧನಾ ರಾಮ್​ ನಾಯಕಿಯಾಗಿದ್ದಾರೆ. ಈ ಬಗ್ಗೆ ದರ್ಶನ್​ ಟ್ವೀಟ್​ ಮಾಡಿದ್ದು,"ಹೊಸ ವರ್ಷದ ಹೊಸ್ತಿಲಲ್ಲಿ ನಿಂತು ಹೊಸ ಹುರುಪಿನೊಂದಿಗೆ ಹಬ್ಬವನ್ನು ಆಚರಿಸೋಣ. ಈ ಯುಗಾದಿಯು ನಿಮ್ಮ ಜೀವನದಲ್ಲಿ ಬೇವಿಗಿಂತ ಬೆಲ್ಲವನ್ನೇ ಜಾಸ್ತಿ ನೀಡಲಿ. ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು. ಈ ಒಳ್ಳೆ ದಿವ್ಸ ನಮ್ 'ಪ್ರಭಾವತಿ' ಮೊದುಲ್ನೇ ಪರಿಚಯ ಇಲ್ಲಿದೆ" ಎಂದು ಕ್ಯಾಪ್ಶನ್​ ಬರೆದುಕೊಂಡಿದ್ದಾರೆ. ಜೊತೆಗೆ ನಿರ್ದೇಶಕ ತರುಣ್​ ಸುಧೀರ್​ ಕೂಡ ಪದ್ಮಾವತಿ ಫಸ್ಟ್​ ಲುಕ್​ ಅನ್ನು ಟ್ವೀಟರ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

ಇದನ್ನೂ ಓದಿ: ದೃಶ್ಯ 2 ಸಿನಿಮಾ ಬಳಿಕ ಮತ್ತೊಂದು ಕೌಟುಂಬಿಕ ಚಿತ್ರದಲ್ಲಿ ಕ್ರೇಜಿಸ್ಟಾರ್

ಪೋಸ್ಟರ್​ನಲ್ಲಿ ರಾಧನಾ ರಾಮ್​ ಪಾತ್ರದ ಹೆಸರಿಗೆ ತಕ್ಕಂತೆ ಸಾಕ್ಷಾತ್​ ಪದ್ಮಾವತಿಯಾಗಿದ್ದಾಳೆ. ಎಡಗೈಯಲ್ಲಿ ಪುಸ್ತಕ ಇರಿಸಿಕೊಂಡು, ಬಲಗೈಯಲ್ಲಿ ಕತ್ತಿ ಹಿಡಿದುಕೊಂಡು ಗಾಂಭೀರ್ಯದಿಂದ ನಡೆದುಕೊಂಡು ಬರುತ್ತಿರುವ ಲುಕ್​ ಇದಾಗಿದೆ. ರಾಕ್​ಲೈನ್​ ವೆಂಕಟೇಶ್​ ಅವರ ಕಾಕ್​ಲೈನ್​ ಪ್ರೊಡಕ್ಷನ್​ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಕಾಟೇರ ಸಿನಿಮಾದಲ್ಲಿ ಹಳ್ಳಿಗಾಡಿನ ಕಥೆಯಿದೆ. 1974ರಲ್ಲಿ ನಡೆದ ನೈಜ ಘಟನೆಯನ್ನೇ ಕಥಾವಸ್ತುವನ್ನಾಗಿಸಿಕೊಂಡ ನಿರ್ದೇಶಕ ತರುಣ್​ ಸುಧೀರ್​, ಸಿನಿಮಾ ರೂಪಕ್ಕೆ ತರುತ್ತಿದ್ದಾರೆ. ಇನ್ನು ದರ್ಶನ್ ಅಂತೂ ಲಾಂಗ್​ ಹಿಡಿದು ರಗಡ್​ ಆಗಿಯೇ ಕಾಣಿಸಿಕೊಂಡಿದ್ದಾರೆ.​

ಇದನ್ನೂ ಓದಿ: ಮತ್ತೆ ಬರ್ತಿದೆ 'ವೀಕೆಂಡ್ ವಿತ್ ರಮೇಶ್' ಶೋ! ಮೋಹಕತಾರೆ ರಮ್ಯಾ ಮೊದಲ ಅತಿಥಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.