ETV Bharat / entertainment

ಜೂಲಿಯೆಟ್ 2 ಚಿತ್ರದ ಅಪ್ಪ ಮಗಳ ಬಾಂಧವ್ಯದ ಹಾಡು ಬಿಡುಗಡೆ - Juliet 2 movie

ಜೂಲಿಯೆಟ್‌ 2 ಸಿನಿಮಾದ ಅಪ್ಪ ಮಗಳ ಬಾಂಧವ್ಯದ ಹಾಡು 'ನೆನಪಿಲ್ಲಿ ಈಗ' ಬಿಡುಗಡೆ ಆಗಿದ್ದು, ಪ್ರೇಕ್ಷಕರ ಮನ ಗೆಲ್ಲುತ್ತಿದೆ.

Juliet 2 movie song release
ಜೂಲಿಯೆಟ್ 2 ಚಿತ್ರದ ಅಪ್ಪ ಮಗಳ ಬಾಂಧವ್ಯದ ಹಾಡು
author img

By

Published : Feb 4, 2023, 8:10 PM IST

ಬ್ಲ್ಯಾಕ್​ ಅಂಡ್​ ವೈಟ್ ಕಾಲದಿಂದಲೂ ಕನ್ನಡ ಚಿತ್ರರಂಗದಲ್ಲಿ ಕಾದಂಬರಿ ಆಧಾರಿತ ಚಿತ್ರಗಳು, ಅಪ್ಪ ಮಗಳ ಬಾಂಧವ್ಯದ ಕಥೆಗಳು, ಭಾವನಾತ್ಮಕ ಕಥೆಗಳು, ಈ‌ ಕಥೆಗೆ ತಕ್ಕ ಹಾಡುಗಳು ಕನ್ನಡ ಸಿನಿಮಾರಂಗದ ಶಕ್ತಿ ಬಗ್ಗೆ ಮಾತನಾಡುತ್ತವೆ. ಅಪ್ಪ ಅಮ್ಮನ ಕುರಿತಾಗಿ ಈಗಾಗಲೇ ಸಾಕಷ್ಟು ಹಾಡುಗಳು ಬಂದಿವೆ. ಕೆಲ ವರ್ಷಗಳ ಹಿಂದೆ ಬಂದ ಅಪ್ಪಾ.. ಐ ಲವ್ ಯೂ ಪಾ ಹಾಡು ಸೂಪರ್ ಹಿಟ್ ಆಗಿತ್ತು. ಈ ಹಾಡಿನ ಬಳಿಕ ಇದೀಗ ಅಪ್ಪ ಮಗಳ ಬಾಂಧವ್ಯದ ಮತ್ತೊಂದು ಹಾಡು ಸ್ಯಾಂಡಲ್​ವುಡ್​ನಲ್ಲಿ ಸಖತ್​ ಸೌಂಡ್ ಮಾಡುತ್ತಿದೆ. ಅದುವೇ ಜೂಲಿಯೆಟ್‌ 2 ಸಿನಿಮಾದ ಅಪ್ಪ ಮಗಳ ಹಾಡು.

ಅಪ್ಪ ಮಗಳ ಬಾಂಧವ್ಯದ ಹಾಡು

ಪ್ರೇಮಂ ಪೂಜ್ಯಂ ಚಿತ್ರದ ನಾಯಕಿ ಬೃಂದಾ ಆಚಾರ್ಯ ಮುಖ್ಯ ಭೂಮಿಕೆಯಲ್ಲಿರೋ ಚಿತ್ರ ಜೂಲಿಯೆಟ್ 2. ಸದ್ಯ ಟೀಸರ್​ನಿಂದಲೇ ಸಿನಿಮಾ ಇಂಡಸ್ಟ್ರಿಯಲ್ಲಿ ಟಾಕ್ ಆಗುತ್ತಿರುವ ಚಿತ್ರವಿದು. ಇದೀಗ ಜೂಲಿಯೆಟ್‌ 2 ಚಿತ್ರದ 'ನೆನಪಿಲ್ಲಿ ಈಗ' ಎಂಬ ಹಾಡು ಇತ್ತೀಚೆಗೆ ಯೂಟ್ಯೂಬ್​ನಲ್ಲಿ ಬಿಡುಗಡೆ ಆಗಿ ಲಕ್ಷಾಂತರ ಜನರಿಂದ ಉತ್ತಮ‌ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ, ಜೂಲಿಯೆಟ್‌ 2 ಚಿತ್ರದ ಈ ಹಾಡಿನ ಬೊಂಬಾಟ್ ಮೇಕಿಂಗ್ ವಿಡಿಯೋವನ್ನು ಚಿತ್ರತಂಡ ರಿವೀಲ್ ಮಾಡಿದೆ.

ಸುಕೃತ್ ಶೆಟ್ಟಿ ಈ ಹಾಡಿನ ಸಾಹಿತ್ಯ ಬರೆದಿದ್ದು, ಮಲ್ಲಿಕಾ‌ ಮಟ್ಟಿ ಬಹಳ ಸೊಗಸಾಗಿ ಹಾಡಿದ್ದಾರೆ. ಕ್ಯಾಮರಾಮ್ಯಾನ್ ಶ್ಯಾಂಟೋ ವಿ ಆಂಟೋ ಬಹಳ ಅದ್ಭುತವಾಗಿ‌ ಚಿತ್ರೀಕರಿಸಿದ್ದಾರೆ. ಅಪ್ಪ ಮಗಳ ಈ ಹಾಡು ಕೇಳುಗರ, ನೋಡುಗರ‌‌ ಎದೆ‌ ಭಾರವಾಗಿಸುತ್ತದೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಚಿತ್ರಗಳು ಸೌಂಡ್ ಮಾಡುತ್ತಿವೆ. ಕಥೆ ಹಾಗೂ ಮೇಕಿಂಗ್ ವಿಚಾರದಲ್ಲಿ ಕನ್ನಡ ಚಿತ್ರಗಳದ್ದೇ ಮೇಲುಗೈ. ಅಂಥಹದ್ದೇ ಕಂಟೆಂಟ್ ಹೊಂದಿರುವ ಚಿತ್ರ ಜೂಲಿಯೆಟ್‌ 2 ಬಿಡುಗಡೆಗೆ ಸಜ್ಜಾಗುತ್ತಿದೆ. ಪ್ರೇಮಂ ಪೂಜ್ಯಂ ಚಿತ್ರದ ಬಳಿಕ ಬೃಂದಾ ಆಚಾರ್ಯ ಅಭಿನಯಿಸಿರೋ ಥ್ರಿಲ್ಲರ್ ಸಿನಿಮಾ ಇದು.

ಜೂಲಿಯೆಟ್​ ಸಿನಿಮಾ ಕಥೆ: 'ಜೂಲಿಯೆಟ್' ಚಿತ್ರದ ಹೆಸರೇ ಹೇಳುವಂತೆ ಕಥೆ ಸಂಪೂರ್ಣವಾಗಿ ಬೃಂದಾ ಅವರ ಪಾತ್ರದ ಸುತ್ತ ಸುತ್ತುತ್ತದೆ. ಪಟ್ಟಣದಿಂದ ಹಳ್ಳಿಗೆ ಸೇರುವ ನಾಯಕಿಯ ಬದುಕಲ್ಲಿ ನಡೆಯುವ ಘಟನೆ, ಶಾಂತರೂಪಿಯಾಗಿರುವ ನಾಯಕಿ ಹೇಗೆ ರಣಚಂಡಿ ಆಗ್ತಾಳೆ ಅನ್ನೋದು ಜೂಲಿಯೆಟ್ 2 ಚಿತ್ರದ ಕಥೆ.

ಈಗಾಗಲೇ ಟೀಸರ್​ನಿಂದಲೇ ಸದ್ದು ಮಾಡುತ್ತಿರುವ ಜೂಲಿಯೆಟ್‌ 2 ಸಿನಿಮಾದ ಪ್ರತೀ ಫ್ರೇಮ್ ನಿಮ್ಮನ್ನು ಹಿಡಿದಿಡಲಿದೆ. ಇದೊಂದು ಕ್ರೈಮ್ ಥ್ರಿಲ್ಲರ್ ಜಾನರ್ ಚಿತ್ರವಾಗಿದ್ದು, ವಿರಾಟ್ ಬಿ ಗೌಡ ನಿರ್ದೇಶನ ಮಾಡಿದ್ದಾರೆ. ಇಲ್ಲಿನ ಹೈಲೆಟ್ಸ್ ಅಂದ್ರೆ ಟೆಕ್ನಿಕಲ್ ಟೀಂ. ಸಚಿನ್ ಬಸ್ರೂರ್ ಅವರ ಬಿಜಿಎಂ ಹಾಗು ಶ್ಯಾಂಟೋ ವಿ ಆಂಟೋ ಕ್ಯಾಮರಾ ವರ್ಕ್, ದಿನೇಶ್ ಆಚಾರ್ಯ ಅವರ ವಿಎಫೆಕ್ಸ್ ಚಿತ್ರವನ್ನು ಸುಂದರಗೊಳಿಸಿದೆ. ಇನ್ನೂ ಬೃಂದಾ ಆಚಾರ್ಯ ಜೊತೆ ಅನೂಪ್ ಸಾಗರ್, ಖುಷ್ ಆಚಾರ್ಯ, ರವಿ, ರಾಧೇಶ್ ಶೆಣೈ, ಶ್ರೀಕಾಂತ್, ರಾಯ್ ಮುಂತಾದವರು ಅಭಿನಯಿಸಿದ್ದಾರೆ.

ಇದನ್ನೂ ಓದಿ: ಜೂಲಿಯೆಟ್ 2 ಟೀಸರ್ ಬಿಡುಗಡೆ ಮಾಡಿದ ಅಶ್ವಿನಿ ಪುನೀತ್ ರಾಜ್‌ಕುಮಾರ್

ಜೂಲಿಯೆಟ್ ಸಿನಿಮಾ ಎರಡು ಭಾಗದಲ್ಲಿ ಸಿದ್ಧವಾಗಿದೆ. ಆ ಪೈಕಿ ಎರಡನೇ ಭಾಗ ಮೊದಲು ಬಿಡುಗಡೆಯಾಗಲಿರುವುದು ಚಿತ್ರದ ಮತ್ತೊಂದು ವಿಶೇಷ. ಅಷ್ಟೇ ಅಲ್ಲ ಚಿತ್ರ ಪ್ಯಾನ್ ಇಂಡಿಯಾ ಕಾನ್ಸೆಪ್ಟ್​​ನಲ್ಲಿ ಪಂಚ ಭಾಷೆಯಲ್ಲಿಯೂ ತೆರೆ ಕಾಣಲಿದೆ. ಲಿಖಿತ್ ಆರ್ ಕೋಟ್ಯಾನ್ ನಿರ್ಮಾಣ ಮಾಡಿರೋ ಜೂಲಿಯೆಟ್ 2 ಚಿತ್ರವನ್ನು ಮಂಗಳೂರು, ಬೆಳ್ತಂಗಡಿ ಹಾಗೂ ಅದರ ಸುತ್ತಲ್ಲಿನ ಅರಣ್ಯ ಪ್ರದೇಶ ಸೇರಿದಂತೆ ಕರಾವಳಿ ಭಾಗದಲ್ಲಿ ಚಿತ್ರೀಕರಿಸಲಾಗಿದೆ. ಸದ್ಯ ಅಪ್ಪ ಮಗಳ ಈ ಬಾಂಧವ್ಯದ ಹಾಡು ಹಿಟ್ ಆಗುವ ಲಕ್ಷಣಗಳು ಕಾಣುತ್ತಿದೆ. ಇದು ಜೂಲಿಯೆಟ್‌ 2 ಚಿತ್ರತಂಡಕ್ಕೆ ‌ಮತ್ತಷ್ಟು‌ ಎನರ್ಜಿ ನೀಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.