ETV Bharat / entertainment

ಜೂಲಿಯಟ್​ 2 ಚಿತ್ರದ ಮತ್ತೊಂದು ಹಾಡು ಬಿಡುಗಡೆ: ಕೋಟಿ ಜನರ ಮನಮುಟ್ಟಿದ ತಾಯಿ ಹಾಡು

ಬಹುನಿರೀಕ್ಷಿತ ಜೂಲಿಯಟ್​ 2 ಸಿನಿಮಾದ ಮತ್ತೊಂದು ಹಾಡು ರಿಲೀಸ್​ ಆಗಿದೆ. ಈ ಹಾಡು ಕೋಟಿ ಜನರ ಹೃದಯದ ಬಾಗಿಲು ತಟ್ಟಿದೆ.

juliet 2
ಜೂಲಿಯಟ್​ 2
author img

By

Published : Feb 13, 2023, 8:27 PM IST

ಜೂಲಿಯಟ್​ 2 ಚಿತ್ರದ ಹಾಡು ಬಿಡುಗಡೆ

ಕನ್ನಡ ಚಿತ್ರರಂಗದಲ್ಲಿ ಸಸ್ಪೆನ್ಸ್ ಹಾರಾರ್ ಕಂಟೆಂಟ್ ಹೊಂದಿರುವ ಚಿತ್ರ ಜೂಲಿಯೆಟ್ 2 ಇನ್ನೇನು ತೆರೆಗೆ ಬರಲಿದೆ. ಅದಕ್ಕೂ ಮುನ್ನ ಚಿತ್ರತಂಡವೊಂದು ಹೊಸ ಅಪ್ಡೇಟ್​ ನೀಡಿದೆ. ಪ್ರೇಮಂ ಪೂಜ್ಯಂ ಚಿತ್ರದ ಬೆಡಗಿ ಬೃಂದಾ ಆಚಾರ್ಯ ಅಭಿನಯಿಸಿರುವ ಈ ಚಿತ್ರದ ಮತ್ತೊಂದು ಹಾಡು ಇದೀಗ ರಿಲೀಸ್​ ಆಗಿದೆ. ಹೌದು... ಕೆಲ ದಿನಗಳ ಹಿಂದೆಯಷ್ಟೇ ಜ್ಯೂಲಿಯೆಟ್ 2 ಚಿತ್ರದ ಹಾಡೊಂದು ಬಿಡುಗಡೆ ಆಗಿತ್ತು.

ಮಗಳ ಬದುಕಿಗೆ ಬೆಳಕಾಗುವ ತಂದೆಯ ಕುರಿತ ಈ ಹಾಡು ಎಲ್ಲರ ಮೆಚ್ಚುಗೆಯನ್ನು ಗಳಿಸಿತ್ತು. ಇದೀಗ ತಾಯಿಯ ಮಮತೆಯ ಹಾಡೊಂದು ಅನಾವರಣಗೊಂಡಿದೆ. ತನ್ನವರಿಗಾಗಿ ತನ್ನ ಬದುಕನ್ನೇ ಮುಡಿಪಾಗಿಟ್ಟು ಬದುಕುತ್ತಾ ಇರುವ ತಾಯಂದಿರಿಗೆ ಈ ಹಾಡನ್ನು ಚಿತ್ರತಂಡ ಅರ್ಪಿಸಿದೆ. ಕರುಳ ಕರೆಗೆ ಮರುಗುವ ತಾಯಿಯ ಸುತ್ತ ಈ ಹಾಡು ಸುತ್ತುತ್ತದೆ. ಹಾಡಿನ ಪ್ರತಿಯೊಂದು ಸಾಲನ್ನು ಭಾವನಾತ್ಮಕವಾಗಿ ಸುಕ್ರೀತ್​ ಶೆಟ್ಟಿ ಹೆಣೆದಿದ್ದಾರೆ.

ಇದಕ್ಕೆ ಧ್ವನಿಯಾಗಿರುವ ರಂಜಿತಾ ಮಲ್ಲೂರು ಅವರ ಚಿನ್ನದ ಕಂಠಕ್ಕೆ ಪ್ರೇಕ್ಷಕರು ಮನಸೋತಿದ್ದಾರೆ. ಬಿಡುಗಡೆಯಾಗಿ ಕೆಲ ಗಂಟೆಗಳಲ್ಲೇ ಒಂದು ಮಿಲಿಯನ್​ ಜನ ನೋಡಿ ಅಮ್ಮ ಮಗಳ ಬಾಂಧವ್ಯದ ಹಾಡನ್ನು ಮೆಚ್ಚಿಕೊಂಡಿದ್ದಾರೆ. ಅಂದ ಹಾಗೇ ಜ್ಯೂಲಿಯಟ್​ 2 ಸಾಮಾನ್ಯವಾದ ಕಥೆಯಲ್ಲ. ಹೆಣ್ಣು ಅಬಲೆಯಲ್ಲ ಸಬಲೆಯನ್ನುವ ವಿಷಯವನ್ನು ಈ ಚಿತ್ರ ಪ್ರಸ್ತುತಪಡಿಸಲಿದೆ. ಜೊತೆಗೆ ಸಸ್ಪೆನ್ಸ್​ ಹಾರರ್​​ ಕಂಟೆಟ್​ ಅನ್ನು ಒಳಗೊಂಡಿರಲಿದೆ. ಚಿತ್ರದ ಹಾಡುಗಳಿಂದಲೇ ಸಿನಿಮಾದ ಬಗ್ಗೆ ಜನರಲ್ಲಿ ಮತ್ತಷ್ಟು ಕುತೂಹಲ ಹೆಚ್ಚಿದೆ.

ಇದನ್ನೂ ಓದಿ: 'ಪಠಾಣ್​' 19 ದಿನದಲ್ಲಿ 946 ಕೋಟಿ ಕಲೆಕ್ಷನ್​.. ಪಾರ್ಟ್​ 2 ಬರಲಿದೆಯಾ?

ಜೂಲಿಯಟ್ 2​ ಸಿನಿಮಾ ಕಥೆಯು ಸಂಪೂರ್ಣವಾಗಿ ಬೃಂದಾ ಪಾತ್ರದ ಸುತ್ತ ಸುತ್ತುತ್ತದೆ. ಪಟ್ಟಣದಿಂದ ಹಳ್ಳಿ ಸೇರುವ ನಾಯಕಿಯ ಬದುಕಲ್ಲಿ ನಡೆಯುವ ಘಟನೆ, ಶಾಂತರೂಪಿಯಾಗಿರುವ ನಾಯಕಿ ಹೇಗೆ ರಣಚಂಡಿ ಆಗ್ತಾಳೆ ಎಂಬ ಕುತೂಹಲಕಾರಿ ಕಥೆ ಇದಾಗಿದೆ. ಈಗಾಗಲೇ ಟೀಸರ್​ನಿಂದಲೇ ನಿರೀಕ್ಷೆ ಹೆಚ್ಚಿಸಿರುವ ಜೂಲಿಯಟ್​ 2 ಸಿನಿಮಾದ ಪ್ರತಿ ಫ್ರೇಮ್​ ಕೂಡ ನಿಮ್ಮನ್ನು ಹಿಡಿದಿಡಲಿದೆ. ಅಷ್ಟೇ ಅಲ್ಲದೇ ಚಿತ್ರ ಪ್ಯಾನ್​ ಇಂಡಿಯಾ ರೀತಿಯಲ್ಲಿ ಪಂಚ ಭಾಷೆಯಲ್ಲಿಯೂ ಬಿಡುಗಡೆ ಆಗಲಿದೆ. ಸಿನಿಮಾ ಚಿತ್ರೀಕರಣವನ್ನು ಮಂಗಳೂರು, ಬೆಳ್ತಂಗಡಿ ಮತ್ತು ಅದರ ಸುತ್ತಲಿನ ಅರಣ್ಯ ಪ್ರದೇಶಗಳಲ್ಲಿ ಮಾಡಲಾಗಿದೆ.

ಚಿತ್ರತಂಡ ಹೀಗಿದೆ.. ಜ್ಯೂಲಿಯಟ್​ 2 ಸಿನಿಮಾದಲ್ಲಿ ಹೊಸ ಪ್ರತಿಭೆಗಳು ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಬೃಂದಾ ಆಚಾರ್ಯ ಈ ಚಿತ್ರದ ಲೀಡ್ ಹೀರೋಯಿನ್ ಆಗಿ ಮಿಂಚಿದ್ದಾರೆ. ಜೊತೆಗೆ ಅನೂಪ್ ಸಾಗರ್, ರವಿ ಕಾಲ ಬ್ರಹ್ಮ, ಶ್ರೀಕಾಂತ್, ರಾಯ್ ಬಡಿಗೇರ್, ಖುಷ್ ಆಚಾರ್ಯ, ರಾಧೇಶ್ ಶೆಣೈ ಹೀಗೆ ಸಾಕಷ್ಟು ಪ್ರತಿಭಾವಂತ ಕಲಾವಿದರು ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರವನ್ನು ವಿರಾಟ್ ಬಿ ಗೌಡ ನಿರ್ದೇಶಿಸಿದ್ದು, ಲಿಖಿತ್ ಆರ್ ಕೋಟ್ಯಾನ್ ನಿರ್ಮಾಣ ಮಾಡಿದ್ದಾರೆ. ಸಚಿನ್​ ಬಸ್ರೂರ್​ ಅವರ ಬಿಜಿಎಂ, ಶ್ಯಾಂಟೋ ವಿ ಆಂಟೋ ಅವರ ಕ್ಯಾಮರಾ ವರ್ಕ್​ ಮತ್ತು ದಿನೇಶ್​ ಆಚಾರ್ಯ ಅವರ ವಿಎಫೆಕ್ಸ್​ ಚಿತ್ರವನ್ನು ಮತ್ತಷ್ಟು ಸುಂದರಗೊಳಿಸಿದೆ. ಸಿನಿಮಾವು ಫೆಬ್ರವರಿ 24 ರಂದು ತೆರೆ ಮೇಲೆ ಬರಲಿದೆ.

ಇದನ್ನೂ ಓದಿ: ವಿನೋದ್ ಪ್ರಭಾಕರ್ ಲಂಕಾಸುರನಿಗೆ ಸಿಕ್ತು ಕನಸಿನ ರಾಣಿಯ ಸಪೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.